ಕಾರಣ!!

ಕಾರಣ!!

ಹೀಗೊ೦ದು ಕವನವ ಬರೆದಿರುವೆ ನಾನಿ೦ದು
ಕಾರಣವ ಕೇಳದಿರಿ ಏಕಿದು ಹೀಗೆ೦ದು!

ತಪ್ಪು ಮಾಡಿದರೆ ಕಾರಣವ ಕೊಡುತಿಹೆ ನೀನು
ಒಪ್ಪು ಮಾಡಿದರು ಕಾರಣವ ಹುಡುಕುವೆ ನೀನು
ಏನು ಮಾಡಿದರು ಕಾರಣವೆ ಇಹುದಲ್ಲದೇ
ಮಾಡದಿದ್ದರು ಕಾರಣವೆ, ಕಾರಣವಲ್ಲವೇ?

ಬಲ್ಲೆಯಾ ಹಗಲಿರುಳುಗಳಾಗುವ ಕಾರಣವ?
ಬಲ್ಲೆಯಾ ಮಾಸ ಋತುಗಳಾಗುವ ಕಾರಣವ?
ಬಲ್ಲೆಯಾ ಭುಮಿಜೆ ಸುತ್ತುವ ಕಾರಣವ?
ಬಲ್ಲೆಯಾ ಸೌರವ್ಯೂಹವಿರುವ ಕಾರಣವ ?

ನಿನ್ನ ವಿಜ್ನಾನ ಒ೦ದೇ ಕಾರಣಗಳ ನೀಡಬಲ್ಲುದೇ
ಎಷ್ಟು ವಿಜ್ನಾನಗಳಿಹುದೆ೦ದು ನಿನ್ನರಿವಿಗಿದೆಯೇ?
ಏನು ಕೊಡುವುದೋ ನೀನೊಪ್ಪುವ ಕಾರಣವ ನಾಕಾಣೆ,
ಏಕೆ ಒಪ್ಪುವೆ ತಿಳಿಯೆ ಯಾವುದೋ ಕಾರಣಕೆ..

ಎಲ್ಲಕೂ ಕಾರಣವಿಹುದೆ೦ದು ಹೇಳುವೆಯೋ..
ಕಾರಣದ ಬೆನ್ನೇರಿ ನೀನೆಲ್ಲಿ ಹೋಗುವೆಯೋ?
ನಾವಿರುವ ಕಾರಣವ ನೀನೆ೦ತು ಬಲ್ಲೆಯೋ?
ನೀನಾರೆ೦ಬುದನು ತಿಳಿಯದೇ ಹೊದೆಯೋ...

ದೇವನಿರುವವನೆ೦ದು ಕೊಡುವೆ ನೀ ಕಾರಣವ
ಇಲ್ಲವೆ೦ದೂ ವಾದಿಸುವೆ, ಆಧಾರ - ಕಾರಣವ
ಜನ್ಮ-ಜನ್ಮಾ೦ತರದಿ ಹುಡುಕುತಿರೆ ನೀ ಕಾರಣವ..
ಏನು ತೀರಿಸುವುದೋ ನಿನ್ನೀ ಕಾರಣದ ದಾಹವ !!

--ಅಭಿ

Rating
No votes yet

Comments