ಕಾರಿನ ಮಾಲೀಕರು
ಮೋನಿ ಗಾಂಧಿ ಬಜಾರ್ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ಕಾರ್ ಪಾರ್ಕ್ ಮಾಡಿ ಬರುತ್ತಿದ್ದಾಗ ಅವನ ಜಿಗ್ರಿ ದೋಸ್ತ್ ಚಡ್ಡಿ ಸತೀಶ ಎದುರಾದ. “ಹಾಯ್ ...ಕಾರು ತುಂಬಾ ಚೆನ್ನಾಗಿದೆ ಗುರೂ... ನಿನ್ನದೇನಾ..? ಯಾವಾಗ್ ತಗೊಂಡೆ ಗುರೂ ..?” ಎಂದು ಕೇಳಿದ. ಅದಕ್ಕೆ ಮೋನಿ “ಹೌದು ಮತ್ತು ಅಲ್ಲ..” ಎಂದು ಉತ್ತರ ಕೊಟ್ಟ. ಚಡ್ಡಿ ಸತೀಶ “ಏನು ಗುರೂ ಹಾಗಂದರೆ” ಎಂದು ಕೇಳಿದಾಗ ಮೋನಿ ಸಪ್ಪೆ ದನಿಯಲ್ಲಿ “ಹೌದು ಗುರೂ... ಶಾಪಿಂಗ್ ಗೆ ಹೋಗೋವಾಗ ಅದು ನನ್ನ ಹೆಂಡತಿಯದು...., ಡಿಸ್ಕೋಗೆ ಹೋಗೋವಾಗ ನನ್ನ ಮಗಳದು.... ಪೆಟ್ರೋಲ್ ಹಾಕಿಸೋವಾಗ ನನ್ನದು...” ಎಂದಾಗ ಚಡ್ಡಿ ಸತೀಶ “ಅಂ...!” ಎಂದು ಬಾಯಿ ಕಳೆದು ನಿಂತ.
Rating
Comments
:))
:))
:)
:)
ಹಹ್ಹಾ!......ಚನ್ನಾಗಿದೆ ಶೋಭ
ಹಹ್ಹಾ!......ಚನ್ನಾಗಿದೆ ಶೋಭ ಅವರೆ ,ವಂದನೆಗಳು...................................ರಮೇಶ್ ಕಾಮತ್
ಪ್ರತಿಕ್ರಿಯಿಸಿದ ಎಲ್ಲರಿಗೂ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.... ಶೋಭಾ