ಕಾರ್ಗತ್ತಲ ಕಾಲ್ ಸೆಂಟರ್ಸ್! (ನನ್ನ ವೈಯಕ್ತಿಕ ಅನುಭವ)

ಕಾರ್ಗತ್ತಲ ಕಾಲ್ ಸೆಂಟರ್ಸ್! (ನನ್ನ ವೈಯಕ್ತಿಕ ಅನುಭವ)

ಚಿತ್ರ

ಭೂತಕಾಲದ ನನ್ನ ಆತುರ ದುಡುಕು ನನ್ನನು ಎಷ್ಟರ ಮಟ್ಟಿಗೆ ಅಸಹಾಯಕನನ್ನಾಗಿ ಮಾಡಿತ್ತೆಂದರೆ ನಾನು ಯಾವ ಕೆಲಸಕ್ಕಾದರೂ ರೆಡಿ  ಎಂಬಂತೆ ಮಾಡಿತ್ತು. ಪರಿಸ್ಥಿತಿಗೆ ಅನುಕೂಲವಾದಂತೆ ನನಗಾಗ ನನ್ನದೇ ಆದ ಹೊಸ ಬದುಕು ಪ್ರಾರಂಭವಾಗಿ! (ಬದುಕು ಕಟ್ಟಿಕೊಳ್ಳಲಾಗದಂಥಹ ಹಣದ ಅವಶ್ಯಕತೆ ನನ್ನನು) ಎಲ್ಲಕು ಸೈ ಎಂದು ಪ್ರೇರೇಪಿಸುತ್ತಿತ್ತು. ಈ ಸಮಯದಲ್ಲಿ ನಾ ಪಟ್ಟ ಪಾಡು ಅಸಹನೀಯ ಅವರ್ಣನೀಯ. ಕೆಲಸಕ್ಕಾಗಿ ಅಲೆದಾಡಿದ ದಿನಗಳದೆಷ್ಟೋ,ಸಂಬಳವಿಲ್ಲದ ಕೆಲಸಗಳೆದೆಷ್ಟೋ. "ನನ್ನ ಸಾವದೇನಾದ್ರು   ಸರಿಯೇ ತಿಂಗಳ ೧೦'ನೆ ತಾರೀಕು ನಾನಿದ್ದ 4 ಗೋಡೆಗಳಿಗೆ ನಾ ಸಂಬಳ ಕೊಡಬೇಕಿತ್ತು ( ಬಾಡಿಗೆ )" ಅಕಸ್ಮಾತ್  ಕೊಡದಾದರೆ ಅವರ ಮೊಗ  ಹೇಸಿಗೆ  ತಿಂದವರಿಗಿಂತ ಹೀನ. ಅದೇನೂ ಹೇಳ್ತಾರಲ್ಲಾ "ಆಯ್ಕೊಂಡ್ ತಿನ್ನೋನ್ನ ಹಿಡ್ಕೊಂಡ್ ಏನೋ ಮಾಡಿದಂತೆ" ಆಗಿತ್ತು  ನನ್ನಾಗಿನ  ಪರಿಸ್ಥಿತಿ.
ಈ ಅಸಹನೀಯ ಪರಿಸ್ತಿತಿಯಲ್ಲಿ ಕಣ್ಣೆದುರು ಕನಸ ಹೊತ್ತು ಗೆಳೆಯರ ಸಹಾಯದಿಂದ ಸಮಯ ದೂಡಿದ್ದೆ (ಲವ್ ಮ್ಯಾರೇಜ್  ಅಲ್ವೇ!!). ಸರಿ ಸುಮಾರು ೧.೫ ವರ್ಷದ ನಂತರ ಅದೃಷ್ಟದ ಬಾಗಿಲು ತೆರೆಯಿತೇನೋ ಎಂಬಂತೆ ಮೈಸೂರಿನ Hinduja global solutions ನಲ್ಲಿ ವೃತ್ತಿ  ದೊರೆಯಿತು(ಆ ದಿನ ಏನನ್ನೋ ಗೆದ್ದೆನೆಂಬ ಮಹದಾನಂದ, ಕನಸಿನ ಹಕ್ಕಿಯ ಹಾರಿ ಬಿಟ್ಟದ್ದೇ ಬಿಟ್ಟದ್ದು) ವೃತ್ತಿ ತರಬೇತಿಯ ಸಮಯ ಹಿಗ್ಗಿದ್ದೆ ಹಿಗ್ಗಿದ್ದು ತರಬೇತಿ ಮುಗಿದೊಡನೆಯೇ ಕೆಲಸಕ್ಕೆ ಮುನ್ನುಗ್ಗುವ ಉತ್ಸಾಹ ತೋರಿದ್ದೆ ತೋರಿದ್ದು, ಕೆಲಸ ಪ್ರಾರಂಭಿಸಿದ ದಿನವೆ ಕೆಲಸವದೆನೆಂದು ಅರಿವಾಯಿತು ಪ್ರಾಮಾಣಿಕವಾಗಿ ಉದಾಹರಿಸಬೇಕೆಂದರೆ ( ಒಬ್ಬ ಭಿಕಾರಿ ತೆಗೆದುಕೊಂಡ ಸಿಂ ಕಾರ್ಡ್ಗೆ ತೊಂದರೆ ಆದರೆ ಆ ಸೊ.............ಳ  ಕ್ಷಮೆ ಕೇಳುವುದು  ನನ್ನ So called professionalism ಆಗಿತ್ತು ) ಸ್ವಾಭಿಮಾನ,ನನ್ನತನ ಎಂಬುದು ಅಂದಿನಿಂದ ಉಚ್ಚೆಯಲ್ಲಿ ಕೊಚ್ಚಿ ಹೋಗಿತ್ತು, ಕೆಲಸವದ್ಯಾವ ರೀತಿ ಹಿಂಸೆಯಾಗಿತ್ತೆಂದರೆ ನಿರತರವಾಗಿ ಬರುತಿದ್ದ call ಗಳನ್ನ ಸ್ವೀಕರಿಸಿ ಸುಸ್ತಾದಾಗಲು 1 ಕನಿಷ್ಠ  ಬ್ರೇಕ್ ಸಿಗುವುದು ಕಷ್ಟವಾಗಿತ್ತು . ಈ ಸಂಕಷ್ಟದ ನಡುವೆ Quality,Ice,ಇವರಮ್ಮನ ಶ್ರಾದ್ದ ಎಲ್ಲವೂ meet ಆಗಬೇಕಿತ್ತು ಹೇಗೋ ಎಲ್ಲವನ್ನು ಸಂಭಾಳಿಸಿಕೊಂಡು ಹೋಗುತಿದ್ದೆ ನನ್ನ ಇರುವಿಗಾಗಿ!  ಹೇಳಬೇಕೆಂದರೆ ಒಂದು ರೀತಿ ವೇಶ್ಯೆ ತರಹ ಕೆಲಸ ಮಾಡುತಿದ್ದೆ , ವೇಶ್ಯಾ ಹೋಲಿಕೆ ಯಾಕೆಂದರೆ ಅಲ್ಲಿ ನನಗಲ್ಲಿ ನನ್ನದೇ ಆದ ಪ್ರಾಶಸ್ತ್ಯ ಇರಲಿಲ್ಲ ನಾನ್ನೊಬ್ಬ Customer relationship officer ಆಗಿದ್ದರು  ಕ್ಷುಲ್ಲಕ ID card ಮರೆತು ಹೋದರೆ  ಯಕಶ್ಚಿತ್: ಒಬ್ಬ Security ಒಳ ಬಿಡುತ್ತಿರಲಿಲ್ಲ.( ಎಷ್ಟು ಗೌರವನೀಯ ಕೆಲಸವಲ್ಲವೇ .?).
ಇದೆಲ್ಲದ್ರ ನಡುವೆ ಪ್ರಶಂಸನೀಯ ಸಂಗತಿಯೆಂದರೆ ಒಳ್ಳೆಯ ಸಹೋದ್ಯೋಗಿಗಳಿದ್ದರು,ಸಹೃದಯ PMO AMOಗಳಿದ್ದರು ಮತ್ತು  ಪ್ರತಿ ತಿಂಗಳ ಕೊನೆಯಲ್ಲಿ ಸಂಬಳ ದೊರೆಯುತ್ತಿತ್ತು, ಇನ್ನು ವ್ಯಭಿಚಾರಕ್ಕೆ ಬರೋಣ ( ನಾ ಮಾಡುತಿದ್ದ ಕೆಲಸ )Company Policy ಯಾ ಪ್ರಕಾರ   ಯಾರಾದರು ಅವ್ಯಾಚ್ಯ ಪದ ಬಳಸಿದರೆ ಅದು ನಮಗಲ್ಲವಂತೆ ಅದು ಕಂಪನಿಗಂತೆ, ಬಹುಶ: Clint's  ಬ್ರಿಟಿಶ್ ಸೂ ಮಕ್ಕಳಿಗೆ ಹುಟ್ಟಿದ್ದ ಅನಿಸತ್ತೆ ಅದ್ಕೆ ಯಾವಾಗ್ಲೂ ಇಂಗ್ಲಿಷ್ನಲ್ಲೆ  ಹೇಳುತಿದ್ದ (POSTPAID FALCONS ALWAYS EMPATHIZE THE CUSTOMER BY TELLING I KNOW YOU ARE FRUSTRATED RIGHT NOW, IF I WERE IN YOUR SHOES I WOULD HAVE FELT THE SAME) ಈ ಮಾತು ಒಬ್ಬ ತಿರುಕನನ್ನು ಸಂಭೋದಿಸಿ ,ಧನಿಕ ಗ್ರಾಹಕರಿಗೂ ಒಂದೇ ರೀತಿ ಅನ್ವಯವಾಗುತಿತ್ತು. ಏಕೆಂದರೆ ಗ್ರಾಹಕರೆಲ್ಲರೂ ಸರಿಸಮಾನರು. (ವೇಶ್ಯಾವಾಟಿಕೆಗೆ)ಗ್ರಾಹಕರೇ ಮುಖ್ಯ ಅಲ್ಲವೇ?

ಗ್ರಾಹಕ ಷಂಡನಾದರು ಅವನು ಬ್ಯೆದದ್ದನೆಲ್ಲ ( ಅವನ ತುಚ್ಹ ಮಾತುಗಳನ್ನೆಲ್ಲ ತುಟಿಕಚ್ಚಿ ಸಹಿಸಿಕೊಳ್ಳಲೆಬೇಕಾಗಿತ್ತು) ಏಕೆಂದರೆ  ಅವನ ಸಂತೃಪ್ತಿ ನಮ್ಮಸಂಪತ್ತು ( ನನಗೆ ಸಂಬಳ ಕೊಡುತಿದ್ದದು ಅದಕ್ಕಾಗಿಯೇ). ಯಕಶ್ಚಿತ್: ಒಬ್ಬ ಅಯೋಗ್ಯ ಗ್ರಾಹಕ ನನ್ನ ಪ್ರಯತ್ನಕ್ಕೆ NO ಎಂದು ಬಿಟ್ಟರಾಯಿತಲ್ಲಿಗೆ ನನ್ನ ಪರಿಶ್ರಮ ವ್ಯರ್ಥ.!
ಹೀಗಿದ್ದ  ಸಮಯದಲ್ಲಿ  ನಾ  ಪಡೆದ  TOP GUN AWARD ಅದೆಷ್ಟೋ  ,Team winner award ಅದೆಷ್ಟೋ  , (ಒಟ್ಟಾರೆ  ಹೇಳಬೇಕಂದರೆ ನನ್ನ ಬಳಿ ಹರಿಯದೆ ಉಳಿದಿಹ 9 TOP GUN ಇವೆ  ).ಹೀಗೆ ಸರಿ ಸುಮಾರು ೧ ವರ್ಷ ಎಲ್ಲವು ಸುಗಮವಾಗಿದೆಯಂಬ ಭ್ರಮೆಯಲ್ಲಿ ಕೆಲಸ ಮಾಡುತಿದ್ದೆ, ಅದಾದ ನಂತರವದೇಕೋ ಕೆಲವೊಮ್ಮೆ ನನಗ್ಯಾವರೀತಿಯ ಹೇಸಿಗೆಯ ಅನುಭವವಾಗ ಶುರುವಾಯಿತೆಂದರೆ  ಎಲ್ಲವನ್ನು ಒಮ್ಮೆಗೆ ಕಿತ್ತೆಸ್ದು ಹುಚ್ಚನಂತೆ ಹೊರಹೊಗಿಬಿಡೋಣ ಎನಿಸುತ್ತಿತ್ತು.  
ಕೆಲಸ ತೊರೆಯುವ 3 ತಿಂಗಳ ಅಂತರದಲ್ಲಿ  ಕೆಲಸ ಎಷ್ಟು ಅಸಹನೀಯ ಮಟ್ಟದಲ್ಲಿತ್ತೆಂದರೆ ಏತಕ್ಕಾಗಿ ಬೆಳಗಾಗುತ್ತದೋ ಎನಿಸುತ್ತಿತು, ಪ್ರತಿದಿನವೂ 30 ನಿಮಿಷ ಮುಂಚಿತವಾಗಿ ಬಂದು 1ಘಂಟೆ ತಡವಾಗಿ  ಹೊರ ಹೋಗಬೇಕಾಗಿತ್ತು, ಈ 1 ½ ಗಂಟೆ ಉಚಿತ ಸೇವೆಯಾಗಿತ್ತು, ದಿನದ ೧೨ ಘಂಟೆ ಕೆಲಸದಲ್ಲಿ ಸಿಗುತ್ತಿದ್ದದು ೨೦ ನಿಮಿಷಗಳ ೨ ಬ್ರೇಕ್ ಶೋಚನೀಯ ಸಂಗತಿಯೆಂದರೆ ನಾವು ನಮ್ಮ ಮಾತುಗಳನ್ನ ಗಂಟಲಲ್ಲೇ ಉಳಿಸಿ ಕ್ಲೈಂಟ್ ಎಂಬ ದಲ್ಲಾಳಿ ಕೊಟ್ಟ ಮಾಹಿತಿಯನ್ನೇ ಉರು ಹೊಡೆಯಬೇಕಾಗಿತ್ತು,  

ಎಷ್ಟೋ ಬಾರಿ LOGOUT ಆದ ತಕ್ಷಣ ಜೈಲಿಂದ ಹೊರಬಂದ ಖೈಧಿಯಂತೆ ಹೊರಗೆ ಓದಿಹೊಗಿದ್ದು ಉಂಟು. ಇದೆ ಸಮಯದಲ್ಲಿ ನನ್ನೊಡನಿದ್ದ ಸಹೋದ್ಯೋಗಿಗಳು ಒಮ್ಮೆಲೇ ಕೆಲಸ ತೊರೆದು ಹೋದರು, ಅವರ ಕೆಲಸದ ಒತ್ತಡವು ಉಳಿದವರ ಮೇಲೆ ಬಿತ್ತು, ಪರಿಣಾಮಕಾರಿ ಎಂಬಂತೆ ನಮ್ಮ ಅಸಹನೆಯ ಪರಮಾವದಿ ಮಿತಿಮೀರಿತ್ತು. ದಿನಾಲು ಅಯೋಗ್ಯ TL ನೊಡನೆ ಜಗಳ ಒಂದು ರೀತಿ ಅಸಹ್ಯ ಹುಟ್ಟುಹಾಕಿತ್ತು, ಇದೆ ಸಂದರ್ಭದಲ್ಲಿ ನನಗೆ ನನ್ನವರನ್ನ ತಿರುಪತಿಗೆ ಕರೆದುಕೊಂಡು ಹೋಗ ಬೇಕಾದ ಪ್ರಸಂಗ ಒದಗಿ ಬಂತು ಆಗ ಶುರುವಾಯಿತು ನಿಜವಾದ ಅತೃಪ್ತಿ  7 ದಿನಗಳ ರಜೆಗೆ  ಮನ ಬಂದಂತೆ ಮಾತಾಡಿದರು ಕೊನೆಗೆ ನಾನು ಪರಿಸ್ತಿಯನ್ನ ಅರ್ಥಮಾಡಿಕೊಂಡು ರಜೆ ಮುಗಿಸಿ ಬಂದೆ  ಅಂದೇಕೋ (Jan/10/2009) ನನಗೆ ಅನರೋಗ್ಯವೆನಿಸಿ ಕಾಲ್ ತೆಗೆದುಕೊಳ್ಳುತ್ತಿದ ನಾನು ಇದ್ದ ಸ್ಥಳದಿಂದ ಎದ್ದು ವಿರಾಮಬೇಕೆಂದು ಕೇಳಿದೆ ತಕ್ಷಣ ಬಂದಿತೊಂದು ಅನಪೇಕ್ಷಿತ ಪ್ರತಿಕ್ರಿಯೆ (Harish every time don't come with reasons, we have already given 15 days leave) 7 ದಿನ ಒಮ್ಮೆಲೇ 15  ದಿನವಾಗಿಬಿಡ್ತು ಮಾತು ಕೇಳಿ ರೋಸಿ ಹೋದ ನಾನು ಫೆಬ್ರವರಿ ಮಾಸದಲ್ಲಿ 20  ದಿನಗಳ ಅನಧೀಕೃತ ರಜೆ ಹಾಕಿದೆ ( ಚಂಮಾರ್ ಕಿ ಭಗವಾನ್ ಕಿ ಚಪ್ಪಲ್  ಕಿ ಪೂಜಾ) ಆಗಲು ಒಬ್ಬ TLನನ್ನನು ಕೆಲ್ಸಕ್ಕೆ ಬರಮಾಡಲೆಂದು ನನ್ನ ಸಹೋದ್ಯೋಗಿಯೊಬ್ಬನನ್ನ ನನ್ನ ಮನೆ ಬಳಿ ಕಳುಹಿಸುತ್ತಿದ್ದ (ಪ್ರಯೋಜನವಾಗಲಿಲ್ಲ) ಕೊನೆಗೆ ನಾನೇ ಕೆಲ್ಸಕ್ಕೆ ಹೊರಟು ಮಾಸ ಕಳೆದ ನಂತರ ರಾಜಿನಾಮೆ ನೀಡಿ ಹೊರಬಂದೆ ( ಮಡುವೆ ಆದ ನಾನು ಕೆಲಸಕ್ಕಾಗಿ ಪರದಾಡಿದ ನಾನೇ ೧.೧/೨ ಕೆಲಸ ತೊರೆದನೆಂದರೆ ಇನ್ನುಳಿದವರು....?) ಹೊರಬರುವ ದಿನದಂದು ಕಾಲ್  receive ಮಾಡಿಯೇ ಬಂದೆ.

ನನ್ನ ಅನುಭವದ ಮಾತೆಂದರೆ ಮಾನವತ್ವದ ಶೋಷಣೆಯೇ ಈ ಕಾಲ್ ಸೆಂಟರ್ಸ್.
 

 

Rating
No votes yet

Comments