ಕಾರ್ಮೋಡಗಳ ತೂರಿ ಹೊಂಗಿರಣ

ಕಾರ್ಮೋಡಗಳ ತೂರಿ ಹೊಂಗಿರಣ

ಗ್ವಾನ್ಟಾನಾಮೋ ಹೆಸರು ಕೇಳದವರು ವಿರಳ. ಅಮೆರಿಕೆಯ ಹತ್ತು ಹಲವು "ಸುಂದರ" project ಗಳಲ್ಲಿ ಒಂದು guantanamo. ಕ್ಯೂಬಾ ದೇಶದ ದ್ವೀಪದಲ್ಲಿರುವ ಈ ತಾಣದಲ್ಲಿ ಅಮೇರಿಕ "ಶಂಕಿತ" ಭಯೋತ್ಪಾದಕರನ್ನು ಪಿಕ್ನಿಕ್ ಮೇಲೆ ಕಳಿಸುತ್ತದೆ. 9/11, 2001 ನಂತರ ಭ್ರಾಂತ ಸ್ಥಿತಿಯಲ್ಲಿರುವ ಅಮೇರಿಕೆಗೆ ತೋಚಿದ್ದು ಒಂದಿಷ್ಟು ಜನರನ್ನು guantanamo ಅಂಥ ಸ್ಥಳಗಳಿಗೆ ಕಳಿಸಿಬಿಟ್ಟರೆ ನಾವು ಲಾಸ್ ವೇಗಸ್ ನಲ್ಲಿ ಸುರಕ್ಷಿತವಾಗಿ ಕೂತು ಮಜವಾಗಿ ಜೂಜಾಡಬಹುದು ಎಂದು. ಅಮೆರಿಕೆಯ ಈ ಕ್ರಮದ ಉದ್ದೇಶ ಎಷ್ಟು ಸಫಲವಾಯಿತು ಎಂದು ಕಾಲವೇ ಹೇಳಬೇಕು. ಆದರೆ ಒಂದಂತೂ ಸತ್ಯ. ಅಲ್ಲಿನ ಸೆರೆಯಾಳುಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡರೂ, ಅದಕ್ಕಾಗಿ ವಿಶ್ವದ ಛೀ ಥೂ ಕೇಳಬೇಕಾಗಿ ಬಂದರೂ ಕಾರ್ಮೋಡಗಳ ತೂರಿ ಹೊಂಗಿರಣ ಸೂಸಲೇಬೇಕು. cuba ದ್ವೀಪದ ಕೆಲವು ಪ್ರಾಣಿಗಳು ಈಗ ಮಜವಾಗಿ ಸುರಕ್ಷಿತವಾಗಿ ಬದುಕುತ್ತಿವೆ. ನಾವು ಕೇಳದ, ಪರಿಚಯವಿಲ್ಲದ ಹಲವು ಪ್ರಾಣಿಗಳು ಈಗ ಸುರಕ್ಷಿತವಾಗಿ ಅಡ್ಡಾಡಿ ಕೊಂಡಿವೆ. ಅವುಗಳ ಹೆಸರು "Hutia", groundhog-like rodents nicknamed banana rats and Cuban rock "iguana" (ಉಡ), ಇವರುಗಳು ಆಶ್ರಯ ಪಡೆದುಕೊಂಡ ಅದೃಷ್ಟವಂತರು. ಹುತಿಯ, ಮತ್ತು ಉಡಗಳನ್ನು ವಿಟಮಿನ್ ವಂಚಿತ ಕ್ಯುಬನ್ನರು ತಿಂದು ಖಾಲಿ ಮಾಡುತ್ತಿದ್ದರಂತೆ. ಪಾಪ ಕ್ಯೂಬಾ ಅಧ್ಯಕ್ಷ ಫಿಡೆಲ್ ಕಾಸ್ಟ್ರೋ ಕೂಳಿಗೂ ಸಂಚಕಾರ ಅಮೇರಿಕನ್ನರಿಂದ. ಈಗ ಆ ಪ್ರಾಣಿಗಳು safe.
ಹಾಗಾದರೆ ಮನುಷ್ಯರು ಮೃಗಗಳಂತೆಯೂ, ಮೃಗಗಳು ಐಶಾರಾಮ ವಾಗಿಯೂ ನೆಲೆಸುವ ತಾಣಕ್ಕೆ " guantanamo " ಎಂದು ಹೆಸರು.

Rating
No votes yet

Comments