ಕಾಲಕ್ಕೆ ತಕ್ಕಂತೆ

ಕಾಲಕ್ಕೆ ತಕ್ಕಂತೆ

1980
ಸುನಂದ: ಏನತ್ತೆ ಅನ್ನಾನ ಕುಕ್ಕರನ್ನಲ್ಲಿ ಮಾಡಿ ಚೆನ್ನಾಗಿ ಬರುತ್ತೆ ಅಂತ ಹೇಳಿದ್ರೆ ಮಾಡೇ ಇಲ್ಲ
ಶಾರದಮ್ಮ: ನಂಗೆ ಒಲೇಲಿ ಅಡಿಗೆ ಮಾಡೆ ರೂಡಿ ಕಣೇ ಇದೇನೋ ಕುಕ್ಕರ್‌ನಲ್ಲಿ ನೀರು ಹಾಕೋದು, ಅದೂ ಇದೂ ಎಲ್ಲಾ ಬರೋದಿಲ್ಲ
ಸುನಂದ : ಅತ್ತೆ ಕಾಲಕ್ಕೆ ತಕ್ಕ ಹಾಗೆ ನಡೀಬೇಕು. ನೋಡಿ ನಿಮಗೆ ಫೋನ್ ಆಪರೇಟ್ ಮಾಡೋಕೆ ಬರೋದಿಲ್ಲ. ಟಿವಿ ನೋಡಿದ್ರೆ ಚೇಂಜ್ ಮಾಡೋಕೂ ಬರಲ್ಲ
ಶಾರದಮ್ಮ: ಏನೋಮ ನಮ್ಮ ಕಾಲದಲ್ಲಿ ನಾವೆಲ್ಲಾ ಮೈಬಗ್ಗಿಸಿ ದುಡೀತಿದ್ವಿ .ಹಿಂಗಿರಲಿಲ್ಲಾಪ್ಪ
******************************************************
2009
ಸೀಮಾ: ಅತ್ತೆ ಏನಿದು ಅತ್ತೆ ಮೈಕ್ರೋವೇವ್ನಲ್ಲಿ ಪಿಜ್ಜಾ ಬಿಸಿ ಮಾಡಿ ಅಂದ್ರೆ ಮಾಡೇ ಇಲ್ಲ.
ಸುನಂದಮ್ಮ: ನಂಗೆ ಕುಕ್ಕರಿನಲ್ಲಿ ಅಡಿಗೆ ಮಾಡಿಯೇ ರೂಡಿ ಸೀಮ. ಇದೇನೋ ಟೈಮ್ ಸೆಟ್ ಮಾಡೋದು ಅದು ಇದೂ ಎಲ್ಲಾ ಬರೋಲ್ಲ
ಸೀಮಾ: ಅತ್ತೆ ಅತ್ತೆ ಕಾಲಕ್ಕೆ ತಕ್ಕ ಹಾಗೆ ನಡೀಬೇಕು. ನೋಡಿ ನಿಮಗೆ ಮೊಬೈಲ್ ಫೋನ್ ಆಪರೇಟ್ ಮಾಡೋಕೆ ಬರೋದಿಲ್ಲ. ಡಿವಿಡಿ ಪ್ಲೇಯರ್‌ನಲ್ಲಿ ಸಿಡಿ
ಹಾಕೋಕೂ ಕಷ್ಟ ಪಡ್ತೀರಲ್ಲ
ಸುನಂದಮ್ಮ:ಏನೋಮ್ಮ ನಮ್ಮ ಕಾಲದಲ್ಲಿ ನಾವೆಲ್ಲ ಕಷ್ಟಾ ಪಟ್ಟು ಮೈಬಗ್ಗಿಸಿ ದುಡೀತಿದ್ವಿ . ಹಿಂಗಿರಲಿಲ್ಲಾಪ್ಪ

Rating
No votes yet

Comments