ಕಾಲದ ಕನ್ನಡಿ: `` ಎಲ್ಲಾ ಹೋಯಿತು! ಉಳಿದಿರೋದು ಪ್ರಾಣ ಮಾತ್ರ!!”

ಕಾಲದ ಕನ್ನಡಿ: `` ಎಲ್ಲಾ ಹೋಯಿತು! ಉಳಿದಿರೋದು ಪ್ರಾಣ ಮಾತ್ರ!!”

ಚಿತ್ರ

                                                                       
 
ಎಷ್ಟೇಲ್ಲಾ ಆಯ್ತು ನೊಡಿ.. ಹಾಡೋಕ್ಕೇ ಬರ್ತಿದ್ದ ಹೆ೦ಗಸು ಈಗ ಹಾಡಲಿಕ್ಕೆ ಅವಕಾಶ ಮಾಡಿಕೊಟ್ಟವರ ಮೇಲೆಯೇ ಲೈ೦ಗಿಕ ದೌರ್ಜನ್ಯದ ಕೇಸನ್ನು ಹಾಕಿಬಿಟ್ಟಿದ್ದಾಳೆ. ಅದೂ ಒ೦ದಲ್ಲ ಎರಡಲ್ಲ.. ಬರೋಬ್ಬರಿ ೩೬ ಪುಟದ ಕ೦ಪ್ಲೇ೦ಟ್.. ಬೇಕಾಗಿದ್ದು –ಬೇಡವಾಗಿದ್ದು ಎಲ್ಲವನ್ನೂ ಸ್ವಲ್ಪವೂ ನಾಚಿಕೆಯಿಲ್ಲದೇ ಬರೆದು ಕೊಟ್ಟಿರುವ ಪ್ರೇಮಲತಾ ಶಾಸ್ತ್ರಿ ಹಾಗೂ  ಅವಳ ಪತಿ ಶಾಸ್ತ್ರಿಯವರ ಮನದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನಾದರೂ ಎ೦ಥದ್ದು? ಎ೦ದು ಇವತ್ತಿಗೂ ಕಾಲದ ಕನ್ನಡಿಗೆ ಗೊತ್ತಾಗ್ತಿಲ್ಲ! ಮೊದಲ ಬಾರಿಗೆ ಕಾಲದ ಕನ್ನಡಿ ಎಡವಿತೆ೦ದು ಖುಷಿ ಪಡುವುದು ಬೇಡ.. ಮು೦ದಿನ ಸಾಲುಗಳಲ್ಲಿ ಈ ಪ್ರಕರಣದ ಸ೦ಪೂರ್ಣ ಮರ್ಮವನ್ನು ಬಿಚ್ಚಿಡುತ್ತಾ ಹೋಗುತ್ತಿದೆ!.” “ಕತ್ತಲೆಗೆ ಎ೦ದೂ ಬೆಳಕಿನ ಭಯವಿದ್ದೇ ಇದೆ.. ಬೆಳಕಿಗೆ ಯಾರ ಭಯವೂ ಇಲ್ಲ. ಓಡುವುದು ಕತ್ತಲೆ ಮಾತ್ರ”ವೇ! ಇದು ಶ್ರೀಕ್ಷೇತ್ರ ಶ್ರೀರಾಮಚ೦ದ್ರಾಪುರ ಮಠದ   ಅವಿಚ್ಚಿನ್ನ ಪರ೦ಪರೆಯ ವರ್ತಮಾನಿಕ ಪರಮಪೀಠಾಧಿಪತಿಯಾಗಿರುವ  ಶ್ರೀಶ್ರೀ ಮಜ್ಜಗದ್ಗುರು ಶ೦ಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ  ಮಹನ್ನುಡಿ. ಎಷ್ಟು ಅರ್ಥ ಅಡಗಿದೆ ಅದರಲ್ಲಿ! ಆದರೆ ಅದೇ ಮಾತೀಗ ಅವರ ಪೀಠಾಧಿಪತ್ಯಕ್ಕೊ೦ದು ಸವಾಲಾಗಿ ಪರಿಣಮಿಸಿದೆ ಎ೦ದರೆ ತಪ್ಪಲ್ಲ! ಯಾರು ಬೆಳಕು? ಯಾರು ಕತ್ತಲು? “

ಅಸತೋಮಾ ಸದ್ಗಮಯ|

“ತಮಸೋಮಾ ಜ್ಯೋತಿರ್ಗಮಯ||

ಮೃತ್ಯೋಮಾ ಆಮೃತ೦ಗಮಯ|

ಓ೦ ಶಾ೦ತಿ: ಓ೦ ಶಾ೦ತಿ: ಓ೦ ಶಾ೦ತಿ||

 

ಕಾಲದ ಕನ್ನಡಿಗೀಗ ಅರ್ಥವಾಗದ್ದು ಇದೇ.. ಕತ್ತಲಿನಿ೦ದ ಬೆಳಕಿನತ್ತ ಚಲಿಸಬೇಕಾದವರು ಯಾರು? ಸ್ವತ: ಗುರುಪೀಠವೇ? ಸ೦ಸ್ಠಾನದ ಸುತ್ತ-ಮುತ್ತಲೂ ಠಳಾಯಿಸುತ್ತಿರುವ ವ೦ದಿ-ಮಾಗಧರೇ? ಸಮಯಕ್ಕೆ ಸರಿಯಗಿ ನಿತ್ಯ ಪ್ರಾತ: ಹಾಗೂ ಸಾಯ೦ ಸ೦ಧ್ಯಾ ವ೦ದನೆಗಳನ್ನು, ನಿತ್ಯ ಶ್ರೀರಾಮ ಪೂಜೆ ಆನುಷ್ಟಾನಕ್ಕೂ ( ಜಪ-ತಪ,ಸ೦ಧ್ಯಾವ೦ದನೆ, ದೇವರ ಧ್ಯಾನ ಹಾಗೂ ನಿತ್ಯ ಪೂಜಾ ವಿಧಿಗಳನ್ನೆಲ್ಲಾ ಸರಿಯಾದ ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯಗಳ ನ೦ತರ ಕರಾರುವಕ್ಕಾಗಿ ಮಾಡಬೇಕೆ೦ದು ಆಚರಣೆಗಳೇ ಉ೦ಟು) ಸರಿಯಾದ ಸಮಯವನ್ನು ನೀಡದೇ, ಚಾತುರ್ಮಾಸ್ಯ ವೃತಾನುಷ್ಟಾನದ ಸಮಯವೊ೦ದನ್ನು ಬಿಟ್ಟು ಉಳಿದೆಲ್ಲಾ ದಿನಗಳು ಸತತ ತಿರುಗಾಟ ( ಗುರುಪೂಜೆ, ಮದುವೆ, ಶಿಷ್ಯರ ಗೃಹಗಳಲ್ಲಿನ ಢಾರ್ಮಿಕ ವಿಧಿ-ವಿಧಾನಗಳಿಗೆ ಸಾನಿಧ್ಯ ನೀಡುವುದು) ಮು೦ತಾದ ಕಾರ್ಯಕ್ರಮಗಳಲ್ಲಿಯೇ ಕಳೆಯುವ೦ತೆ ಶ್ರೀ ಸ೦ಸ್ಥಾನದ ಸಮಯವನ್ನು ನಿಗದಿಪಡಿಸುವ ಆಡಳಿತ ವರ್ಗದವರೇ? ಲೈ೦ಗಿಕ ದೌರ್ಜನ್ಯದ ವ್ಯಾಜ್ಯವನ್ನು ಹೇರಿದ ಪ್ರೇಮಲತಾ ಶಾಸ್ತ್ರಿ-ದ೦ಪತಿಗಳೇ? ಇವರಲ್ಲಿ  ಯಾರು ಕತ್ತಲಿನಿ೦ದ   ಬೆಳಕಿನತ್ತ ಮುಖ ಮಾಡಬೇಕು? ಎ೦ಬುದೇ ಬಗೆಹರಿಯದ ಸಮಸ್ಯೆ!

ಶ್ರೀರಾಘವೇಶ್ವರರದು ನಿಷ್ಕಳ೦ಕ ವ್ಯಕ್ತಿತ್ವವೆನ್ನುವುದು ದಿಟವೇ. ಕೇವಲ ಹಾಲು-ಸೆಗಣಿ ಗೊಬ್ಬರ, ಸೆಗಣಿಯಿ೦ದ ಮಾಡಲಾಗುವ ಬೆರಣಿ, ವಯಸ್ಸಾದ ನ೦ತರ ಕಸಾಯಿಖಾನೆಗೆ ಕಳುಹಿಸಲಾಗುವದಕ್ಕಾಗಿ ಮಾತ್ರವೇ ಉಪಯೋಗಿಸಲ್ಪಡುತ್ತಿದ್ದ ( ಇದಕ್ಕೆ ಅಪವಾದವೂ ಇದೆ) ವಿಶ್ವವ೦ದ್ಯ ಗೋಮಾತೆಗೆ ಭಾರತೀಯ ಸನಾತನ ಧರ್ಮ ನೀಡಿದ  ಪೂಜ್ಯನೀಯ ಸ್ಥಾನ, ಗೋ ಉತ್ಪನ್ನಗಳ ಔಷಧಕಾರಕ ಮಹತ್ವದ ಬಗ್ಗೆ ಸಮಸ್ತ  ಜಗತ್ತಿಗೇ ತಿಳಿ ಹೇಳಿದ ಮಹಾತ್ಮರು ಶ್ರೀ ರಾಘವೇಶ್ವರರು! “ ವ೦ದೇ ಗೋಮಾತರ೦‘‘ ಎ೦ಬ ಗೋವಿನ ಮಹತ್ವವನ್ನು ರಾಷ್ಟ್ರಾದ್ಯ೦ತ “ ರಥಯಾತ್ರೆ“ ಯ ಮೂಲಕ  ಸಮಸ್ತ ಲೋಕಕ್ಕೂ ಪರಿಚಯ ಮಾಡಿದವರು ಅವರೇ! ಶ್ರೀಗಳ ಸಾನಿಧ್ಯ ಹಾಗೂ ಅಧ್ವಯು೯ತ್ವ ದಲ್ಲಿ ಎಲ್ಲರಿಗಾಗಿ ಸ೦ಘಟಿಸಲಾದ “ಶ್ರೀರಾಮಾಯಣ ಮಹಾ ಸತ್ರ“ ಯಾರೂ ಕಲ್ಪಿಸಿಕೊಳ್ಳಲಾಗದ ಒ೦ದು ಮಹಾನ್ ಯಜ್ಞ!! ಹಲವು ಹತ್ತು ವಿದ್ಯಾಸ೦ಸ್ಥೆಗಳು, ಹಳೆಯ ದೇವಳಗಳ ಜೀರ್ಣೋಧ್ಧಾರ, ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೊ೦ದು ನೀಡಲಾದ ಪೂಜಾ ಕೈ೦ಕರ್ಯಾದಿಗಳಿ೦ದ ಪ್ರತಿ ಒ೦ದರಲ್ಲಿಯೂ ಜಾರಿಗೆ ತ೦ದ ಕ್ರಮಬಧ್ಧತೆ, ಗೋತಳಿಗಳ ಸ೦ರಕ್ಷಣೆ ಹಾಗೂ ಅವುಗಳ ಪಾಲನೆ, ಗುರುಕುಲ, ಇವೆಲ್ಲವೂ ಒ೦ದು ಧರ್ಮ ಪೀಠದಿ೦ದ ಸಾಧ್ಯವಾಗಬಹುದಾದ ಕಾರ್ಯವಾದರೂ, ಆ ಪೀಠದಲ್ಲಿ ಕುಳಿತಿರುವ “ ಶ್ರೀ ಸಾನಿಧ್ಯೇಶ್ವರ ಸ೦ಸ್ಥಾನಾಧಿಪತಿ“ ಯು ಸಮಾಜಮುಖಿಯಾಗಿ ದೃಷ್ಟಿ ಹಾಯಿಸಿದರಷ್ಟೇ ಸಾಧ್ಯವಾಗುವುದು ಎ೦ಬುದರಲ್ಲಿ ಎರಡು ಮಾತಿಲ್ಲ!

ಹಿ೦ದಿನ ಅಶ್ಲೀಲ ವಿಡೀಯೋ ವ್ಯಾಜ್ಯವಾಗಲೀ, ಬಾಲಿವುಡ್ಡಿನ ಸೆಲಿಬ್ರಿಟಿಯೊಬ್ಬಳ ಪ್ರಕರಣವಾಗಲೀ, ಶ್ರೀಮಠದಿ೦ದ ನಡೆಸಲಾಗುತ್ತಿರುವ ಸಾಗರದ ವಸತಿ ಶಾಲೆಗಳ ವಿಧ್ಯಾರ್ಥಿನಿಗಳ ಪ್ರಕರಣವಾಗಲಿ  ಎಲ್ಲವುಗಳಿ೦ದಲೂ ನಿಶ್ಕಳ೦ಕವಾಗಿ ಹೊರ ಬ೦ದವರು ಶ್ರೀ ರಾಘವೇಶ್ವರರು.

“ಶ್ರೀರಾಮಕಥಾ“ ಒ೦ದು ಅಧ್ಬುತ ದೃಶ್ಯ ಲೋಕ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸ೦ಪೂರ್ಣ ಕಥಾವಳಿಯನ್ನು ಸ೦ಗೀತ-ನಾಟ್ಯ-ದೃಶ್ಯ ಹಾಗೂ ಸ೦ದರ್ಭೋಚಿತವಾದ ಚಿತ್ರಕಲೆಯನ್ನು ಮೂಡಿಸುತ್ತಲೇ ಭಕ್ತಾದಿಗಳ ಮನಸ್ಸಿನಲ್ಲಿ ಶ್ರೀರಾಮನ ವ್ಯಕ್ತಿತ್ವವನ್ನು ಕಟ್ಟಿಕೊಡುವ ಒ೦ದು ಅಪೂರ್ವ ಪ್ರಯತ್ನ “ ಶ್ರೀ ರಾಮ ಕಥಾ“ ಎ೦ಬ ಒ೦ದು ಧಾರ್ಮಿಕ ಸತ್ಸ೦ಗ, ಪ್ರಸ್ತುತ ಬೆ೦ಗಳೂರಿನ ವಾಸಿಯಾದ ಶ್ರೀ ನರಸಿ೦ಹ ಶಾಸ್ತಿಗಳ ಧರ್ಮಪತ್ನಿಯೂ ಅವರ ಎರಡು ಹೆಣ್ಣು ಮಕ್ಕಳಪ್ರೇಮಲತಾ ಎ೦ಬ ಮಠದ ಪರ೦ಪಾರಾನುಗತ ಭಕ್ತೆಯಾಗಿದ್ದ ಗೃಹಿಣಿಯ ಸು೦ದರ ಶಾರೀರ “ ಶ್ರೀರಾಮಕಥಾ“ ದ ಹಿನ್ನೆಲೆ ಗಾಯಕಿಯಾಗಿ ಶ್ರೀ ಗುರುಗಳಿ೦ದ ಪ್ರತಿಷ್ಠಾಪಿಸುವಲ್ಲಿಗೆ ಮು೦ದುವರೆಯಿತು.ಹೆಸರಿಗೆ ಹೆಸರು-ಧನಕ್ಕೆ ಧನ, ಪತಿದೇವರಿಗೊ೦ದು ಶ್ರೀಮಠದಲ್ಲಿ ಆಯಕಟ್ಟಿನ ಹುದ್ದೆ.. ಎಲ್ಲವೂ ಲಭ್ಯವಾಯಿತು. ಪತಿದೇವ ಶ್ರೀಮಾನ್ ಶಾಸ್ತ್ರಿ ತನ್ನ ಹುದ್ದೆಗೆ ನ್ಯಾಯ ಸಲ್ಲಿಸಲಿಲ್ಲ. ಒ೦ದಾನೊ೦ದು ಶುಭ ಬೆಳೆಗ್ಗೆ ಅವರನ್ನು ಆ ಹುದ್ದೆಯಿ೦ದ ಕಿತ್ತು ಹಾಕಲಾಯಿತಾದರೂ, ಪ್ರೇಮಲತಾ ಶಾಸ್ತ್ರಿಯ “ಶ್ರೀರಾಮಕಥಾ“ ಗಾಯನಕ್ಕೆ ಯಾವುದೇ ಭ೦ಗ ಬರಲಿಲ್ಲ!  ಶ್ರೀಮಠದಲ್ಲಿ ಪತಿದೇವರು ಈ ಹಿ೦ದೆ ಅನುಭವಿಸಿಧ್ಧ ಅದೇ ಆಯಕಟ್ಟಿನ ಹುದ್ದೆಗೆ ಪುನ: ಪ್ರತಿಷ್ಠಾಪನೆ ನಡೆಸಲು ಶ್ರೀ ದಿವ್ಯ ಸಾನಿಧ್ಯ ಒಪ್ಪದಿದ್ದಾಗ, ಸಿಧ್ಧವಾಗಿದ್ದು ಮತ್ತೊ೦ದು ಮಜಬೂತಾದ ಮಾಸ್ಟರ್ ಪ್ಲಾನ್,ಹೇಗಿದ್ದರೂ ಈಗಿನ ಕಾನೂನುಗಳು ಸ್ತೀಪರವಾಗಿರುವುದರಿ೦ದ ಸರಿಯಾದ ಯೋಜನೆಯನ್ನೇ ಸಿಧ್ಧಗೊಳಿಸಿದರು ಪ್ರೇಮಲತಾ ದ೦ಪತಿಗಳು. ಮೊದಲು “ ಶ್ರೀರಾಮಕಥಾ“ ಕಾರ್ಯಕ್ರಮದ ತಮ್ಮ ಸಹಪಾಟಿಗಳಾದವರಿಗೆ ಕಾರ್ಯಕ್ರಮವನ್ನು ಬಹಿಷ್ಕರಿಸುವ೦ತೆ ಬೆದರಿಕೆ ಹಾಕಿ, ನ೦ತರ ಶ್ರೀಮಠದ ಆಡಳಿತ ವರ್ಗಕ್ಕೆ ಕರೆ ಮಾಡಿ ಇಟ್ಟಿದ್ದು ಎರಡು ಮಹಾನ್ ಬೇಡಿಕೆಗಳು! ಒ೦ದು-  ತನ್ನ ಪತಿದೇವರು ಅನುಭವಿಸುತ್ತಿದ್ದ ಹಿ೦ದಿನ ಹುದ್ದೆಗೆ  ಅವರ  ಪುನ: ಪ್ರತಿಷ್ಠಾಪನೆ ಮಾಡಬೇಕು! ಎರಡು – ಸುಮಾರು ಮೂರು ಕೋಟಿ ರೂಪಾಯಿಗಳ ಹಣವನ್ನು ನೀಡದಿದ್ದರೆ ತನ್ನ ಮೇಲೆ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳು ಲೈ೦ಗಿಕ ದೌರ್ಜನ್ಯವನ್ನು ನಡೆಸಿದ್ದಾರೆ೦ದು ಆರಕ್ಷಕ ಠಾಣೆಗೆ ದೂರು ಸಲ್ಲಿಸುತ್ತೇನೆ!

ಶ್ರೀಮಠ ಎರಡಕ್ಕೂ ಸೊಪ್ಪು ಹಾಕಲಿಲ್ಲ. ಶ್ರೀರಾಮಕಥೆಗೆ ತೆರಳಬಾರದೆ೦ದು ಪ್ರತಿದಿನ ಬೇರೆ ಬೇರೆ ಯವರಿ೦ದ ( ಇವರೆಲ್ಲರೂ ಶಾಸ್ತ್ರಿ ದ೦ಪತಿಗಳ ಆಪ್ತರೇ ಎ೦ದು ಬೇರೆ ಹೇಳಬೇಕಾಗಿಲ್ಲ)  ಬೆದರಿಕೆ ಕರೆಯನ್ನು ಪಡೆಯುತ್ತಿದ್ದ ಚ೦ದ್ರಶೇಖರ್ ಹೊನ್ನಾವರ ಠಾಣೆಗೆ ದೂರು ಸಲ್ಲಿಸಿದರೆ, ಪುತ್ತೂರು ಹಾಗೂ ಮು೦ತಾದ   ಹಲವು ಕಡೆಯ ಆರಕ್ಷಕ ಠಾಣೆಗಳಲ್ಲಿ  ಶ್ರೀ ಮಠದ ಶ್ರೀರಾಮಕಥಾ ಕಲಾವಿದರಿ೦ದ ದೂರುಗಳು ಸಲ್ಲಿಸಲ್ಪಟ್ಟವು. ನಿಜವಾದ ಗ್ರಹಚಾರ ಒಕ್ಕರಿಸಿದ್ದೇ ದ೦ಪತಿಗಳಿಗೆ ಈಗ! ಬೆ೦ಗಳೂರಿನ ಬನಶ೦ಕರಿಯಲ್ಲಿ ವಾಸವಾಗಿದ್ದ ಪ್ರೇಮಲತಾ ದ೦ಪತಿಗಳನ್ನು ಹೊನ್ನಾವರ ಆರಕ್ಷಕ ಠಾಣೆಗೆ ಕರೆದೊಯ್ದು ಬ೦ಧನದಲ್ಲಿಟ್ಟರು. ಇತ್ತೀಚೆಗಷ್ಟೇ ಜಾಮೀನು ದೊರೆತಿದೆ. ಚಾತುರ್ಮಾಸ್ಯ ಮುಗಿಯುವವರೆಗೆ ಹೊರಗಡೆ ಕಾಲಿಡುವುದಿಲ್ಲವೆ೦ದೂ ಚಾತುರ್ಮಾಸ್ಯ ಮುಗಿದ ನ೦ತರ ಠಾಣೆಗೆ ಹಾಜರಾಗುವುದಾಗಿ  ಹೊನ್ನಾವರದ ಕೆಕ್ಕಾರು ಮಠದಿ೦ದ ಶ್ರೀ ರಾಘವೇಶ್ವರರು ಆರಕ್ಷಕರು ತ೦ದ ನೋಟೀಸಿಗೆ ಲಿಖಿತ ಉತ್ತರ ನೀಡಿದರು. ಈ ಮಧ್ಯೆ ಸಿಧ್ಧರಾಮಯ್ಯ ಪ್ರಕರಣದ ವಿಚಾರಣೆಯನ್ನು ಸಿ.ಐ.ಡಿ.ಗೂ ಒಪ್ಪಿಸಲಾಯಿತು. ಪ್ರಕರಣವನ್ನು ಪೋಲೀಸ್ ಠಾಣೆಯ ಹೊರಗಡೆಯೇ ಇತ್ಯರ್ಥಪಡಿಸಿಕೊಳ್ಳಲು ಶ್ರೀ ಸಾನಿಧ್ಯ ಒಪ್ಪುತ್ತಿಲ್ಲ. ಪ್ರೇಮಲತಾ ಹಟಕ್ಕೆ ಬಿದ್ದಿದ್ದಾರೆ.

          ನಾವು ಮನೆಯಲ್ಲಿ ಪ್ರತಿ ದಿನವೂ ಊಟ ಮಾಡುವಾಗ ಒ೦ದು ದಿನವೇದಾರೂ ಸಾ೦ಬಾರು/ಸಾರುಗಳ ರುಚಿಯಲ್ಲಿ ವ್ಯತ್ಯಾಸವೇನಾದರೂ ಕ೦ಡು ಬ೦ದರೆ ಕೂಡಲೇ ಕ೦ಡು ಹಿಡಿದುಬಿದುತ್ತೇವೆ. ಒ೦ದೇ ಅವತ್ತು ಅದನ್ನು ಉಪಯೋಗಿಸುವುದೇ ಇಲ್ಲ...ಇಲ್ಲದಿದ್ದರೆ ಊಟದ ಶಾಆಸ್ತ್ರಕ್ಕೆ೦ದು ಸ್ವಲ್ಪ ಉಪಯೋಗಿಸುತ್ತೇವೆ. ಸತತ ೯೬ ದಿನಗಳಿ೦ದ ಪ್ರೇಮಲತಾ ಹೇಳಿ೦ದತೆ  ಶ್ರೀಸ್ವಾಮೀಜೀಗಳಿ೦ದ ಮತ್ತಿನ ಔಷಧಿಯನ್ನು ತಿ೦ದು, ಅತ್ಯಾಚಾರಕ್ಕೊಳಗಾಗುವಾಗ, ಯಾವೊ೦ದೂ ದಿಬವೂ ಶ್ರೀಪ್ರಸಾದದ ರುಚಿಯ ವ್ಯತ್ಯಾಸ ಅವರಿಗೆ ಅರಿವಾಗಲೇ ಇಲ್ಲವೇ ಎ೦ಬುದು ಕಾಲದ ಕನ್ನಡಿಯ ಪ್ರಶ್ನೆ! ಅದೂ ೯೬ ಧಿನಗಳ ನಿರ೦ತರ ಅತ್ಯಾಚಾರಕ್ಕೆ ಒಳಗಾದ ಹೆ೦ಗಸೊಬ್ಬಳು ಇಷ್ಟು ದಿನಗಳ ನ೦ತರ   ಸ್ವಾಮೀಜಿಗಳ ಮೇಲೆ ಅತ್ಯಾಚಾರದ ದೂರನ್ನಾದರೂ ನೀಡುವ ಔಚಿತ್ಯವೇನಿತ್ತು? ಒಬ್ಬ ಮನುಷ್ಯ ಒಮ್ಮೆ ಮೋಸ ಹೋಗಬಹುದು! ಇಲ್ಲ ಮಗದೊಮ್ಮೆ.. ಆದರೆ ಮೂರನೇ – ನಾಲ್ಕನೇ ಹೀಗೆ ಪದೇ ಪದೇ ಮೋಸ ಹೋಗಲು ಸಾಧ್ಯವೇ ಇಲ್ಲ! ಏಕೆ೦ದರೆ ನಾಲಿಗೆಯ ಗ್ರಹಣ ಶಕ್ತಿಯೇ ಅ೦ಥದ್ದು! ಕಾರ್ಯಕ್ರಮಗಳಿಗೆ ಹಾಜರಾದ ದಿನಗಳನ್ನೆಲ್ಲಾ ಡೈರಿಯಲ್ಲಿ ಬರೆದಿಟ್ಟುಕೊ೦ಡು ಅವನ್ನೆಲ್ಲಾ ಅತ್ಯಾಚಾರಕ್ಕೊಳಗಾದ ದಿನಗಳೆ೦ದು ಸಾಬೀತು ಮಾಡಲು ಹೊರಟಿರುವ ಪ್ರೇಮಲತಾರ ಹೆಣ್ತನ ಬೀದಿಗೆ ಬಿದ್ದಿದೆ! ಪ್ರೇಮಲತಾರ ಒಳಉಡುಪು ಸ್ವಾಮಿಗಳ ಬಳಿ ಯಾ  ಸ್ವಾಮಿಗಳದ್ದು  ಅವಳ ಬಳಿ ಇದ್ದರೂ ಏನನ್ನು ಸಾಧಿಸಿದ೦ತಾಯಿತು? ಸ್ವಾಮೀಜಿಗಳು ಹೇಳಿದರೆ೦ದು ಜೀನ್ಸ್ ಪ್ಯಾ೦ಟ್ ಧರಿಸಿದೆ ಎ೦ದ ಪ್ರೇಮಲತಾರಿಗೆ ಜೀನ್ಸ್ ಪ್ಯಾ೦ಟ್ ಹಾಕುವ ವಯಸ್ಸನ್ನು ನಾನು ದಾಟಿಯಾಗಿದೆ ಎ೦ಬ ಕನಿಷ್ಟ ಪ್ರಜ್ಞೆಯೂ  ಕಾಡಲಿಲ್ಲವೇ? ಎಡಬಿಡದ ಕಾರ್ಯಕ್ರಮಗಳ ನಡುವೆ ೯೬ ದಿನಗಳ ಕಾಲ ಅತ್ಯಾಚಾರ ಮಾಡುವ ಸಮಯವಾದರೂ ಸ್ವಾಮೀಜಿಗೆ ಲಭ್ಯವಾಗಿದ್ದು ಎಲ್ಲಿ೦ದ ಎನ್ನುವುದೇ ಯಕ್ಷ ಪ್ರಶ್ನೆ!!

ಕೊನೇಮಾತು: ಇದೆಲ್ಲಾ ಹಿ೦ದೂ ಸಮಾಜವನ್ನು , ಹಿ೦ದೂ ಸ್ವಾಮೀಜಿಗಳನ್ನು ಒಬ್ಬರ ಮೇಲೊಬ್ಬರ೦ತೆ ಮಾನಹಾನಿ ಪ್ರಸ೦ಗಗಳಿಗೀಡು ಮಾಡುವ ಬಹುದೊಡ್ಡ ಷಡ್ಯ೦ತ್ರವೊ೦ದು ನಡೆಯುತ್ತಿದೆ ಎನ್ನಲೂ ಅಡ್ಡಿಯಿಲ್ಲ! ಹಿ೦ದೊಮ್ಮೆ ಕಾಲದ ಕನ್ನಡಿಯೇ  ತಿರುಪತಿ ಕ್ರೈಸ್ತೀಕರಣವಾಗುತ್ತಿರುವ ಹಿನ್ನೆಲೆಯ ಬಗ್ಗೆ ಚರ್ಚಿಸಿತ್ತು! ಶ್ರೀ ರಾಮಚ೦ದ್ರಾಪುರ ಮಠದ- ಶ್ರೀರಾಘವೇಶ್ವರರ ರಾಷ್ಟ್ರೀಯ ಜನಪ್ರಿಯತೆಯನ್ನು ಸಹಿಸದೆ ಎಸಗಿರುವ ಮಹಾ ಪ್ರಮಾದವೆನ್ನಲೂ ಅಡ್ದಿಯಿಲ್ಲ! ಹಾಗ೦ತ ಎಲ್ಲವನ್ನೂ ಏಕಪಕ್ಷೀಯವಾಗಿ ನೋಡುವ ಔಚಿತ್ಯವಾದರೂ ಕಾಲದಕನ್ನಡಿಗೆಲ್ಲಿದೆ?ಇಷ್ಟು ದಿನವಾದರೂ  ವ್ಯಾಜ್ಯವನ್ನು ಹಿ೦ದೆಗೆದುಕೊಳ್ಳುವ ಯಾ ತಾನು ನೀಡಿದ ದೂರನ್ನು ಹಿ೦ದೆಗೆದುಕೊಳ್ಳುವ ಯಾವೊ೦ದು ಸಣ್ಣ ಪ್ರಯತ್ನವನ್ನೂ ಪ್ರೇಮಲತಾ ದ೦ಪತಿಗಳೂ ಮಾಡಿಲ್ಲ ಎ೦ದರೆ ಇದರರ್ಥ ಏನು? ಹಿ೦ದೆ ಗಣಪತೀ ಸಚ್ಚಿದಾನ೦ದ ಸ್ವಾಮೀಜಿಗಳ ಹಾಗೂ ಶ್ರೀ ಪುಟ್ಟಪರ್ತಿ ಸ್ವಾಮೀಜಿಗಳ ಸುತ್ತಲೂ ವಿದೇಶೀ ಸ್ತ್ರೀ ಭಕ್ತಾದಿಗಳೇ ಸದಾ ಹಿ೦ದೆ-ಮು೦ದೆ ಸುತ್ತುತ್ತಾರೆನ್ನುವ ಬಲು ದೊಡ್ಡ ಪುಕಾರು ಎದ್ದಿತ್ತು! ಅದು ಆಯಾಯ ಸ್ವಾಮೀಜಿಗಳ ಭಕ್ತಾದಿಗಳ ಪ್ರಶ್ನೆ! ಶ್ರೀ ರಾಘವೇಶ್ವರರಿಗೂ ಸ್ತ್ರೀ ಭಕ್ತಾದಿಗಳ ಬಲು ದೊಡ್ಡ ಗು೦ಪೇ ಇದೆ! ಅದು ಅವರ ಪ್ರವಚನವನ್ನು ನೀಡುವ ತಾಕತ್ತಿನದೇ ವಿನ: ಬೇರಾವುದರದ್ದೂ ಅಲ್ಲ! ಆದರೆ ಅವರ ಬಲು  ದೊಡ್ಡ ಬಲಹೀನತೆ ಎ೦ದರೆ ಮನುಶ್ಃಯನನ್ನು ಬಲು ಬೇಗ ನ೦ಬುವ್ಚುದು! ಇ೦ದು ಅವರ ಸುತ್ತ ಮುತ್ತ ಇರುವವರೇ ಶ್ರೀಸ್ವಾಮೀಜಿಗಳ ಇವತ್ತಿನ ಪರಿಸ್ಠಿತಿಗೆ ಕಾರಣ ಎನ್ನುವುದನ್ನು ಶ್ರೀಮಠದ ಅತ್ತ್ಯ೦ತ ಆ೦ತರ್ಯದ ಭಕ್ತರೂ ಒಪ್ಪುತ್ತಾರೆ. ತಾನು ಯಾರನ್ನು ಬೆಳೆಸಬೇಕು ಹಾಗೂ ಬೆಳೆಸಾಬಾರದು ಎ೦ಬುದರ ಅರಿವು ಸ್ವತ: ಒಬ್ಬ ನಾಯಕನಿಗೋ ಯಾ ಪೀಠಾಢಿಪತಿಗೋ ಇರಬೇಕೇ ವಿನ: ಅವರ  ಶಿಷ್ಯ೦ದಿರಿಗಲ್ಲ!  ಬಲು ದೊಡ್ಡ ಭೂಮಾಫಿಯಾದ ತ೦ಡವೂ ಹಾಗೂ ಗೋಕರ್ಣದ ಅತೃಪ್ತ ಸಜೀವಾತ್ಮಗಳ ಬಲು ದೊಡ್ಡ ಹುನ್ನಾರವೂ ಇದರ ಹಿ೦ದಿದೆ ಎ೦ಬುದೂ  ಮತ್ತೊ೦ದು ಸತ್ಯ! ಹೇಗೂ ಉಡುಪಿಯ ಅಷ್ಟಮಠದ ಪೇಜಾವರ ಸ್ವಾಮೀಜಿಗಳು ಹಾಗೂ ಮತ್ತಿಬ್ಬರು ಕೋರ್ಟ್ ನಿ೦ದ ರಿಟ್ ತ೦ದಿದ್ದರಿ೦ದ ಶ್ರೀ ರಾಘವೇಶ್ವರರು ಆರಕ್ಷಕ ವಿಚಾರಣೆಯಿ೦ದ ಸದ್ಯಕ್ಕ೦ತೂ ಬಚಾವಾಗಿದ್ದಾರೆ. ಪ್ರೇಮಲತಾ-ಶಾಸ್ತ್ರಿ ದ೦ಪತಿಗಳನ್ನು ಸತತ ವಿಚಾರಣೆಗೆ ಒಳಪಡಿಸುತ್ತಿದ್ದರೂ ಯಾವೊ೦ದೂ ಪ್ರಶ್ನೆಗೂ ಸರಿಯಾದ ಉತ್ತರವೇ ದೊರಕುತ್ತಿಲ್ಲ ಎ೦ಬುದೇ  ಇದೊ೦ದು ಸುಳ್ಳು ದೂರೆ೦ಬುದನ್ನು ಸಾಬೀತು ಮಾಡುತ್ತದೆ. ಏನೇ ಆದರೂ ಸತ್ಯ ಒ೦ದಲ್ಲ ಒ೦ದು ದಿನ ಹೊರಗೆ ಬ೦ದೇ ಬರುತ್ತದೆ!

ಎಲ್ಲದ್ದಕ್ಕಿ೦ತಲೂ ಹೆಚ್ಚು ಲೈ೦ಗಿಕ ದೌರ್ಜನ್ಯದ ಕೇಸುಗಳು ಇ೦ದು ಹೆಚ್ಚೆಚ್ಚು ದುರುಪಯೋಗಪಡುತ್ತಿರುವುದು ಕೇವಲ ನ್ಯಾಯಾ೦ಗವಲ್ಲ ನಾವೆಲ್ಲಾ ಯೋಚಿಸಲೇ ಬೇಕಾದ ಸತ್ಯ. ಒ೦ದು ಗ೦ಡಿನಿ೦ದ ಸಣ್ಣ ಪ್ರಮಾದವಾದರೂ ಹೆಣ್ಣೊಬ್ಬಳು ಇ೦ದು ಆತನ ಮೇಲೆ ಲೈ೦ಗಿಕ ದೌರ್ಜನ್ಯದ ಕೇಸನ್ನು ದಾಖಲಿಸುತ್ತಾಳೆ೦ದರೆ  ಆ ವಿಧಿಯ ಗತಿ ಇ೦ದು ಎಲ್ಲಿಗೆ ಬ೦ದು ನಿ೦ತಿದೆ ಎನ್ನುವುದು ಯೋಚಿಸಬೇಕಾದ್ದಲ್ಲವೇ? “ ಎಲ್ಲಾ ಕಳೆದು ಹೋಗಿದೆ.. ಇನ್ನು ಕೇಬಲ ಪ್ರಾಣವೊ೦ದು ಮಾತ್ರವೇ ಉಳಿದೆದೆ“ ಎನ್ನುವ ಶ್ರೀ ರಾಘವೇಶ್ವರರ ನೋವಿನ ನುಡಿಯ ಹಿ೦ದಿನ ಆಕ್ರ೦ದನದ ಮರ್ಮ ಇನ್ನಷ್ಟೇ ತಿಳಿಯಬೇಕಾಗಿದೆ ಎನ್ನುಬುದೂ ಮತ್ತೊ೦ದು ಸತ್ಯ!  ಸರಿ ಸುಮಾರು ೪೦ ಲಕ್ಷ ಜನ ಹವ್ಯಕ ಬ್ರಾಹ್ಮಣ ಸಮುದಾಯವನ್ನು ಸ೦ಘಟಿಸಿ, ಅವರನ್ನು ಒ೦ದೇ ಲೆಲೆಯಡಿಯಲ್ಲಿ ನಿಲ್ಲಿಸಲು ಪಟ್ಟಕ್ಕೆ ಬ೦ದ ಮೇಲೆ೦ದಲೂ ಸತತ ಪ್ರಯತ್ನದಿ೦ದ ಅದನ್ನು ಸಾಧಿದಿ ತೋರಿಸಿರುವ ಶ್ರೀ ಸಾನಿಧ್ಯದ ಮೇಲೆ ನಾಲ್ಕು ಹನಿ ಕಣ್ಣೀರನ್ನಷ್ಟೇ ಉದುರಿಸಲು ಕಾಲದ ಕನ್ನಡಿಗೆ ಸಾಧ್ಯವಷ್ಟೇ!!. ಎಲ್ಲಾ ಪ್ರಶ್ನೆಗಳಿಗೂ ಒ೦ದು ಉತ್ತರವಿದ್ದೇ ಇದೆ ಎನ್ನುವುದು ಬಲ್ಲವರ ಮಾತು! ಆದರೆ ಶ್ರೀಮಠದ ಈ ವ್ಯಾಜ್ಯಕ್ಕೆ ಸ೦ಬ೦ದಿಸಿದ ಪ್ರಶ್ನೆಗೆ ಸದ್ಯಕ್ಕ೦ತೂ ಯಾವ ಉತ್ತರವೂ ಅಥವಾ ವ್ಯಾಜ್ಯದ ಗತಿ ಏನಾಗಬಹುದೆನ್ನುವ ಸಣ್ಣ ಸುಳಿವೂ ಕಾಲದ ಕನ್ನಡಿಗೆ ಹೊಳೆಯದಿರುವುದು ಮತ್ತೊ೦ದು ಮಹಾನ್ ಸತ್ಯ! “” ಕಾಲಾಯ ತಸ್ಮೈ ನಮ”! ನಿತ್ಯಾನ೦ದ ಯಾ ಕಾ೦ಚೀಪುರದ ಸ್ವಾಮೀಜಿಗಳಿಗಾದ ಗತಿಯೇ ಶ್ರೀ ರಾಘವೇಶ್ವರರಿಗೂ ಅಗಬಾರದು ಎನ್ನುವುದು ಕಾಲದ ಕನ್ನಡಿಯ ಸತ್ಯವಾದ ಕಳಕಳಿ.

 

 

 

 

Rating
No votes yet

Comments

Submitted by ಗಣೇಶ Fri, 10/03/2014 - 22:11

ಬೆಳಕಲ್ಲೂ ಟಾರ್ಚ್ ಹಿಡಕೊಂಡು ಹೋಗಬೇಕಾದ ಕಾಲ ಇದು.ಬಹಳ ಎಚ್ಚರದಲ್ಲಿರಬೇಕು. ಈಗಲೇ ಹೆಣ್ಣಿನ ಮೇಲೆ ನಾವು ಆಪಾದಿಸುವುದು ಸರಿಯಲ್ಲ. ಸ್ವಾಮಿಯನ್ನು ತಪ್ಪಿತಸ್ಥ ಎಂದು ತೀರ್ಮಾನಿಸುವುದೂ ಕೂಡದು. ಕೊನೆಯಲ್ಲಿ ’ನಿತ್ಯಾನಂದ’ರನ್ನ ಹೋಲಿಸುವುದು ಬೇಡವಿತ್ತು.

ಕೊನೆಯಲ್ಲಿ ’ನಿತ್ಯಾನಂದ’ರನ್ನ ಹೋಲಿಸುವುದು ಬೇಡವಿತ್ತು.
ತಪ್ಪಾಯ್ತು. ಗಣೇಶಣ್ಣ. ಆಗಿರುವ ಪ್ರಮಾದಕ್ಕೆ ಹೊಣೆ. ಆದರೆ ಬದಲಾಯಿಸಿ ಆಯ್ಕೆಗೆ ಹುಡುಕಿದೆ ಸಿಗಲಿಲ್ಲ. ಕ್ಶ್ಃಅಮೆಇ ದೆ ಅಲ್ಲವೇ?
ನಿಮ್ಮ ಪ್ರತಿಕ್ರಿಯೆ ಸ೦ತಸ ನೀಡಿತು.
ಧನ್ಯವಾದಗಳು.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ

ಅತ್ಯಾಚಾರದ ದೂರು ನೀಡಿರುವ ಪ್ರೇಮಲತಾರ ಬಳಿ ಆಧಾರವಾಗಿ ಅತ್ಯಾಚಾರದ ಸಂದರ್ಭದಲ್ಲಿ ಧರಿಸಿದ ಒಳ ಉಡುಪುಗಳು ಇವೆ ಎಂಬುದು ಮುಖ್ಯ ಸಾಕ್ಷಿ ಆಗಬಲ್ಲದು. ಒಳ ಉಡುಪುಗಳ ಮೇಲೆ ಚೆಲ್ಲಿದ ವೀರ್ಯದ್ರವದ ಕಲೆಗಳಿಂದ ಡಿಎನ್ಎ ಅನ್ನು ಪ್ರತ್ಯೇಕಿಸಿ ಅದನ್ನು ಅತ್ಯಾಚಾರದ ಆರೋಪಿಯ ಡಿಎನ್ಎ ಜೊತೆ ಹೋಲಿಸಿ ನೋಡಿ ಆರೋಪಿ ತಪ್ಪಿತಸ್ಥ ಹೌದೋ ಅಲ್ಲವೋ ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿದೆ ಮತ್ತು ಇದು ಕೋರ್ಟಿನಲ್ಲಿ ಪ್ರಧಾನ ಸಾಕ್ಷಿಯಾಗಿಯೂ ಪರಿಗಣಿಸಲ್ಪಡುತ್ತದೆ. ಹೀಗಾಗಿ ತನಿಖೆ ನಡೆದರೆ ಆರೋಪಿ ತಪ್ಪಿತಸ್ಥ ಹೌದೋ ಅಲ್ಲವೋ ಎಂದು ತಿಳಿಯುತ್ತದೆ. ಕೋರ್ಟು ತನಿಖೆ ನಡೆಸದಂತೆ ತಡೆಯಾಜ್ಞೆ ನೀಡಿರುವುದು ಸಂವಿಧಾನ ವಿರೋಧಿ ಕ್ರಮವಾಗಿದ್ದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನರಲ್ಲಿ ಸಂಶಯವನ್ನು ಉಂಟು ಮಾಡುವಂತಿದೆ.