ಕಾಲದ ಚಕ್ರ (ಶ್ರೀ ನರಸಿಂಹ 48)

ಕಾಲದ ಚಕ್ರ (ಶ್ರೀ ನರಸಿಂಹ 48)

ಕಾಲವೆಂಬುವುದದಕೆ ಆದಿ,ಅಂತ್ಯಗಳೆಂಬುವುದಿಲ್ಲ

ಎಲ್ಲದಕೂ ಸಾಕ್ಷಿಯಾಗಿಯೂ ಕಾರಣವದೇನಾಗಿಲ್ಲ

ಜಗದ ಈ ಸೃಷ್ಟಿಗೂ ಮುನ್ನ,ಸ್ಥಿತಿಯಲ್ಲಿ,ನಂತರವು

ಕಾಲದ ಇರುವೆಂಬುವುದದು ಎಂದಿಗೂ ಶಾಶ್ವತವು

 

ಕಾಲವೆಂಬುವುದನು ಎದುರಿಸಿ ನಿಂತವರಾರಿಹರು

ಅದರೆದುರು  ಮಂಡಿ ಊರಲೇ ಬೇಕಿಹುದೆಲ್ಲರು

ಕಹಿ ಘಟನೆಗಳ ಕಂಡು ನೀ ಮನದಿ ಮರುಗದಿರು

ಕಾಲವದಕೆ ಉತ್ತರಿಪುದು ಚಿಂತೆಯ ಮಾಡದಿರು

 

ಕಾಲವೆಂಬುವುದು ಚಕ್ರದ ತೆರದಿ ಅನವರತವು ತಿರುಗುತಿಹುದು

ಮುಕ್ತಿ ಪಡೆಯಲಿದರಿಂದ ಶ್ರೀ ನರಸಿಂಹನ ಕೃಪೆಯು ಬೇಕಿಹುದು 

Rating
No votes yet

Comments