ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"

ಅವಧಿಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು.
ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೇ ನಾನು ಅದರತ್ತ ಆಕರ್ಷಿತನಾದೆ. ಬೇರೆ ದಿನಗಳಲ್ಲಿಯಾದರೆ ಎನೇನೋ ಕೆಲಸಕಾರ್ಯಗಳಿರುತ್ತವಲ್ಲ.
೧೮.೦೪.೧೦ ರಂದು ಬೆಳಿಗ್ಗೆ ನಾಲ್ಕು ಘಂಟೆಗೇ ಎದ್ದಿದ್ದೆ. ಆದರೆ ಹಿಂದಿನೆರಡು ದಿನಗಳು ನಮ್ಮ ಘನ ಬಿಬಿಎಮ್ಪಿ  ನೀರು ಬಿಡದಿರೋ ಕಾರಣ ಸ್ನಾನ ಮಾಡಲೂ ನೀರಿಲ್ಲದ ಪರಿಸ್ಥಿತಿ.
ಅಷ್ಟೇ ಅಲ್ಲ ಎರಡು ಬೆರಳಿಗೂ ತತ್ವಾರವೇ.

ಓನರ ನ ನೀರಿನ ಹೌದಿಯಲ್ಲಿ ತುಂಬಿದ ನೀರಿತ್ತು. ಕೆಲಸದವಳ ಪ್ರತಿಕ್ರಿಯೆಗೂ ಬಗ್ಗದೇ ನಾನೂ ನನ್ನ ಶ್ರೀಮತಿಯೂ ನೀರು ತಂದು ತುಂಬಿಸಿಕೊಂಡೆವು.ಅಷ್ಟರಲ್ಲಿಯೇ ಆರು ಕಳೆದಿತ್ತು, ನಿತ್ಯವಿಧಿ ಪೂರೈಸಿ ಲಗುಬಗೆಯಿಂದ ಧಿರುಸು ಧರಿಸಿ ಕೆಳಗಿಳಿದು ಬಸ ನಿಲ್ದಾಣ ತಲುಪುವಾಗ ಆಗಲೇ ಕೈಗಡಿಯಾರ ಏಳೂಮುಕ್ಕಾಲು ತೋರಿಸುತ್ತಿತ್ತು. ಕೆಂಪೇಗೌಡನಿಲ್ದಾನಕ್ಕೆ ತಲುಪುವಾಗ ಎಂಟೂ ಹತ್ತು.

ನಾನು ಏನು ಕೇಳಿದೆನೋ ೨೧೦ ಆರ್ ಬಸ್ ನ ಚಾಲಕ ಹೋಗುವುದಿಲ್ಲ ಎಂಬರ್ಥದಲ್ಲಿ ತಲೆಯಾಡಿಸಿದ್ದ, ನಂಬರ್ ನೋಡಿದವನಿಗೆ ರಾಜಶೇಖರ್ ರವರು ಕೊಟ್ಟ ನಂಬರ್ ನೆನಪಿಗೆ ಬಂತು ಪುನಹ ನಿರ್ವಾಹಕನಲ್ಲಿ ಕೇಳಿದೆ, ಆತ ಮುನೀಶ್ವರ ಅಲ್ಲ ಸಾರ್ ಶನೀಶ್ವರ ಮಂದಿರಕ್ಕೆ ಹೋಗುತ್ತೆ ಎಂದ , ಆಗಲೇ ನಾನು ಮೊದಲು ಮಾಡಿದ ತಪ್ಪಿನರಿವಾದದ್ದು.
ಆದರೆ ಅದು ಅಲ್ಲಿ ಇಲ್ಲಿ ಸುತ್ತಾಡುತ್ತಾ ಚಲಿಸುತ್ತಿದ್ದರೆ ನನಗೆ ಬಸ್ಸು ನಿಧಾನವಾಗಿ ಚಲಿಸುತ್ತಿರುವ ಅನುಭವ.

ನಾನು ಕಲಿಯುತ್ತಿರಬೇಕಾದರೆ  ಕವಿವರ್ಯರು ನನಗೆ ಮೇಸ್ಟ್ರಾಗಿ ಸಿಕ್ಕಿರಲಿಲ್ಲ , ನನಗಾಗ ಆಸೆಯಿತ್ತು ಕವಿಯೋ ಕಥೆಗಾರನೋ ಚಿತ್ರಕಾರನೋ ಆಗಬೇಕೆಂಬುದು, ಆದರೆ ನಮ್ಮ ಇತಿಹಾಸ ಅದಕ್ಕೆ ಅನುಮತಿ ಕೊಟ್ಟಿರಲಿಲ್ಲ.
ಆಗಿನ ನನ್ನ ಮನಸ್ಸು ಪುನಹ ಈಗ ನನ್ನ ಇತಿಹಾಸವನ್ನು ಈಗ ಬದಲಿಸಹೊರಟಿದೆ,
 "ಪ್ರಥಾ" ಒಳಹೊಕ್ಕ ಮೇಲೆ ನನ್ನನ್ನೇ ನಾನು ಮರೆತು ಬಿಟ್ಟೆ.
ಕಿರು ತೆರೆಯ ಧಾರಾವಾಹಿ "ಜೋಗುಳ"ದ ಪಾತ್ರಧಾರಿ ಶ್ರೀಮತಿ ಅಪರ್ಣರವರು ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಪ್ರಸ್ಥಾಪಿಸಿ ಎಲ್ಲರಿಗೂ ಸ್ವಾಗತ ಕೋರಿದರು.
 ಮಾನ್ಯ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ನಿಜವಾಗಿಯೂ ಎರಡು ಮಾತಿಲ್ಲ. ಅವರ ಈ ಸಮುದಾಯ ಶಿಕ್ಷಣ, ಕನ್ನಡದ ಅಳಿದು ಹೋಗುತ್ತಿರುವ  ಪಂಪ, ರನ್ನ, ರಾಘವಾಂಕ ಇತ್ಯಾದಿ ಕವಿರತ್ನರ ಅತ್ಯಮೋಘ ಕ್ರತಿಗಳ ಬಗ್ಗೆ ನಮಗೆ ಕಣ್ಣಿಗೆ ಕಟ್ಟುವಂತೆ ಚಿತ್ರಣ ಕೊಟ್ಟು ಹಳೆ ಹೊಸ ಮತ್ತು ನಡು ಗನ್ನಡದ ಅಮ್ರತ ಮಣಿ  ಸ್ಪರ್ಶಮಾಡಿಸುತ್ತಿರುವ ಉತ್ತಮ ಕಾರ್ಯ. ಈಗಿನ ಯಾಂತ್ರಿಕತೆಯ ಯುಗದಲ್ಲಿ ಇಂತಹದ್ದನ್ನೆಲ್ಲ ಉಣ ಬಡಿಸುವ ಈ ಯೋಚನೆಯೇ ಸ್ತುತ್ಯಾರ್ಹವೆನ್ನಿಸುತ್ತಿದೆ. ಇದನ್ನು ಯೋಜಿಸಿ, ರೂಪಿಸಿ, ಹಂಚುವ ಇವರ ಧ್ಯೇಯವೇ ಮಹಾಕಾರ್ಯ, ಶೃಮಿಸುತ್ತಿರುವ ಎಲ್ಲರೂ ವಂದನಾರ್ಹರು.
ನನಗಂತೂ ಅಲ್ಲಿ ಕಳೆದ ಪ್ರತಿ ಕ್ಷಣವೂ ಅಮೂಲ್ಯವೆನ್ನಿಸಿತ್ತು.ಇದನ್ನ ಸವಿಯುತ್ತಿರುವ ನಾನೇ ಧನ್ಯ ಎನ್ನಿಸಿತು.
ಅವರ ಉತ್ತರಾಯಣ ಕವಿತೆಗಳ ಕುರಿತ  ಶಾಲಿನೀ ಸುಧೀರರ ಸಂಪಾದತ್ವದಲ್ಲಿ ಬೆಳಕು ಕಂಡ ಪುಸ್ತಕ "ಉತ್ತರೋತ್ತರ" ದಕ್ಷಿಣೆ ಬೇರೆ, ಅದೂ ಎಚ್ಚೆಸ್ವಿ ಯವರ ಹಸ್ತಾಕ್ಷರದೊಂದಿಗೆ.
ಇದೆಲ್ಲದರ ಮಧ್ಯೆ ನನ್ನೊಳಗಿನ ಸಿವಿಲ್ ಇಂಜಿನೀಯರ್ ರಾಜಶೇಖರವರ ಮನೆ "ಪ್ರಥಾ" ದ ಮನ  ಸೂರೆಗೊಳ್ಳುವ ರಮ್ಯ ಹೊರಾಂಗಣ ಮತ್ತು ಒಳಾಂಗಣ ನೋಡಿ ಜಾಗ್ರತನಾದರೂ , ಗುರುವರ್ಯರ ಪಂಪನ "ಆದಿಪುರಾಣ" ದಲ್ಲಿ ಎಷ್ಟು ತಲ್ಲೀನನಾದೆನೆಂದರೆ ಇಡೀ ಮನೆಯನ್ನು ಪರಿಶೀಲಿಸಲೂ ಮರೆತಿದ್ದೆ.ಮತ್ತೆ ನಾನು ನನ್ನದೇ ಲೋಕದಲ್ಲಿ, ಪಂಪನೂ ಯೋಧನಂತೆ ಎನ್ನುವ ಮಾತು ನನ್ನನ್ನು ಪುಲಕಿತಗೊಳಿಸಿತಾದರೂ, "ಕಹಾಂ ರಾಜಾ ಭೋಜ್ , ಕಹಾಂ ಗಂಗು ತೇಲಿ " ನೆನಪಿಗೆ ಬಂತು.
ಸೊಗಸಾದ ಊಟದೊಟ್ಟಿಗೆ ಎಲ್ಲಾ ಸದಸ್ಯರ ಚಾಟಿಂಗ್ ಬೇರೆ, ಇಲ್ಲಿ ರಾಮಾಯಣ, ಮಹಾಭಾರತದ ಹಲಕೆಲವು ಘಟನಾ ಕಥೆಗಳು ವಿಮರ್ಶಿಸಿಕೊಂಡವು ಅವರವರ ದೃಷ್ಟಿ ಕೋನಗಳಲ್ಲಿ.

ಈಗ ಮುಂದಿನ ರವಿವಾರ ಸೋಮವಾರದ ನಂತರ ಬಂದಿದ್ದರೆ !!! ಅನ್ನಿಸುತ್ತಿದೆ.

Rating
No votes yet