ಕಾಲರಾಯ ಬೆನ್ನೇರಿದಾಗ ..
ನಿಯತಿಯ ಗತಿಯ
ವೇಗವ ತಡೆಯಲಾಗದು.
ಕಾಲನ ಗುಲಾಮನಾಗದೆ
ಅದನ್ನನುಸರಿಸಿ ಜೊತೆ
ಜೊತೆಯಲಿ ನಡೆದವ
ಸೃಷ್ಟಿಸುವನು ಯಶೋಗಾಥೆಯ..
ಸೂರ್ಯ ಚಂದ್ರ ತಾರೆ
ಎಲ್ಲ ಕಾಲಚಕ್ರದ ವ್ಯೂಹಕೆ
ಸಿಲುಕಿದವರೆ .ಅಡಿಗಡಿಗೂ
ಗಡಿಯಾರವ ಬೆನ್ನಿಗೊತ್ತು
ಹೊತ್ತು ಗೊತ್ತುಗಳ
ಇತಿ ಮಿತಿಯನ್ನರಿತು
ಕಾಲವು ಕಾಲವಾಗುವ
ಮುನ್ನ ಎಚ್ಛೆತ್ತು ಮುನ್ನಡೆಯೋಣ ..
ಕಮಲಾ ಬೆಲಗೂರ್
Rating