ಕಾಲ ಮತ್ತು ಮನ
ಗಾಲಿ ಉರುಳುತ್ತಿದೆ
ಬಸ್ಸು ಚಲಿಸುತ್ತಿದೆ
ಸಾವಿರಾರು ಮೈಲಿ ಉದ್ದನೆಯ
ಹಾದಿಯನು ಕ್ರಮಿಸಿ.
ಫಂಕ ತಿರುಗುತ್ತಿದೆ
ಗಾಳಿ ಬೀಸುತ್ತಿದೆ
ಅಮೂಲ್ಯ ಇಂಧನದ
ಮೂಲವನ್ನು ಸವೆಸಿ.
ಮನಸು ಹಾರುತ್ತಿದೆ
ಕನಸು ಕಾಣುತ್ತಿದೆ
ಕಣ್ಣಂಚಲಿ ಕಾಣುವ
ಸುಖವನ್ನು ಅರಸಿ .
ಆಸೆ ಗರಿಗೆದರುತ್ತಿದೆ
ಲತೆಯಂತೆ ಹಬ್ಬುತಿದೆ
ಮನವೆಂಬ ಮರ್ಕಟದ
ದೌರ್ಬಲ್ಯವ ಬಳಸಿ.
ಕಾಲ ಓಡುತ್ತಿದೆ
ಪ್ರಾಯ ಏರುತ್ತಿದೆ
ಪರಿಮಿತ ಜೀವನದ
ಕಾಯವನು ಅಳಿಸಿ.
ದಿನವು ಗತಿಸುತ್ತಿದೆ
ಮನವು ಅಲೆಯುತ್ತಿದೆ
ಜೀವನವೆಂಬಾಟದಾ
ಸಾರ್ಥಕತೆಯ ಬಯಸಿ.
Rating
Comments
ಉ: ಕಾಲ ಮತ್ತು ಮನ
In reply to ಉ: ಕಾಲ ಮತ್ತು ಮನ by venkatb83
ಉ: ಕಾಲ ಮತ್ತು ಮನ
ನಿಮ್ಮ ಕವನಗಳನ್ನು ಓದುವಾಗ ಯಾಕೋ
ನಿಮ್ಮ ಕವನಗಳನ್ನು ಓದುವಾಗ ಯಾಕೋ ಕೆ ಎಸ್ ನ್ ಅಲ್ಲಲ್ಲಿ ಕಾಣುತ್ತಾರೆ
In reply to ನಿಮ್ಮ ಕವನಗಳನ್ನು ಓದುವಾಗ ಯಾಕೋ by harishsaniha
@ harishsaniha:
@ harishsaniha:
ತುಂಬಾ ದೊಡ್ಡ ಹೋಲಿಕೆ ಸರ್.
ಅದು ಎರಲಾಗದ ಎತ್ತರ. ಅವರ ಪರಿಕಲ್ಪನೆ ಕಲ್ಪಿಸಲಾಗದಷ್ಟು ವಿಶಾಲ ಕೂಡ.
ಮೈಸೂರು ಮಲ್ಲಿಗೆಯ ಕಂಪು ನನ್ನ ಮೇಲೆ ಬೇರಿದ ಪ್ರಭಾವ,ತಮ್ಮ ಈ ಅನಿಸಿಕೆಗಳಿಗೆ ಕಾರಣವಿರಬಹುದು!!
ವಂದನೆಗಳೊಂದಿಗೆ
ರವಿಕಿರಣ್