ಕಾಲ ಮತ್ತು ಮನ

ಕಾಲ ಮತ್ತು ಮನ

ಗಾಲಿ ಉರುಳುತ್ತಿದೆ
ಬಸ್ಸು  ಚಲಿಸುತ್ತಿದೆ
ಸಾವಿರಾರು ಮೈಲಿ ಉದ್ದನೆಯ
ಹಾದಿಯನು ಕ್ರಮಿಸಿ.

ಫಂಕ ತಿರುಗುತ್ತಿದೆ
ಗಾಳಿ ಬೀಸುತ್ತಿದೆ
ಅಮೂಲ್ಯ ಇಂಧನದ
ಮೂಲವನ್ನು ಸವೆಸಿ.

ಮನಸು ಹಾರುತ್ತಿದೆ
ಕನಸು ಕಾಣುತ್ತಿದೆ
ಕಣ್ಣಂಚಲಿ ಕಾಣುವ
ಸುಖವನ್ನು ಅರಸಿ .

ಆಸೆ ಗರಿಗೆದರುತ್ತಿದೆ
ಲತೆಯಂತೆ ಹಬ್ಬುತಿದೆ
ಮನವೆಂಬ ಮರ್ಕಟದ
ದೌರ್ಬಲ್ಯವ ಬಳಸಿ.

ಕಾಲ ಓಡುತ್ತಿದೆ
ಪ್ರಾಯ ಏರುತ್ತಿದೆ
ಪರಿಮಿತ ಜೀವನದ
ಕಾಯವನು ಅಳಿಸಿ.

ದಿನವು ಗತಿಸುತ್ತಿದೆ
ಮನವು ಅಲೆಯುತ್ತಿದೆ
ಜೀವನವೆಂಬಾಟದಾ
ಸಾರ್ಥಕತೆಯ ಬಯಸಿ.

 

Rating
No votes yet

Comments

Submitted by hvravikiran Tue, 10/09/2012 - 10:04

In reply to by harishsaniha

@ harishsaniha:
ತುಂಬಾ ದೊಡ್ಡ ಹೋಲಿಕೆ ಸರ್.
ಅದು ಎರಲಾಗದ ಎತ್ತರ. ಅವರ ಪರಿಕಲ್ಪನೆ ಕಲ್ಪಿಸಲಾಗದಷ್ಟು ವಿಶಾಲ ಕೂಡ.

ಮೈಸೂರು ಮಲ್ಲಿಗೆಯ ಕಂಪು ನನ್ನ ಮೇಲೆ ಬೇರಿದ ಪ್ರಭಾವ,ತಮ್ಮ ಈ ಅನಿಸಿಕೆಗಳಿಗೆ ಕಾರಣವಿರಬಹುದು!!

ವಂದನೆಗಳೊಂದಿಗೆ
ರವಿಕಿರಣ್