ಕಾಳ್ಗಿಚ್ಚಿನಂತೆ ಸುಟ್ಟುಬಿಟ್ಟೆ ನನ್ನ ಹೃದಯವ

ಕಾಳ್ಗಿಚ್ಚಿನಂತೆ ಸುಟ್ಟುಬಿಟ್ಟೆ ನನ್ನ ಹೃದಯವ

ಒಂದಾಗಿದ್ದ ಹೃದಯ ಒಡೆದು ಚೂರಾಗಿದೆ ಇಂದು

ನೀನಿಲ್ಲದೆ ನಾನಿಲ್ಲ ಎನ್ನುತ್ತಿದ್ದವಳು ನೀನು, ಇಂದು

ನೀನಿಲ್ಲದಿದ್ದರೆ ಏನಂತೆ ಎಂದು ಹೊರಟಿರುವೆ..

ನಿನಗೆ ಅರಿವುಂಟೆ ಗೆಳತಿ ನೀ ಮಾಡಿರುವ ಗಾಯ ಎಷ್ಟೆಂದು...

 

ಪ್ರೀತಿ ಪ್ರೇಮದ ಅರಿವಿಲ್ಲದ ನನ್ನೆದೆಯಲ್ಲಿ

ಪ್ರೀತಿಯ ಹಣತೆಯ ಹಚ್ಚಿ ಜ್ಯೋತಿಯ ಬೆಳಗಿಸಿದೆ ನೀ

ಪ್ರಶಾಂತವಾಗಿ ಉರಿಯುತ್ತಿದ್ದ ಜ್ಯೋತಿಯ ಗಾಳಿಯ ಬೀಸಿ

ಕಾಳ್ಗಿಚ್ಚಿನಂತೆ ಸುಟ್ಟುಬಿಟ್ಟೆ ನನ್ನ ಹೃದಯವ..

 

ನಿನ್ನ ಬಾಹುಬಂಧನದ ಬೆಚ್ಚನೆಯ ಸುಖವಿರಲು

ಬೇರೇನೂ ಬೇಕು ನನ್ನೀ ಬಾಳಿಗೆ ಎಂದವಳು ನೀ

ಗ್ರಹಣದ ಹಾಗೆ ಕೆಲಕಾಲ ಬಂದ ಕಷ್ಟವ ಸಹಿಸದಾದೆ ನೀ

ಹೊರಟು ಬಿಟ್ಟೆ ಹೃದಯದ ಆಗಸವ ಖಾಲಿ ಮಾಡಿ....

ಚಿತ್ರ ಕೃಪೆ : ಅಂತರ್ಜಾಲ

Rating
No votes yet

Comments