ಕಾಸ್ಟ್ ಅವೇ-2000 -ಚಿತ್ರ-ಪ್ರಕೃತಿ ಜೊತೆ ಹೋರಾಟ-ಬದುಕಲು ಹುಡುಕಾಟ..!!

ಕಾಸ್ಟ್ ಅವೇ-2000 -ಚಿತ್ರ-ಪ್ರಕೃತಿ ಜೊತೆ ಹೋರಾಟ-ಬದುಕಲು ಹುಡುಕಾಟ..!!

ಚಿತ್ರ

ಈಗ ನಾ ಒಂದರ ನಂತರ   ಒಂದು  ಮೂರು ಚಿತ್ರಗಳ  ಬಗ್ಗೆ ಬರೆವೆ...

ಮೂರು ಚಿತ್ರದ  ಸಾಮ್ಯತೆಗಳು ಅದ್ಕೆ ಕಾರಣ.

ಆ ಸಾಮ್ಯತೆಗಳ  ಬಗ್ಗೆ ಸಂಕ್ಷಿಪ್ತವಾಗಿ  ಕೆಳಗೆ ಬರೆದಿರುವೆ. 
ಈಗ  ಮೊದಲಿಗೆ ಕಾಸ್ಟ್ ಅವೇ-2000 ಚಿತ್ರದ ಬಗ್ಗೆ...
ನಂತರ   ಲೈಫ್  ಆಫ್ ಪೈ -2012 
ಆಮೇಲೆ  ತಲಾಶ್-2012 
ಆ  ಮೇಲಿನ  ನಾ ಹೆಸರಿಸಿದ  ಮೂರು ಚಿತ್ರಗಳ  ಸಾಮಾನ್ಯ ಅಂಶ  ಏನು ಗೊತ್ತೇ?
 
ಹುಡುಕಾಟ...
 
ಕಾಸ್ಟ್ ಅವೇ -2000
ಚಿತ್ರದಲ್ಲಿ  ಕಾರ್ಗೋ ಕೊರಿಯರ್ ಕಂಪನಿಯ  ಮುಖ್ಯಸ್ಥ  ತನ್ನದೇ ಕಾರ್ಗೋ ವಿಮಾನದಲ್ಲಿ  ಹೋಗುವಾಗ  ಹವಾಮಾನ ವೈಪರಿತ್ಯದಿಂದ  ವಿಮಾನ  ಪಾತಾಳಕ್ಕೆ  ಮುಟ್ಟಿ, ಸಮುದ್ರಕ್ಕೆ ಬಿದ್ದು  ಲೈಫ್ ಸೇವಿಂಗ್ ಬೋಟ್  ಮೂಲಕ ಒಂದು ನಿರ್ಜನ ದ್ವೀಪ ಪ್ರದೇಶಕ್ಕೆ ಬಂದು ಬಿದ್ದು ಅಲ್ಲಿಂದ ಪ್ರಾಣ ಸಮೇತ  ಪಾರಾಗಿ ಮರಳಿ ಮನೆಗೆ ಮರಳುವ ಯತ್ನ-ಹುಡುಕಾಟ..
 
ಲೈಫ್  ಆಫ್ ಪೈ -2012  
 
ಚಿತ್ರದಲ್ಲಿ  ಭಾರತದ ಪಾಂಡಿಚೆರ್ರಿಯಲ್ಲಿ  ಖಾಸಗಿ ಜೂ ನಡೆಸುವ (ಖಾಸಗಿ ಜೂ ಹಾಗೆಲ್ಲ ಇಲ್ಲಿ  ಸಾರ್ವಜನಿಕರು ನಡೆಸಬಹುದ? ನನಗೆ ಅಚ್ಚರಿ ಆದ ವಿಷ್ಯ)...ವ್ಯಕ್ತಿಯ ಇಬ್ಬರು ಗಂಡು ಮಕ್ಕಳಲ್ಲಿ  ಒಬ್ಬನಾದ  ಪೈ ಎಂಬ  ಶಾರ್ಟ್  ಕಟ್ ನಾಮದೇಯದ ಹುಡುಗನ  ಸಮುದ್ರ ಪ್ರಯಾಣದಲ್ಲಿ  ಹವಾಮಾನ ವೈಪರಿತ್ಯದಿಂದ  ಹಡಗು ಮುಳುಗಿ ಪ್ರಾಣಿಗಳ ಸಮೇತ ನೀರಿಗೆ ಬಿದ್ದು  ಲೈಫ್ ಬೊಟ್ ನಲ್ಲಿ ಬೆಂಗಾಲ್  ಹುಲಿ-ಹಯ್ನ ಪ್ರಾಣಿ-ಮತ್ತು ಜೀಬ್ರ ಒಂದರ  ಜೊತೆ  ಸಹಬಾಳ್ವೆ ಜೀವನ ನಡೆಸುತ್ತ ಪ್ರಾಣಿಗಳ ಸಮೇತ  ತಾನೂ ಜೀವಂತ ಉಳಿಯುವ-ಮರಳುವ ಯತ್ನದ ಹೋರಾಟ...ಜೀವನ್ಮರಣದ ನಡುವಿನ ಹೋರಾಟ...ಹುಡುಕಾಟ....
ತಲಾಶ್-2012
 
ಹಿಂದಿ ಚಿತ್ರ  ಸುದ್ಧಿ ಮಾಡಿದ್ದು  ಬಹಳ ದಿನಗಳ ನಂತರ ಪೋಲೀಸ್ ಪಾತ್ರದಲ್ಲಿ  ಆಮೀರ್ ಖಾನ್  ನಟಿಸಿದ್ದು-ಥ್ರಿಲ್ಲರ್ ಕಥೆ  ಹೊಂದಿರುವುದು, ಮಹಿಳಾ ನಿರ್ದೇಶಕಿಯ ಚಿತ್ರ-ಇತ್ಯಾದಿ ಕಾರಣಗಳಿಗಾಗಿ...
 
ಈ ಚಿತ್ರದಲ್ಲಿ ನಾಯಕ ನಟ  ಕೊಲೆಯೊಂದರ ರಹಸ್ಯ ಕಂಡು ಹಿಡಿಯಲು  ಹೋಗಿ   -ಇದೇ  ತರಹದ ಹಲವು  ಕೊಲೆಗಳು ಮುಂಚೆಯೂ ಆಗಿದ್ದವು-ಅವುಗಳ ಕೇಸ್ ಕ್ಲೋಜ್ ಆಗಿದೆ ಎಂದು ತಿಳಿದು  ಈ ರಹಸ್ಯವನ್ನು ಹೇಗಾದರೂ ಬೇಧಿಸಲೆ  ಬೇಕು ಎಂದು ಚಲಧಂಕ  ಮಲ್ಲ - ತ್ರಿವಿಕ್ರಮನ  ತರಹ ಪ್ರಯ್ತತ್ನಿಸುತ  ಸಾಕ್ಷಿಗಳ ಸಹಾಯಕ್ಕಾಗಿ  ಹುಡುಕಾಟ....
ಮೊದಲಿಗೆ ನಾ ನೋಡಿದ್ದು ತಲಾಶ್ ಚಿತ್ರ, ಆಮೇಲೆ  ಲೈಫ್ ಆಫ್ ಪೈ, ಆಮೇಲೆ  ಈ ಲೈಫ್ ಆಫ್ ಪೈ ಚಿತ್ರದ ಕಥೆ ಹೋಲುವ  ಚಿತ್ರ 2000ರಲ್ಲಿ ಬಂದಿತ್ತು ಎಂದು ತಿಳಿದು  ಕಾಸ್ಟ್ ಅವೇ ನೋಡಿದೆ..
 
ಲೈಫ್ ಆಫ್ ಪೈ ಮತ್ತು ಕಾಸ್ಟ್ ಅವೇ ಬಗ್ಗೆ ಬರೆಯಬೇಕು  ಅನ್ನಿಸಿದಾಗ     ಈ  ಮೂರು ಚಿತ್ರಗಳು  ಹುಡುಕಾಟದ  ಸುತ್ತ ಸುತ್ತುವುದು  ಭಾವಕ್ಕೆ ಬಂದು  3 ಚಿತ್ರಗಳ ಬಗ್ಗೆ  ಬರೆದೆ.....
 
3 ಚಿತ್ರಗಳ ಕಥೆಗಳ ಬಗ್ಗೆ  ಸಂಕ್ಷಿಪ್ತವಾಗಿ  ಮೇಲೆಯೇ  ತಿಳಿಸಿರುವೆ..
3 ಚಿತ್ರಗಳು  ಅತ್ಯುತ್ತಮವಾಗಿದ್ದು,ತುದಿಗಾಲ ಮೇಲೆ  ಕುಳಿತು ನೋಡುವ ಹಾಗೆ ಮಾಡುವವು..
ಈಗ ಆ ಚಿತ್ರಗಳ ಬಗ್ಗೆ  ಸಂಪೂರ್ಣ ವಿವರ ನೀಡದೆ  ಅವುಗಳಲ್ಲಿನ  ಕೆಲವು ಸನ್ನಿವೇಶಗಳ ಬಗ್ಗೆ  ಹೇಳುವೆ...!!
 
ಕಾಸ್ಟ್ ಅವೇ- 2000
 
1.ಮೊದಲಿನ ಅರ್ಧ ಘಂಟೆಗಳು  ಬೋರ್ ಅನ್ನಿಸುವುದು..!! ಆದ್ರೆ ಮುಂದೆ ಭಲೇ ಮಜಾ ಇದೆ...! ಸೋ  ಇಲ್ಲಿ ರಿಮೋಟ್ ಗೆ ಕೆಲಸ...!
2.ನಾಯಕ ತನ್ನ ಕಾರ್ಗೋ ವಿಮಾನದಲ್ಲಿ ಪ್ರಯಾಣಿಸುವ ಮುಂಚೆ ಹೆಂಡತಿಗೆ  ಕೆಲವೇ ಘಂಟೆಗಳಲ್ಲಿ  ವಾಪಾಸು ಮನೆಗೆ ಬರುವೆ ಎಂದು ಹೇಳಿ ವಿಮಾನ ಹತ್ತುವನು, ಕೆಲವೇ ನಿಮಿಷಗಳಲ್ಲಿ ಪಾತಾಳ ಮುಟ್ಟಿದ ಸಮುದ್ರಕ್ಕೆ ಬಿದ್ದ ವಿಮಾನ...
3. ವಿಮಾನ ಹವಾಮಾನ ವೈಪರಿತ್ಯದಿಂದ ವಾಲಾಡುವಾಗ  ಕೆಳಗೆ ಬಿದ್ದ ತನ್ನ ಹೆಂಡತಿಯ  ಚಿತ್ರ ಇರುವ ಲಾಕೆಟ್ ಎತ್ತಿಕೊಳ್ಳಲು ಆ ಅಪಾಯಕಾರಿ ಪರಿಸ್ಥಿತಿಯಲ್ಲಿ ತನ್ನ ಸೀಟ್ ಬೆಲ್ಟ್ ಬಿಚ್ಚಿ  ಲಾಕೆಟ್ ವಾಪಸ್ಸು ತೆಗೆದುಕೊಳ್ಳುವದು  -ಇದನ್ನು ನೋಡಿ  ಸಹ ಪೈಲಟ್  ಎಚ್ಚರಿಸಲು ಎದ್ದಾಗ ವಿಮಾನ  ವಾಲಾಟ ಹೆಚ್ಚಾಗಿ  ವಿಮಾನದ ಒಳಗಿನ  ಗೋಡೆಗೆ ತಲೆ ಬಡಿದು  ಮೂರ್ಚೆ ಹೋಗುವುದು 
4.ಒಬ್ಬನೇ ಪೈಲಟ್  ವಿಮಾನ ನಿಯಂತ್ರಿಸಲು ಆಗದೆ  ವಿಮಾನ ಎಲ್ಲಿ ಹೇಗೆ  ಹೋಗುತ್ತಿದೆ? ಎಲ್ಲಿ ಬೀಳಲಿದೇ ಎಂದು ತಿಳಿಯುವ ಮೊದಲು  ಮಸುಕಾಗಿ ಕಾಣುವ  ನೀರು ಮಂಜು ಕಾಣಿಸಿ  ಕ್ಷಣದಲ್ಲೇ  ಸಮುದ್ರಕ್ಕೆ  ಬೀಳುವ ವಿಮಾನ...
5.ತಾನೊಬ್ಬನೇ  ಲೈಫ್ ಬೊಟ್ ಮೂಲಕ  ಪಾರಾಗುವ್ದು -ವಿಪರೀತ ಮಳೆ-ಗಾಳಿ ಮಧ್ಯೆ  ಹುಟ್ಟು ಹಾಕಲು ಆಗದೆ  ಸುಮ್ನೇ ಬೀಳಲು -ಗಾಳಿಯೇ ಎಲ್ಲೆಲ್ಲಿಗೋ ಕರೆದೊಯ್ದು  ಕೊನೆಗೆ ದಡ  ಒಂದಕ್ಕೆ  ಬೋಟ್ ಮುಟ್ಟಿ  ಎಚ್ಚರವಾಗಿ  ನೋಡಲು ನಿರ್ಜನ  ದ್ವೀಪ ಪ್ರದೇಶ.
6. ಅಲ್ಲಿರಬಹುದಾದ ಮನುಜರು -ಆಹಾರಕ್ಕಾಗಿ   ಹುಡುಕಾಟ -ಯಾರೂ ಸಿಗದೇ  -ಹಸಿವು ಹೆಚ್ಚಾಗಿ  ಅಲ್ಲಿದ್ದ  ತೆಂಗಿನ ಮರಗಳ ಮೇಲಿಂದ  ಕೆಲವು ಎಳ  ನೀರು ಕಾಯಿಗಳು ಬೀಳುವದು ,ಅವುಗಳನ್ನು ಒಡೆದು ಕುಡಿಯಲು  ಅವುಗಳನ್ನು ಬಂಡೆಗೆ  ಎಸೆಯುವ -ಅವು ಓಪನ್ ಆಗದೆ  ಕಲ್ಲನ್ನು ಎತ್ತಿ ಮೇಲೆ ಹಾಕಲು  ಕಲ್ಲು ಒಡೆದು  ಆಯುಧದಂತೆ ಆಗುವದು..ಅದರ ಮೂಲಕ  ಕಾಯಿ ಸುಲಿದು ನೀರು ಕುಡಿವ ದೃಶ್ಯ...
7.ತನ್ನ ಜೊತೆ ನೀರಲ್ಲಿ ತೇಲಿ ಬಂದ  ತನ ಕಾರ್ಗೋ ಕೊರಿಯರ್ ವಸ್ತುಗಳ ಪ್ಯಾಕೆಟ್ ನೋಡಲು  ಕೆಲವು ಜನ ತಮ್ಮ ಬಂಧು ಬಳಗಕ್ಕೆ ಕಳಿಸಿದ  ಹುಟ್ಟು ಹಬ್ಬದ ಶುಭಾಶಯ ಪತ್ರಗಳು -ಗಿಫ್ಟ್ ಆಗಿ  ಐಸ್ ಮೇಲೆ ನಡೆವ ಬೂಟು-ಬಟ್ಟೆಗಳು -ಯಾರೋ ಕಳಿಸಿದ ಡೈವೋರ್ಸ್  ಪತ್ರ ..!! ಫುಟ್ ಬಾಲ್ (ಈ ಬಾಲ್  ಮುಂದೆ ಅವನಿಗೆ ಬದುಕಲು ಸ್ಪೂರ್ತಿ..) ಇತ್ಯಾದಿ  ಸಿಗುವವು.
8. ಅಲ್ಲಿಂದ ಆ ಪುಟ್ಟ ಬೋಟ್ನಲ್ಲಿ  ಪಾರಾಗುವುದು  ದೂರದ ಮಾತು, ಯಾವ್ದಾರ ದೊಡ್ಡ ಬೊಟ್  ಅಲ್ಲಿ ಬಂದು ತನ್ನನ್ನು ಕರೆದೊಯ್ವದು ಎಂಬ ಭಾವ-ಆಶಾಭಾವ.!!
9.ಹೆಚ್ಚುತ್ತಿರುವ ಹಸಿವು  ತಾಳದೆ  ಹುಲ್ಲುಮರದ  ಎಲೆ-ಕೊನೆಗೆ  ಸಣ್ಣ ಹಸಿ ಮೀನುಗಳು -ಏಡಿ ...ಹಸಿಯಾಗಿಯೇ  ತಿನ್ನಲು ಹೋಗಿ  ಅಸಹ್ಯ ಅನ್ನಿಸಿ  ಅದರೂ ಹಸಿವು  ಹೆಚ್ಚಿ  ಹಸಿ ಮೀನು-ಏಡಿ ತಿನ್ನುವ ದೃಶ್ಯಗಳು..!!
10. ಮಾರನೆ ದಿನ  ಪೈಲಟ್ ಹೆಣ  ದ್ವೀಪಕ್ಕೆ ತೇಲಿ ಬಂದು   ಆ ಪೈಲಟ್ ನ ಬೂಟುಗಳನ್ನು  ಬಿಚ್ಚಿಕೊಂಡು  ನೋಡಿದರೆ ಅವು ತನ್ನ ಸೈಜ್  ಅಲ್ಲ..:(( ಅವನ ಜೇಬಿನಲ್ಲಿ ಪುಟ್ಟ ಟಾರ್ಚ್ ಸಿಕ್ಕುವುದು. ಅವನ ದೇಹ ಮಣ್ಣು ಮಾಡಿ  ಭಾರವಾದ ಹೃದಯದಿಂದ ,ಹತಾಶೆಯಿಂದ ಕೋಪದಿಂದ  ಇರುವ ದೃಶ್ಯ..
11. ಅಲ್ಲಿಂದ  ಹೇಗಾದರೂ ಮಾಡಿ ಮೊದಲು ತಾನು ಬದುಕಬೇಕು-ಮರಳಿ ಮನೆಗೆ ಹೋಗಲು ಒಂದು ದೋಣಿ ವ್ಯವಸ್ಥೆ  ಮಾಡಿಕೊಳ್ಳಬೇಕು  ಎಂದು ತೀರ್ಮಾನಿಸಿ ಮೊದಲು ಬದುಕಲು  ಹೆಂಗಾರ  ಬೆಂಕಿ ಹೊತ್ತಿಸಿ  ಬೆಳಕು ಮೂಡಿಸಿ ಅದ್ರಲ್ಲೇ  ಮೀನು ಏಡಿ  ಬೇಯಿಸಿ  ತಿನ್ನಬೇಕು  ಎಂದು ತೀರ್ಮಾನಿಸಿ ಎರಡು ಕಟ್ಟಿಗೆ ತೆಗೆದುಕೊಂಡು ಅವುಗಳ ಮಧ್ಯೆ ಹುಲ್ಲು ಇಟ್ಟು   ಅವುಗಳನ್ನು  ಒಂದಕ್ಕೊಂದು   ಘರ್ಶಿಸುವನು, ಆ ಪ್ರಯತ್ನದಲ್ಲಿ  ಕೈಗೆ ಗಾಯವಾಗಿ  ಆ ಫುಟ್ ಬಾಲ್ಗೆ  ತನ್ನ ಕೈ  ಒರೆಸಲು ಅಲ್ಲಿ  ಕೈ ಹೆಜ್ಜೆ ಗುರುತು ಮೂಡಲು  ಆ ಗುರುತು ಮೇಲೆ  ಎರಡುಕಣ್ಣು- ಹುಬ್ಬು-ಬಾಯಿ ಮಾಡಿ ಅದಕ್ಕೆ ವಿಲ್ಸನ್ ಎಂದು ಹೆಸರು ಇಟ್ಟು  ಸಂಬೋಧಿಸುವ ದೃಶ್ಯ...!
12. ಆಮೇಲೆ ಹೇಗೋ ಪ್ರಯತ್ನ ಮಾಡಿ ಬೆಂಕಿ  ಹೊತ್ತಿಸಿ -ಐ ಡಿಡ್  ಇಟ್... ಎಂದು ವಿಲ್ಸನ್ ಯಾನೆ  ಫುಟ್ಬಾಲ್ ನೋಡಿ ..ಹೇಳುವ ದೃಶ್ಯ. ಮೀನು-ಏಡಿ  ಹಿಡಿಯುವ ಸುಡುವ ತಿನ್ನುವ ಕಲೆಯನ್ನು  ಆದ ಮಾನವನಿಗಿಂತ   ಆಗಿ ಕಲೆತು  ಬದುಕುವ ದೃಶ್ಯ,.
13. ಐಸ್ ಬೂಟ್  ನ ಕೆಳಗಿನ  ಹರಿತವಾದ ಬ್ಲೆಡ್ ನ್ನೇ  ಕೊಡಲಿ ಮಾಡಿಕೊಂಡು  ಮರದ ಕಟ್ಟಿಗೆ  ಕಡಿದು -ಅದರ ತೊಗಟೆ ಸುಲಿದು   ಮಾಡಿ ಒಂದು ದೋಣಿ ಮಾಡುವ -ತಾ ಅಲ್ಲಿಗೆ ಬಂದಾಗಿಂದ  ಈಗಿನ ದಿನಾನ್ಕಸಮಯ-ತಿಂಗಳು ಬರೆದು  ಸಮುದ್ರ ಉಬ್ಬರ -ಅಬ್ಬರ -ಗಾಳಿ ಬೀಸುವ  ದಿಕ್ಕನ್ನು  ಅಂದಾಜಿಸಿ ದೋಣಿ ತಯಾರು ಮಾಡಿ  ಮಧ್ಯೆ ಮಧ್ಯೆ  ವಿಲ್ಸನ್ ಜೊತೆ ಸಂಭಾಷಣೆ  ನಡೆಸುವ ದೃಶ್ಯಗಳು..
14.ಆ ಸುದಿನವೂ ಬಂದು  ದೋಣಿ  ಅದರ ಮೇಲೆ  ಹತ್ತಿ  ಬೇಡದ ಒಲ್ಲದ ಮನಸಿಂದ  ದ್ವೀಪಕ್ಕೆ   ವಿದಾಯ ಹೇಳಿ  ಹೋಗುವ ದೃಶ್ಯ.
15. ಮಾರ್ಗ ಮಧ್ಯೆ ಗಾಳಿ  ಮಳೆ ಬಂದು  -ಎತ್ತರೆತ್ತರದ  ಅಲೆಗಳು ಬಂದು  ಬೀಸಿ ನೀರಿಗೆ  ಬೀಳುವ -ಮರಳಿ ದೋಣಿ  ಹತ್ತುವ -ಹುಟ್ಟು ಹಾಕುತ   ಮುನ್ನಡೆಸುವ  ದೃಶ್ಯಗಳು.
16.ಹಾಟು ಹಲವು ಕಷ್ಟ ಕೋಟಲೆಗಳ ಮಧ್ಯೆ  ಪ್ರೀತಿಯ ವಿಲ್ಸನ್  ನೀರಿಗೆ ಬಿದ್ದು  ದೂರಾಗುವ -ಅದನ್ನು ಲೇಟ್  ಆಗಿ ನೋಡಿ  ಒಂದು ಫುಟ್ಬಾಲ್ ಗಾಗಿ  ದೋಣಿ ಬಿಟ್ಟು ಅಪಾಯಕಾರಿ ನೀರಿಗೆ ಇಳಿವ  ಸಾರಿ ವಿಲ್ಸನ್  ಎಂದು ಅಳುವ ದೃಶ್ಯ.
17. ವಿಲ್ಸನ್ ಸಿಗದೇ  ಗಾಳಿ ಮಳೆ ಅಬ್ಬರ ಹೆಚ್ಚಾಗಿ  ಇನ್ನು ಬದುಕುವದು  ಕಷ್ಟ  ಸಾಧ್ಯ ಎಂದು ಅರಿವಾಗಿ  ಸುಮ್ಮನೆ ಕಣ್ಣು ಮುಚ್ಚಿಕೊಂಡು   ಮರದ  ದೋಣಿ ಮೇಲೆ   ಕಣ್ಣು  ಮುಚ್ಚಿ ಮಲಗುವ  ಕೆಲವು ಘಂಟೆಗಳಲ್ಲಿ  ಕಾರ್ಗೋ ಹಡಗು ಒಂದು ಸಮೀಪದಲ್ಲೇ  ಬರುವ-ಅದರತ್ತ ಸಹಾಯ ಹಸ್ತ   ಚಾಚುವಂತೆ  ಕೂಗುವ  ಅಲಿಂದ ಪಾರಾಗಿ ಮನೆಗೆ ಮರಳಲು ಅಲ್ಲಿ ಆಗುವ ಆಘಾತ...!!
18.ಇವ ಮರಳಿ ಬಾರನು ಎಂದು  ಹೆಂಡತಿ ಬೇರೆ ಒಬ್ಬನನ್ನು  ಮದ್ವೆ ಆಗಿರುವಳು ..:(( ಅವಳಿಗೂ ಆಘಾತ...!
19.ವಿಮಾನ ಅವಘಡದಲ್ಲಿ  ಮೃತ ಪಟ್ಟಿರುವನು ಎಂದು ಸರಕಾರೀ ದಾಖಲೆಗಳಲ್ಲಿ ನಮೂದಾದ ತಾ ಇನ್ನು ಬದುಕಿರುವೆ ಎಂದು ಸಾಧಿಸಿ ತೋರಿಸಬೇಕಾದ- ಹೆಂಡತಿಯನ್ನು  ಮರಳಿ  ಪಡೆವ ಯತ್ನದ ದೃಶ್ಯಗಳು.
20..ಸಿನೆಮಾದ ಅಂತ್ಯ  ಕಣ್ಣಲಿ ನೀರು ಜಿನುಗುವಂತೆ ಮಾಡದೆ ಇರದು.
 
* 2000ರಲ್ಲಿ ಬಿಡುಗಡೆ ಆಗಿ ನಾ ಅದಾಗಲೇ ಬರೆದ  ಗ್ಲಾಡಿಯೇಟರ್-2000 ಚಿತ್ರದ ಜೊತೆ ಸ್ಪರ್ಧಿಸಿ  ಅದಕ್ಕೆ  ಹಲವು ಪ್ರಶಸ್ತಿಗಳನ್ನು  ಬಿಡಬೇಕಾಗಿ ಬಂದದ್ದು  ಅಚ್ಚರಿಯ ಅಂಶ...
ನಿಜಕ್ಕೂ ಈ ಎರಡು ಚಿತ್ರಗಳ  ಪ್ರಶಸ್ತಿ ಆಯ್ಕೆ  -ಆಯ್ಕೆದಾರರಿಗೆ  ಕಠಿಣ  
ಸವಾಲೇ   ಆಗಿರಬೇಕು.
* ನನಗನ್ನಿಸಿದ್ದು-
ಎರಡೂ ಉತ್ತಮ ಚಿತ್ರಗಳು  ಒಂದು ವರ್ಷ ಆಚೆ ಈಚೆ  ಬಂದಿದ್ದರೆ ಚೆನ್ನಿತ್ತೆನೋ ಅಂತ.
ಕಾರಣ ಎರಡು ಉತ್ತಮ ಚಿತ್ರಗಳು-ತಾರಾಗಣ -ನಟನೆ-ಛಾಯಾಗ್ರಹಣ ...
 
ಹಾಲಿವುಡ್ ನಟ  ಟಾಮ್ ಹ್ಯಾಂಕ್ಸ್  ತನ್ನ ಪಾತ್ರದಲ್ಲಿ  ಎಷ್ಟು ಸಹಜವಾಗಿ ನಟಿಸಿರುವನು  ಎಂದರೆ ಅದನ್ನು ತೆರೆ ಮೇಲೆ ನೋಡಿಯೇ  ಅನುಭವಿಸೇಕು...!!
ಚಿತ್ರದ ಮೊದಲ ಟಾಮ್  ಹ್ಯಾಂಕ್ಸ್ ಮತ್ತು  ವಿಮಾನ ಅವಘಡದ  ನಂತರದ   ಟಾಮ್  ಹ್ಯಾಂಕ್ಸ್  ಬದಲಾವಣೆ -ಮೇಕಪ್- ತಾದ್ಯಾತ್ಮ ನಟನೆ  ಅಚ್ಚರಿ ತರುವ್ದೂ.
 
ಚಿತ್ರದಲ್ಲಿ  ಒಂದು ಚುಂಬನ ದೃಶ್ಯ ಬಿಟ್ಟರೆ ಇನ್ಯಾವುದೇ ಮುಜುಗರದ  ಸನ್ನಿವೇಶಗಳು ಇಲ್ಲ...!!
 
ಚಿತ್ರ ಮೂಲ:
 
 
ಐ ಎಂ ಡಿ  ಬಿ ಲಿ ನನ್ನ  ಬರಹ:
 
ಐ ಎಂ ಡಿ  ಬಿ :
 
ವೀಡಿಯೊ ಟ್ರೇಲರ್ :
 
ವೀಕಿಪೀಡಿಯ :
 
 
 
 
 
 
 
 
Rating
No votes yet

Comments

Submitted by partha1059 Mon, 12/24/2012 - 16:17

ಸಪ್ತಗಿರಿಯವರೆ
ಕಾಷ್ಟ್ ಅವೆ 2000 ಚಿತ್ರವನ್ನು ಟಿ.ವಿಯಲ್ಲಿ ಎರಡು ಮೂರು ಸಾರಿ ನೋಡಿರುವೆ <
ಚಿತ್ರದ ಉದ್ದಕ್ಕು ಮನಸೆಳೆಯುವುದು ಅಗಾದ‌ ಮೌನ‌!
ನಾಯಕ‌ ದ್ವೀಪವನ್ನು ಸೇರಿದ‌ ನ0ತರ‌ ,ಚಿತ್ರದ ಉದ್ದಕ್ಕು ಸಂಭಾಷಣೆ ಇಲ್ಲ
ಬರಿ ಸ್ವಗತ , ನನಗಂತು ತುಂಬಾ ಇಷ್ಟವಾದ ಚಿತ್ರ.
ಕನ್ನಡದಲ್ಲಿ ಈ ರೀತಿಯ ಚಿತ್ರಗಳ ಕಲ್ಪನೆಯು ಸಾದ್ಯವಿಲ್ಲ.
ತೆಗೆದರು ಮಚ್ಚು ಲಾಂಗ್, ಇಲ್ಲ ತಲೆ ತಿನ್ನುವ ಎಕ್ಸ್ ಪರಿಮೆ೦ಟಲ್ ಚಿತ್ರಗಳು ( ಪ್ರಶಸ್ತಿಗಾಗಿ)

Submitted by partha1059 Mon, 12/24/2012 - 16:19

In reply to by partha1059

ಸಪ್ತಗಿರಿಯವರೆ
ಕಾಷ್ಟ್ ಅವೆ 2000 ಚಿತ್ರವನ್ನು ಟಿ.ವಿಯಲ್ಲಿ ಎರಡು ಮೂರು ಸಾರಿ ನೋಡಿರುವೆ
ಚಿತ್ರದ ಉದ್ದಕ್ಕು ಮನಸೆಳೆಯುವುದು ಅಗಾದ‌ ಮೌನ‌!
ನಾಯಕ‌ ದ್ವೀಪವನ್ನು ಸೇರಿದ‌ ನ0ತರ‌ ,ಚಿತ್ರದ ಉದ್ದಕ್ಕು ಸಂಭಾಷಣೆ ಇಲ್ಲ
ಬರಿ ಸ್ವಗತ , ನನಗಂತು ತುಂಬಾ ಇಷ್ಟವಾದ ಚಿತ್ರ.
ಕನ್ನಡದಲ್ಲಿ ಈ ರೀತಿಯ ಚಿತ್ರಗಳ ಕಲ್ಪನೆಯು ಸಾದ್ಯವಿಲ್ಲ.
ತೆಗೆದರು ಮಚ್ಚು ಲಾಂಗ್, ಇಲ್ಲ ತಲೆ ತಿನ್ನುವ ಎಕ್ಸ್ ಪರಿಮೆ೦ಟಲ್ ಚಿತ್ರಗಳು ( ಪ್ರಶಸ್ತಿಗಾಗಿ)

Submitted by partha1059 Mon, 12/24/2012 - 16:18

ಸಪ್ತಗಿರಿಯವರೆ
ಕಾಷ್ಟ್ ಅವೆ 2000 ಚಿತ್ರವನ್ನು ಟಿ.ವಿಯಲ್ಲಿ ಎರಡು ಮೂರು ಸಾರಿ ನೋಡಿರುವೆ <
ಚಿತ್ರದ ಉದ್ದಕ್ಕು ಮನಸೆಳೆಯುವುದು ಅಗಾದ‌ ಮೌನ‌!
ನಾಯಕ‌ ದ್ವೀಪವನ್ನು ಸೇರಿದ‌ ನ0ತರ‌ ,ಚಿತ್ರದ ಉದ್ದಕ್ಕು ಸಂಭಾಷಣೆ ಇಲ್ಲ
ಬರಿ ಸ್ವಗತ , ನನಗಂತು ತುಂಬಾ ಇಷ್ಟವಾದ ಚಿತ್ರ.
ಕನ್ನಡದಲ್ಲಿ ಈ ರೀತಿಯ ಚಿತ್ರಗಳ ಕಲ್ಪನೆಯು ಸಾದ್ಯವಿಲ್ಲ.
ತೆಗೆದರು ಮಚ್ಚು ಲಾಂಗ್, ಇಲ್ಲ ತಲೆ ತಿನ್ನುವ ಎಕ್ಸ್ ಪರಿಮೆ೦ಟಲ್ ಚಿತ್ರಗಳು ( ಪ್ರಶಸ್ತಿಗಾಗಿ)

Submitted by venkatb83 Mon, 12/24/2012 - 16:45

ಗುರುಗಳೇ

ನೀವು 3 ಸಾರಿ ಪ್ರತಿಕ್ರಿಯಿಸಿದ್ದಕ್ಕೂ- ನೀವು ಅ ಚಿತ್ರವನ್ನು 2-3 ಸಾರಿ ನೋಡಿದ್ದಕ್ಕೂ ಯಾವದೇ ಲಿಂಕ್ ಇಲ್ಲ ಎಂದುಕೊಳ್ಳುವೆ..!!
ಹೌದು ನೀರವ ಮೌನ-ಫುಟ್ಬಾಲ್ನೊಡನೆ ಸಂಭಾಷಣೆ-ಮನನೀಯ -ಈ ತರಹದ ಚಿತ್ರಗಳು ಯಾವುದೇ ಭಾಷೆಯಲ್ಲಿ ತೆಗೆಯಬಹ್ದು..ಆದರೆ ಹಾಲಿವುಡ್ ಸಿನೆಮ ನೋಡಿ ಮೆಚ್ಚುವ ನಾವ್ ಆ ತರಹದ್ದು ಇಲ್ಯೇ ಬಂದರೆ ಮೆಚ್ಚುವ ಸಾಧ್ಯತೆ ಕಡಿಮೆ ಅನ್ಸುತ್ತೆ..!!

ಇದಕೆ ನೀವ್ ನೋಡಿದ ಒಂದು ಸಿನೆಮ ಉದಾ: ಆರಕ್ಷಕ..!!
ಅದು ಹಾಲಿವುಡ್ ಹಿಟ್ ಚಿತ್ರ ದ ರಿಮೇಕ್....ನಾ ನೋಡಿಲ್ಲ.. ಆದರೆ ಮೊಲ ಚಿತ್ರ ನೋಡಿರುವೆ.. ಅದರ ಬಗ್ಗೆ ಎಸ್ಟೋ ಒಳ್ಳೆ ವಿಮರ್ಶೆಗಳು-ಬೆನ್ನು ತಟ್ಟುವಿಕೆ ..
ಇಲ್ಲಿ ಆ ಸಿನೆಮಾಗೆ ಅನಗತ್ಯವಾಗಿ ಹಲವು ಹಾಡು ಸೇರಿಸಿ ...:(((

ಸ್ವದೇಶ್ - ಮೆಚ್ಚಿದ ನಾವು ನಮ್ಮದೇ 'ಚಿಗುರಿದ ಕನಸು' ಮೆಚ್ಚಲಿಲ್ಲ..
ಲಗಾನ್ -ಮಾಡಿದ ಮೋಡಿ ನಮ್ 'ಹಗಲು ವೇಷ' ಮಾಡಲಿಲ್ಲ..:((

ಆದರೆ ನಮ್ ಸ್ಕೂಲ್ ಮಾಸ್ತರ್-ಬಾಗ್ ಬನ್ ಆಗಿ-ಆಗಿ ಯಶಸ್ವಿಯಾಗಿದ್ದು ಅದೇ ಕನ್ನಡ ಚಿತ್ರ ಈ ಬಂಧನ ದ ಫಲಿತಾಂಶ.....!!
ಅಚ್ಚರಿ...!!

ಆಗಾಗ ಈ ತರಹದ ಚಿತ್ರಗಳಿಗೆ ಹಲವರು ಪ್ರಯತ್ನಿಸುವರು ಆದರೆ ಅದ್ಕೆ ಪ್ರೇಕ್ಷಕರ- ಮಾಧ್ಯಮದವರ ತಾತ್ಸಾರ-ಜಾಸ್ತಿ ಪ್ರೋತ್ಸಾಹ ಕಡಿಮೆ...!!
ಆ ತರಹದ ಚಿತ್ರಗಳು ಇಲ್ಲಿಯೂ ಬರಲಿ ಎಂದು ಆಶಿಸುವೆ..
ಪ್ರತಿಕ್ರಿಯೆಗೆ ನನ್ನಿ ..

ಶುಭವಾಗಲಿ..

\|/

Submitted by partha1059 Mon, 12/24/2012 - 21:22

In reply to by venkatb83

ಹೌದು ಸಪ್ತಗಿರಿ ನನ್ನ 3 ಪ್ರತಿಕ್ರಿಯೆಗು ಮೂರುಸಲ‌ ನೋಡಿರುವದಕ್ಕು ಯಾವುದು ಸ0ಭದವಿಲ್ಲ. ನಮ್ಮ ಪ್ರತಿಕ್ರಿಯೆ ಕೆಲವೊಮ್ಮೆ ಅರ್ದ‌ ಮಾತ್ರ ಬರುತ್ತಿತ್ತು, ಮೇಲೆ ಬ0ದಿರುವ0ತೆ ಯಾಕೆ ಎ0ದು ನೋಡಲು ಪ್ರಯತ್ನ ಪಟ್ಟೆ. ಕಡೆಯಲ್ಲಿ ಏಕೆ ಎ0ದು ಹೇಳುವೆ. :)
ಕನ್ನಡ‌ ಚಿತ್ರ ಮೆಚ್ಚಲ‌ ಅ0ತ‌ ಎನಿಲ್ಲ. ಹಾಡುಗಳಿದ್ದರು ತೊ0ದರೆ ಏನಿರಲ್ಲ ಆದರೆ , ಕೆಲವು ಹಳೆಯ‌ ಚಿತ್ರರಗಳನ್ನು ನೋಡಿ ಈಗ‌ ಆ ರೀತಿಯ‌ ಮನೋಭಾವದ‌ ನಿರ್ದೇಶಕರೆ ಇಲ್ಲ. ಯಾವ‌ ಸಿದ್ದತೆ ಹಾಗು ಗುರಿ ಇಲ್ಲದ‌ ಚಿತ್ರಗಳು. ಅವರ‌ ಉದ್ದೇಶ‌ ಒ0ದೆ ಹಾಕಿದ‌ ಹಣ‌ ಹೇಗೊ ಹಿ0ದೆ ಬರಬೇಕು ಮತ್ತು ಸ್ವಲ್ಪ ಲಾಭ‌. ಅಷ್ಟೆ ಅವರ‌ ಉದ್ದೇಶ‌. ಚಿತ್ರದ‌ ಬಗ್ಗೆ ಯಾವುದೆ ಅರ್ಪಣಮನೋಭಾವ‌ ತೆಗೆಯುವರಿಗಿಲ್ಲ. ನ0ದಾದೀಪ‌. ಉಯ್ಯಾಲೆ ಮನಶಾ0ತಿ ತೂಗುದೀಪ‌ ಇವೆಲ್ಲ ಇರಲಿ 'ನಾ0ದಿ' ರೀತಿಯ‌ ಚಿತ್ರಗಳನ್ನು ಕನ್ನಡದಲ್ಲಿ ಮತ್ತೆ ತೆಗೆಯಲು ಸಾದ್ಯವೆ ಇಲ್ಲ
'ನಾ0ದಿ' ಕಿವುಡು ಮೂಗರ‌ ಬಗ್ಗೆ ತೆಗೆದಿರುವ‌ ಮನೋಜ್ನ ಚಿತ್ರ ಅದೆ ವಿಷಯ ಹಿ0ದಿಯಲ್ಲಿ ರಾಜೇಶ್ ಖನ್ನ ಮಾಡಿರುವ‌ ಚಿತ್ರ ಒ0ದಿದೆ, ಆಗಿನ‌ ಹಾಡುಗಳು ಮತ್ತೆ ಬರಲು ಸಾದ್ಯವಿಲ್ಲ. ಈಚೆಗೆ ಹಾಗೆ ನೋಡಿದರೆ ಆ ರೀತಿ ಸರಳ‌ ವಾಗಿ ಬ0ದಿರುವ‌ ಕೆಲವು ಚಿತ್ರಗಳು ಪುನೀತ್ ರಾಜ್ಕುಮಾರ್ ಮಾಡಿರುವ‌ ಅರಸು, ಮತ್ತು ಮತ್ತೊಮ್ದು ಹೆಸರು ಮರೆತೆ ಡೈವರ್ಸ್ ಆಗುತ್ತಿರುವ‌ ಗ0ಡ‌ ಹೆ0ಡತಿ ಚಿತ್ರ .... ಇರಲಿ ಬಿಡಿ ನೀವು ಕನ್ನಡಪ್ರೇಕ್ಶ್ಹಕರ‌ ಬಗ್ಗೆ ಹೇಳಿದ್ದಕ್ಕೆ ಇಷ್ಟೆಲ್ಲ ಹೇಳಬೇಕಾಯಿತು

Submitted by ggurubasavaraja Tue, 12/25/2012 - 02:28

Guru, I agree this was a great movie , millions enjoyed it watching ! I want to know why you pick up classics (Bhagban is not , there were loads of movies in Indian cinema which said the same) and try to enlighten people ? you think most of the people who visit this site, do not watch Hollywood movies ? or you want to display your written skills ? if its the latter, I would say you do a good job.

Submitted by Shreekar Tue, 12/25/2012 - 22:57

In reply to by ggurubasavaraja

ಶ್ರೀ ಗುರುಬಸವರಾಜ ಜೀ,

ಸಂಪದದಲ್ಲಿ ಇಂಗ್ಲೀಷ್ , ಅದರಲ್ಲೂ ಕೆಟ್ಟ ಇಂಗ್ಲೀಷ್ ಬರೆಯುವ ಹಾಗಿಲ್ಲ. :-)

ದಯವಿಟ್ಟು ಕನ್ನಡದಲ್ಲಿ ಬರೆಯಿರಿ.

Submitted by venkatb83 Wed, 12/26/2012 - 16:47

In reply to by Shreekar

ಗುರುಗಳೇ-ನಿಮ್ಮಂತೆ ನನಗೂ -ಇನ್ನು ಹಲವರಿಗೂ ಈ ಭಾವ ಬಂದಿರಲೇಬೇಕು...!!
ಇದು ಕೇವಲ ಕನ್ನಡ ಚಿತ್ರಗಳ ಬಗ್ಗೆ ಅಲ್ಲ-ಎಲ್ಲ ಭಾಷೆಯ ಚಿತ್ರಗಳಲ್ಲಿ 'ಆ ತರಹದ ' ಚಿತ್ರಗಳು ಕಡಿಮೆ ಆಗಿವೆ...
ಆದರೂ ಸಮಾಧಾನ ಎಂದರೆ ತಮಿಳು -ಮಲಯಾಳಂ -ತೆಲುಗಲ್ಲೂ ಕೆಲವು ನಿರ್ದೇಶಕರು ಹಳೆಯ 'ಅಕಾಲದ' ತರಹದ ಚಿತ್ರಗಳನ್ನು ತೆಗೆದಿರುವರು ...
ಇತ್ತೀಚಿನ ಉದಾಹರಣೆ :
ಕಾಂಚೀವರಂ (ಕನ್ನಡಿಗ ಪ್ರಕಾಶ್ ರೈ -ರಾಷ್ಟ ಪ್ರಶಸ್ತಿ ಪಡೆದ ಚಿತ್ರ)
ಅಲ್ಲಿ ಆಗದ್ದು ಇಲ್ಲಿ ಆಗದು ಎಂದೇನಲ್ಲ ಆದರೆ ಪ್ರಯತ್ನಿಸುವವರು ಕಡಿಮೆ-ಆಗೊಮ್ಮೆ ಪ್ರಯತ್ನಿಸಿದರೂ ಅದ್ಕೆ ಪ್ರೋತ್ಸಾಹ ಸಿಗೋದು ಕಷ್ಟ ಅನ್ಸುತ್ತೆ...!!

ನೀವ್ ಮರೆತ ಆ ಚಿತ್ರದ ಹೆಸರು ಬಹುಶ - ಮಿಲನ ಅನ್ಸುತ್ತೆ....ಅದು ಗಂಡ ಹೆಂಡತಿಯರ ಹಿಂದಿನ ಪ್ರೇಮ ವೈಫಾಲ್ಯದ ಕುರಿತ ಚಿತ್ರ..ಕೊನೆಗೆ ಗಂಡ ಹೆಂಡತಿ ಒಂದಾಗುವರು...ಉತ್ತಮ ಚಿತ್ರವೇ ಸೈ ....ಆದರೆ ಅದ್ರಲ್ಲಿ ಹಿಂದಿ ಚಿತ್ರ -ಹಮ್ ದಿಲ್ ದೇ ಚುಕೆ ಸನಮ್' ಛಾಯೆ ಇದೆ...ಅಲ್ಲೂ ಇದೆ ಕಥೆ..!!
ನಾಯಕರು-ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ -ನಾಯಕಿ ಐಶ್ವರ್ಯ ರೈ ...ನಿರ್ದೇಶಕರು ಸಂಜಯ್ ಲೀಲಾ ಬನ್ಸಾಲಿ...

'ಆ ತರಹದ ಚಿತ್ರಗಳು ' ಬರಲಿ ಎಂದು ಹಾರೈಸುವೆ....!

ತ್ವರಿತ ಮರು ಪ್ರತಿಕ್ರಿಯೆಗೆ ನನ್ನಿ ...
ಶುಭವಾಗಲಿ..

\|

Submitted by venkatb83 Wed, 12/26/2012 - 17:07

In reply to by ggurubasavaraja

ಬಸವರಾಜ್ ಅವ್ರೆ -
ಯಾರಿಂದಲಾದರೂ ನಿರೀಕ್ಷಿಸಿದ್ದ ಈ ಪ್ರಶ್ನೆಯನ್ನು ನೀವ್ ಕೇಳಿರುವಿರಿ...!!
ಸಂತೋಷ..
ನಮ್ಮ ಭಾಷೆಯೂ ಸೇರಿ ಇಡೀ ಜಗತ್ತಿನ ಸಿನೆಮ ರಂಗದಲ್ಲಿ ವರ್ಷಂಪ್ರತಿ ಹಲವು ಉತ್ತಮ-ಅತ್ಯುತ್ತಮ-ಹಾಗೆಯೇ ಕೆಟ್ಟ ಚಿತ್ರಗಳೂ ಬರುವವು...!!
ನಮ್ಮ ವಿರಾಮ ಸಮಯವನ್ನು ನಾವು-ಮನೆ ಮಂದಿ ಸಮೇತ ಕುಳಿತು ಕಾಸು ವ್ಯಯಿಸಿ ಚಿತ್ರ ನೋಡಿ ಅದು ಮುದ ನೀಡಿ-ಖುಷಿ ಕೊಟ್ಟು ,
ಸಮಯ -ಹಣ ವ್ಯರ್ಥವಾಗಲಿಲ್ಲ..ಎಂಬ ಭಾವ ಬಂದರೆ ಅದೇ ಉತ್ತಮ ಸಿನೆಮ ಅಲ್ಲವೇ?
ಹೀಗೆ ಬರುವ ಸುಮಾರು ಚಿತ್ರಗಳನ್ನು ಹಲವು ಬಾರಿ ಸಮಯದ ಅಭಾವದಿಂದ -ಆ ಚಿತ್ರಗಳ ಬಗ್ಗೆ ಗೊತ್ತಿಲ್ಲದೇ-ಅಥವಾ ಕೆಲವು ಚಿತ್ರಗಳ ಪೋಸ್ಟರ್ ನೋಡಿ ಅದೇನೂ ಅಸ್ಟು ಇಷ್ಟ ಆಗದೆ -ಅಥವಾ ಕೆಲವು ನಟ-ನಟಿ-ನಿರ್ದೆಶಕರು-ಗಳ ಬಗೆಗಿನ 'ಪೂರ್ವಾಗ್ರಹ ಪೀಡಿತ ' ಭಾವನೆಯಿಂದ ಕೆಲವು ಉತ್ತಮ-ಅತ್ಯುತ್ತಮ ಚಿತ್ರಗಳನ್ನು ಹಲವರು ನೋಡದೆ ಇರಬಹದು...
ಆ ತರ್ಹದವರಿಗಾಗಿ ಅವರು ತಪ್ಪಿಸಿಕೊಂಡ- ನೋಡಲಾಗದ -ನೋಡಬೇಕಾದ (ಅವ್ರಿಗೆ ಹಾಗೆ ಅನಿಸಿದರೆ)ಚಿತ್ರಗಳ ಬಗ್ಗೆ ನಾ ಇಲ್ಲಿ ಬರೆಯುತ್ತಿರುವುದು...
ಓದಿದ ಹಲವರಲ್ಲಿ-ಕೆಲವರಿಗಾದರೂ ಈ ಬರಹ ಉಪಯೋಗವಾಗಿ-ಆ ಚಿತ್ರಗಳನ್ನು ನೋಡಿ ಖುಷಿ ಪಟ್ಟರೆ ಸಾಕಸ್ಟೆ ..!!

ನಾ ಸಹಾ ಹಲವು ಸಾರಿ ಪೂರ್ವಗ್ರಹಪೀಡಿತ ಭಾವನೆಯಿಂದ-ಹಲವು ಬಾರಿ ಚಿತ್ರಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ -
ಹಲವು ಉತ್ತಮ ಅತ್ಯುತ್ತಮ ಚಿತ್ರಗಳನ್ನು ನೋಡದೆ ಮಿಸ್ ಮಾಡಿಕೊಂಡು ಆಮೇಲೆ ಯಾವತ್ತೋ ನೋಡಿದ್ದಿದೆ....ಅವತ್ತೇ ನೋಡಬೇಕಿತ್ತು-ಎಂಬ ಭಾವ ಬಂದದ್ದು ಇದೆ...

ಹಾಗೆ ನೋಡಿದ ಚಿತ್ರಗಳ ಬಗ್ಗೆಯೇ ಈ ಬರಹಗಳ ಸರಣಿ...
ಮತ್ತು ಅದು ಬಹುಸ ಕೊನೆಯಾಗದ-ಮುಗಿಯದ ಬರಹ ಸರಣಿ ಅನ್ಸುತ್ತೆ...!!
ನಿಮ್ಮ ಮುಕ್ತ ಅನಿಸಿಕೆಯ ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ...

\|/