ಕಿಚ್ಚು :: ಭಾಗ - ೧೨

ಕಿಚ್ಚು :: ಭಾಗ - ೧೨

ಕಿಚ್ಚು :: ಭಾಗ - ೧೨

ಹಿಂದಿನ ಕಂತು : http://sampada.net/blog/kamathkumble/24/12/2010/29685

 

 

೨೧

 

 


ಇಲ್ಲಿಯೂ ಅದೃಷ್ಟ ನನ್ನ ಪ್ರೇಮಗೀತೆಯನ್ನು ಜಾಡಿಸಿ ಒದ್ದಿತ್ತು, ಹತ್ತಿದ ಲೋರಿಯು ರಾಜಸ್ತಾನದಿಂದ ಗ್ರಾನೈಟ್ ಅನ್ನು ಕೊಚ್ಚಿನ್ ಗೆ ಒಯ್ಯುತಿತ್ತು. ಲಾರಿ ಒಳಗಿದ್ದ ಡ್ರೈವರ್ ಆಗಲೇ ಕುಡಿದ ಯಾವುದೊ ಲೋಕಲ್ ಮಾಲಿನ ವಾಸನೆಯಿಂದ ನಾರುತ್ತಿದ್ದ. ಕ್ಲೀನರ್ ನಿದ್ದೆಗೆ ಜಾರಿದ್ದ. ನಾನು ಪ್ರಾಣ ಕೈಯಲ್ಲಿ ಹಿಡಿದು ಕಣ್ಣು ಬಿಟ್ಟೆ ವಸುಂದರನ ಕನಸು ಕಾಣುತ್ತಿದ್ದೆ, ಅರ್ದ ಗಂಟೆಯಲ್ಲೇ ಲಾರಿ ರೋಡಿನಿಂದ ಜಾರಿ ಪಕ್ಕದ ದೊಡ್ಡದೊಂದು ಆಲದಮರಕ್ಕೆ ಡಿಕ್ಕಿ ಹೊಡೆಯಿತು.

ಕಣ್ಣು ಬಿಟ್ಟು ನೋಡಿದಾಗ ಆರೈಕೆ ಮಾಡುವ ದಾದಿಯರು ಮತ್ತು ನೇತು ಹಾಕಿರುವ ನನ್ನ ಬಲಗಾಲ ದರ್ಶನವಾಯಿತು,ಲಾರಿ ಹೊಡೆದ ರಬಸಕ್ಕೆ ನನ್ನ ಬೋಧ ಹೊರಟು ಹೋಗಿತ್ತೇ ವಿನಹ ನನ್ನ ಪ್ರಾಣ ಹೊರಟು ಹೋಗಿರಲಿಲ್ಲ. ಆಕ್ಸಿಡೆಂಟ್ ಆಗಿ ಆಗಲೇ ೨೬ ಗಂಟೆ ಕಳೆದಿತ್ತು ,ಯಾರೋ ನನ್ನ ಕಿಸೆಯಲ್ಲಿನ ನಮ್ಮ  ಹೋಟೆಲ್ ನ ಬಿಲ್ ನೋಡಿ ರಾಮರಾಯರಿಗೆ ವಿಷಯ ತಿಳಿಸಿದ್ದರು. ಅವರು ಮುಂಬೈನ ಹೋಟೆಲ್ ನಲ್ಲಿನ ಅಕೌಂಟೆಂಟ್ ಬಳಿಯಲ್ಲಿ ಹೇಳಿ ನನ್ನ ಆರೈಕೆಯ ಎಲ್ಲಾ ವ್ಯವಸ್ತೆಮಾಡಿಸಿದ್ದರು, ಆದರೆ ನಾನು ನಡೆಯುವಂತಿರಲಿಲ್ಲ, ದಾದಿಯಲ್ಲಿ ಕೇಳುವಾಗ ಅವರು ಕನಿಷ್ಠ ೩ ತಿಂಗಳು ನಡೆಯಬಾರದು ಎಂದು ನಿರ್ಭಂದ ಬೇರೆ ಹಾಕಿದರು. ಇನ್ನು ಮಂಗಳೂರು ಸೇರುವುದು ಬರಿಯ ಕನಸಾಗಿಯೇ ಉಳಿಯಿತು.

೩ ತಿಂಗಳ ಎಲ್ಲ ಖರ್ಚನ್ನು ರಾಯರು ನೋಡಿಕ್ಕೊಂಡಿದ್ದರು ಜೊತೆಗೆ ನನ್ನ ಖರ್ಚಿಗಾಗಿ ಬೇರೆ ೧೦೦೦ ಸಾವಿರ ರುಪಾಯಿ ಕೂಡ ಕಳುಹಿಸಿದ್ದರು.ಗಡ್ಡದರಿಸಿ ಆಗಲೇ ಸನ್ಯಾಸಿ ಆಗಿ ಹೋಗಿದ್ದೆ. ಆಸ್ಪತ್ರೆಯಿಂದ ಸೀದಾ ಇನ್ನೊಂದು ಲಾರಿ ಹತ್ತಿ ಮಂಗಳೂರು ತಲುಪಿದೆ.ಈಗ ಊರ ಬಸ್ಸಲ್ಲಿ ಯಾರು ನನ್ನನ್ನು ಗುರುತಿಸಲಾರರಾದರು, ನನಗೆ ಹೆಚ್ಚಿನವರು ಪರಿಚಯದವರೇ ಆದರೆ ನಾನಾಗಿ ಯಾರಲ್ಲಿಯೂ ಮಾತನಾಡಲು ಹೋಗಲಿಲ್ಲ. ಬಸ್ಸಿಂದ ಇಳಿದು ಯಶೋದಮ್ಮನ ಮನೇನೂ ಸೇರಿದ್ದಾಯಿತು.


ಒಂದು ವರುಷದಲ್ಲಿ ಅಮೂಲಾಗ್ರ ಬದಲಾವಣೆಯಾಗಿತ್ತು ಆ ಮನೆಯಲ್ಲಿ, ಹೊರಗಿನ ಬೀಗ ಜಡಿದಿತ್ತು. ಬೀಗ ನೋಡಿ ಮನೆಯಲ್ಲಿ ಯಾರು ವಾಸವಿಲ್ಲದ ಕುರುಹು ಸಿಕ್ಕಿತು,ಆದರೆ ಗುಡಿಸಿದ ಅಂಗಳದಿಂದ ಇಲ್ಲಿ ಮನೆ -ತೋಟ ನೋಡಲು ಯಾರೋ ಇದ್ದಾರೆ ಎಂಬುವುದು ಖಾತ್ರಿಯಾಯಿತು, ಯಾರಿರಬಹುದು ಎಂದು ನಾನು ಹಿತ್ತಲು ಸುತ್ತ ತೊಡಗಿದೆ.ಯಶೋದಮ್ಮ ನಮಗಾಗಿ ಕೊಟ್ಟ ಪುಟ್ಟ ಪಂಪ್ ರೂಂ ಬಳಿಗೆ ಬಂದೆ,ಅರ್ದ ತೆರೆದಿರುವ ಬಾಗಿಲು ಮತ್ತು ಒಳಗಿನಿಂದ ಒಲೆಯಲ್ಲಿ ಹಚ್ಚಿರುವ ಒಗ್ಗರಣೆಯ ಪರಿಮಳ ನನ್ನನ್ನು ಅತ್ತ ಸೆಳೆಯಿತು.

ನನ್ನ ವಸುಂದರ ಅಲ್ಲಿ ಇದ್ದಾಳಾ? ಎಂಬ ಪ್ರಶ್ನೆ ಕಾಡ ತೊಡಗಿತು , ಮೇಲಾನೆ ಆ ಬಾಗಿಲನ್ನು ಸರಿಸಿದೆ.
ಅಲ್ಲ , ವಸುಂದರಳಾಗಿರಲಿಲ್ಲ, ಯಾವುದೊ ೧೬-೧೮ ವರುಷದ ಯಾವುದೊ ಒಬ್ಬ ತರುಣ ಆ ಕೋಣೆಯಲ್ಲಿ ವಾಸಿಸುತ್ತಿದ್ದ.
ಅವನಲ್ಲಿ ನಾನು "ಯಾರು ನೀನು ? ಯಶೋದಮ್ಮ ಎಲ್ಲಿ ?" ಎಂದು ಕೇಳಿದೆ .
ಅವನು "ರಾಮು ಅಂತ, ಕಳೆದ ೬ ತಿಂಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಯಜಮಾನ್ರು ಮತ್ತು ಯಶೋದಮ್ಮ ಈಗ ಮಗನ್ನೊಂದಿಗೆ ಫೋರಿನ್ ಹೋಗಿದ್ದಾರೆ ...ನೀವ್ಯಾರು ?" ಅಂದ.
ನಾನು "ವಸುಂದರ ..?"

ಅವನು ವಸುಂದರ ಎಂದು ಕೇಳುತ್ತಲೇ "ಜನಾರ್ಧನ್ ಅವರಾ ? ವಸುಂದರಮ್ಮನೋರ ಯಜಮಾನ್ರು ?"ಅಂದ
ನಾನು ಕತ್ತು ಅಲ್ಲಾಡಿಸುತ್ತ "ಹುಂ ವಸುಂದರ ಎಲ್ಲಿ ?"
ಅವನು "ಎಲ್ಲಿದ್ದಳೋ ಗೊತ್ತಿಲ್ಲ, ಎಲ್ಲ ಮುಗಿದ ನಂತರ ಬಂದಿದ್ದಿರಾ..."
ನಾನು"ಎಲ್ಲಾ ಮುಗಿದ ನಂತರ ಅಂದರೆ ಏನು ರಾಮು ಸರಿಯಾಗಿ ಬಿಡಿಸಿ ಹೇಳು ..."

ಅವನು ಮುಂದುವರಿಸಿದ "ವಸುಂದರಮ್ಮ ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದಳು, ನೀವು ಉರ್ರಾಚೆ ಇದ್ದರೂ ನಿಮ್ಮನ್ನು ಅವಳ ಉಸಿರಲ್ಲಿ ಕಂಡುಕ್ಕೊಂಡಿದ್ದಳು, ನಿಮ್ಮ ಕುಡಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ತಿಳಿದಾಕ್ಷಣ ಸಂಭ್ರಮಿಸಿದ್ದಳು, ವಿಷಯ ತಿಳಿದಾಕ್ಷಣ ಯಶೋದಮ್ಮ ನನ್ನನ್ನು ಮನೆಕೆಲಸಕ್ಕೆ ಇಟ್ಟುಕೊಂಡರು, ಯಶೋದಮ್ಮ ಮತ್ತು ಯಜಮಾನ್ರು ಅವಳನ್ನು ತಮ್ಮ ಹೆತ್ತ ಮಗಳಿಗಿಂತ ಹೆಚ್ಚು ಪ್ರಿತಿಸುತ್ತಿದ್ದರು, ಅವಳಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದರು, ನಿಮ್ಮ ವಿರಹದ ವಿನಃ ಅವಳಿಗೂ ಯಾವುದರ ಕೊರತೆ ಇರಲಿಲ್ಲ .

ಪ್ರತಿ ಸೋಮವಾರದಂದು ನಿಮಗಾಗಿ ಪತ್ರ ಬರೆಯುತ್ತಿದ್ದರು, ನಿಮ್ಮ ಪ್ರತಿ ಪತ್ರಕ್ಕೆ ಕಾಯುತ್ತಿದ್ದಳು, ನಿಮ್ಮ ಪತ್ರ ಬಂದ ದಿನ ಅದನ್ನು ನೂರು ಬಾರಿ ಓದುತ್ತಿದ್ದಳು, ನಮ್ಮೆಲ್ಲರಿಗೂ ಓದಿ ಹೇಳುತ್ತಿದ್ದಳು , ನೀವು ಸೀರೆ ಕಳುಹಿಸಿದ ದಿನ ಅದನ್ನುಟ್ಟು ತುಂಬಾನೆ ಸಂಭ್ರಮಿಸಿದ್ದಳು, ಯಶೋದಮ್ಮನವರು ಅವಳ ಬಸರಿ ಬಯಕೆಗೆ ಎಲ್ಲಾ ವ್ಯವಸ್ತೆಯು ಮಾಡಿಆಗಿತ್ತು, ಆದರೆ ಎರಡು ದಿನ ಮೊದಲೇ ಆ ಸಂಭ್ರಮ ಮಾಸಿ ಹೋಯಿತು, ವಿಷಯ ತಿಳಿದ ವಸುಂದರಮ್ಮ ತುಂಬಾನೆ ದುಃಖಿಸಿದಳು.

ಆಸ್ಪತ್ರೆಯಿಂದ ಬಂದಾಗಿಂದ ವಸುಂದರಮ್ಮ  ತುಂಬಾನೆ ಖಿನ್ನಳಾಗಿದ್ದಳು, ಯಾವುದರಲ್ಲೂ ಆಸಕ್ತಿ ವಿರಲಿಲ್ಲ, ನಿಮಗೆ ವಿಷಯದ ಕುರಿತು ಬರೆದ ಪತ್ರದ ಬಗ್ಗೆ ಯಶೋದಮ್ಮ ತಿಳಿಸಿದ ನಂತರ ನೀವು ಬಂದೆ ಬರುತ್ತಿರ ಅವಳ ಕಣ್ಣೀರಿಗೆ ಆಸರೆಯಾಗಿ ನಿಲ್ಲುತ್ತೀರಾ ಎಂದು ಕನಸು ಕಾಣುತ್ತಿದ್ದಳು.

ತಿಂಗಳಾಯಿತು ಆಗಲು ನೀವು ಬರಲೇ ಇಲ್ಲ ಅವಳ ಪ್ರೀತಿಯ ಘಾಡತೆ ನಿಮಗೆ ತಿಳಿಯದೆ ಹೋಯಿತು , ದಿನಗಳು ಉರುಳುತ್ತಲೇ ಅವಳ ಆಶಾಕಿರಣ ಮೇಲಾನೆ ತನ್ನ ಉಜ್ವಲತೆ ಕಮ್ಮಿಗೊಳಿಸಿತು, ಕೊನೆಗೆ ಒಂದು ದಿನ ಪತ್ರ ಬರೆದು ಯಾರಿಗೂ ಸಿಗದಂತೆ ಮಾಯವಾದಳು..."

"ಪತ್ರ...?"
"ಹುಂ ...ಮನೆಯಲ್ಲಿದೆ ಆ ಪತ್ರ ...ಬನ್ನಿ ಕೊಡುವೆ."
 

 

 

೨೨

 


ಯಶೋದಮ್ಮನ ಮನೆಯಲ್ಲಿ ಯಶೋದಮ್ಮ ವಸುಗೆ ಒಂದು ಕೋಣೆಯನ್ನು ಕೊಟ್ಟಿದ್ದರು , ಅದರಲ್ಲಿ ಪುಟ್ಟದೊಂದು ಮಂಚ, ಮಂಚದ ಮೂರು ಬದಿಯಲ್ಲಿ ಮುದ್ದು ಮುದ್ದು ಮಗುವಿನ ಫೋಟೋ, ಬಳಿಯಲ್ಲೇ ಒಂದು ಖಾಲಿ ಫ್ರೇಮ್ ಅದರ ಕೆಳಗೆ ಒಂದು ಕಪಾಟಿನಲ್ಲಿ ಜೋಡಿಸಿಟ್ಟ ವಸುಂದರನಿಗೆ ಯಶೋದಮ್ಮ ಕೊಡಿಸಿದ ಬಟ್ಟೆಗಳು,ಅವುಗಳ ಮೇಲೆ ಒಂದು ಪತ್ರ.
ತೆರೆದು ಆದ ತೊಡಗಿದೆ
"
ಅಪ್ಪಾಜಿ ಮತ್ತು ಅಮ್ಮನಲ್ಲಿ

ಯಾವುದೇ ಪರಿಚಯ , ಸಂಭಂದವಿಲ್ಲದ ಈ ಪರದೇಶಿಗೆ ನಿಮ್ಮ ಮಗಳಂತೆ ನೋಡಿಕೊಂದದಕ್ಕೆ ಮೊದಲಿಗೆ ಕೃತಜ್ಯತೆ ಸಲ್ಲಿಸುತ್ತಿದ್ದೇನೆ.

ಹೆತ್ತತಂದೆತಾಯಿಯರಿಗೆ ಮಾಡಿದ ಮೋಸಕ್ಕೆ ನನಗೆ ತಕ್ಕುದಾದ ಶಿಕ್ಷೆ ಯಾಗಿದೆ, ಅವರನ್ನು ಬಿಟ್ಟು ನನ್ನ ಜೀವನದಲ್ಲಿ ಬಂದ ಹೊಸವ್ಯಕ್ತಿಯೇ ಸರ್ವಸ್ವ ಎಂದು ನನ್ನ ಸರ್ವಸ್ವ ಅವನಿಗೆ ಒಪ್ಪಿಸಿದೆ, ಮಾತು ಮಾತಿನಲ್ಲೇ ಮೋಡಿ ಮಾಡಿ, ಮದುವೆ ಎಂಬ ನಾಟಕ ಮಾಡಿ ನನಗೆ ಒಂದು ಉಡುಗೊರೆಯನ್ನು ನೀಡಿ, ದೂರದೂರಿನ ಕೆಲಸದ ನಾಟಕವಾಡಿ ನನ್ನಿಂದ ದೂರವಾದ. ಅವನ ಸುಳ್ಳು ಪ್ರೀತಿಯನ್ನು ನಾನು ನಿಜವಾದ ಪ್ರೀತಿಎಂದು ತಿಳಿದು ನಾನು ಬರೆದ ೨೬ ಪತ್ರದ ಬದಲಿಗೆ ಅವ ಬರೆದದ್ದು ಕೇವಲ ೫ , ಒಂದು ಸೀರೆಯನ್ನು ಕೊಡಿಸಿದ ನಾನು ಅವನು ಪ್ರೀತಿಸುತ್ತಾನೆ ಎಂದು ನಂಬಿದ್ದೆ, ನನ್ನ ಕಂಬನಿಗೆ ಆಸರೆ ಆಗಿ ನಿಲ್ಲುತ್ತಾನೆ ಎಂದು ಕೊಂಡಿದ್ದೆ, ಆದರೆ ನಿಮ್ಮ ಹೊರತು ಯಾರು ನನ್ನ ಕಣ್ಣೇರು ಒರಸಲಿಲ್ಲ, ನಿಮ್ಮ ಈ ಋಣಕ್ಕೆ ನಾನು ಎಂದೆಂದಿಗೂ ಋಣಿ ಯಾಗಿರುವೆ.

ನಾನು ಮಾಡಿದ ಮೋಸಕ್ಕೆ ನನಗೆ ಮೋಸವೇ ಪ್ರತಿಫಲ ಸಿಕ್ಕಿದೆ, ಅದನ್ನು ನಾನು ಸ್ವೀಕರಿಸುತ್ತೇನೆ, ನಿಮಗೆ ಇನ್ನಷ್ಟು ತೊಂದರೆ ಕೊಡಲು ನಾನು ಬಯಸುವುದಿಲ್ಲ ಆದಕಾರಣ ನಿಮ್ಮನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದೇನೆ, ನಾನು ನನ್ನ ಸೂರನ್ನು ಹುಡುಕಿಕೊಳ್ಳುತ್ತೇನೆ, ನನ್ನ ಬಗ್ಗೆ ಚಿಂತಿಸಬೇಡಿ, ನನ್ನನ್ನು ಹುಡುಕುವ ಪ್ರಯತ್ನವನ್ನೂ ಮಾಡಬೇಡಿ.

ನಿಮ್ಮ ನೆನಪು ಹೊರತುಪಡಿಸಿ ಹಿಂದಿನ ಯಾವುದೇ ನೆನಪು ಸುಳಿಯದಂತೆ ನಾನು ನನ್ನನ್ನು ಸನ್ನದ್ಧ ಮಾಡಿಕೊಳ್ಳುವೆ,ಇಂದಿನಿಂದ ಹೊಸ ವಸುಂದರಳಾಗಿ ಹೊಸ ಜೀವನ ನಡೆಸುವೆ.

ಕೊನೆಯದಾಗಿ ಒಂದು ಸಹಾಯ ಬೇಡುವೆ, ಅದೇನೆಂದರೆ ಅರ್ಥವಿಲ್ಲದ ಮದುವೆ ಎಂಬ ನಾಟಕದ ಏಕೈಕ ಸಾಕ್ಷಿ ಆಗಿರುವ ಈ  ಹರಸಿನ ಕೊಂಬನ್ನು ಇಲ್ಲಿ ಬಿಟ್ಟು ಹೋಗಿರುತ್ತೇನೆ, ಒಂದು ವೇಳೆ ಆ ಮಹಾನುಭಾವ ನನ್ನರಸಿ ಬಂದರೆ ಅದನ್ನು ಅವನಿಗೆ ಹಿಂತಿರುಗಿಸಿ, ಅರ್ಥವಿಲ್ಲದ ಸಂಭಂದ ಮುಂದುವರಿಸುವಲ್ಲಿ ನನಗೆ ಯಾವುದೇ ವಿಶ್ವಾಸವಿಲ್ಲ.

ನಿಮ್ಮ ನೆನಪಿಗಾಗಿ ನಿಮ್ಮ ಫೋಟೋ ನಾನು ಒಯ್ಯುತ್ತಿದ್ದೇನೆ

ನಿಮ್ಮ
ಸಾಕು ಮಗಳು
 "

 

 

೨೩



ಪತ್ರ ಓದಿ ಮುಗಿಸುತ್ತಲೇ ಕಣ್ಣೆಲ್ಲ ಮಂಜಾದವು, ಯಾವ ಪ್ರೀತಿಯನ್ನು ಪಡೆಯಬೇಕೆಂದು ನಾನು ಸರ್ವಸ್ವವನ್ನು ತ್ಯಾಗ ಮಾಡಿದ್ದೇನೋ ಅದು ನನ್ನನ್ನು ಬಿಟ್ಟು ಆಗಲೇ ದೂರವಾಗಿತ್ತು, ಮನೆಯವರ ದ್ವೇಷ ಕಟ್ಟಿ ಕ್ಕೊಂಡಿದ್ದಕ್ಕೆ ತಕ್ಕ ಶಾಸ್ತಿಯಾಯಿತು.

ನಾನು ರಾಮು ನಲ್ಲಿ "ನೀವು ಹುಡುಕುವ ಪ್ರಯತ್ನ ಮಾಡಲಿಲ್ಲವೇ ?"
ಅವನು "ಹುಡುಕಿದೆವು ಅಣ್ಣ, ಆದರೆ ಎಲ್ಲೂ ಸಿಗಲಿಲ್ಲ, ಯಜಮಾನರಿಗೆ ಮತ್ತು ಅಮ್ಮನವರಿಗೆ ಇದೆ ಚಿಂತೆ ಆಗಿತ್ತು, ಹೀಗಿರಲು ರಾಹುಲ್ ಕಳೆದ ತಿಂಗಳು ಬಂದಾಗ ಇಲ್ಲಿದ್ದರೆ ಇವರು ತಲೆ ಕೆಡಿಸಿಕೊಳ್ಳುತ್ತಾರೆ ಎಂದು ತನ್ನೊಂದಿಗೆ ಅವರನ್ನು ಅಮೆರಿಕ ಕ್ಕೆ ಕರಕ್ಕೊಂಡು ಹೋದರು, ಮನೆಯ ಜವಾಬ್ದಾರಿ ನನ್ನ ಮೇಲೆ ಬಿಟ್ಟು ಹೋಗಿದ್ದಾರೆ. ವಸುಂದರಮ್ಮನಿಗೆ ಮುಂದೆ ಏನಾಯಿತು ಗೊತ್ತಿಲ್ಲ ..."ಅಂದ.

ವಸುಂದರ ಎಲ್ಲಿ ಹೋಗಿರಬಹುದು ?ತನ್ನವರನ್ನು ಬಿಟ್ಟು ಬಂದದ್ದಾಗಿದೆ, ಈ ಊರಲ್ಲಿ ಪರಿಚಯದವರ್ಯಾರು ಇಲ್ಲ, ಎಲ್ಲಿ ಹೋಗಿರಬಹುದು ಎಂಬ ಪ್ರಶ್ನೆ ಕಾಡಲಾರಂಭಿಸಿತು.ಹುಡುಗಿಯರ ಬಗ್ಗೆ ಹೇಳಲು ಸಾದ್ಯವಿಲ್ಲ ಪುನಃ ತನ್ನ ಹೆತ್ತವರ ಬಳಿಗೆ ಹೋಗಿರಬಹುದು ಎಂದುಕ್ಕೊಂಡೆ.

ಮಂಗಳೂರು ಬಸ್ ಹತ್ತಿ ಅವರ ಮನೆ ತಲುಪಿದೆ.ಇಲ್ಲಿಯೂ ಒಂದು ವರ್ಷದಲ್ಲಿ ತುಂಬಾನೆ ಬದಲಾವಣೆ ಬಂದಿತ್ತು. ಯಾರು ನನ್ನನ್ನು ಗುರುತು ಹಚ್ಚಲಿಲ್ಲ, ಅಲ್ಲಿಯವರೂ ನನಗೆ ಹೊಸ ಮುಖವಾಗಿತ್ತು, ಮನೆ ಪ್ರವೇಶಿಸಿದಾಗ ಕೆಲಸದವನು ಸ್ವಾಗತಿಸಿ ಹೊರಗಿನ ಮಂಚದ ಮೇಲೆ ನನ್ನನ್ನು ಕುಳ್ಳಿರಿಸಿ ಕುಡಿಯಲು ತಣ್ಣೀರು ತಂದು ಕೊಟ್ಟ. ಸುತ್ತಲೂ ಕಣ್ಣು ಹಾಯಿಸಿದಾಗ ಗೋಡೆಯಲ್ಲಿ ನೇತುಹಾಕಿದ ವಸುನ ತಂದೆಯ ಫೋಟೋ ಕಾಣಿಸಿತು.

ನಾನು ಆ ಆಳಿನಲ್ಲಿ"ರಾಯರು ..?" ಎಂದು ಕೇಳಿದಾಗ
ಅವನು "ವಸುಂದರಮ್ಮ ಹೋದ ಬಳಿಕ ರಾಯರು ಮತ್ತು ಅಮ್ಮನೋರು ತುಂಬಾನೆ ನೊಂದುಕ್ಕೊಂಡಿದ್ದರು, ಗಂಡೆದೆ ರಾಯರು ತನ್ನ ದುಃಖವನ್ನು ಅಡಗಿಸುವಲ್ಲಿ ಪ್ರಯತ್ನ ಪಡುತ್ತಿದ್ದರೆ ಅಮ್ಮನವರು ಅದೇ ಕೊರಗಿನಲ್ಲಿ ತನ್ನ ಮಾನಸಿಕ ಹಿಡಿತವನ್ನೇ ಕಳಕ್ಕೊಂಡರು, ೬ ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ರಾಯರು ಇದನೆಲ್ಲ ಕಂಡು ಆತ್ಮಹತ್ಯೆಗೆ ಶರಣಾದರು,ಈಗ ಅವರ ವ್ಯಾಪಾರವನ್ನು ಅವರ ತಮ್ಮ ನೋಡಿಕ್ಕೊಳುತ್ತಿದ್ದಾರೆ..."

ನಾನು ಮದ್ಯದಲ್ಲಿ ತಡೆದು ನಿಲ್ಲಿಸಿ "ವಸುಂದರ ಎಲ್ಲಿದ್ದಾಳೆ ಈಗ ?"
ಅವನು "ಯಾವುದೊ ಹುಡುಗನೊಂದಿಗೆ ಮದುವೆ ಆಗಿದ್ದಾಳಂತೆ , ಎಲ್ಲಿದ್ದಳೋ ಗೊತ್ತಿಲ್ಲ , ಒಂದು ವರುಷದ ಮೇಲಾಯ್ತು ಅವಳ ಮುಖ ನೋಡಿ, ವಿಶಾಖ ಪಟ್ಟಣಂ ಗೆ ಹೋಗುವಾಗ ನನ್ನ ತಬ್ಬಿ ಅಲ್ಲಿಗೆ ಹೋಗುವುದಿಲ್ಲ ಎಂದು ಅತ್ತಿದ್ದಳು. ಆ ಬಳಿಕ ನಾನು ನೋಡಲಿಲ್ಲ , ಒಂದು ವರುಷದ ಮಗುವಾಗಿನಿಂದ ನಾನು ಅವಳನ್ನು ನೋಡಿದ್ದೇನೆ ಅವಳು ಮೊದಲಬಾರಿಗೆ ಕಣ್ಣೀರು ಇಟ್ಟ ದಿನವಾಗಿತ್ತು ಅದು, ನನ್ನ ಮಗಳಂತೆ ಇತ್ತು ಆ ಮಗು, ಹೋದದ್ದೇ ಹೋದದ್ದು ಈ ಮನೆಯ ಎಲ್ಲಾ ಉತ್ಸಾಹ ನಿಂತು ಹೋಯಿತು." ಎನ್ನುತ್ತಾ ತನ್ನ ನೆರಿಗೆಯಲ್ಲಿ ಜಾರುತ್ತಿರುವ ಕಣ್ಣೀರು ಒರಸುತ್ತಾ "ನೀವ್ಯಾರು ? "ಅಂದ.

ನಾನು ನಿಜ ವಿಚಾರ ಹೇಳುವುದು ಬೇಡ ಎಂದು "ರಾಯರ ಒಬ್ಬ ಗೆಳೆಯನ ಮಗ, ಮಂಗಳೂರಿನಲ್ಲಿ ಕೆಲಸ ಇತ್ತು ಹಾಗೆ ಅವರನ್ನು ಭೇಟಿ ಮಾಡಿ ಹೋಗುವ ಎಂದು ಬಂದಿದ್ದೆ, ವಿಷಯ ತಿಳಿದು ಬೇಜಾರಾಯಿತು, ಮತ್ತೆ ಇನ್ನು ಯಾವಾಗಲಾದರು ಬರುವೆ" ಎನ್ನುತ್ತಾ ಆ ಶೋಕದಿಂದ ಹೊರ ಬಂದೆ.


ಮುಂದಿನ ಭಾಗ:: : http://sampada.net/blog/kamathkumble/30/12/2010/29764

 

 

Rating
No votes yet