ಕಿರುಮನೆ, ನಡುಮನೆ....
ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ ಊರೇ ಕಡೆ ನಿಲುಗಡೆ( ಅದೇ ನಮ್ಮ ಕೆಂಪು ಬಸ್ಸು :) ). ಅದು ಒಂದು ಪುಟ್ಟ ಊರು. ಹೆಸರು ತರದಲೆ (ತರದೆಲೆ). ಮೊದಲ ಬಾರಿ ಆ ಊರಿಗೆ ಹೋಗುತ್ತಿದುದರಿಂದ ಬಸ್ಸಿಳಿದು ನಮ್ಮ ನೆಂಟರ ಮನೆಗೆ ದಾರಿ ಕೇಳಿ ಕೊನೆಗೆ ಮನೆ ತಲುಪಿದೆ. ಹಳ್ಳಿಗಳಲ್ಲಿ ವಾಡಿಕೆಯಂತೆ ಕಾಲಿಗೆ ನೀರು, ಕೈಯಿಗೆ ನೀರು ಕೊಟ್ಟರು. ಮಾತುಕತೆಯಾಯ್ತು. ಅಲ್ಲಿರುವ ನಮ್ಮ ಅಜ್ಜಿ "ನಡ್ಮನೆ(ನಡುಮನೆ)ಗೆ ನಡಿಯಪ್ಪ. ಊಟ ಮಾಡಕ್ಕೆ" ಅಂದರು. ಏನಿದು ನಡುಮನೆ? ಒಮ್ಮೆ ಉಂಕಿಸಿದೆ. .....ಹೊಳೆಯಿತು ಅವರು ಹೇಳಿದುದು ಅದು ಡೈನಿಂಗ್ ರೂಮ್/ಹಾಲ್ ಅಂತ. :) . ಸರಿ ಊಟ ಆಯ್ತು. ವಸಿ ಹೊತ್ತು ಹೊಲದ ಕಡೆ ಅಡ್ಡಾಡಿ ಬಂದೆ. ಮತ್ತೆ ನಮ್ಮಜ್ಜಿ 'ನಡೀ ಕಿರ್ಮನೆಗೆ(ಕಿರುಮನೆ), ವಸಿ ಹೊತ್ತು ಮಲಕ್ಕೊ" ಅಂದರು. ಒಹೊ ಇವರು ಬೆಡ್ರೂಮ್ ಗೆ ಕಿರುಮನೆ ಅಂತಾರೆ ಅಂತ ತಿಳಿಯಿತು. ಆ ಊರಿನಲ್ಲಿ ಎಲ್ಲರೂ ನಡುಮನೆ, ಕಿರುಮನೆ ಅಂತಾರೆ ಅಂತ ಆಮೇಲೆ ತಿಳಿಯಿತು.
ಸಂಪದದಲ್ಲಿ 'ಕನ್ನಡದ ಕಾನ್ಸೆಪ್ಚುಯಲೈಸೇಸನ್' ಬಗೆಗಿನ ಮಾತುಗಳು ನನಗೆ ಮೇಲಿನ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿತು. ಹಾಗು ಹಳ್ಳಿಗರ ನಡುಮನೆ, ಕಿರುಮನೆ ಕಾನ್ಸೆಪ್ಟ್ ಗಳಿಗೆ ನಾನು ತಲೆದೂಗಿದೆ.
Comments
ಉ: ಕಿರುಮನೆ, ನಡುಮನೆ....