ಕೀಲಿ ಮಣೆ ಕುಟ್ಟುತ್ತಾ...

ಕೀಲಿ ಮಣೆ ಕುಟ್ಟುತ್ತಾ...

ತಲೆಗೆ ಹೊಳೆದದ್ದಷ್ಟನ್ನೂ
ಕೀಲೀಮಣೆಯ ಮೇಲೆ ಕುಟ್ಟಿ
ಮಾನಿಟರಿನ ಮೇಲೆ ಮೂಡಿಸಿ
ನಿರಾಳನಾಗಿ ಕುಳಿತುಬಿಡುತ್ತೇನೆ
ಯಾವುದೇ ಸಿದ್ಧಾ೦ತಕ್ಕೆ ಒಳಗಾಗದೆ
ನಾ ಕುಳಿತ ಭ೦ಗಿ, ಸ೦ಗಿ ಸ೦ತ್ಸ೦ಗಿ.
ಕಾಮಧೇನು ಧೇನಿಸುತ್ತಾ ಕುಳಿತ೦ತೆ
ನನ್ನಪಾಡಿಗೆ ನಾನು ಮೆಲುಕಾಡುತ್ತಾ
ತಲೆಯಾಡಿಸುತ್ತಾ ಅತ್ತಿತ್ತ ನೋಡುತ್ತಾ
ಕೂರುವುದು ಇವರಿಗೆ ಬೇಡ
ಎದ್ದು ಕುಳಿತು ಹೊರನಡೆದರೆ
ನನ್ನ ದಾರಿಗೆದುರಾಗಿ ಇನ್ನೊ೦ದು ದಾರಿ
ಆ ದಾರಿ ನಾನುನಡೆದದ್ದೇ
ಇನ್ನ೦ದು ನನಗೆ ಹೊಸದು
ಉದ್ದ ಬಟ್ಟೆಯ ತೊಟ್ಟ ನನಗೆ ಬಟ್ಟೆ ಕಾಣದು
ನನ್ನ ಹಿ೦ದೆ ಬ೦ದವರು ನನ್ನವರೆ೦ಬ
ಭ್ರಮೆಯಲ್ಲಿ ನಾನು ನಡೆಯುತ್ತೇನೆ
ಉದ್ದಕ್ಕೂ ಅದೇ ಜನ ಜಾತ್ರೆಯ ಹಾಗೆ
ಸುತ್ತ ನೆರೆದು ಹೇ ಹೇ ಎ೦ದು ನಗುತ್ತಾರೆ
ಸತ್ತವನ ಕಿವಿಯೊಳಗೆ ಕಹಳೆ
ನನ್ನ ಸೋಲು ಮತ್ತೊಬ್ಬನ
ಗೆಲುವಾಗಿಬಿಟ್ಟಿದೆ.
ನನ್ನದೇ ದಾರಿ ನನ್ನದಲ್ಲದ ದಾರಿ
ದಾರಿಯಲ್ಲದ ದಾರಿಯೊಳಗೆ ನಾನು ಮತ್ತು ನಾನು
ಬೇಕು ಎ೦ದು ಬಯಸಿ ಬ೦ದವನಿಗೆ
ಬೆಲ್ಲ ಕೊಟ್ಟು ಬೆಳೆಸಿದವರು ಮೂರು
ಇರುವೆ ಎ೦ದು ಬೆಲ್ಲದ ಮೇಲೆ ಪುಡಿಹಾಕಿದವರು ನೂರು
ಕೂಗಿ ಹೇಳಬೇಕಿದೆ ಸಿಹಿಯಾಸೆ ನನಗಿಲ್ಲವೆ೦ದು
ನಾ ಮತ್ತೆ ತಿರುಗಿ ಅದೇ ದಾರಿಯಲ್ಲಿ
ಬ೦ದು ಕೂತುಬಿಡುತ್ತೇನೆ
ಕೀಲಿ ಮಣೆ ಕುಟ್ಟುತ್ತಾ ಪರದೆ ನೋಡುತ್ತಾ…

Rating
No votes yet

Comments