ಕುಕ್ಕೆಯಲ್ಲಿ ಕೇರಳ ಕಲರವ

ಕುಕ್ಕೆಯಲ್ಲಿ ಕೇರಳ ಕಲರವ

ನಾಲ್ಕು ಜನ ಸ್ನೇಹಿತರು ರಜೆ ಹಾಕಿ ಕಾರಿನಲ್ಲಿ ಹೊರಟಿದ್ದು ಉಡುಪಿಯ ಕಡೆಗೆ. ಕುಂದಾಪುರದ ಬಳಿ ಇರುವ ಗುಡ್ಡಟ್ಟು ಗಣಪತಿ ದೇವಸ್ಥಾನ ನೋಡುವುದೇ ಒಂದು ಸೊಗಸು. ಬಂಡೆಗಳ ಮಧ್ಯೆ ಸದಾ ಕುತ್ತಿಗೆಯವರೆಗೆ ನೀರಿರುವ ಗಣೇಶ. ದೇವಸ್ಥಾನದಲ್ಲಿ ವಿಶೇಷವಾಗಿ ನಡೆಯುವ ಅಯುರ್ಕೊಡ(ಸಾವಿರ ಕೊಡ) ಪೂಜೆ, ಈ ಎಲ್ಲದರ ಜೊತೆ ಉಡುಪಿ ಸೊಗಸಾದ ವಾತಾವರಣ ಇಲ್ಲೇ ಇದ್ದು ಬೆಂಗಳೂರನ್ನ ಮರೆಯುವ ಸಂಭ್ರಮ ಒಂದು ರಜೆಯಲ್ಲಿ ಇದಕಿಂತ ಖುಷಿ ಬೇಕೇ?? ದೇವಸ್ಥಾನದಲ್ಲಿ ಊಟ ಮುಗಿಸಿ ಕೊಲ್ಲೂರಿನ ಕಡೆಗೆ ಹೊರಟೆವು. ಕೊಲ್ಲೂರಿನ ದೇವಸ್ಥಾನಕ್ಕೆ ಕಾಲಿಡುತಿದಂತೆ ಕಿವಿಗಳಿಗೆ ಬಡಿದಿದ್ದು ಮಲಯಾಳಂ. ಮೈಕ್ನಲ್ಲಿ ಒಮ್ಮೆ ಕನ್ನಡದಲ್ಲಿ ಭಕ್ತಾದಿಗಳಿಗೆ ನಿದರ್ಶನಗಳನ್ನು ನೀಡುತಿದ್ದಾರೆ ಮತ್ತೊಮ್ಮೆ ಮಲೆಯಾಳಂನಲ್ಲಿ ನೀಡಲಾಗುತಿತ್ತು. ಅರ್ರೇರೇ ಯಾಕೆ ಮಲೆಯಾಳಂ ಅಂತ ಕೇಳ್ತೀರಾ ಇದೆ ಪ್ರಶ್ನೆಯನ್ನ ನಾನು ಅಲ್ಲಿ ಕುಳ್ಳಿತಿದ್ದ ಅಸಹಾಯಕ(ಎಂದಿನಂತೆ) ಪೇದೆಯನ್ನು ಕೇಳಿದೆ. ಅವನು ಹಲ್ಲು ಕಿರಿಯುತ್ತಾ ಇಲ್ಲಾ  ಸಾ ಇಲ್ಲೆಲ್ಲಾ ಹಿಂಗೆ. ಕೇರಳ ಬಾರ್ಡರ್ ಹತ್ರ ಇದೆ ನೋಡಿ ಅಲ್ಲಿನ ಜನಾನ್ನು ಬರ್ತಾರೆ ಅದಕ್ಕೆ ಅಂತ ಹೇಳಿದ. ಅಷ್ಟರಲ್ಲಿ ನನ್ನೊಡನೆ ಬಂದಿದ್ದ ನನ್ನ ಸ್ನೇಹಿತ ಎಲ್ಲಿಗೆ ಬಂದ್ರೂ ಜಗಳ ಮಾಡೋದು ಬಿಡಲ್ಲ ನೀನು, ನಿಂಗ್ಯಾಕೆ ಅದೆಲ್ಲ ನೀನೇನು ಮಾಡಿದ್ರೂ ಅಷ್ಟೇ ನಡೀ ಅಂತ ಹೇಳಿ ಸಮಜಾಯಿಷಿ ನೀಡಿ ಕರ್ಕೊಂಡು ಹೋದ. ಮನಸಿನಲ್ಲಿ ಯೋಚನೆ ಮಾಡಿದಾಗ ಸರಿ ಇರ್ಬಹುದೇನೊಪ್ಪ ಪಾಪ ಅವರಿಗೂ ಅನುಕೂಲ ಆಗಬಾರದೇ ಅಂದುಕೊಂಡು ಹೊರಟೆ. ಗಮನಿಸಬೇಕಾದ ಅಂಶ ಅಂದರೆ ಕನ್ನಡದಲ್ಲಿ ನಿದರ್ಶನ ನೀಡುತಿದ್ದಿದು ಭಾಷೆ ಚೆನ್ನಾಗಿ ಬಲ್ಲವಾದರಿಂದ ಅವರಾಡುತಿದ್ದ ಮಾತುಗಳು ಅರ್ಥಗರ್ಭಿತವಾಗಿದವು. ಆದರೂ ಮಾನಸಿಗೆಕೋ ಬೇಜಾರು. ಯಾಕೆ ಮಲಯಾಳಂನಲ್ಲಿ ಮಾತಡ ಬೇಕು?? ಕೇರಳದ ದೇವಸ್ಥಾನದಲ್ಲೂ ಕನ್ನಡ ಮಾತಾಡುವರೇ ?? ಏನೋ ಗೊತಿಲ್ಲಪ್ಪಾ. ಈ ಪ್ರಸಂಗ ನಡೆದು ನಾಲ್ಕಾರು ತಿಂಗಳುಗಳೇ ಕಳೆದಿವೆ. ಇಂತದ್ದೇ ಇನೊಂದು ನಡೆದಿದ್ದು ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ. ಕೊಲ್ಲೂರಿನಲಾದರು ಸ್ಪಷ್ಟವಾಗಿ ಕನ್ನಡ ಮಾತಾಡುತಿದ್ದರು. ಕುಕ್ಕೆಯಲ್ಲಿ ಮನಸಿಗ್ಗೆ ತುಂಬಾ ನೋವಾಯಿತು. ಕಡೇಪಕ್ಷ ಮಲಯಾಳಂನಲ್ಲಿ ಮಾತಾಡಿ ಕನ್ನಡವನ್ನು ಸರಿಯಾಗಿ ಮಾತಡಿದರೆ ಏನು ಅನಿಸುತಿರಲಿಲ್ಲವೇನೋ! ಪರಭಾಷಿಕ ಎಂದು ಅವನ ಮಾತುಗಳಲೇ ತಿಳಿಯಿತು! ಏಕೆ ಹೀಗೆ?? ನಮ್ಮ ನಾಡಲ್ಲೇ ನಾವು ಪರಕೀಯರಾದೇವೆ?? ಭಾಷೆ ಗೊತಿಲ್ಲದವರು ನಮಗೆ ದಾರಿ ತೋರಿಸಬೇಕೆ?? ನಾನೊಬ್ಬ ಖಾಯಂ "ಮುಖ್ಯಮಂತ್ರಿ" ಅಂತ ಹೇಳಿಕೊಳ್ಳುವವ್ರು ಬರೀ ಬೋರ್ಡ್ಗಳನ್ನು ಕನ್ನಡದಲ್ಲಿ ಬರೆಸಿದರೆ ಸಾಲದು. ಕನ್ನಡವನ್ನು ಬೆಳೆಸಿ ಕನ್ನಡವನ್ನು ಉಳಿಸಿ! ಸರಿ ಸ್ವಾಮಿ ನಾವೇನೋ ಉಳಿಸ್ತಿದ್ದೇವೆ. ನಿಮ್ಮ ಕೈಲಾಗುವಂತದನ್ನು ನೀವು ಮಾತುಡೀದೀರೆ?? ಖಂಡಿತ ಇಲ್ಲ! ಅಸಲಿಗೆ ಮುಜರಾಯಿ ಇಲಾಖೆ ಏನು ಮಾಡುತಿದೇ?? ಕುರ್ಚಿಯಲ್ಲಿ ಕೂತವರು ಕೇವಲ ಕಾಸು ಹೇಗೆ ಮಾಡೋದು ಅಂತ ಯೋಚಿಸದೇ ಇಂತಹ ಸಮಸ್ಯೆಗಳ ಕಡೆ ಗಮನ ಹರಿಸಿದರೆ ಒಳ್ಳೇದು! ಪಾಪ ಹೋಗಲಿ ಬಿಡೀ ಅವರಿಗೋ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಪುರ್ಸೋತಿಲ್ಲ! ಇಂಥ ಸನ್ನಿವೇಶದಲ್ಲಿ ಸ್ವಾಭಿಮಾನಿ ಕನ್ನಡಿಗನೇನು ಮಾಡಬೇಕು.


ಅಕಟಕಟಾ ಆ ಬೂಕನಕೆರೆ  ಸಿದ್ದಲಿಂಗೇಶ್ವರನೇ ಕಾಪಡಬೇಕು

Rating
No votes yet

Comments