ಕುಟುಂಬ ಮಿಲನ

ಕುಟುಂಬ ಮಿಲನ

೨೪.೧.೨೦೦೯ ಶನಿವಾರ ಮತ್ತು ೨೫.೧.೨೦೦೯ ಭಾನುವಾರಗಳಂದು ಹಾಸನದ ನನ್ನ ಮಿತ್ರ ಅನಂತನಾರಾಯಣ ಇವರ ಮನೆಯಲ್ಲಿ ಒಂದು ವಿಶಿಷ್ಠ ಕಾರ್ಯಕ್ರಮ.ಹೆಸರು" ಕುಟುಂಬ ಮಿಲನ". ಅವರ ಬಂಧು ಬಾಂಧವರನ್ನೆಲ್ಲಾ ಅಂದು ಹಾಸನದ ಸಮೀಪ ಇರುವ ಕೌಶಿಕ ಗ್ರಾಮದಲ್ಲಿ ಸೇರಿಸುತ್ತಾರೆ.ಇದು ಐದನೆಯ ವರ್ಷದ ಕಾರ್ಯಕ್ರಮ. ಸುಮಾರು ೧೦೦ ರಿಂದ ೧೫೦ ಜನ ಬಂಧುಗಳು ಒಟ್ಟಾಗಿ ಸೇರುತ್ತಾರೆ.ಭಾವನಾತ್ಮಕವಾಗಿ ಒಂದಿಷ್ಟು ಚಿಂತನ-ಮಂಥನ ನಡೆಸುತ್ತಾರೆ. ನಮ್ಮ ಮನೆಗಳಲ್ಲಿ ಉತ್ತಮ ಜೀನಕ್ಕಾಗಿ ಏನೇನು ಪರಿವರ್ತನೆಗಳನ್ನು ಮಾಡಿಕೊಳ್ಳಬಹುದೆಂದು ಮುಕ್ತವಾಗಿ ಚಿಂತನೆ ನಡೆಸುತ್ತಾರೆ. ಯಾರಾದರೂ ಹಿರಿಯರು ಮಾರ್ಗದರ್ಶನ ಮಾಡುತ್ತಾರೆ.ನಶಿಸಿ ಹೋಗುತ್ತಿರುವ ನಮ್ಮ ಕೌಟುಂಬಿಕ ವ್ಯವಸ್ಥೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಪುನಶ್ಚೇತನವನ್ನೇದರೂ ಕೊಡಬಹುದೇನೋ, ಅ ಕಾರ್ಯಕ್ರಮಕ್ಕೆ ನನ್ನನ್ನೂ ಆಮಂತ್ರಿಸಿದ್ದಾರೆ. ಅದರೆ ನಾನು ಅದೇ ದಿನ ಶಿರಡಿಗೆ ಹೋಗುವವನಿದ್ದೇನೆ. ನನಗೆ ಆ ಕಾರ್ಯಕ್ರಮ ತಪ್ಪುತ್ತಿದೆ.ನಮ್ಮ ಸಂಪದ ಮಿತ್ರರಿಗೆ ಈ ಕಾರ್ಯಕ್ರಮವು ಕಿಂಚಿತ್ ಪ್ರೇರಣೆ ನೀಡಬಹುದೇನೋ ಎಂದು ಈ ಒಂದು ಚುಟುಕು ಬರಬ ಮಾಡಿರುವೆ.
ಚಿತ್ರವನ್ನು ದೊಡ್ದದು ಮಾಡಿಕೊಂಡು ಓದಿದರೆ ಅಲ್ಲಿ ಪ್ರೇರಣಾ ದಾಯಕ ಅಂಶಗಳಿವೆ.

Rating
No votes yet

Comments