ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?

ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?

“ ಈ ದಿನದ ನ್ಯೂಸ್-
ವಿದ್ಯಾರ್ಥಿಗಳು ಅಸ್ವಸ್ಥ

ತುಮಕೂರಿನ ನಗರಸಭೆ ನೀರು ಶುದ್ಧೀಕರಣಗೊಳಿಸಲು ತಂದಿಟ್ಟಿದ್ದ ಕ್ಲೋರಿನ್ ಅನಿಲಟ್ಯಾಂಕ್ ಸೋರಿ ಅದನ್ನು ಸೇವಿಸಿದ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಬುಧವಾರ ಬೆಳಗ್ಗೆ(೧೧-೬-೦೮) ಈ ಅನಿಲ ಸೇವಿಸಿ ಸಿದ್ದಗಂಗಾ ಮಹಿಳಾ ಕಾಲೇಜು ಮತ್ತು ಸೈಂಟ್ ಮೇರೀಸ್ ಕಾಲೇಜು ವಿದ್ಯಾರ್ಥಿಗಳು ಉಸಿರಾಟದ ತೊಂದರೆಯಿಂದ ನೆಲಕ್ಕುರುಳಿದರು.”

---ಗಾಳಿಯಲ್ಲಿ ಬೆರೆತ ಸ್ವಲ್ಪ ಕ್ಲೋರಿನ್ ಇಷ್ಟು ಹಾನಿ ಮಾಡಿದರೆ, ನೀರಿನಲ್ಲಿ
ಬೆರೆಸಿದ್ದು (ನೀರನ್ನು ಸಾಂಕ್ರಾಮಿಕ ರೋಗ ತರುವ ಕ್ರಿಮಿಗಳಿಂದ ಶುದ್ಧ ಮಾಡಿರಬಹುದು) ದೇಹಕ್ಕೆ ಒಳ್ಳೆಯದೇ?

ನಳ್ಳಿಯಲ್ಲಿ ನೀರು ಬರುವ ದಿನ ಜನ (ಜಗಳಾಡಿಕೊಂಡು :) ) ಕುಡಿಯುವ ನೀರಿನ ಸಂಗ್ರಹ ಮಾಡುವರು. ಕೆಲವರು ಬೆಳಗೆದ್ದ ಕೂಡಲೇ ೨-೩ ಲೋಟ ನೀರು ಕುಡಿಯುವರು-ಆರೋಗ್ಯಕ್ಕೆ ಒಳ್ಳೆಯದೆಂದು!

ಎಷ್ಟು ನೀರಿಗೆ ಎಷ್ಟು ಪ್ರಮಾಣದಲ್ಲಿ ಕ್ಲೋರಿನ್ ಸೇರಿಸುವರು-ಅದರ ಬಗ್ಗೆ ತಿಳಿಯಲು BWSSB ಯ ವೆಬ್ ಸೈಟಲ್ಲಿ ಹುಡುಕಿದರೆ ಅದರ ಬಗ್ಗೆ ವಿವರವಿಲ್ಲ.

ಕ್ಲೋರಿನ್ ಯುಕ್ತ ನೀರಿನಿಂದಾಗುವ ಹಾನಿಯ ಬಗ್ಗೆ google ನಲ್ಲಿ ‘The negative health effects of chlorine ‘ ಕ್ಲಿಕ್ ಮಾಡಿ ನೋಡಿ.
ಕ್ಲೋರಿನ್ ಬದಲಿ ಉಪಯೋಗಿಸಲು ಬೇರೆ ಆಯ್ಕೆಗಳೂ ಇವೆ.

ಎಲ್ಲಕ್ಕಿಂತಲೂ ಉತ್ತಮ- ಸಂಪದದ ಎಡ/ಬಲದಲ್ಲಿರುವ ವಾಟರ್ ಪೋರ್ಟಲ್ ಕ್ಲಿಕ್ ಮಾಡಿ ಓದಿ- ‘ಮಳೆ ನೀರು ಸಂಗ್ರಹಿಸಿ’

-ಗಣೇಶ.

Rating
No votes yet