ಕುಡಿಯುವ ನೀರಿನ ಖಾಸಗೀಕರಣ -ವಿಶ್ವ ಬ್ಯಾಂಕ್ ತಾಳಕ್ಕೆ ತಕ್ಕ ಹಾಗೆ ಕುಣಿತ .. ;((

Submitted by venkatb83 on Wed, 06/19/2013 - 18:31
ಚಿತ್ರ

 

 

ಬಹು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತಿತ್ತಾದ್ರೂ  ವಯುಕ್ತಿಕವಾಗಿ ಗೊಣಗಿದವರನ್ನು ಬಿಟ್ಟರೆ ಸಾರ್ವತ್ರಿಕವಾಗಿ ಈ ಬಗ್ಗೆ ವ್ಯಾಪಕ ಚರ್ಚೆ ಆಗಲಿಲ್ಲ . :((
ಈಗ್ಗೆ ಕೆಲ ದಿನಗಳ ಹಿಂದೆ ನೀರಿಗಾಗಿ ಅಹಾಕಾರ ಶುರು ಆಗಿ ಭವಿಷ್ಯದ ನೀರು ಬಳಕೆ ಬಗ್ಗೆ ಭಯವಾಗುವ ಹಾಗೆ ಆಗಿದ್ದು ಗೊತ್ತಲ್ಲ.. 
ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿ ಸರ್ವನಾಶಕ್ಕೆ ದಾರಿ ಮಾಡಿಕೊಟ್ಟ  ನಮ್ಮನಾಳುವ ಸರಕಾರಗಳು ಈಗ ಈ ಜೀವ ಜಲವನ್ನು -ಜಲ ಜಾಲಗಳನ್ನು ಖಾಸಗೀಕರಣ ಮಾಡಿ  ಸದ್ಭವಿಶ್ಯದಲ್ಲಿ  ಸಾಮಾನ್ಯ ಜನತೆಯನ್ನು ಖಾಸಗಿಯವರು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ .. 
 
ಮೊದಲ ಹಂತದಲ್ಲಿ  ಹುಬ್ಬಳ್ಳಿ ಧಾರವಾಡ - ಗುಲ್ಬರ್ಗ -ಬೆಳಗಾವಿ ನಗರಪಾಲಿಕೆ ವ್ಯಾಪ್ತಿಯ ಪ್ರದೇಶಗಳು  ಈ ಯೋಜನೆಗೆ ಒಳ ಪಟ್ಟಿವೆ . 
ಈಗ  ೨ ನೆ ಹಂತದಲ್ಲಿ  ಇನ್ನಸ್ಟು ನಗರ ಪಾಲಿಕೆಗಳು ಅವುಗಳಿಗೆ ಸೇರಿದ ನಗರ ಪಟ್ಟಣಗಳನ್ನು ಸೇರಿಸಿ ಯೋಜನೆ ಜಾರಿಗೊಳಿಸಲಾಗುತ್ತಿದೆ .. 
ಈ ಯೋಜನೆಯ ಬಗ್ಗೆ ಪತ್ರಿಕೆಗಳಲ್ಲಿ  ಸರಕಾರ ಅಥವಾ ಪಾಲಿಕೆಯವರು  ಜಾಹೀರಾತು -ಸೂಚನೆ ಕೊಟ್ಟ ಹಾಗೆ ಇಲ್ಲ . 
 
ಖಾಸಗೀಕರಣಕ್ಕೆ ಏಕ ಸ್ವಾಮ್ಯಕ್ಕೆ  ಮೂಲ ಭೂತ  ಅವಶ್ಯಕತೆಗಳಾದ  ನೀರು- ವಸತಿ -ಉದ್ಯೋಗ -ಇತ್ಯಾದಿ ಒಳ ಪಟ್ಟರೆ  ಭವಿಷ್ಯ ಹೇಗಿರುತ್ತೆ ಎಂದು ಬೇರೆ  ಹೇಳಬೇಕಿಲ್ಲ ..!!
 
ಈ ಬಗ್ಗೆ ಇಂದಿನ ( ೧೯- ೦೬- ೨೦೧೩ - ಬುಧವಾರ) ವಿಜಯವಾಣಿಯಲ್ಲಿ  ಬಂದ  ವರಧಿ ನೋಡಿ .. 
 
 
ಚಿತ್ರ - ಮಾಹಿತಿ ಸೌಜನ್ಯ : ವಿಜಯವಾಣಿ
 
 
 
 
 
----------------------------------------------------------------------------------------------------------------------------------------------------------------
 
ಈ ಹಿಂದೆ  ಪತ್ರಿಕೆಗಳಲ್ಲಿ  ಬಂದ  ವರಧಿ  ನೋಡಿ 
 
 
 
 
 

 

Rating
No votes yet

Comments

ಗಣೇಶ

Mon, 06/24/2013 - 00:08

ಬಹಳ ದಿನಗಳಿಂದ ನಮ್ಮ ಸಪ್ತಗಿರಿವಾಸಿಯ ಲೇಖನವಿಲ್ಲ ಎಂದು ಆಲೋಚಿಸುವಾಗಲೇ "ಸದ್ದಿಲ್ಲದ ಸುದ್ದಿ"ಯೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಪ್ರೈವೆಟ್‌ನವರು ಬಂದು "ಮೊಬೈಲ್ ರಂಗದಲ್ಲಿ ಕ್ರಾಂತಿ"ಯೇ ಆಯ್ತು, ಕುಡಿಯುವ ನೀರಿನ ವಿಷಯದಲ್ಲೂ ಕ್ರಾಂತಿಯಾಗಲಿದೆ ಎಂದು ಈ ಬುದ್ಧಿವಂತರು ತಿಳಿದಿದ್ದಾರೆ ಕಾಣುತ್ತದೆ. ನೀರಿನ ವಿಷಯದಲ್ಲಿ ಒಬ್ಬಳೇ ’ಜಯಲಲಿತಾ’ ನಮ್ಮನ್ನು ಹೇಗೆ ಆಡಿಸಿದಳು! ರಕ್ತ ಕೊಟ್ಟೇವು ನೀರು ಬಿಡೆವು ಎಂದವರೆಲ್ಲಾ ಎಲ್ಲಿ ಹೋದರು? ಪುಣ್ಯಕ್ಕೆ ಮಳೆ ಬಂದು ಬದುಕಿಕೊಂಡೆವು. ಇನ್ನು ನೀರಿನ ವಿಷಯಕ್ಕೆ ಈ ಕಾರ್ಪೊರೇಟ್ ಮಂದಿ ಕಾಲಿಟ್ಟರೆ ಕೆರೆ ನದಿ ಎಲ್ಲದಕ್ಕೂ ಬೇಲಿ ಹಾಕಲಿದ್ದಾರೆ. ಹೇಗೆ ಬಡ ರೈತರ ಗದ್ದೆ ತೋಟಗಳನ್ನು ರೋಡ್, ಗಣಿ, ಸೈಟು ಮಾಫಿಯಾ ವಶಪಡಿಸಿಕೊಳ್ಳುತ್ತಿವೆಯೋ ಹಾಗೇ ಮುಂದೆ ನಿಮ್ಮ ನಿಮ್ಮ ಮನೆ ಬಾವಿ ಬೋರ್ವೆಲ್‌ಗಳನ್ನೂ ವಶಪಡಿಸಿ ಬೀಗ ಹಾಕಲಿದ್ದಾರೆ. ಒಂದೋ ವಿರೋಧಿಸಬೇಕು, ಇಲ್ಲಾ ಚಾತಕ ಪಕ್ಷಿಯಂತೆ ಮಳೆನೀರಿಗೆ ಆಕಾಶಕ್ಕೆ ಬಾಯಿತೆರೆದು ಕುಳಿತುಕೊಳ್ಳಬೇಕು.

venkatb83

Tue, 06/25/2013 - 20:00

ನಾವು - ಜನಗಳ -ಪ್ರಜೆಗಳ ಈ ತರಹದ ವಿಷಯಕ್ಕೆ ಮೌನ ,ಸ್ವಾರ್ಥಕ್ಕೆ ನಾ ಮುಂದು ತಾ ಮುಂದು ಎನ್ನೋ ಜಾಯಮಾನ ಜಾಸ್ತಿ ಆಯ್ತು ಅನಿಸುತ್ತಿದೆ ಗಣೇಶ್ ಅಣ್ಣ .
ಊಟ ಇಲ್ಲದೆ ಒಂತಿಂಗಳು ಇರಬಹುದು -ನೀರು ಇಲ್ಲದೆ ಒಂದು ವಾರ ಇರಲಾಗದು -ಎಂದು ಅರಿವಿದ್ದು - ಈ ಯೋಜನೆ ನಮ್ಮ ಕಣ್ಣ ಮುಂದೆಯೇ ಜಾರಿ ಆಗ್ತಿದ್ದರೂ ಮೌನವಾಗಿದ್ದರೆ ನಾಳೆ ನಮ್ ಗತಿ .... ಅಸ್ಟೇ

ಖಾಸಗಿಯವರ ಹಸ್ತಕ್ಷೇಪ - ಅವರಿಗೆ ಪ್ರವೇಶ ಎಲ್ಲೆಡೆ ಸಲ್ಲ ..

ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ
\।