ಕುಮಾರರಾಮ ಮತ್ತು ಯದ್ವಾ-ತದ್ವಾ

ಕುಮಾರರಾಮ ಮತ್ತು ಯದ್ವಾ-ತದ್ವಾ

ಕುಮಾರರಾಮನ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ . ಮಲತಾಯಿಯ ಮೋಹಕ್ಕೆ ಗುರಿಯಾದವ ಒಬ್ಬ ಐತಿಹಾಸಿಕ ವ್ಯಕ್ತಿಯ ಕತೆ , ಇತ್ತೀಚೆಗೆ ಚಲನಚಿತ್ರವಾದದ್ದು ಇಷ್ಟೇ ಗೊತ್ತಿತ್ತು . ನನಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ನಾಗರಮರಿ ಹೆಸರಿನ ಪುಸ್ತಕ ಸಿಕ್ಕಿತು. ಅಲ್ಲಿ ಕುಮಾರರಾಮ ಮತ್ತು ಕನ್ನಡನಾಡಿನ ಬೇರೆ ಮೂವರು ವೀರರ ಕತೆ ಇದೆ. ಯವನರ ಕಾಟದಿಂದ ಕನ್ನಡಜನರನ್ನು ಕಾಪಾಡಲು ಈಶ್ವರಪಾರ್ವತಿಯರು ಷಣ್ಮುಖನನ್ನು ಕುಮಾರರಾಮನಾಗಿ ಅವತಾರವೆತ್ತಲು ಕಳಿಸುವರಂತೆ. 'ಮಲತಾಯಿಯು ಅವನನ್ನು ಕೆಟ್ಟಕಣ್ಣಿನಿಂದ ನೋಡಿದಳು. ಆದರೆ ಅವನು ಆಕೆಯ ಬಲೆಗೆ ಸಿಲುಕಲಿಲ್ಲ' ಎಂದು ಹೇಳಿ ಕತೆಯನ್ನು ಮುಂದುವರೆಸಿದ್ದಾರೆ. ಅವನ ಎರಡು ಪುಟದಕತೆಗೆ ಹಿಂದೆ ೧೦ ಪುಟ ಮುಂದೆ ೧೦ ಪುಟ ತಿಂದಿದ್ದಾರೆ! ಎರಡನೆಯ ಕತೆಯೂ ಅದೇ ತರಹ ಇದೆ! ಇನ್ನೆರಡನ್ನು ನಾನು ಓದಲಿಕ್ಕೆ ಹೋಗಲೇ ಇಲ್ಲ!! ಇದರಿಂದಾಗಿ 'ಪುಸ್ತಕ ಬರೆಯುವದು ಹೇಗೆ ? ( ಪುಟಗಳನ್ನು ತುಂಬಿಸುವದು ಹೇಗೆ?) ಎಂಬಂತಹ - ನಾ.ಕಸ್ತೂರಿಯವರ ಯದ್ವಾ-ತದ್ವಾ ದ ಹಾಸ್ಯಲೇಖನ ನೆನಪಾಗುತ್ತದೆ! ಆ ಪುಸ್ತಕ ಈಗಾಗಲೇ ಓದಿರದಿದ್ದರೆ ಓದಿ - ನಕ್ಕೂ ನಕ್ಕೂ ಸುಸ್ತಾಗುತ್ತದೆ - ಕತೆ ಬರೆಯುವದು ಹೇಗೆ ? ಕವನ ಬರೆಯುವದು ಹೇಗೆ ? ಎಂಬ ಬಗ್ಗೆ ಬಹಳ ಮುಖ್ಯವಾದ ಮಾರ್ಗದರ್ಶನ ಅಲ್ಲಿದೆ. ಅದಕ್ಕೇ ಸದರಿ ನಾಗರಮರಿ ಪುಸ್ತಕದ ಬದಲು ಯದ್ವಾ-ತದ್ವಾ ದ ಲಿಂಕ್ ಕೊಡುತ್ತಿದ್ದೇನೆ . ಓದಿ ಎಂಜೊಯ್ ಮಾಡಿ. ಇಲ್ಲಿ ಕ್ಲಿಕ್ಕಿಸಿ

Rating
No votes yet