ಕುಮಾರಸ್ವಾಮಿ ರಾಮನಗರವನ್ನು ಮರೆತರೇ?

ಕುಮಾರಸ್ವಾಮಿ ರಾಮನಗರವನ್ನು ಮರೆತರೇ?

ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ (ಇದೀಗ ಮಾಜಿ) ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಅಯ್ಕಯಾಗಿದ್ದಾರೆ. ರಾಜ್ಯ ರಾಜಕೀಯದಿಂದ , ರಾಷ್ಟ್ರ ರಾಜಕೀಯಕ್ಕೆ ಪ್ರೊಮೋಷನ್ ಪಡೆದ ಕುಮಾರಸ್ವಮಿ ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ರಾಮನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಕೊಂಚ ಬೇಸರ ಎನಿಸಿದರು. ಕುಮಾರಣ್ಣ ನಮ್ಮನ್ನು ಮರೆಯೋದಿಲ್ಲ ಅಂತ ಅಪಾರ ವಿಶ್ವಾಸವಿರಿಸಿಕೊಂಡಿದ್ದಾರೆ.
ಆದರೆ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರಾಮನಗರಕ್ಕೆ ಭೇಟಿ ನೀಡಲಿಲ್ಲ. ತಮ್ಮನ್ನೇ ನಂಬಿರುವ ಜನತೆಯಲ್ಲಿ ವಿಶ್ವಾಸ ಮೂಡಿಸಲಿಲ್ಲ. ಕೊನೆಗೆ ಲೋಕಸಭೆಗೆ ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆಯನ್ನು ಅರ್ಪಿಸಲಿಲ್ಲ!
ತಮ್ಮನ್ನು ಭೇಟಿ ಮಾಡಿ ಮಾತನಾಡುತ್ತಾರೆ ಎಂದು ಕಾತುರದಿಂದ ಕಾದಿದ್ದ ಸ್ಥಳೀಯ ಜನತೆಗೆ ತೀವ್ರ ನಿರಾಸೆ ಉಂಟಾಗಿದೆ. ಲೋಕಸಭೆಗೆ ಆಯ್ಕೆಯಾದ ನಂತರ ಕ್ಷೇತ್ರಕ್ಕೆ ಭೇಟಿ ನೀಡಿ ಕೃತಜ್ಞತೆ ಅರ್ಪಿಸುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರಾಮನಗರಕ್ಕೆ ಬಂದು ಅಧಿಕಾರಿಗಳನ್ನು ಭೇಟಿ ಮಾಡವುದಾಗಿ ಹೇಳಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಅಯೋಜಿಸಲಾಗಿತ್ತು. ಅಧಿಕಾರಿಗಳು ಸಹ ಗಂಟಗಟ್ಟಲೆ ಶಾಸಕರಿಗಾಗಿ ಕಾದು ಕುಳಿತು ಬಸವಳಿದಿದ್ದರು. ಆದರೆ ಮಾಜಿ ಮುಖ್ಯ ಮಂತ್ರಿಗಳು ತಮ್ಮ ಭೇಟಿಯನ್ನು ಹಠಾತ್ ರದ್ದು ಮಾಡಿದ್ದು ಸೋಜಿಗ ಎನಿಸಿತು.
ರಾಮನಗರಕ್ಕೆ ಕುಮಾರಣ್ಣ ಬರ್ತಾರೆ ಅಂತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ರಸ್ತೆಗೆ ತಳಿರು ತೋರಣ, ಭಾರಿ ಗಾತ್ರದ ಕಟೌಟ್ ಗಳನ್ನು ಕಟ್ಟಿದ್ದರು. ರಾಮನಗರದ ಭೇಟಿ ಸಮಯದಲ್ಲೇ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಲ್ಲಿನ ನಾಗರೀಕರಲ್ಲಿ ಅಸಮಧಾನ ತಂದಿದೆ. ಕುಮಾರಸ್ವಾಮಿ ರಾಮನಗರವನ್ನು ಇಷ್ಟು ಬೇಗ ಮರೆತರೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ನಂ ಕುಮಾರಣ್ನಂಗೆ ರಾಮನಗರ ಅಂದ್ರೆ ಇಷ್ಟು ತಾತ್ಸಾರಾನಾ? ಎಂದು ಪ್ರಶ್ನಿಸಿದ್ದಾರೆ.
ತಮಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರ ರಾಮನಗರ ಎಂಬ ಸದಭಿಪ್ರಾಯವಿಟ್ಟಿರುವ ಕುಮಾರಸ್ವಾಮಿ ಎಷ್ಟೇ ಕಾರ್ಯಾದೊತ್ತಡ ಇದ್ದರು ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರಾಮನಗರಕ್ಕೆ ಭೇಟಿ ನೀಡ ಬೇಕಿತ್ತು. ಲೋಕಸಭಾ ಚುನಾವಣೆಯ ವೇಳೆಯಲ್ಲಿ ಕೇವಲ ಒಂದು ಬಾರಿ ಭೇಟಿ ನೀಡಿ ಮತಯಾಚಿಸಿದ್ದರೂ ಸಹ, ಅವರ ಬಗ್ಗೆ ಅಪಾರ ವಿಶ್ವಾಸವನ್ನಿರಿಸಿ ರಾಮನಗರದ ಮತದಾರರು ಸುಮಾರು ೫೦ ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಮತದಾರರು ಅವರ ಬಗ್ಗೆ ಇಟ್ಟಿರುವ ವಿಶ್ವಾಸಕ್ಕಾದರೂ ಸೋತು ಒಮ್ಮೇ ಭೇಟಿ ನೀಡಿದ್ದರೆ ಸಾರ್ವಜನಿಕರಲ್ಲಿ ಅಸಮಧಾನದ ಹೊಗೆಯಾಡುತ್ತಿರಲಿಲ್ಲ ಅಲ್ಲವೇ?

Rating
No votes yet