ಕುರಿಗಳು

ಕುರಿಗಳು

ಹಿಂದೆ..........
ಹಿಂದೆ ಗುರುವಿದ್ದ , ಮುಂದೆ ಗುರಿಯಿತ್ತು
ಸಾಗುತ್ತಿತ್ತು ವಿದ್ಯಾರ್ಥಿಗಳ ದಂಡು;

ಇಂದು..........
 ಹಿಂದೆ  ಗುರುವಿಲ್ಲ, ಮುಂದೆ ಗುರಿಯಿಲ್ಲ
ಸಾಗುತ್ತಿದೆ ರಣಹೇಡಿಗಳ ಹಿಂಡು.
..................... ಕುವೆಂಪು


ಕುರಿಗಳು ಸಾರ್ ಕುರಿಗಳು
ಸಾಗಿದ್ದೇ ಗುರಿಗಳು
ಇವನ ಬಾಲವ ಅವನು ಮೂಸುತ
ಅವನ ಬಾಲವ ಇವನು ಮೂಸುತ
ಮೂಸಿ ತಲೆ ತಗ್ಗಿಸಿ ಅಂಡಲೆಯುವ
                         ನಾವು ನೀವು
ಕುರಿಗಳು ಸಾರ್ ಕುರಿಗಳು
                   ಸಾಗಿದ್ದೇ ಗುರಿಗಳು!

.........................ನಿಸಾರ್ ಅಹ್ಮದ್  

ಇಂತಹ ಅನೇಕ ಹಾಡುಗಳನ್ನು , ವಚನಗಳನ್ನ , ವೀರಗಾಸೆಯ ಪದಗಳನ್ನು ( ಒಡಪು) ನಮ್ಮ ಮಾಮನ ಬಾಯಲ್ಲಿ ಕೇಳುವುದೇ ಒಂದು ಖುಷಿ.  ಉರಿನಲ್ಲಿದ್ದಾಗ ಹೊಲಕ್ಕೆ ಅವನ ಜೊತೆ ಹೋಗುವಾಗ ಹೀಗೆ ಪದಗಳನ್ನು ವಚನಗಳನ್ನು ಅವನ ಬಾಯಿಂದ ಕೇಳ್ತಾ ಕೇಳ್ತಾ ನೆ ನನ್ನ ವಚನಗಳ ಆಸಕ್ತಿ ಬಹುಪಾಲು ಬೆಳೆಯಿತು. ಅದೆಷ್ಟು ಸ್ವಂತ ಕವಿತೆಗಳು ಎಲ್ಲೂ ಬರೆಯದೇ ಮರೆತು ಹೋಗಿವೆಯೋ ಗೊತ್ತಿಲ್ಲ. ಆಗಂತೂ ನನಗೆ ಅವನ ಸ್ವಂತ ಕವನಗಳು ಯಾವ್ದು , ಬೇರೆಯವರದ್ದು ಯಾವ್ದು ಅಂತ  ಗೊತ್ತಾಗ್ತಾ ಇರಲಿಲ್ಲ. ಈಗ ಅವನ ಜೊತೆ ಹೆಚ್ಚು ಸಮಯ ಕಳೆಯಲು ಆಗ್ತ ಇಲ್ಲ. ಆದರೂ ಇಲ್ಲಿಗೆ ಅವನೇ ಬಂದಾಗ ಅತ್ವ ನಾನೇ ಊರಿಗೆ ಹೋದಾಗ ನಮ್ಮ ಮಾಮನ ಹಾಡುಗಳನ್ನು ಎಂಜಾಯ್ ಮಾಡುವುದುಂಟು.  

ಮೇಲಿನದು ಒಮ್ಮೆ ಹೀಗೆ ಬೆಂಗಳೂರಿಗೆ ಬಂದಾಗ ರೆಕಾರ್ಡ್ ಮಾಡಿಟ್ಟಿದ್ದೆ.

 

 

 

Rating
No votes yet