ಕುರುಡು ಕಾಂಚಾಣ-2

ಕುರುಡು ಕಾಂಚಾಣ-2

ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ ಕತ್ತೆಗಳ ಬೆಲೆ ಇಪ್ಪತ್ತು ರುಪಾಯಿಗೆ ಏರಿಸಿದ.ಜನರು ಪಕ್ಕದೂರುಗಳಿಂದಲೂ ಕತ್ತೆಗಳನ್ನು ತಂದು ಬುದ್ಧಿವಂತನಿಗೆ ನೀಡಿದರು.ಹೀಗೆ ಮತ್ತಷ್ಟು ಸಮಯ ನಡೆಯಿತು.ಪಕ್ಕದ ಊರುಗಳಲ್ಲೂ ಕತ್ತೆಗಳ ಅಭಾವ ಉಂಟಾಯಿತು. ಈ ನಡುವೆ ಬುದ್ಧಿವಂತನಿಗೋರ್ವ ಸಹಾಯಕನೂ ಬಂದ. ಮುಂದೆ ಕತ್ತೆಗಳಿಗೆ ಮೂವತ್ತೈದು ರುಪಾಯಿ ಕೊಡಲಿದ್ದೇನೆ ಎಂದು ಬುದ್ಧಿವಂತ ಪ್ರಕಟಿಸಿದ. ಆಗಲೇ ಬುದ್ಧಿವಂತನಿಗೆ ಎಲ್ಲೋ ಹೋಗಬೇಕಾಗಿ ಬಂತು.ಆತ ಹೋದೊಡನೆ ಸಹಾಯಕ, ಬುದ್ಧಿವಂತ ವಾಪಸ್ಸು ಬಂದೊಡನೆ ಮೂವತ್ತೈದು ರುಪಾಯಿ ಬೆಲೆಗೆ ಕತ್ತೆ ಖರೀದಿಸುವುದನ್ನು ಮುಂದುವರಿಸಲಿದ್ದಾನೆ. ತಾನು ಇಲ್ಲಿರುವ ಕತ್ತೆಗಳನ್ನು ಮೂವತ್ತು ರುಪಾಯಿಗೆ ಮಾರಲಿದ್ದೇನೆ ಎನ್ನತೊಡಗಿದ.ಜನ ಐದು ರುಪಾಯಿಯನ್ನು ಕುಳಿತಲ್ಲೇ ಪಡೆಯಬಹುದಲ್ಲಾ ಎನ್ನುವ ಲೆಕ್ಕಾಚಾರದಿಂದ ಮೂವತ್ತು ರುಪಾಯಿಗೆ ಕತ್ತೆ ವಾಪಸ್ಸು ಖರೀದಿಸ ತೊಡಗಿದರು.ಸಹಾಯಕ ತನ್ನಲ್ಲಿದ್ದ ಕತ್ತೆಗಳನ್ನೆಲ್ಲಾ ಮಾರಿ ಮುಗಿಸಿ,ಎಲ್ಲೋ ಮಾಯವಾದ.ಜನರು ಬುದ್ಧಿವಂತ ಈಗ ಬರುತ್ತಾನೆ,ಮತ್ತೆ ಬರುತ್ತಾನೆ ಎಂದು ಅವನ ಹಾದಿ ಕಾಯತೊಡಗಿದರು! ಬುದ್ಧಿವಂತ ಆ ಊರಿನಲ್ಲಿ ಮತ್ತೆ ಕಾಣಿಸಿಕೊಳ್ಳಲಿಲ್ಲ. (ಮುಂದುವರಿಯಲಿದೆ)

ಕುರುಡು ಕಾಂಚಾಣ

Rating
No votes yet