ಕುಹೂ, ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು
ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸರ, ಪಕ್ಷಿಪ್ರಿಯರಾದ ಓದುಗರು ಖಂಡಿತ ಇದನ್ನು ಓದಿ ಕುಹೂ ಕುಹೂ ಎನ್ನದಿರಲಾರರು. ಬ್ರಿಟನ್ ದೇಶ ಬಿಟ್ಟ ಐದು ಕೋಗಿಲೆಗಳು – ಕ್ಲೆಮೆಂಟ್, ಮಾರ್ಟಿನ್, ಲಿಸ್ಟರ್, ಕ್ಯಾಸ್ಪರ್ ಮತ್ತು ಕ್ರಿಸ್ ಇವರ ಹೆಸರುಗಳು – ದೂರದ ಕಾಂಗೋ ದೇಶಕ್ಕೆ ತಲುಪಿದ್ದನ್ನು extraordinary rendezvous ಎಂದು ಬಣ್ಣಿಸಿ ಪ್ರಕಟವಾದ ಲೇಖನ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಕಾಣಲು ಸಿಕ್ಕಿತು. ಕಿರುರೂಪದ ಉಪಗ್ರಹ ಪ್ರಸಾರ ಯಂತ್ರ ( miniature satellite transmitter ) ಗಳನ್ನು ಕಾಲಿಗೆ ಕಟ್ಟಿಸಿಕೊಂಡು ಹಾರಿದ ಈ ಕೋಗಿಲೆಗಳ ಪ್ರಯಾಣ ನಿಜಕ್ಕೂ ವಿಸ್ಮಯಕಾರಿಯೇ. ಪ್ರಕೃತಿ ಮತ್ತು ಅದರ ಹೆಮ್ಮೆಯ ಮಕ್ಕಳು (ಮನುಷ್ಯರನ್ನು ಬಿಟ್ಟು) ಒಂದು ವಿಸ್ಮಯವೇ ಸರಿ ಅಲ್ಲವೇ? ವಸಂತ ಋತುವಿನ ಆಗಮನವನ್ನು ನಮಗೆ ಸಂಭ್ರಮದಿಂದ ಘೋಷಿಸುವ ಈ ಕೋಗಿಲೆಗಳ ಸುದೀರ್ಘ ಪಯಣ ಮತ್ತು ವಲಸೆ ದಿನೇ ದಿನೇ ಸಂಖ್ಯೆಯಲ್ಲಿ ಕ್ಷೀಣಿಸುತ್ತಿರುವ ಪಕ್ಷಿ ಸಮುದಾಯದ ಕುರಿತು ಮಾಹಿತಿ ನೀಡುತ್ತದಂತೆ.
http://www.independent.co.uk/environment/nature/extraordinary-rendezvous-of-the-migrating-cuckoos-6281525.html
ಇತ್ತೀಚೆಗೆ ಅಪೂರ್ವ ಜಾತಿಯ ಮೀನಿನ ಪತ್ತೆ ಹಚ್ಚಿದ್ದಾರೆ ವಿಜ್ಞಾನಿಗಳು. ಈ ಮೀನಿಗೆ ಮೆದುಳೂ ಇಲ್ಲ, ಮುಖವೂ ಇಲ್ಲ. ಈ brainless and faceless ಮೀನಿನ ಜೊತೆ ಇನ್ನೂ ೧೫ ಜಾತಿಗಳ ಮೀನುಗಳನ್ನೂ ಕಂಡು ಹಿಡಿದ್ದಾರೆ. ಸಮುದ್ರದಲ್ಲಿ ಸಿಕ್ಕ ಮೆದುಳೂ ಇಲ್ಲದ, ಮುಖವೂ ಇಲ್ಲದ ಜಾತಿಯ ಜೀವಿ ಭೂಮಿಯ ಮೇಲೂ ನಡೆದಾಡುತ್ತಿವೆ ಅಲ್ಲವೇ? ರಾಜಕಾರಣಿಗಳಾಗಿ. ಈ ಪತ್ತೆ ಹಚ್ಚುವಿಕೆ ಕುರಿತ ಲಿಂಕು ಕೆಳಗಿದೆ ನೋಡಿ.http://www.independent.co.uk/environment/nature/rare-species-discovered-under-water-6282617.html
ಚಿತ್ರ ಕೃಪೆ: ಇಂಡಿಪೆಂಡೆಂಟ್
Comments
ಉ: ಕುಹೂ, ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು
In reply to ಉ: ಕುಹೂ, ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು by santhosh_87
ಉ: ಕುಹೂ, ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು
ಉ: ಕುಹೂ, ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು