ಕೂಡಿ ಹಾಕುವ ಬುದ್ಧಿ

ಕೂಡಿ ಹಾಕುವ ಬುದ್ಧಿ

ಸಾಮಾನ್ಯವಾಗಿ ಧಾರ್ಮಿಕರು ಆಧ್ಯಾತ್ಮಿಕ ಜೀವಿಗಳು ಸಂಗ್ರಹ ಬುದ್ಧಿ ಅಂದರೆ ಕೂಡಿಹಾಕುವ  ಬುದ್ಧಿಯು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಅವರು ಹೇಳುತ್ತಿರುವುದು ಆಸ್ತಿಪಾಸ್ತಿ ಹಣ ಮುಂತಾದವುಗಳ ಬಗ್ಗೆ ಇರಬೇಕು. 

ಆದರೆ ಒಳ್ಳೆಯ ಸಂಗತಿಗಳನ್ನು, ವಿಚಾರಗಳನ್ನು, ನೆನಪುಗಳನ್ನು, ಹೇಳಿಕೆಗಳನ್ನು, ಹಾಡುಗಳನ್ನು, ಕಥೆಗಳನ್ನು, ಮತ್ತೆ ಅಂತಹ ಇನ್ನಾವುದೇ ಸಂಗತಿಗಳನ್ನು ಸಂಗ್ರಹಿಸುವುದು ಒಳ್ಳೆಯದೇನೋ. ಅಂತಹ ಸಂಗ್ರಹವನ್ನು ನಮ್ಮ ಸಂತೋಷಕ್ಕೂ, ಬೇರೆಯವರ ಸಂತೋಷಕ್ಕೂ , ಬಳಸಬಹುದು. 
ಒಳ್ಳೆಯ ವಿಚಾರಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು 
ನಮ್ಮ ಬುದ್ಧಿಯನ್ನು ಸಂಸ್ಕರಿಸಬಹುದು. ನಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು.  ಬೇರೆಯವರ ಜೀವನವನ್ನು ಉತ್ತಮಪಡಿಸಬಹುದು. ಅಲ್ಲವೆ?

Rating
Average: 4 (2 votes)