ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
ಕೂಸು ಮಾರಾಟಕ್ಕಿದೆ ,
ಕೊಳ್ಳುವಿರೇನು ?
ಚೆಂದದ ಕೂಸು , ಅಂದದ ಕೂಸು
ನೀವು ಮೆಚ್ಚುವ ಕೂಸು ,
ನಿಮ್ಮನ್ನು ಮೆಚ್ಚಿಸುವ ಕೂಸು
ಕೂಸು ಮಾರಾಟಕ್ಕಿದೆ ,
ಕೊಳ್ಳುವಿರೇನು ?
ನನ್ನ ಪ್ರೀತಿಯ ಅಂದರದ ಕೂಸು
ನನ್ನ ಕನಸನ್ನು ಹಂಚಿಕೊಂಡ ಕೂಸು
ಅವರಪ್ಪನನ್ನು ಪದೇ ಪದೇ ನೆನಪಿಸುವ ಕೂಸು
ಕೂಸು ಮಾರಾಟಕ್ಕಿದೆ
ಕೊಳ್ಳುವಿರೇನು
ತಾ ಮಾರಾಟವಾಗಿ , ತಮ್ಮ ತಂಗಿಯರ
ಸುಖ ಬಯಸುವ ಕೂಸು
ಒಂದೊಪ್ಪತ್ತು ಕೂಳಿಗೆ ದಾರಿಯದ ಕೂಸು
ಕೊಂಡ ಮನೆಯ ಆಳಾಗಿ ದುಡಿಯುವ ಕೂಸು
ಕೂಸು ಮಾರಾಟಕ್ಕಿದೆ
ಕೊಳ್ಳುವಿರೇನು
ದುಡ್ಡು ದುಗ್ಗಾಣಿ ಹೆಚ್ಚೇನು ಬೇಡ
ಸಂಸಾರದ ವಾರೋಪ್ಪತ್ತು ಕೂಳು ನೀಗಿಸಿರಲ್ಲ
ಕೊಳ್ಳಲಾಗದಿದ್ದರು ಅಡ್ಡಿಯಿಲ್ಲ
ಅಡಮಾಡಿ ಒಂದಷ್ಟು ಕಾಸು ನೀಡಿರಣ್ಣ
ಈ ವರ್ಷದ ಬರವೊಂದು ಮುಗಿಯಲಿ
ಮಳೆಯೊಂದು ಬೀಳಲಿ !
ಮುಚ್ಚಟ್ಟೆ ಕೂಸ ಮನೆಗೆ ಹೊಯ್ಯುವೆನಯ್ಯ ?
ಕೂಸು ಮಾರಾಟಕ್ಕಿದೆ
ಕೊಳ್ಳುವಿರೇನು ?
Rating
Comments
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
In reply to ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? by partha1059
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
In reply to ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? by partha1059
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
In reply to ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? by venkatb83
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
In reply to ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? by harishsharma.k
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
In reply to ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? by makara
ಉ: ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?