ಕೃಷ್ಣನ ಕೊಳಲಿನ ಕರೆ ...
ಚಿತ್ರ
ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು
ಬೆರಳನಾಡಿಸಿ ರಂಧ್ರಗಳ ಮಾಧವ
ತೆರೆಯುತ್ತ ಮುಚ್ಚುತ್ತ ಮರಮರಳಿ ಸವಿಯಾಗಿ
ಸ್ವರಗಳಲಿ ಹಾಡಿಹನು ಬನದಂಚಲಿ
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪):
ಅಧರೇ ವಿನಿವೇಶ್ಯ ವಂಶನಾಲಂ
ವಿವರಾಣ್ಯಸ್ಯ ಸಲೀಲಮಂಗುಲೀಭಿಃ
ಮುಹುರಂತರಯನ್ಮುಹುರ್ವಿವೃಣ್ವನ್
ಮಧುರಂ ಗಾಯತಿ ಮಾಧವೋ ವನಾಂತೇ
-ಹಂಸಾನಂದಿ
ಕೊ: ಪದ್ಯವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ.
ಚಿತ್ರಕೃಪೆ: ಇಲ್ಲಿ ಬಳಸಿದ ಚಿತ್ರ ಕಲಾವಿದ ಕೇಶವ್ ವೆಂಕಟರಾಘವನ್ ಅವರದ್ದು . ಅವರ ಬ್ಲಾಗ್ ಕೊಂಡಿ ಇಲ್ಲಿದೆ. ಇಂದು ಇವರು ಹಾಕಿದ್ದ ಚಿತ್ರವನ್ನು ನೋಡಿ ಅದರ ಅಂದಕ್ಕೆ ತಕ್ಕದೊಂದು ಪದ್ಯವನ್ನು ಹುಡುಕಿ ಮಾಡಿದ ಅನುವಾದವಿದು
Rating
Comments
ಉ: ಕೃಷ್ಣನ ಕೊಳಲಿನ ಕರೆ ...
ಕೊಳಲ ಸುನಾದದಂತೆಯೇ ಇದೆ.