ಕೃಷ್ಣನ ಕೊಳಲಿನ ಕರೆ ...

ಕೃಷ್ಣನ ಕೊಳಲಿನ ಕರೆ ...

ಚಿತ್ರ

ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು
ಬೆರಳನಾಡಿಸಿ ರಂಧ್ರಗಳ ಮಾಧವ
ತೆರೆಯುತ್ತ ಮುಚ್ಚುತ್ತ  ಮರಮರಳಿ ಸವಿಯಾಗಿ
ಸ್ವರಗಳಲಿ ಹಾಡಿಹನು ಬನದಂಚಲಿ

ಸಂಸ್ಕೃತ ಮೂಲ  (ಲೀಲಾಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪):

ಅಧರೇ ವಿನಿವೇಶ್ಯ ವಂಶನಾಲಂ
ವಿವರಾಣ್ಯಸ್ಯ ಸಲೀಲಮಂಗುಲೀಭಿಃ
ಮುಹುರಂತರಯನ್ಮುಹುರ್ವಿವೃಣ್ವನ್
ಮಧುರಂ ಗಾಯತಿ ಮಾಧವೋ ವನಾಂತೇ

-ಹಂಸಾನಂದಿ

ಕೊ:  ಪದ್ಯವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ.

ಚಿತ್ರಕೃಪೆ:  ಇಲ್ಲಿ ಬಳಸಿದ ಚಿತ್ರ ಕಲಾವಿದ ಕೇಶವ್ ವೆಂಕಟರಾಘವನ್ ಅವರದ್ದು . ಅವರ ಬ್ಲಾಗ್ ಕೊಂಡಿ ಇಲ್ಲಿದೆ.  ಇಂದು ಇವರು ಹಾಕಿದ್ದ ಚಿತ್ರವನ್ನು ನೋಡಿ ಅದರ ಅಂದಕ್ಕೆ ತಕ್ಕದೊಂದು ಪದ್ಯವನ್ನು ಹುಡುಕಿ ಮಾಡಿದ ಅನುವಾದವಿದು

Rating
No votes yet

Comments