ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಸಂಪದಿಗರೆ
ಕೃಷ್ಣ ..ಕೃಷ್ಣ ..ಕೃಷ್ಣ ಬರಹ ಪ್ರಾರಂಭಿಸಿದಾಗ ಅದು ಅಷ್ಟು ಧೀರ್ಘವಾಗಿ ಬೆಳೆಯಬಹುದೆಂಬ ಕಲ್ಪನೆ ನನಗಿರಲಿಲ್ಲ. ಸಂಪದದಲ್ಲಿಯೆ ಓದುತ್ತಿದ್ದ ಬರಹಗಳಿಂದಾಗಿ ಮನದಲ್ಲಿ ಮೂಡುತ್ತಿದ್ದ ಕೆಲವು ಪ್ರಶ್ನೆಗಳು, ಅಲ್ಲದೆ ಕೃಷ್ಣನ ಬಗ್ಗೆ ಓದಿದ ಕೆಲವು ಕತೆಗಳು ಅವುಗಳಲ್ಲಿಯ ಘಟನೆಗಳು ಇವೆಲ್ಲವಕ್ಕೂ ಉತ್ತರ ಹುಡುಕುತ್ತ ಹುಡುಕುತ್ತ ಬರಹ ದೀರ್ಘವಾಗುತ್ತ ಹೋಯಿತು. ಮೊದಲೆ ಸ್ವಷ್ಟ ಪಡಿಸಿರುವಂತೆ ಈ ಬರಹ ಯಾರ ಪ್ರಶ್ನೆಗೆ ಉತ್ತರ ಕೊಡಲೆ ಆಗಲಿ ಅಥವ ಯಾರಿಗೋ ಕೆಣಕಲೆ ಆಗಲಿ ಬರೆದ ಬರಹವಲ್ಲ. ಹಾಗೆ ಯಾರದೆ ನಂಬಿಕೆಗಳನ್ನು ವಿರೋಧಿಸಲು ಅಥವ ಒತ್ತಾಸೆಕೊಡಲು ಬರೆದುದ್ದಲ್ಲ.
ಬಹುಶಃ ಶೀರ್ಷಿಕೆಯೆ ಕೆಲವರ ಮನಸಿಗೆ ಇದು ಧಾರ್ಮಿಕ ಬರಹವೆಂಬ ಕಲ್ಪನೆ ಮೂಡಿಸಿತು. ಹಾಗೆ ಓದುತ್ತ ಓದುತ್ತ ಕೆಲವರಿಗೆ ಇದು ನಾಸ್ತಿಕ ಬರಹವೆಂದು ಅನ್ನಿಸಿತು. ಕೃಷ್ಣನ ಪವಾಡಗಳನ್ನೆಲ್ಲ ನಾನು ಸರಳಗೊಳಿಸಿ ಬರೆದುದ್ದು ಕೆಲವರಿಗೆ ನೋವು ಆಯಿತು ಅನಿಸಿತು. ಮತ್ತೊಮ್ಮೆ ಸ್ವಷ್ಟ ಪಡಿಸುವೆ ಇದರಲ್ಲಿರುವ ಎಲ್ಲ ಸಾಲುಗಳು ಕೇವಲ ಕಲ್ಪನೆ , ಯಾವುದೆ ಪುಸ್ತಕ ಅಥವ ನೆಟ್ ಪ್ರಪಂಚದಲ್ಲಿ ಹೇಳಿರುವದಲ್ಲ. ಹಾಗಾಗಿ ಯಾರು ನೊಂದುಕೊಳ್ಳಬೇಕಿಲ್ಲ.
ಕೃಷ್ಣನ ಕತೆಯಲ್ಲಿ ಹೇಳಿರುವ ಮಾತು ಯಾವ ದೇವರಿಗೂ ಸಹ ಪವಾಡದ ಅವಶ್ಯಕತೆ ಇಲ್ಲ , ಅದನ್ನು ಮತ್ತೊಮ್ಮೆ ಹೇಳಲು ಇಚ್ಛೆಪಡುವೆ. ಯಾವ ಧೈವಕ್ಕು ತನ್ನ ಹಿರಿತನವನ್ನು ತಾನೆ ಡಂಗುರ ಸಾರುವ ಅಗತ್ಯವಿಲ್ಲ. ಕೆಲವೊಂದು ಸ್ವಘೋಷಿತ ದೇವಮಾನವರು ಮಾತ್ರ ಅದನ್ನು ಮಾಡುತ್ತಾರೆ ಏಕೆಂದರೆ ಜನರನ್ನು ಆಕರ್ಷಿಸುವ ಅಗತ್ಯ ಅವರಿಗಿರುತ್ತದೆ.ಕೆಲವರು ಮನುಷ್ಯರಾಗಿ ಬದುಕಿ ತೋರಿಸಿ ದೈವತ್ವಕ್ಕೆ ಏರುತ್ತಾರೆ ಅವರೆ ಕೃಷ್ಣ ರಾಮ ಎಲ್ಲರೂ. ಹುಟ್ಟಿದಾಗ ಅವರೊಳಗೆ ಅಂತರ್ಗತವಾಗಿದ್ದ ವಿಷ್ಣು ಅಥವ ದೈವ ತತ್ವವನ್ನು ಜೀವನಕಾಲದಲ್ಲಿ ಬೆಳೆಸಿಕೊಳ್ಳುತ್ತಲೆ ಸಾಗುತ್ತಾರೆ, ಎಲ್ಲರಿಗೂ ದಾರಿದೀಪವಾಗುತ್ತಾರೆ. ಸಾಧನೆಯ ಉತ್ತುಂಗಕ್ಕೆ ಏರುತ್ತಾರೆ , ದೇವರಾಗುತ್ತಾರೆ (ಕೆಲವರೂ ಸಚಿನ್ ರನ್ನು ಕ್ರಿಕೇಟ್ ದೇವರೆನ್ನುತ್ತಾರೆ ನೆನಪಿಸಿಕೊಳ್ಳಿ).
ನಾನು ಕೃಷ್ಣನನ್ನು ಸಾದಾರಣ ಮಾನವನಂತೆ ಚಿತ್ರಿಸಿದ್ದರು, ಅವನು ದೇವರಲ್ಲ ಎಂದು ನಿರಾಕರಿಸಿಲ್ಲ. ಹಾಗೆ ಕಾಲನಂತರದಲ್ಲಿ ಕೃಷ್ಣ ಕತೆಯ ಸುತ್ತ ಸೇರಿರಬಹುದಾದ ಹಲವು ಕಲ್ಪನೆ ಉತ್ಪ್ರೇಕ್ಷೆಗಳನ್ನು ಸಹ ಎಲ್ಲರ ಗಮನಕ್ಕೆ ತರಲು ಪ್ರಯತ್ನಿಸಿರುವೆ
ಕತೆ ಬರೆಯಲು ಪ್ರಾರಂಭಿಸಿದಾಗ ನಾನು ನಾಲಕ್ಕು ಭಾಗಗಳನ್ನು ಮಾಡಿಕೊಂಡಿದ್ದೆ, ಮೊದಲೆನೆಯದು ಪ್ರಸ್ತುತ ಸಮಾಜದ ನಡಾವಳಿಕೆ ಮತ್ತು ಕೃಷ್ಣನ ಜೀವನದ ಘಟನೆಗಳೊಂದಿಗೆ ಹೋಲಿಕೆ. ಎರಡನೆಯದು ಕೃಷ್ಣನ ಹುಟ್ಟು ಹಾಗು ಬಾಲ್ಯ. ಮೂರನೆಯದು ಕೃಷ್ಣನ ಹೋರಾಟದ ಬದುಕು. ನಾಲ್ಕನೆಯದು ಕೃಷ್ಣ ಹಾಗು ಅವನ ಸುತ್ತ ಇದ್ದ ಗೋಪಿಕೆಯರು ಹಾಗು ಇತರೆ ಸ್ತ್ರೀಯರು. ಕಡೆಯಲ್ಲಿ ಕೃಷ್ಣನ ಭಾವನಾಪೂರ್ಣ ಮನಸನ್ನು ಹೊಸದಾಗಿ ಸೇರಿಸಿದೆ.
ನಾಗೇಶ ಮೈಸೂರು ರವರು ಹೇಳಿದ ರಾಜಕ್ರೀಡೆಯಾಗಲಿ, ಮಹಾಸಂಪರ್ಕವಾಗಲಿ ನಾನಿನ್ನು ಓದಿಲ್ಲ, ಈ ಬರಹ ಪೂರ್ಣಗೊಂಡನಂತರ ಹುಡುಕಿ ಓದುತ್ತೇನೆ.
ಸರಣಿಯನ್ನು ಪ್ರಕಟಿಸುವಾಗ ಕೆಲವೊಮ್ಮೆ ಸತತವಾಗಿ ಎಲ್ಲರ ಪ್ರತಿಕ್ರಿಯೆಗಳಿಗೂ ಉತ್ತರಿಸಲು ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಗಿಲ್ಲ….
ಇಂತಹ ಬರಹ ಒಂದನ್ನು ಬರೆಯಲು ಪ್ರೇರಣೆಯಾದ ಎಲ್ಲ ಸಂಪದಿಗರಿಗೂ ನನ್ನ ನಮನಗಳು , ಸತತವಾಗಿ ಪ್ರತಿಕ್ರಿಯಿಸಿದ ನಾಗೇಶಮೈಸೂರು, ಶ್ರೀಧರರು, ಗಣೇಶರು, ಸತೀಶನಾಸ, ಗುಣಶೇಖರರು, ಪಾಟೀಲರು, ಶ್ರೀನಾಥಬಲ್ಲೆಯವರು, ಕಾಮತ್ ರವರು,ಶ್ರೀಕರ್ ರವರು, ನಾಗರಾಜರು,ರಾಮಮೋಹನ್ ಹಾಗು ಎಲ್ಲರಿಗೂ, ಮತ್ತು ಸತತವಾಗಿ ಬರಹವನ್ನು ಓದುತ್ತಲೆ ಮೌನವಾಗಿಯೆ ಸ್ಪೂರ್ತಿತುಂಬಿದ ಸಂಪದದ ಎಲ್ಲ ಓದುಗರಿಗೂ ವಂದನೆಗಳು.
ಮತ್ತು ಮುಖ್ಯವಾಗಿ ನಮ್ಮಂತಹ ಮುದ್ರಣ ಮಾಧ್ಯಮಗಳಲ್ಲಿ ಗುರುತಿಸಲ್ಪಡದ ಬರಹಗಾರರಿಗೂ ಸಹ ತಮ್ಮ ಬರಹಗಳನ್ನು ಪ್ರಕಟಿಸಲು ವೇದಿಕೆ ಒದಗಿಸಿರುವ ‘ಸಂಪದ’ ನಿರ್ವಾಹಕರಿಗೆ, ತಾಂತ್ರಿಕ ಸಿದ್ಭಂದಿಗೆ ಸಹ ನನ್ನ ಕೃತಜ್ಞತೆಗಳು.
https://encrypted-tbn3.gstatic.com/images?q=tbn:ANd9GcRD61vg7N7cUlkyk53Q...
http://store.krishna.com/StoreFront.bok
http://kannadigaworld.com/wp-content/uploads/2013/08/krishana_god1.jpg
http://media.washtimes.com/media/community/photos/blog/entries/2012/02/1...
http://krsnabook.com/images/Sb10.2Plate1.jpg
https://encrypted-tbn2.gstatic.com/images?q=tbn:ANd9GcSZUARPwUdMXtV5JvuM...
ಈ ‘ಕೃಷ್ಣ ..ಕೃಷ್ಣ ..ಕೃಷ್ಣ’ ಸರಣಿಯ ಎಲ್ಲ ಬಾಗಗಳನ್ನು ಒಟ್ಟಿಗೆ ಓದಲು, ಕೆಳಗೆ ‘ಸರಣಿ’ ಕಾಲಂ ನಲ್ಲಿಯ ‘ಕೃಷ್ಣ ..ಕೃಷ್ಣ ..ಕೃಷ್ಣ’ ಪದವನ್ನು ಕ್ಲಿಕ್ ಮಾಡಿ ...
Comments
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಕೃಷ್ಣ ಕೃಷ್ಣ ಎಂಬ ಉತ್ತಮ ಸರಣಿಯನ್ನು ಒದಗಿಸಿದ್ದಕ್ಕೆ ಅನಂತ ವಂದನೆಗಳು ... ನಿಜ, ಯಾವುದೇ ವಿಷಯವನ್ನು ಮತ್ತೊಂದು ಕೋನದಿಂದ ನೋಡುವಾಗ, ನೋಡಿ ಅದನ್ನು ಹೇಳುವಾಗ ವಿವಾದ ಹುಟ್ಟುತ್ತದೆ. ನಿಮ್ಮ ಸರಣಿಯಲ್ಲಿ ಮನಸ್ಸಿಗೆ ನೋವಾಗುವಂತಹ ವಿವಾದದ ಹೇಳಿಕೆ ನನಗೆ ಕಾಣಲಿಲ್ಲ. ಮತ್ತೊಮ್ಮೆ ಸರಣಿಯ ಎಲ್ಲ ಪ್ರಸಂಗಗಳನ್ನೂ ಓದುತ್ತೇನೆ. ಧನ್ಯವಾದಗಳು ...
ವಿಜಯದಶಮಿ ಹಬ್ಬದ ಶುಭಾಶಯಗಳು ...
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಪಾರ್ಥಾ ಸಾರ್, ಸಮಯವಾದಾಗ ಬಿಡದೆ ಖಂಡಿತ ಓದಿ - ಅದರಲ್ಲೂ ಮನುರವರ 'ಮಹಾಸಂಪರ್ಕ' ನಿಮ್ಮನ್ನು ಸಂಪೂರ್ಣ ಅಚ್ಚರಿ, ದಿಗ್ಭ್ರಮೆಯಲ್ಲಿ ಮುಳುಗಿಸುವುದರಲ್ಲಿ ಸಂಶಯವೆ ಇಲ್ಲ. ಅದರ ರಚನೆಗಾಗಿ ಮನುರವರು ಕೈಗೆತ್ತಿಕೊಂಡ ಸಂಶೋಧನೆ, ಉತ್ತರಭಾರತ, ಹಿಮಾಲಯದಲೆಲ್ಲಾ ಸುತ್ತಿ ಹುಡುಕಾಡಿದ ಸಾಕ್ಷ್ಯದ ಕುರುಹುಗಳು - ಇವೆಲ್ಲ ಕನ್ನಡದಂತ ಸೀಮಿತ ಮಾರುಕಟ್ಟೆಯ ದೃಷ್ಟಿಯಲ್ಲಿ ಅಪರೂಪವೆಂದೆ ಹೇಳಬೇಕು. ಆದರೆ ಅದು ಮಾರುಕಟ್ಟೆಗಾಗಿ ಬರೆದ ಸರಕಲ್ಲ; ಬದಲಿಗೆ ತಾವು ನಂಬಿದ ತತ್ವ ಪ್ರತಿಪಾದನೆಯ, ಸತ್ಯಾಸತ್ಯ ಶೋಧನೆಯ ತಪಸ್ಸು.
In reply to ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ by nageshamysore
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಮನು ಅವರ ಬಗ್ಗೆ-http://sampada.net/forum/6173http://archive.is/jAxtg
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ತುಲನಾತ್ಮಕ ನಿರೂಪಣೆ ಚೆನ್ನಾಗಿ ಬಂತು. ಪಾತ್ರಗಳನ್ನು ವಿಭಿನ್ನ ಕೋನದಲ್ಲಿ ನೋಡುವ ನಿಮ್ಮಾ ದ್ಱಷ್ಠಿ ಸೊಗಸಾಗಿದೆ. ಆ ನೆಲದ ಮೇಲೆ ಅದು ಸರಿ ಎನಿಸುತ್ತದೆ. ಹಾಗೆ ನೋಡಿ ಅಭಿಪ್ರಾಯ ವ್ಯಕ್ತವಾದಾಗ ಯಾರ (ನಂಬಿಕೆ / ಅಪನಂಬಿಕೆ )ವಿಚಾರಗಳಿಗೂ ದಕ್ಕೆಯಾಗಬಾರದು. ಅದನ್ನೂ ಕಾಯ್ದುಕೊಂಡು ಬರವಣಿಗೆಯನ್ನು ನಿರ್ವಹಿಸಿದ್ದೀರ. ತಾವೇ ಹೇಳಿದಂತೆ ಯಾವುದೇ ವಿಷಯಗಳನ್ನು ಅವರವರ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿರುತ್ತೇವೆ ಎಂಬುದು ಅವರವರ ಮನೋಧರ್ಮ. ಹಾಗೆಯೇ ಶ್ರೀ ಕ್ಱಷ್ಣ ಪರಮಾತ್ಮನ ``ಜೀವನ ಧರ್ಮ`` ಅಥವಾ ``ಭಗವಧ್ಗೀತೆಯ`` ಭೋಧನೆ. ಅದರಲ್ಲಿ ಆ ಪರಮಾತ್ಮನೇ ಹೇಳಿರುವಂತೆ ಅವರವರ ಆತ್ಮೋದ್ಧಾರ ಅಥವ ಆತ್ಮೋನ್ನತಿ ಗೆ ಅವರೇ ಕಾರಣ. ಎಲ್ಲವನ್ನೂ ಬಿಟ್ಟು ಅವನಿಗೇ ಶರಣಾದಾಗ ಅವನೇ ಹೇಳಿದಂತೆ `` ಯೋಗಕ್ಷೇಮಂ ವಹಾಮ್ಯಹಂ``. ಆಯ್ಕೆ ಅವರವರದ್ದು.
ಉತ್ತಮ ವಿಚಾರ ಸರಣಿಯನ್ನು ನೀಡಿದ ತಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು.
ರಾಮೋ.
In reply to ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ by RAMAMOHANA
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ರಾಮಮೋಹನ, ನಾಗೇಶಮೈಸೂರು, ಗಣೇಶ, ಬಲ್ಲೆಯವರಿಗೆ ನನ್ನ ವಂದನೆಗಳು . ಹಾಗು ಅಮೂಲ್ಯ ಪ್ರತಿಕ್ರಿಯೆ ಹಾಗು ಸಲಹೆಗಳಿಗೆ ಕೃತಜ್ಞತೆಗಳು
#ಪಾರ್ಥಸಾರಥಿ
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
’ಮಹಾ ಸಂಪರ್ಕ’ ಪುಸ್ತಕದ ಪರಿಚಯ ಇಲ್ಲಿದೆ ನೋಡಿ.http://oppanna.com/lekhana/pustaka/pustaka-parichaya-mahasamparka
ಕೇಶವಮೈಸೂರು
ಉ: ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯದ ನಂತರ
ಕೃಷ್ಣ ..ಕೃಷ್ಣ..ಕೃಷ್ಣ ಮುಕ್ತಾಯ ವಾಯಿತೇ,
ಪಾರ್ಥ ಸಾರ್ ಕೃಷ್ಣ ..ಕೃಷ್ಣ..ಕೃಷ್ಣ ಸರಣಿ ಚೆನ್ನಾಗಿತ್ತು ಇಸ್ಟು ಬೇಗ ಮುಗಿಯಿತೇ ಎನಿಸಿತು
ನೀಳಾ