ಕೃಷ್ಣ ಮತ್ತು ಧರ್ಮ- (ಕೃಷ್ಣಾಷ್ಟಮಿ ದಿನದ ವಿಶೇಷ)

ಕೃಷ್ಣ ಮತ್ತು ಧರ್ಮ- (ಕೃಷ್ಣಾಷ್ಟಮಿ ದಿನದ ವಿಶೇಷ)

1) ಒಂದು ದಿನ ಕೃಷ್ಣನು ಬಲರಾಮನ  ಜೊತೆಗೆ ಒಂದು ಕಡೆ ಹೋಗಿದ್ದ. ಅಲ್ಲಿ ಒಂದು ಭಾರಿ ಕಲ್ಲನ್ನು ಎತ್ತಿಡಬೇಕಾಗಿತ್ತು. ಆಗ ಕೃಷ್ಣನು ಹೇಳಿದನು - ನಾನು ಪ್ರಯತ್ನ ಮಾಡುವೆ ನನ್ನ ಕೈಲಿ ಆಗದಿದ್ದರೆ ಅಣ್ಣ ನೀನು ಮಾಡುವಿ ಅಂತೆ.

ಅವನ ಗೌರವವನ್ನೂ ಉಳಿಸಿದ ಹಾಗಾಯಿತು.  ತನ್ನ ಶಕ್ತಿ ಪ್ರದರ್ಶನವೂ ಆಯಿತು. ಮನುಷ್ಯನಾಗಿ ಹುಟ್ಟಿದ ಮೇಲೆ ಇತರ ಮನುಷ್ಯರಿಗೆ ಮಾರ್ಗದರ್ಶಿಯಾಗಿ ಇರಬೇಕು ಎಂದು ಅವನ ಅಭಿಪ್ರಾಯ.

2) ಇನ್ನೊಮ್ಮೆ ಅವನು ರಾಧೆಯ ಜೊತೆಗಿದ್ದಾಗ ಬಲರಾಮನ ಹೆಸರು ಬಂದಿತು. ತಕ್ಷಣವೇ ಅವನು ರಾಧೆಯಿಂದ ದೂರ ಸರಿದ. 'ಏನು, ನೀನು ಬಲರಾಮನಿಗೆ ಹೆದರುತ್ತೀಯಾ? ' ಎಂದು ರಾಧೆಯು ಕೇಳಿದಳು. ಆಗಲೂ ಅವನು ಈ ಉತ್ತರವನ್ನು ಹೇಳಿದನು - ಮನುಷ್ಯನಾಗಿ ಹುಟ್ಟಿದ ಮೇಲೆ ಇತರ ಮನುಷ್ಯರಿಗೆ ಮಾರ್ಗದರ್ಶಿಯಾಗಿ ಇರಬೇಕು

3) ಧರ್ಮರಾಯನು ಅರ್ಜುನನ ಶೌರ್ಯವನ್ನು ಒಮ್ಮೆ ಅಪಹಾಸ್ಯ ಮಾಡಿದನು.  ತನ್ನನ್ನು ಅವಮಾನಿಸಿದವರನ್ನು ಕೊಲ್ಲುವೆ ಎಂದು ಶಪಥ ಮಾಡಿದ್ದ ಅರ್ಜುನನು ಅವನನ್ನು ಕೊಲ್ಲಹೋದನು. ಆಗ ಕೃಷ್ಣನು ಅವನನ್ನು ತಡೆದನು- 'ಸತ್ಯಕಿಂತ ಅಹಿಂಸೆಯು ಹೆಚ್ಚಿನದು ' ಎಂದು ಹೇಳಿದ.

4) ಕೃಷ್ಣನು ಗೋಕುಲದಿಂದ ನಿರ್ಗಮನ ಮಾಡುವಾಗ ಹೇಳಿದನು - ಮನುಷ್ಯನ ಆದ್ಯತೆಗಳು ಬದಲಾಗುತ್ತಿರುತ್ತವೆ ಅಂತ. 

5)  ವನವಾಸದಲ್ಲಿದ್ದಾಗ ಧರ್ಮರಾಯನು ಒಂದು ಸಲ ಅವನನ್ನು ಕೇಳಿದನು. ನಾನು ಧರ್ಮ ಪಾಲಿಸುತ್ತಿದ್ದೇನಲ್ಲ ? ಹಿರಿಯ ದೃತರಾಷ್ಟ್ರನು ಕರೆದನೆಂದು  ಜೂಜಿಗೆ ಹೋದೆನಷ್ಟೇ. ಆದರೂ ನನ್ನನ್ನು ಏಕೆ ಎಲ್ಲರೂ ಟೀಕೆ ಮಾಡುತ್ತಾರೆ?

ಆಗ ಶ್ರೀ ಕೃಷ್ಣನು ಹೇಳಿದನು - ನೀನು ಧರ್ಮದ ತಿರುಳನ್ನು ತಿಳಿದುಕೊಂಡಿಲ್ಲ. ಅದಕ್ಕಾಗಿ ತೊಂದರೆಯಲ್ಲಿ ಬೀಳುತ್ತೀಯ. ಹಿರಿಯರು ಹಿರಿಯರ ರೀತಿ ನಡೆದುಕೊಳ್ಳದೆ ಇದ್ದಲ್ಲಿ ಅವರ ಮಾತನ್ನು ಪಾಲಿಸತಕ್ಕದ್ದಲ್ಲ.

6) ಕೃಷ್ಣನು ಅರ್ಜುನನಿಗೆ ಹೀಗೆ ಮಾಡು, ಹಾಗೆ ಮಾಡಬೇಡ ಎಂದೆಲ್ಲಾ ಹೇಳಿದನು. ಆಗ ಬಳಿಯಲ್ಲಿ ಇದ್ದ ಉತ್ತರ ಕುಮಾರನು ಅರ್ಜುನನಿಗೆ ಹೇಳಿದ- ಅವರು ಇವರು ಹೇಳುತ್ತಾರೆ ಎಂದು ಅವರು ಹೇಳಿದ್ದನ್ನು ಪಾಲಿಸಬೇಡ, ನಿನಗೆ ಸರಿ ಕಂಡ ಹಾಗೆ ಮಾಡು ಎಂದನು.

 

Rating
Average: 4 (1 vote)