" ಕೃಷ್ಣ ಸುಂದರಿ ರೇಖಾ "

" ಕೃಷ್ಣ ಸುಂದರಿ ರೇಖಾ "

ಚಿತ್ರ

                                      
 
          ನಾನು ಆಗಾಗ ಸಂಪದ ಬ್ಲಾಗ್‍ನಲ್ಲಿ ಬರೆಯುತ್ತ ಕೆಲ ವರ್ಷಗಳೀದ ಸಕ್ರಿಯನಾಗಿದ್ದೇನೆ. ನನ್ನದೆ ಮಿತಿಯಲ್ಲಿ ಲೇಖನಗಳನ್ನು ಬರೆಯುತ್ತಿದ್ದೇನೆ. ಹಲವು ಸಲ ಚಿತ್ರರಂಗದ ವಿಶೇಷವಾಗಿ ಹಿಂದಿ ಮತ್ತು ಕೆಲವು ಸಲ ಕನ್ನಡ ಚಲನಚಿತ್ರ ಸಾಧಕರ ಕುರಿತು ಬರೆಯುತ್ತ ಬಂದಿದ್ದೇನೆ.  ನನ್ನ ಈ ಲೇಖನಗಳಿಗೆ ಆಧಾರ ನನ್ನ ನೆನಪಿನ ಗಣಿ ಜೊತೆಗೆ ಆಯಾ ಸಾಧಕರು ಮಾಡಿದ ಸಾಧನೆ  ಮತ್ತು ಅವರು ನನ್ನ ಮೇಲೆ ಬೀರಿದ ಪ್ರಭಾವ ಎಂದು ಹೇಳಲು ಇಚ್ಛಿಸುತ್ತೇನೆ. ನನ್ನ ಬರಹ ಏಕತಾನವಾಗುತ್ತಿದೆಯೆ ಓದುಗರಿಗೆ ಬೇಸರ ತರಿಸುತ್ತಿದೆಯೆ ಎನ್ನುವ ಸಂಶಯ ಕಾಡುತ್ತಿತ್ತು, ಹೀಗಾಗಿ ಜೂನ್ ತಿಂಗಳಿನ ನಂತರ ಸಂಪದಕ್ಕೆ ಯಾವುದೆ ಬರಹಗಳನ್ನು ಬರೆಯಲು ಹೋಗಿರಲಿಲ್ಲ. ಕಳೆದ ವರ್ಷದ ಡಿಸೆಂಬರ್ ತಿಂಗಳ ಎರಡನೆ ವಾರದ ಪ್ರಾರಂಭದ ದಿನವೆಂದು ಕಾಣುತ್ತದೆ ಹಿಂದಿ ಚಿತ್ರರಂಗದ ಆ ಕಾಲದ ಸುಪ್ರಸಿದ್ಧ ನಟಿ ಸಾಧನಾ ಮರಣ ಹೊಂದಿದಳು. ತನ್ನದೆ ಅಭಿನಯ ಶೈಲಿಯ ನಟಿಯಾಗಿದ್ದ ಈಕೆ ಕಳೆದ ಶತಮಾನದ ಆರನೆ ದಶಕದ ಪ್ರಾರಂಭದ ವರ್ಷಗಳಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ನಟಿ. ಜೊತೆಗೆ ಈಕೆಯ ಇನ್ನೊಂದು ಸಾಧನೆಯೆಂದರೆ ಈಕೆ ತನ್ನ ಸಿನೆ ಪಯಣದಲ್ಲಿ ಯಾವುದೆ ಸುದ್ದಿಗಳಿಗೆ ಗ್ರಾಸವಾಗದೆ ಬದುಕಿದ ನಟಿ. ಕೆಲವು ಚಿತ್ರಗಳಲ್ಲಿ ಬಿಕಿನಿ ಧರಿಸಿ ನಟಿಸಿದ್ದು ಕೆಲವರಿಗೆ ಹಿಡಿಸುತ್ತಿರಲಿಲ್ಲವಾದರು ಸ್ವಚ್ಛ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದ ನಟಿ ಈಕೆ. ಹೀಗಾಗಿ ಈಕೆಯ ಬಗೆಗೆ ಬರೆಯಲೆ ಬೇಕೆಂದು ನನಗೆ ಅನಿಸಿತು ಬರೆದೆ. ಕೆಲ ಸಂಪದಿಗರು ಮೆಚ್ಚಿ ಬರೆದರು. ನಾನು ಬರಿ ತೀರಿ ಹೋದವರ ಕುರಿತೆ ಬರೆಯುತ್ತೇನೆ ನಮ್ಮೊಡನೆ ಇನ್ನೂ ಬದುಕಿರುವ ಕೆಲವರ ಬಗೆಗೂ ಬರೆಯಬೇಕೆಂಬ ಅಭಿಪ್ರಾಯವೂ ಸಹ ಬಂತು, ಒಂದು ಕ್ಷಣ ನನಗೆ ಹೌದಲ್ಲ ಎನಿಸಿತು ಅದರ ಫಲವೆ ‘ಕೃಷ್ನ ಸುಂದರಿ ರೇಖಾ’ ಕುರಿತ ಈ ಲೇಖನ. ಈ ನಟಿ ನನ್ನ ಅಚ್ಚು ಮೆಚ್ಚಿನ ನಟಿಯಲ್ಲ ನಮ್ಮ ಹಿಂದಿನ ತಲೆ ಮಾರಿನ ನಟ ನಟಿಯರೆ ನನಗೆ ಇಷ್ಟ, ಆದರೆ ರೇಖಾ ಮಾಡಿದ ಸಾಧನೆ ಯಾರೂ ಮೆಚ್ಚುವಂತಹುದು ಅದಕ್ಕೂ ಮೊದಲು ಈ ಚಲನಚಿತ್ರಗಳ ಆಸಕ್ತಿಯ ಕುರಿತು ಕೆಲ ಮಾತುಗಳನ್ನು ಓದುಗರೊಂದಿಗೆ ಹಂಚಿ ಕೊಳ್ಳಲು ಇಚ್ಛಿಸುತ್ತೇನೆ. 
 
     ಅದು 1966 ರಿಂದ 1970 ರ ವರೆಗಿನ ಕಾಲಮಾನ ನಮ್ಮ ತಲೆ ಮಾರಿನವರು ಮಟ್ರಿಕ್ಯುಲೇಶನ್ ಮುಗಿಸಿ ಅನುಕೂಲವಿದ್ದವರು ಕಾಲೇಜಿಗೋ ಡಿಪ್ಲೊಮಾಕ್ಕೋ ಐಟಿಐಗೊ ಇಲ್ಲ ಟೈಪಿಂಗ್ ಕಲಿಕೆಗೋ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆಯಿತ್ತು. ಅಲ್ಲಿಯೆ ಹಾಸ್ಟೆಲಿನಲ್ಲಿಯೋ ಇಲ್ಲ ರೂಮು ಮಾಡಿಕೊಂಡೋ ಇರುವ ಅನುಕೂಲತೆ ಕೆಲವೆ ಕೆಲವು ಬೆರಳೇನಿಕೆಯವರಿಗೆ ಮಾತ್ರ ಸಾಧ್ಯವಿದ್ದ ಕಾಲ. ಆಗ ನಮ್ಮ ಊರಿಗೆ ಬಸ್ ಸೌಲಭ್ಯಗಳು ಇರಲಿಲ್ಲ ರೇಲ್ವೆಯೆ ನಮ್ಮ ಸುತ್ತ ಮುತ್ತಲಿನ ಗ್ರಾಮಗಳವರಿಗೆ ದುಬಾರಿಯಲ್ಲದ ಪ್ರಯಾಣ ಸೌಲಭ್ಯವಾಗಿತ್ತು. ಹೀಗಾಗಿ ಅನೇಕರು ಪಾಸ್ ಮಾಡಿಸಿ ಪ್ರತಿದಿನ ನಮ್ಮ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದೆವು. ಮುಂದಿನ ಕಲಿಕೆಯ ಹಂತದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಬಳಕೆಯ ಅನಿವಾರ್ಯತೆಯಿತ್ತು. ಹೈಸ್ಕೂಲು ದಿನಗಳಲ್ಲಿ ಪಠ್ಯಕ್ಕೆ ಅನುಗುಣವಾಗಿ ಆ ಭಾಷೆಗಳನ್ನು ಅಭ್ಯಸಿಸಿದ್ದು ಕೆಲವರನ್ನು ಹೊರತು ಪಡಿಸಿದರೆ ಆ ಭಾಷೆಗಳು ಕಬ್ಬಿಣದ ಕಡಲೆಗಳೆ. ಆಗಿನ್ನೂ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ ಬಂದಿರಲಿಲ್ಲ. ವಿಶೇಷವಾಗಿ ಇಂಗ್ಲಿಷ್ ಕಲಿಕೆಯ ಅನಿವಾರ್ಯತೆಯಿತ್ತು.. ಸುಮಾರು ನಾಲ್ವತ್ತು ಮೈಲಿಗಳ ವ್ಯಾಪ್ತಿಯ ಹಳ್ಳಿಗಳ ಹುಡುಗರು ಪಯಣಿಸುತ್ತಿದ್ದು ಬಹುತೇಕ ಎಲ್ಲರೂ ಪರಿಚಿತರೆ. ಆದರೂ ಅವರವರವೆ ಆದ ಸ್ನೇಹಿತರ ವಲಯಗಳಿದ್ದವು. ಅವರಲ್ಲಿ ಅನುಕೂಲವಂತ ವಿದ್ಯಾರ್ಥಿಗಳು Screen, Film Fare, Star and Style, Blitz, Hindu Nation, Illustrated Weekly  ಮತ್ತು ಹಿಂದಿಯ ಮಾಧುರಿ ಮುಂತಾದ ಕೆಲ ಪ.ತ್ರಿಕೆಗಳನ್ನು ಒಬ್ಬೊಬ್ಬರು ಖರೀದಿಸುತ್ತಿದ್ದರು ಜೊತೆಗೆ ತಮ್ಮ ಓದಿನ ನಂತರ ತಮ್ಮ ಸ್ನೇಹ ವಲಯದ ಆಸಕ್ತ ಒದುಗರಿಗೆ ವಿತರಣೆ ಮಾಡಿ ಕೊಂಡು ಓದುವ ಸದ್ಭುದ್ಧಿಯೂ ಇತ್ತು.. ವಯೋ ಸಹಜವಾಗಿ ಸಿನೆಮಾ ಮತ್ತು ಕ್ರಿಕೆಟ್‍ಗಳು ಆಗಲೂ ಸಹ ಯುವ ವೃಂದದ ಆಸಕ್ತಿಯ ವಿಷಯಗಳಾಗಿದ್ದವು. ಆ ಪತ್ರಿಕೆಗಳಲ್ಲಿ ಬರುತ್ತಿದ್ದ ಚಿತ್ರಗಳು ಅವುಗಳ ಕೆಳಗೆ ಬರುತ್ತಿದ್ದ ಅಡಿ ಬರಹಗಳನ್ನು ನಮ್ಮ ಭಾಷಾ ಕಲಿಕೆಯ ವಾಹಕಗಳನ್ನಾಗಿ ಮಾಡಿ ಕೊಂಡೆವು ಕ್ರಮೇಣ ಸಣ್ಣ ಪುಟ್ಟ ಬರಹಗಳ ಓದುವಿಕೆಯಿಂದ ಕ್ರಮೇಣ ಗಂಭೀರ ವಿಮರ್ಶಾತ್ಮಕ ಬರಹಗಳೆಡೆಗೆ ಕೆಲವರ ಆಸಕ್ತಿ ಬೆಳೆಯುತ್ತ ಹೋಯಿತು. ಹೀಗಾಗಿ ಸಿನೆಮಾ ಮತ್ತು ಕ್ರೀಡಾ ಆಸಕ್ತಿಗಳು ತಕ್ಕ ಮಟ್ಟಿಗೆ ಭಾಷಾ ಕಲಿಕೆಗೆ ಸಹಾಯಕವಾದವು. 
 
     ಕೆಲ ಅನುಕೂಲವಂತರ ಮನೆಯ ಮಕ್ಕಳು ಪ್ರತಿ ಶನಿವಾರ ಇಲ್ಲ ಭಾನುವಾರ ಸಿನೆಮಾ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಬಹುತೇಕ ನಾವು ಮರು ಪಯಣಿಸುತ್ತಿದ್ದ ಮೀರಜ್ ಬೆಂಗÀಳೂರು ಪ್ಯಾಸೆಂಜರ್ ಗಾಡಿ ಪ್ರತಿ ದಿನ ನಿಯಮಿತವಾಗಿ ಬರದೆ ಕನಿಷ್ಟ ಒಂದು ಗಂಟೆಯಾದರೂ ತಡವಾಗಿ ಬರುವ ಪರಿಪಾಠವನ್ನು ಹಾಕಿ ಕೊಂಡಿತ್ತು.. ಒಮ್ಮೊಮ್ಮೆ ಅಪರೂಪವಾಗಿ ನಿಗದಿತ ಸಮಯಕ್ಕೆ ಬಂದು ಅದರ ತಡವಾಗಿ ಬರುವ ಸ್ವಭಾವದ ಪರಿಷಯವಿದ್ದವರು ಗಾಡಿ ತಪ್ಪಿಸಿಕೊಂಡು ಪರದಾಡಿದ್ದೂ ಉಂಟು. ಹೀಗಾಗಿ ಈ ವಿದ್ಯಾರ್ಥಿ ವಲಯಗಳು ರೈಲು ನಿಲ್ದಾಣಕ್ಕೆ ಬಂದು ಜನ ನಿಬಿಡತೆಯಿಂದ ದೂರದಲ್ಲಿ ಪ್ಲಾಟ್‍ಫಾರ್ಮ ಮೇಲೆ ಸಿಮೆಂಟ ಕಟ್ಟೆಗಳ ಮೇಲೆ ಕುಳಿತೋ ಇಲ್ಲ ನಿಂತುಕೊಂಡೋ ಇಲ್ಲ ಅಷ್ಟಾಗಿ ಗದ್ದಲವಿರದ ಬೋಗಿಯಲ್ಲಿ ಕುಳಿತುಕೊಂಡೋ ಹರಟೆಗೆ ತೊಡಗಿ ಕೊಳ್ಳುವುದು ಮಾಮೂಲಿಯಾಗಿರುತ್ತಿತ್ತು. ಹರಟೆಯ ವಿಷಯ ತಪ್ಪದೆ ಯಾವ ಯಾವ ಹಿಂದಿ ನಟ ನಟಿಯರು ಯಾರ ಯಾರ ಜೊತೆಗೆ ಅಫೇರ್ ಇಟ್ಟು ಕೊಂಡಿದ್ದಾರೆ, ಯಾವ ಯಾವ ನಟಿಮಣಿಯರು ಯಾವ ಯಾವ ಚಿತ್ರಗಳಲ್ಲಿ ಈಜುಡುಗೆಯುಲ್ಲಿ ಕಾಣಿಸಿ ಕೊಂಡಿದ್ದಾರೆ. ಹಾಲಿವುಡ್ ನಟಿಯರಷ್ಟು ಬೋಲ್ಡಾಗಿ ಅತಿ ಸಣ್ಣ ಬಿಕಿನಿಗಳನ್ನು ತೊಡಲು ಮತ್ತು ಚುಂಬನ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಇವರಿಗೆ ಸಾಧ್ಯವೆ ಇಲ್ಲ ಬಿಕಿನಿಗಳೆಂದರೆ ಇವರು ಸಣ್ಣ ಸಣ್ಣ ಚಡ್ಡಿಗಳೆಂದು ತಿಳಿದಿದ್ದಾರೆ ಎಂದು ತಮ್ಮ ತಮ್ಮ ಅತೃಪ್ತಿಗಳನ್ನು ಹೊರ ಹಾಕುತ್ತಿದ್ದರು. ಹೀಗಾಗಿ ತಾವು ಹಿಂದಿ ಸಿನೆಮಾಗಳನ್ನು ನೋಡುವುದನ್ನೆ ಬಿಟ್ಟು ಬಿಟ್ಟಿದ್ದೇವೆ ಎಂದೋ ಇಲ್ಲ ವೆಷ್ಟ್ ಇಂಡೀಸ್ ಸರಣಿಗೆ ಶತಕ ಹೊಡೆದರೂ ಬುಧಿ ಕುಂದರನ್‍ನನ್ನು ಕೈ ಬಿಟ್ಟು ಫರೂಕ್ ಇಂಜನೀಯರ್‍ನನ್ನು ತೆಗೆದುಕೊಂಡ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿದ್ದವು. ಇಂತಹ ಸಂಧರ್ಭದಲ್ಲಿ ನಮ್ಮ ಸ್ನೇಹಿತ ಶಂಕರಯ್ಯ ತಾನು ನೋಡಿದ ಕನ್ನಡ ಸಿನೆಮಾ ಕುರಿತು ಮಾತನಾಡಲು ಪ್ರಯತ್ನಿಸಿದಾಗ ಆ ಹಳ್ಳಿ ಗಮಾರನ ಅಜ್ಞಾನ ಕುರಿತು ನಕ್ಕು ಲೇವಡಿ ಮಾಡಿ ಲೇ ಅಯ್ಯಪ್ಪ! ನೀನು ನೋಡಿದ ಆ ಚಿತ್ರ ಬೆಂಗಳೂರಿನ ಸುತ್ತ ಮುತ್ತಲಲ್ಲಿ ಬಿಡುಗಡೆಯಾಗಿ ಮೂರು ತಿಂಗಳ ಮೇಲಾಯಿತು ಈಗ ಇಲ್ಲಿ ಬಿಡುಗಡೆ ಮಾಡಿದ್ದಾರೆ, ನಮ್ಮನ್ನು ಅವರು ಕನ್ನಡಿಗರೆಂದೆ ತಿಳಿದಿದ್ದಾರೆಯೆ ? ಹಿಂದಿ ಚಿತ್ರಗಳನ್ನು ನೋಡು ಬಾಂಬೆ ಮತ್ತು ಹುಬ್ಬಳ್ಳಿಗಳಲ್ಲಿ ಏಕ ಕಾಲಕ್ಕೆ ಬಿಡುಗಡೆ ಮಾಡುತ್ತಾರೆ ತಾವು ಕನ್ನಡ ಚಿತ್ರಗಳನ್ನು ಏಕೆ ನೋಡಬೇಕು ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶವನ್ನು ಬಿಟ್ಟರೆ ಅಖಂಡ ಕರ್ನಾಟಕ ಕುರಿತು ಅವರು ಯೋಚಿಸಿದ್ದಾರೆಯೆ ಎಂದು ಕನ್ನಡ ಚಿತ್ರಗಳ ನೋಡುವಿಕೆಯ ಬಗೆಗೆ ತಮ್ಮ ಅಸಮಾಧಾನಗಳನ್ನು ವ್ಯಕ್ತ ಪಡಿಸುತ್ತಿದ್ದರು. ಹೀಗೆ ಲಂಗು ಲಗಾಮಿಲ್ಲದೆ ಕೆಲ ಸೀನಿಯರ್ ವಿದ್ಯಾರ್ಥಿಗಳ ಹರಟೆ ಸಾಗುತ್ತಿತ್ತು. ಹೀಗಾಗಿ ನಮ್ಮಂತಹ ಅಲ್ಪ ಮತಿಗಳಿಗೆ ಅವರನ್ನು ಸಹಿಸಿ ಕೊಳ್ಳದೆ ಬೇರೆ ಮಾರ್ಗವಿರಲಿಲ್ಲ. ಅಂತಹ ಸಂಧರ್ಭಗಳಲ್ಲಿ ಅಲ್ಲಿ ಸುಮ್ಮನಿರುತ್ತಿದ್ದ ಶಂಕರಯ್ಯ ನಾವು ನಾವೆ ಇದ್ದಾಗ ಆ ಉಡಾಫೆಗಳ ಜನ್ಮ ಜಾಲಾಡುತ್ತಿದ್ದ. ಅವರಲ್ಲಿಯೆ ಕೆಲ ಸಭ್ಯರು ಇವರ ತೀವ್ರ ಸೌಂದರ್ಯಾಧನೆ ಕುರಿತು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರು, ಆದರೆ ನಟಿಯರ ಆರಾಧಕರು ಬಹು ಸಂಖ್ಯಾತರಿರುತ್ತಿದ್ದು ಅಪಸ್ವರದ ಧ್ವನಿ ಎತ್ತಿದ ಸಂಸ್ಕøತಿಯ ಆರಾಧಕರನ್ನು ತರಾಟೆಗೆ ತೆಗೆದುಕೊಂಡು ಅವರ ಬಾಯಿ ಮುಚ್ಚಿಸುವಲ್ಲಿ ಬಹುತೇಕ ಯಶಸ್ವಿ ಯಾಗುತ್ತಿದ್ದರು. ಇಂತಹ ಸಂಧರ್ಭಗಳು ನಮಗೆ ಮುಜುಗರವನ್ನುಂಟು ಮಾಡುತ್ತಿದ್ದವು, ಆದರೂ ಅವರುಗಳು ನೋಡಿದ ಹೊಸ ಸಿನೆಮಾಗಳ ಕಥಾನಕ ನಟ ನಟಿಯರ ನಟನೆ ಸಂಗೀತ ಮತ್ತು ಹಾಡುಗಳ ಕುರಿತು ಬರ ಬಹುದಾದ ವಿಮರ್ಶೆಗಳ ನಿರೀಕ್ಷೆಯಲ್ಲಿರುತ್ತಿದ್ದೆವು. ಅವರುಗಳು ಸಭ್ಯತೆಯ ಎಲ್ಲೆಗಳನ್ನು ಮೀರಿ ಸೌಂದರ್ಯಾಸ್ವಾದನೆಯ ಅತಿರೇಕಗಳನ್ನು ಸಹಿಸಿ ಕೊಳ್ಳುತ್ತ ಕುಳಿತಿರುತ್ತಿದ್ದೆವು. ಇತ್ತ ನಮ್ಮ ಕಿರಿಯರಲ್ಲೂ ನಮ್ಮ ಸೀನಿಯರ್‍ಗಳ ಬೆಂಬಲಿಗರ ಸಂಖ್ಯೆಯೂ ಅಧಿಕ ಪ್ರಮಾಣದಲ್ಲಿರುತ್ತಿತ್ತು. ಮೇಲೆ ವಿವರಿಸಿದ ಪತ್ರಿಕೆಗಳೂ ಸಹ ಅನೇಕ ಸಲ ನಮ್ಮ ಓದಿಗೂ ದೊರೆಯುತ್ತಿದ್ದವು. ಅವುಗಳಲ್ಲಿಯ ಲಘುವಾದ ಬರಹಗಳ ಓದಿನಿಂದ ಗಂಭೀರ ವಿಮರ್ಶಾತ್ಮಕ ಬರಹಗಳ ಓದಿನ ವರೆಗೂ ಸಾಗಿದೆವು ಇವು ನಮ್ಮನ್ನು ರಂಜಿಸುವುದರ ಜೊತೆಗೆ ಗಹನ ಓದಿಗೂ ನಮ್ಮನ್ನು ಅಣೀ ಮಾಡಿದವು. ನಾವು ಆ ದಿನ ಮಾನಗಳಲ್ಲಿ ಎಲ್ಲ ಚಿತ್ರಗಳನ್ನು ನೋಡುವ ಅವಕಾಶ ನಮಗಿಲ್ಲದೆ ಹೋಗಿದ್ದರೂ ಆ ಕೊರತೆಯನ್ನು ನಮ್ಮ ಅನುಕೂಲವಂತ ಹಿರಿ ಕಿರಿಯ ವಿದ್ಯಾರ್ಥಿಗಳು ತಾವು ನೋಡಿದ ಚಿದತ್ರಗಳ ವಿಮರ್ಶೆಯ ಮೂ;ಕ ನಮ್ಮ ಸಿನೆಮಾ ನೋಡುವ ಆಸಕ್ತಿಯನ್ನು ತಣಿಸಿ ಅವುಗಳ ಇಂಚಿಂಚೂ ಧೃಶ್ಯಗಳು ನಮ್ಮಲ್ಲಿ ದಾಖಲಾಗುವಂತೆ ಮಾಡಿ ಬಿಡುತ್ತಿದ್ದರು. 
 
     ಅ ಸಿನೆಮಾ ಅಭಿಮಾನಿಗಳಲ್ಲಿ ಬಹುತೇಕರು ನಟಿಯರನ್ನು ವಿಶೇಷವಾಗಿ ರೊಮ್ಯಾಂಟಿಕ್ ಪರಿಕಲ್ಪನೆಯಲ್ಲಿಯೆ ನೋಡುವವರಾಗಿದ್ದರು. ಆದರೂ ಅವರಲ್ಲಿಯ ಕೆಲವರು ಗಂಭಿರ ದೃಷ್ಟಿಯಿಂದ ಸಿನೆಮಾಗಳನ್ನು ವಿಮರ್ಶೆ ಕೂಡ ಮಾಡುತ್ತಿದ್ದರು. ನಮ್ಮಂತಹ ಆಸಕ್ತರಿಗೆ ಸಿನೆಮಾಗಳ ಆಳ ಅವುಗಳು ಮಾಡುವ ಪರಿಣಾಮ ನಮ್ಮಲ್ಲಿ ವಿಮರ್ಶಾತ್ಮಕ ಬುದ್ಧಿಯನ್ನು ಬೆಳೆಸಿದವು. ಹೀಗಾಗಿ ಆ ಜಮಾನಾದ ಪತ್ರಿಕೆಗಳ ಓದು ಇಂಗ್ಲೀಷ್ ಭಾಷಾ ಕಲಿಕೆಯ ಮೂಲ ಉದ್ದೇಶ ಹೊಂದಿದ್ದರೂ ದಕಲೆ ಸಾಹಿತ್ಯ ಕ್ರೀಡೆಗಳ ಕಡೆಗೆ ಒಂದು ರೀತಿಯ ಆಸಕ್ತಿಯನ್ನು ಬೆಳÉಸಿದವು. ಹೀಗಾಗಿ ನಮ್ಮ ತಾರುಣ್ಯದ ದಿನಗಳಲ್ಲಿ ನೋಡಿದ ಸಿನೆಮಾಗಳು ಬಹಳ ಕಡಿಮೆಯಿದ್ದರೂ ಪತ್ರಿಕೆಗಳು ವಿವಿಧ ಭಾರತಿ ಮತ್ತು ಬಿನಾಕಾ ಗೀತಮಾಲಾ ಕಾರ್ಯಕ್ರಮಗಳು ಎಲ್ಲ ಸಿನೆಮಾ ಮಾಹಿತಿಗಳ ಮೂಲ ತಾಣಗಳು. ಈ ಎಲ್ಲವುಗಳ ಕಾರಣದಿಂದಾಗಿ ನಮ್ಮ ಹಿರಿಯ ತಲೆಮಾರಿನ ನಟ ನಟಿಯರು ನಮ್ಮ ಸಿನೆ ಐಕಾನ್‍ಗಳಾದರು. 1950-1970ರ ದಿನ ಮಾನಗಳ ಚಿತ್ರಗಳ ಕಥಾವಸ್ತು ತಾರಾಗಣ, ಸಂಗೀತ ಮತ್ತು ನಿರೂಪಣಾ ಶೈಲಿಗಳು ನಮ್ಮನ್ನು ರಂಜಿಸಿದವು. ಜೊತೆಗೆ ಆಗಿನ ಚಿತ್ರಗಳಲ್ಲಿ ಇನ್ನೂ ಭಾರತೀಯತೆ ಇತ್ತು. ದೃಶ್ಯ ಸಂಯೋಜನೆ ಮತ್ತು ಕಥಾ ನಿರೂಪಣೆಯಲ್ಲಿ ನೈÀಜತೆಗಳಿರುತ್ತಿದ್ದವು. ಚಿತ್ರಗಳು ನಮ್ಮ ನೈಜ ಬದುಕಿಗೆ ಹತ್ತಿರವಾಗಿದ್ದವು ಎನಿಸುತ್ತಿತ್ತು. ಹೀಗಾಗಿ ಅವು ನಮ್ಮ ಮಾನಸದಲ್ಲಿ ನೆಲೆಯೂರಿ ನಿಂತವು. 
 
     ನಿಜಕ್ಕೂ ನಮ್ಮ ಜಮಾನಾದ ಸ್ವಲ್ಪ ಹೆಚ್ಚು ಕಡಿಮೆ ನಮ್ಮ ವಯಸ್ಸಿನವರೇ ಆಗಿದ್ದ ರಾಜೇಶ ಖನ್ನಾ, ವಿನೋದ ಮೆಹ್ರಾ, ರಾಕೇಶ ರೋಶನ್, ಶತ್ರುಘ್ನ ಸಿನ್ಹಾ, ವಿನೋದ ಖನ್ನಾ, ನವೀನ ನಿಶ್ಚಲ್, ಸಂಜೀವ ಕುಮಾರ ಮತ್ತು ತನ್ನ ನೆಲೆ ಕಂಡು ಕೊಳ್ಳು ಪ್ರಯತ್ನಿಸುತ್ತಿದ್ದ ಅಮಿತಾಭ್ ಬಚ್ಚನ್ ನಾಯಕ ನಟರುಗಳಾಗಿದ್ದರೆ  ನಾಯಕಿಯರೆಂದರೆ ಹೇಮಾ ಮಾಲಿನಿ, ಲೀನಾ ಚಂದಾವರಕರ್, ಬಬಿತಾ, ಜಯಾ ಬಾಧುರಿ, ರಾಧಾ ಸಲೂಜಾ, ರಹಾನಾ ಸುಲ್ತಾನಾ, ಝಿನತ್ ಅಮಾನ್, ಯೋಗಿತಾ ಬಾಲಿ, ರಾಖಿ, ಬಿಂದಿಯಾ ಗೋಸ್ವಾಮಿ, ಶಬಾನಾ ಆಙÂ್ಮ, ಸ್ಮಿತಾ ಪಾಟೀಲ, ಪರ್ವೀನ್ ಬಾಬಿ, ಙರೀನಾ ವಾಹಬ್ ಮತ್ತೂ ರೇಖಾ ಮುಂತಾದವರು ಎನ್ನಬಹುದು. ಆಗ ಸಿನೆಮಾ ಕನಿಷ್ಟ ಆರ್ಥಿಕ ಸೌಲಭ್ಯಗಳಲ್ಲಿ ದೊರಕ ಬಹುದಾಧ ಸಾರ್ವಜನಿಕ ಸಾರ್ಬಕಾಲಿಕ ಮನ ರಂಜನಾ ಮಾಧ್ಯಮವಾಗಿ ಇತ್ತು. ಆ ದಿನಮಾನಗಳಲ್ಲಿ ಬಾಲ್ಯದಿಂದ ಹದಿ ಹರೆಯಕ್ಕೆ ನಂತರ ತಾರುಣ್ಯಕ್ಕೆ ಜಾರಿದ ಯುವ ಪೀಳಿಗೆಗಳ ಸಿನೆಮಾ ಆದ್ಯತೆಗಳು ಬದಲಾಗಿದ್ದವು. ಸಿನೆಮಾಗಳನ್ನು ನೋಡುವ ಗ್ರಹಿಸುವ ರೀತಿಗಳು ಬದಲಾಗಿದ್ದವುಪ್ರದರ್ಶನ ಕಾಣುವ ಎಲ್ಲ ಚಿತ್ರಗಳು ಮನ ರಂಜಿಸುತ್ತಿರಲಿಲ್ಲ. ನಮ್ಮ ತೀವ್ರ ಆರ್ಥಿಕ ತೊಮದರೆಗಳು ತೀರ ಸಾಮಾನ್ಯ ಚಿತ್ರಗಳು ರಂಜಿಸಲು ವಿಫಲವಾಗುತ್ತಿದ್ದ ಕಾಲದಲ್ಲಿ ಆಯ್ದ ಸಿನೆಮಾಗಳನ್ನು ಮಾತ್ರ ನೊಡುವ ಒಂದು ವರ್ಗ ಸೃಷ್ಟಿÀಯಾಯಿತು;  ಅವರು ಎಂದರೆ ಸಿನೆಮಾ ನೋಡುಗರ ವಿಮರ್ಶೆ ಜೊತೆಗೆ ಆ ಕುರಿತು ಪತ್ರಿಕೆಗಳಲ್ಲಿ ಬರುವ ವಿಮರ್ಶೆಗಳನ್ನು ಓದಿ ಆಯಕೆ ಮಾಡಿ ಸಿನೆಮಾ ನೋಡುವ ವರ್ಗವೊಮದು ಬೆಳೆಯಿತು. ಆ ಕಾಲದಲ್ಲಿ ಸಿನೆಮಾ ಒಂದು ಬದಲಾವನೆಯ ಕಾಲ ಘಟ್ಟದಲ್ಲಿ ಇತ್ತು ಸಿನೆಮಾ ಸಂಗೀತ ತನ್ನ ಮಾಧುರ್ಯ ಕಳೆದು ಕೊಳ್ಳುತ್ತ ಸಾಗಿತ್ತು, ಕ್ರಮೇಣ ಯುವ ಜನತೆಗೆ ಯಾಂಗ್ರಿ ಯಂಗ್ ಮ್ಯಾನ್ ಇಮೇಜಿನ ನಾಯಕ, ಜೊತೆಗೆ ಕ್ಲಬ್ ಡಾನ್ಸ್‍ಗಳುಳ್ಳ ಚಿತ್ರಗಳು ಯಶಸ್ವಿಯಾಗುತ್ತಿದ್ದಂತೆ ಅದೇ ಫಾರ್ಮುಲಾವನ್ನು ಅನುಸಿರಿಸಿ ಬಹುತೇಕ ಚಿತ್ರಗಳು ತೆರೆ ಕಾಣಲು ಪ್ರಾರಂಭಿಸಿದವು. ಹೀಗಾಗಿ ನಮ್ಮಂತಹ ಅನೇಕರ ಮನದಾಳದಲ್ಲಿ ಹಳೆಯ ತಲೆಮಾರಿನ ನಟ ನಟಿಯರೆ ಉಳಿದು ಬಿಟ್ಟರು. ಆದರೂ ಚಿತ್ರಗಳನ್ನು ನೋಡುತ್ತಿದ್ದೆವು ಹೊಸ ತಲೆಮಾರಿನ ಕಲಾವಿದರು ಆಳವಾಗಿ ನಮ್ಮ ಮನದಾಳದಲ್ಲಿ ದಾಖಲಾಗಲಿಲ್ಲ. ಇಂತಹ ಒಂದು ಸಂಕೀರ್ಣ ಕಾಲಘಟ್ಟದಲ್ಲಿ ಬಂದಂತಹ ನಟ ನಟಿಯರ ಪೈಕಿ ದಕ್ಷಿಣದ ರಾಖಾ ಸಹ ಒಬ್ಬಳು. 
 
     ಹೊಸ ತಲೆಮಾರಿನ ಹೇಮಾ ಮಾಲಿನಿ, ಲೀನಾ ಚಂದಾವರಕರ್, ಬಬಿತಾ ನಾಯಕಿಯರ ಸ್ಥಾನಗಳಲ್ಲಿ ಗಟ್ಟಿಯಾಗಿ ತಳವೂರುತ್ತಿದ್ದರು. ಜಯಾ ಬಾಧುರಿ ಅಂತಹ ಸುಂದರ ನಟಿ ಅಲ್ಲದಿದರೂ ಆಭಿನಯದ ಕಾರಣದಿಂದಾಗಿ ಹೆಸರು ಮಾಡುತ್ತಿದ್ದಳು. ಈ ಕಾಲಘಟ್ಟದಲ್ಲಿಯೆ ಬಂದಾಕೆ ದಕ್ಷಿಣ ಭಾರತದ ಕೃಷ್ನ ಸುಂದರಿ ರೇಖಾ. ಸಾಮಾನ್ಯ ಚಿತ್ರಗಳಲ್ಲಿ ಅಭಿನಯಿಸುತ್ತ ಹಿಂದಿಯ ಪ್ರಮುಖ ನಟಿಯರ ಸಾಲಿಗೆ ಸೇರುವ ವರೆಗೆ ಸಾಗಿದ ಅವಳ ಚಿತ್ರರಂಗದ ಪಯಣ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ತಂದೆ ಎನ್ನಿಸಿಕೊಂಡವನ ನಿರ್ಲಕ್ಷ್ಯ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ತಾಯಿ ಕುಟುಂಬದದ ಆರ್ಥಿಕ ಸಂಕಷ್ಟಗಳ ಕಾರಣದಿಂದಾಗಿ ತನ್ನ ಬಾಲ್ಯದ ದಿನಗಳಲ್ಲಿಯೆ ಬಾಲ ನಟಿಯಾಗಿ ತೆಲುಗು ಚಿತ್ರರಂಗ ಪ್ರವೇಶಿಸಿ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಆಕೆ ಮುಂದೆ ನಾಯಕಿ ನಟಿಯಾಗಿ ಬಂದು ತಾರೆಯಾಗಿ ಬೆಳೆದು ಚಿತ್ರದಿಂದ ಚಿತ್ರಕ್ಕೆ ಅಭಿನಯದಲ್ಲಿ ಮಾಗುತ್ತ ಪರಿಪಕ್ವವಾದ ರೀತಿ ಆಕೆಯ ವೃತ್ತಿ ನಿಷ್ಟೆ ಮತ್ತು ಬದ್ಧತೆಗಳನ್ನು ತೋರಿಸುತ್ತದೆ. ಆಕೆಯ ಅಭಿನಯದ ಚಿತ್ರ ‘ಉಮ್ರಾವೊ ಜಾನ್’ ಒಂದು ಸಾರ್ವಕಾಲಿಕ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಕಳೆದ ಶತಮಾನದ ನೂರು ಶ್ರೇಷ್ಟ ಚಿತ್ರಗಳ ಆಯ್ಕೆ ಮಾಡಿದಾಗ ಆ ಪಟ್ಟಿಯಲ್ಲಿ ಈ ಚಿತ್ರ ಸಹ ಸೇರಿದ್ದು ಆಕೆಯ ಅಭ ಇನಯಕ್ಕೆ ಸಂದ ಗರಿ ಎನ್ನಬಹುದು.
                                                                                            *
     ರೇಖಾ ನಸ್ 1954 ನೇ ಇಸವಿ ಅಕ್ಟೋಬರ್ 10 ರಂದು ಮದ್ರಾಸಿನಲ್ಲಿ ಜನಿಸಿದಳು. ಈಕೆಯ ತಂದೆ ಖ್ಯಾತ ಚತುರ್ಭಾಷಾ ತಾರೆ ಮೂಲತಃ ತಮಿಳು ನಟನಾದ ಜೇಮಿನಿ ಗಣೇಶನ್ ತಾಯಿ ಪುಷ್ಪವಲ್ಲಿ ಆಕೆ ಮದ್ರಾಸಿನ ಪ್ರಸಿದ್ಧ ‘ಚರ್ಚ್ ಕಾನ್ವೆಂಟ್’ ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ. ಈಕೆಯ ಮಾತೃ ಭಾಷೆ ತೆಲುಗು, ಜೊತೆಗೆ ತಮಿಳು ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಮೇಲೆ ಈಕೆಗೆ ಪ್ರಭುತ್ವವಿದೆ. ಈಕೆಯ ಜನನದ ವೇಳೆ ಜೇಮಿನಿ ಮತ್ತು ಪುಷ್ಪವಲ್ಲಿ ಮದುವೆಯಾಗಿರಲಿಲ್ಲ. ಆಕೆಯ ತಂದೆಗೆ ಪುಷ್ಪವಲ್ಲಿಯಲ್ಲದೆ ಮೊದಲು ಮದುವೆಯಾದ ಖ್ಯಾತ ಅಭಿನೇತ್ರಿ ಸಾವಿತ್ರಿ ಜೊತೆಗೆ ಮದುವೆಯಾಗಿತ್ತು. ಪುಷ್ಪವಲ್ಲಿಯ ನಂತರ ಆತ ನಟಿ ರಾಜಶ್ರೀ ನಂತರ ಇನ್ನೊಬ್ಬ ನಟಿ ಜೊತೆ ಕೂಡ ಮದುವೆಯಾಗಿದ್ದ ಎಂಬ ವರ್ತಮಾನವಿದ್ದಂತೆ ನೆನಪು. ಈಕೆ ಬಾಲ್ಯದಲ್ಲಿ ತಂದೆಯ ಪ್ರೀತಿ ದೊರೆಯದೆ ಒಂದು ರೀತಿಯ ಅನಾಥ ಪ್ರಜ್ಞೆಯಲ್ಲಿ ನಲುಗಿ ಬೆಳೆದ ಮಗು ಈಕೆ. ಈಕೆಗೆ ಒಬ್ಬ ಸೋದರಿ ಇದ್ದಾಳೆ ಅಲ್ಲದೆ ಈಕೆಯ ತಂದೆಯ ಬೇರೆ ಸಂಭಂಧಗಳಲ್ಲಿ ಒಬ್ಬ ಸೋದರ ಐದು ಜನ ಸೋದರಿಯರು ಇದ್ದಾರೆ. ಆಕೆ ತನ್ನ ಸಿನೆಮಾ ಜೀವನದ ಪ್ರಾರಂಭಿಕ ಹಂತದಲ್ಲಿ ಹಿಂದಿ ಚಲನಚಿತ್ರ ರಂಗದಲ್ಲಿ ನೆಲೆ ಕಂಡು ಕೊಳ್ಳಲು ಪ್ರಯತ್ನ ನಡೆಸಿದ್ದ ಸಂಧರ್ಭದಲ್ಲಿ ಹೇಳಿ ಕೊಂಡಿದ್ದಳು. ರೇಖಾ ಅನಿವಾರ್ಯ ಕಾರಣಗಳಿಂದಾಗಿ ತನ್ನ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ ಅಭಿನಯ ವೃತ್ತಿಗೆ ತೊಡಗಿ ಕೊಂಡಳು. ಆಕೆಯ ಬಾಲ್ಯದ ದಿನಗಳಲ್ಲಿ ಆಕೆಗೆ ಅಭಿನಯ ವೃತ್ತಿಯ ಯಾವುದೆ ಸೆಳೆತವಿರಲಿಲ್ಲ. ಆದರೆ ಆಕೆಯ ತಾಯಿಯ ಆರ್ಥಿಕ ಪರಿಸ್ಥಿತಿ ತೀರಾ ಸಂಕಷ್ಟದ್ದಾಗಿತ್ತು. ಆ ಬವಣೆಯಿಂದ ನೀಗಿ ಕೊಳ್ಳಲು ಆಕೆ ಅಭಿನಯ ವೃತ್ತಿಗೆ ತೊಡಗಿದಳು. 
 
     ರೇಖಾಳ ಮೂಲ ಹೆಸರು ಭಾನುರೇಖಾ, ಆಕೆ ಬೇಬಿ ಭಾನುರೇಖಾ ಹೆಸರಿನಲ್ಲಿ 1966 ರಲ್ಲಿ ಬಾಲ ನಟಿಯಗಿ ‘ರಂಗೂಲಾ ರತ್ನಮ್’ ಎಂಬ ತೆಲುಗು ಚಿತ್ರದಲ್ಲಿ ನಟಸುವ ಮೂಲಕ ತನ್ನ ವೃತ್ತಿ ಬದುಕಿಗೆ Àತೊಡಗಿಸಿ ಕೊಂಡಳು. ಮುಂದೆ ಕನ್ನಡ ಚಿತ್ರ ‘ಆಪರೇಶನ್ ಜಾಕ್‍ಪಾಟ್‍ನಲ್ಲಿ ಸಿಐಡಿ 999’ ನಲ್ಲಿ ಖ್ಯಾತ ನಟ ರಾಜಕುಮಾರ್ ಜೊತೆ  ಒಮದು ಪಾತ್ರದಲ್ಲಿ ಕಾಣಿಸಿ ಕೊಂಡಳು. ಅದೇ ವರ್ಷ ಹಿಂದಿ ಚಿತ್ರ ‘ಅಂಜಾನಾ ಸಫರ್’ ನಲ್ಲಿ ಅಭಿನಯಿಸಿದಳು. ಆ ಚಿತ್ರದಲ್ಲಿ ಆಕೆ ಹಿಂದಿಯ ಹಿರಿಯ ನಟ ಬಿಶ್ವಜೀತ ಜೊತೆ ನಟಿಸಿದಳು. ಭಾರತದಾಚೆಯ ಮಾರುಕಟ್ಟೆಯ ದೃಷ್ಟಿಂಯಿಂದ ಚುಂಬವನ ದೃಶ್ಯದಲ್ಲಿ ಕಾಣಿಸಿಕೊಳ್ಳ ಬೇಕಾಗಿ ಬಂತು.ಇದನ್ನು ಏಶಿಯಾ ಆವೃತ್ತಿಯ ‘ಲೈಫ್ ಮ್ಯಾಗಜಿಣ್’ನಲ್ಲಿ ಪ್ರಕಟಿಸಲಾಯಿತು. ಆದರೆ ಈ ಚಿತ್ರ ಸೆನ್ಸಾರ್ ತೊಂದರೆಯಿಂದಾಗಿ ಪ್ರದರ್ಶನಕ್ಕೆ ಬರಲಿಲ್ಲ. ಮುಮದೆ ಒಂದು ದಶಕದ ನಂತರ 1979 ರಲ್ಲಿ ‘ದೋ ಶಿಕಾರಿ’ ಹೆಸರಿನಲ್ಲಿ ತೆರೆಗೆ ಬಂತು. ಆಕೆಯ ಚಿತ್ರರಂಗದ ಪ್ರಾರಂಭಿಕ ಬದುಕು ಅಷ್ಟೇನೂ ಆಹ್ಲಾದಕರವಾಗಿರಲಿಲ್ಲ. ಮೂಲತಃ ಆಕೆಗೆ ಅಭಿನಯ ವೃತ್ತಿಯಲ್ಲಿ ಇಷ್ಟವೆ ಇರಲಿಲ್ಲ. ತನ್ನ ಕುಟುಂಬದ ದಾರುಣ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಲ್ಲದ ಮನದಿಂದಲೆ ಅಭಿನಯ ವೃತ್ತಿಗೆ ಬರಬೇಕಾಗಿ ಬಂತು. ಹದಿ ಹರೆಯದ ವಯಸ್ಸು ಅಪರಿಚಿತ ಹಿಂದಿ ಚಿತ್ರರಂಗ ದಕ್ಷಿಣದಿಂದ ಬಂದವಳು ಬಾರದ ಹಿಂದಿ ಭಾಷೆ ವೃತ್ತಿ ಬಾಂಧವರ ಜೊತೆ ಸಂವಹಿಸುವಲ್ಲಿ ಭಾಷಾ ಕಾರಣದಿಂದಾಗಿ ಬಹಳ ತೊಂದರೆ ಮತ್ತು ಮುಜುಗರದ ಸನ್ನಿವೇಶಗಳನ್ನು ಎದುರಿಸ ಬೇಕಾಯಿತು. ಇವೆಲ್ಲಕ್ಕೂ ಮಿಗಿಲಾಗಿ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಾಯಿಯ ಸಾನಿಧ್ಯದಿಂದ ದೂರ ಉಳಿಯ ಬೇಕಾಗಿ ಬಂದುದು ಈ ಎಲ್ಲ ತೊಡಕುಗಳಿಂದ ಹೇಗೆ ಹೊರ ಬಂದಳೆಂಬುದನ್ನು ಆಕೆ ಮುಂದೆ ಒಮ್ಮೆ ಆಕೆ ಹೊರ ಜಗತ್ತಿಗೆ ತಿಳಿಸಿದಳು. ಆದರೆ ಅವೆಲ್ಲ ನೆನಪಿಸಿಕೊಂಡು ನುಡಿದ ಮಾತು ಬಹು ಮಾರ್ಮಿಕವಾದುದು. ಆಕೆ ಎಷ್ಟು ಭವುಕವಾಗಿ ‘ ನನ್ನ ಜೀವನದ ನೋವಿನ ಗಾಯಗಳು ಈಗ ಗುಇಣವಾಗಿವೆ ಆ ಕುರಿತು ನನ್ನ ಮದಲ್ಲಿ ಯಾವುದೆ ಕಹಿ ಭಾವನೆಗಳು ಈಗ ಉಳಿದಿಲ್ಲ ಆ ಕುರಿತು ಕೊರಗೂ ಇಲ್ಲ’ ಎಂದು ಎಳ್ಳಷ್ಟೂ ಸ್ವ ಮಮಕಾರವಿಲ್ಲದೆ ನುಡಿದಿದ್ದಾಳೆ. ಯಾಕೆಂದರೆ ಆಕೆ ಸಾಗಿ ಬಂದ ಹಾದಿ ಕಲ್ಲು ಮುಳ್ಳುಗಳಿಂದ ತುಂಬಿದ್ದ ಭಯಂಕರ ಕಷ್ಟದ ಕಡು ದಾರಿಯಾಗಿತ್ತು. 
 
     ತನ್ನ ಮುಂಬೈ ಹಿಂದಿ ಚಿತ್ರ ರಂಗದ ಬದುಕನ್ನು ಕುರಿತು ‘ಮುಂಬೈ ಚಿತ್ರರಂಗ ಒಂದು ಗೊಂಡಾರಣ್ಯ ಅದರಲ್ಲಿ ನಾನು ನಿಶ್ಯಸ್ತ್ರಳಾಗಿ ನಡೆದೆ ಇದು ನ್ನ ಜೀವನದ ಭಯಾನಕ ನೆನಪು. ಆ ಹೊಸ ಜಗತ್ತಿನ ಮಾರ್ಗಗಳು ನನಗೆ ಹೊಸದಾಗಿದ್ದವು. ಅನೇಕರು ನನ್ನ ಅಮಾಯಕತೆ ಮತ್ತು ಅಸಹಾಯಕತೆಯ ಪ್ರಯೋಜನ ಪಡೆಯಲು ಪ್ರಯತ್ನಿಸಿದರು. ನನ್ನ ಸಿನೆ ಬದುಕಿನ ಪ್ರಾರಂಭದ ದಿನಗಳಲ್ಲಿ ನಾನೇನು ಮಾಡುತ್ತಿದ್ದೇನೆ ಎಂದು ನನ್ನನ್ನು ನಾನೇ ಪ್ರಶ್ನಿ ಕೊಳ್ಳುತ್ತಿದ್ದೆ, ನನಗನಿಸುತ್ತಿತ್ತು ಐಸ ಕ್ರೀಮ್ ತಿನ್ನುತ್ತ ಸ್ನೇಹಿತರೊಂದಿಗೆ ತಮಾಷೆ ಮಾಡುತ್ತ ಕಲಿಯುತ್ತ ನಾನು ಶಾಲೆಯಲ್ಲಿರಬೇಕು ಎಂದು. ಜೊತೆಗೆ ಯಾಕೆ ಈ ವೃತ್ತಿಯನ್ನು ನಾನು ಒಪ್ಪಿ ಕೊಳ್ಳುವ ಸ್ಥಿತಿ ಬಂತು ಬಾಲ್ಯದ ಸಂತಸಗಳಿಂದ ವಂಚಿತಳಾದೆ, ನನ್ನ ಬದುಕಿನ ದುರವಸ್ಥೆಗಾಗಿ ಪ್ರತಿದಿನವೂ ಅತ್ತಿದ್ದೇನೆ. ಉದ್ರೇಕಕಾರಿ ಉಡುಪುಗಳು ಆಭರಣಗಳು ತಲೆ ಗೂದಲಿಗೆ ಹಾಕುತ್ತಿದ್ದ ಹೇರ್ ಸ್ಪ್ರೇ ಎಷ್ಟು ತೊಲೆದರೂ ಹೋಗುತ್ತಿರಲಿಲ್ಲ ಅದು ನನ್ನನ್ನು ಅಲರ್ಜಿಯಿಂದ ನರಳುವಂತೆ ಮಾಡುತ್ತಿತ್ತು. ಪರಿಸ್ಥಿತಿ ಬಲವಂತವಾಗಿ ನನ್ನನ್ನು ಈ ವೃತ್ತಿಗೆ ದೂಡಿತು ಎನ್ನ ಬಹುದು. ನನ್ನನ್ನು ಒಂದು ಸ್ಟುಡಿಯೋದಿಂದ ಮತ್ತೊಂದು ಸ್ಟುಡಿಯೋಗೆ ಕರೆದೊಯ್ಯಲಾಗುತ್ತಿತ್ತು ಎನ್ನುವುದಕಿಂತ ಎಳೆದೊಯ್ಯಲಾಗುತ್ತಿತ್ತು ಎನ್ನುವ ¥ದ ಪ್ರಯೋಗ ಸರಿ ಏನೋ! ನೆನಪಿಡಿ ಆಗ ಕೇವಲ 13 ವರ್ಷದವಳಾಗಿದ್ದ  ನನಗೆ ಇದೆಲ್ಲ  ಭಯಾನಕವೆನಿಸುತ್ತಿತ್ತು. ಎಂದಿದ್ದಾಳೆ. ಮುಂದೆ ಆಕೆ 16 ವರ್ಷದವಳಿರುವಾಗ 1970 ರಲ್ಲಿ ಆಕೆ ಅಭಿನಯಿಸಿದ ‘ಅಮ್ಮಾ ಕೋಸಮಾ’ ಎಂಬವ ತೆಲುಗು ಮತ್ತು ಹಿಂದಿಯ ‘ಸಾವನ್ ಬಾಧೋ’ ಎಂಬ ಚಿತ್ರಗಳು ತೆರೆಗೆ ಬರುತ್ತವೆ. ಹಿಂದಿ ಚಿತ್ರ ಯಶಸ್ಸು ಪಡೆಯುತ್ತದೆ. ಈ ಚಿತ್ರದಿಂದ ಯಶಸ್ಸಿನಿಂದಾಗಿ ದಿನ ಬೆಳಗಾಗುವುದರೊಳಗೆ ಆಕೆ ತಾರೆಯಾಗುತ್ತಾಳೆ. ನಂತರ ರಾಜೇಶ ಖನ್ನಾ ಜೊತೆ ಅಭಿನಯಿಸಿದ .ನಮಕ್ ಹರಾರ್ಮ’ ಚಿತ್ರ ಆಕೆಗೆ ಹೆಸರು ತಂದು ಕೊಡುತ್ತದೆ. ಈ ಚಿತ್ರದಲ್ಲಿ ಅಮಿತಾಬ್ ಒಂದು ಸಹ ಪಾತ್ರದಲ್ಲಿ ಅಭಿನಯಿಸಿದ್ದ. ನಂತರ ಆಕೆ ಅನೇಕ ರೊಮ್ಯಾಂಟಿಕ್ ಚಿತ್ರಗಳಲ್ಲಿ ಅಭಿನಯಿಸುತ್ತಾಳೆ, ಅವೆಲ್ಲ ಯಶಸ್ವಿ ಯಾಗುತ್ತವೆ. ಅವುಗಳ ಪೈಕಿ ಕೆಲವನ್ನು ಹೆಸರಿಸುವುದಾದಲ್ಲಿ ‘ರಾಮ್‍ಪುರ ಕಾ ಲಕ್ಷ್ಮಣ(1972)’, ‘ಕಹಾನಿ ಘರ್ ಘರ್ ಕಿ (1973)’ ಮತ್ತು ‘ಪ್ರಾಣ್ ಜಾಯೆ ಪರ್ ವಚನ್ ನಾ ಜಾಯ್(1974). ಆದರೂ ಆಕೆಯ ಅಭಿನಯದ ತಾಕತ್ತಿನ ಬಗೆಗೆ ಒಡುಕು ಧ್ವನಿಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಆಕೆಯ ಕಪ್ಪು ಮೈಬಣ್ಣ ಅನಾಕರ್ಷಕ ವ್ಯಕ್ತಿತ್ವ ಉಡುಗೆ ತೊಡುಗೆ ಬಗೆಗಿನ ನಿರ್¯ಕ್ಷ್ಯದಿಂದಾಗಿ ಆಕೆಯನ್ನು ಬಾತುಗೋಳಿ ಎಂದು ಹಾಸ್ಯ ಮಾಡುತ್ತಿದ್ದರು. ಪ್ರಮುಖ ಕಾರಣ ಕಪ್ಪು ಮೈಬಣ್ಣ ಮತ್ತು ದಕ್ಷಿನ ಭಾರತೀಯ ಮಹಿಉಲೆಯ ಮುಖ ಚಹರೆಗಳು ಪ್ರಮುಖವಾಗಿದ್ದವು. ಈ ಅಭಿಪ್ರಾಅಯದಿಂದಾಗಿ ಆಕೆ ಬಹಳ ನೊಂದು ಕೊಳ್ಳುತ್ತಿದ್ದಳು. ಅದಕ್ಕೂ ಮಿಗಿಲಗಿ ಆಕೆಯ ಮನವನ್ನು ಘಾಸಿಗೊಳಿಸುತ್ತಿದ್ದುದು ಆಕೆಯ ಸಮಕಾಲೀನ ನಟಿಯರ ಜೊತೆ ಹೋಲಿಕೆ ಮಾಡಲಾಗುತ್ತಿತ್ತು, ಅವರೆಲ್ಲ ಬಹುತೇಕ ಗೌರ ವರ್ಣದವರು ಮತ್ತು ಉತ್ತರ ಭಾರತೀಯರು ಎನ್ನುವ ಕಾರಣಕ್ಕಾಗಿ. ಆದರೆ ಆಕೆ ತನ್ನ ವ್ಯಕ್ತಿತ್ವವನ್ನೆ ತನ್ನ ಗುಣವನ್ನಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿ ಕಾರ್ಯಗತ ಮಾಡಿ ಯಶಸ್ಸು ಪಡೆದಳು.. 
 
     ಈ ಅವಧಿಯಲ್ಲಿ ಆಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬದಲಾವಣೆ ತಂದು ಕೊಂಡಳು, ಮೇಕಪ್ ಉಡುಗೆ ತೊಡುಗೆ ಅಭಿನಯದಲ್ಲಿ ತನ್ನ ತನ ಕಂಡು ಕೊಂಡಳು, ಹಿಂದಿ ಭಾಷೆಯನ್ನು ಚೆನ್ನಾಗಿ ಕಲಿತು ಪರಿಣತಿ ಸಾಧಿಸಿದಳು. ದೇಹದ ತುಕವನ್ನು ಇಳಿಸಿ ಕೊಳ್ಳಲು ಆಹಾರ ಪಾನೀಯಗಳ ಸೇವನೆಯಲ್ಲಿ ನಿಯಮಿತತನ ಮಿತಿಯನ್ನು ಹಾಕಿ ಕೊಂಡಳು. ಯೋಗಾಭ್ಯಾಸ ರೂಢಿಸಿ ಕೊಂಡಳು. ಒಟ್ಟಾರೆಯಾಗಿ ಹೇಳ ಬೇಕೆಂದರೆ ನಾಯಕ ನಟಿಗೆ ಅವಶ್ಯವಾದ ಅಂಗ ಸೌಷ್ಟವನ್ನು ಸಿನೆ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದುದು ಪ್ರಶಂಸಾರ್ಹ. ತನ್ನದೇ ಆದ ಅಭಿನಯ ಶೈಲಿಯನ್ನು ರೂಢಿಸಿಕೊಂಡಳು ಪಾತ್ರಗಳ ಆಯ್ಕೆಯಲ್ಲಿ ಎಚ್ಚರ ವಹಿಸಿದಳು. ಇದು ಆಕೆ ವೃತ್ತಿ ಬದುಕಿನ ದಿಕ್ಕನ್ನೆ ಬದಲಿಸಿ ಆಕೆಗೆ ಹೆಸರು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು. 1976 ರಲ್ಲಿ ಬಂಗಾಲಿ ಲೇಖಕ ನಿರಂಜನ ಗುಪ್ತಾರ ಬಂಗಾಲಿ ಕಾದಂಬರಿ ‘ರಾತ್ರಿರ್ ಯಾತ್ರಿ’ ಆಧರಿತ ಚಿತ್ರ ‘ದೋ ಅಂಜಾನೆ’ ತೆರೆಗೆ ಬಂತು. ಇದರಲ್ಲಿ ನಾಯಕ ನಟನಾಗಿ ಅಮಿತಾಬ್ ಅಭಿನಯಿಸಿದ್ದ ದುಲಾಲ್ ಗುಹಾ ನಿರ್ದೇಶನದ ಈ ಚಿತ್ರದಲ್ಲಿ ಮಹತ್ವಾಕಾಂಕ್ಷಿ ಹೆಂಡತಿಯ ಪಾತ್ರದಲ್ಲಿ ರೇಖಾಳ ಅಭಿನಯ ಅಮೋಘವಾಗಿತ್ತು. ಇದು ಆಕೆಯ ಅಭಿನಯ ಬದುಕಿಗೊಂದು ತಿರುವು ತಂದು ಕೊಟ್ಟಿತು. ಈ ಚಿತ್ರದಲ್ಲಿನ ಅವಳ ಅಭಿನಯ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. 1978 ರಲ್ಲಿ ತೆರೆ ಕಂಡ ‘ಘರ್’ ಚಿತ್ರದಲ್ಲಿನ ಆಕೆಯ ಅಭಿನಯ ಲಾ ಜವಾಬ್. ಇದರಲ್ಲಿ ಆಕೆಯದು ಅತ್ಯಾಚಾರಕ್ಕೊಳಗಾದ ಬಲಿ ಪಶು ಗೃಹಿಣಿಯ ಪಾತ್ರ. ಈ ಚಿತ್ರದ ನಾಯಕ ನಟ ವಿನೋದ ಮೆಹ್ರಾ. ಇದರಲ್ಲಿ ಮದುವೆಯಾದ ಹೆಣ್ಣು ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಪಾತ್ರ, ಒಮದು ಕಡೆಗೆ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗಂಡನ ನಿರ್ವಾಜ್ಯ ಪ್ರೇಮವಿದ್ದರೆ ಮತ್ತೊಂದೆಡೆ ಸಾಮೂಹಿ ಅತ್ಯಾಚಾರದ ಆಘಾತದ ಕಹಿ ನೆನಪು. ನಾಯಕಿ ಪಾತ್ರದ ಮಾನಸಿಕ ತುಮುಲವನ್ನು ಬಹಳ ಸಮರ್ಥವಾಗಿ ಅಭ ಇವ್ಯಕ್ತಿಗೊಳಿಸಿ ನಟಿಸಿದ್ದು ರೇಖಾಳ ಅಭಿನಯದ ಅಗ್ಗಳಿಕೆ. ಈ ಚಿತ್ರ ರೇಖಾ ಎಂತಹ ಪರಿಪಕ್ವ ಅಭಿನಯದ ನಾಯಕಿ ನಟಿ ಎಂದು ಜಗತ್ತಿಗೆ ತೋರಿಸಿ ಕೊಟ್ಟ ಚಿತ್ರ. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಆಕೆಯ ಹೆಸರು ಆ ವರ್ಷದ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಗಾಗಿ ಹೆಸರಿಸಲ್ಪಟ್ಟಿತು. ಅದೇ ವರ್ಷ ಆಕೆ ಅಮಿತಾಬ್ ಜೊತೆಗೆ ನಟಿಸಿದ ‘ಮುಕದ್ದರ್ ಕಾ ಸಿಕಂದರ್’ ಚಿತ್ರ ಹಣ ಗಳಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿತು. ಇದರಲ್ಲಿ ಆಕೆಯದು ನರ್ತಕಿ ಝೋಹ್ರಾಳ ಪಾತ್ರದಲ್ಲಿ ನೀಡಿದ ಆಭಿನಯ ಮನ ಮುಟ್ಟುವಂತಿತು. ಆ ದಶಕದಲ್ಲಿ ಆಕೆ ಅತ್ಯುತ್ತಮ ಅಭಿನಯದ ಚಿತ್ರಗಳನ್ನು ನೀಡಿದಳು. 
 
     1980 ರ ದಶಕದಲ್ಲಿ ಆಕೆ ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಖೂಬ್ ಸೂರತ್’ ಚಿತ್ರದಲ್ಲಿ ಮಂಜು ದಯಾಳಳ ಪಾತ್ರದಲ್ಲಿ ಹಾಸ್ಯ ಮಿಶ್ರಿತ ಅಭಿನಯದ ಪಾತ್ರದಲ್ಲಿ ನಾಯಕಿಯಾಗಿ ನಟಿಸಿ ಆ ವರ್ಷದ ಫಿಲಂ ಪೇರ್ ಪ್ರಶಸ್ತಿ ಪಡೆದಳು. ‘ ದೀ ಟ್ರಬೂನ್ ಪತ್ರಿಕೆ’ ರೇಖಾಳ ಅಭಿನಯವನ್ನು ನೈಜ್ ಕಾಮಿಕ್ ಎಂದು ಬಣ್ಣಿಸಿ ಮೆಚ್ಚುಗೆ ಸೂಚಿಸಿತು. ಮುಂದೆ ರೇಖಾಅ ಅಮಿತಾಬ್ ಜೊತೆಗೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದಳು ಬಹುತೇಕ ಅವೆಲ್ಲ ಯಾಸ್ವಿ ಚಿತ್ರಗಳು. ಈ ಯಶಸ್ವಿ ತಾರಾಗಣದ ಕುರಿತು ಚಿತ್ರರಂಗದ ಹೊರಗೂ ಅವರ ಸಂಬಂಧದ ಕುರಿತು ಊಹಾ ಪೋಹಗಳಿಂದ ಕೂಡಿದ ಗಾಳಿ ಮಾತುಗಳು ಹರಡಿದವು ಈ ವಿಚಾರ ಮಾಧ್ಯಮದಲ್ಲಿ ಪ್ರಚಾರ ಪಡೆಯಿತು ಕಾರಣ ತೀವ್ರ ಆಕ್ಷೇಪಕರವಾದ ಟೀಕೆ ಟಿಪ್ಪಣೆಗಳನ್ನು ವಿಶೇಷವಾಗಿ ರೇಖಾ ಎದುರಿಸ ಬೇಕಾಯಿತು. ಈ ತಾರಾ ಜೋಡಿಯ ಕೊನೆಯ ಚಿತ್ರ 1981 ರಲ್ಲಿ ತೆರೆ ಕಂಡ ಯಶ್ ಛೋಪ್ರಾ ನಿರ್ಮಾಣದ ‘ಸಿಲ್ ಸಿಲಾ’. ಇದರಲ್ಲಿ ಜಯಾ ಬಚ್ಚನ್ ನಾಯಕನ ಹೆಂಡತಿಯ ಪಾತ್ರ ನಿರ್ವಹಿಸಿದ್ದರೆ ರೇಖಾ ಆತನ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿ ಕೊಂಡಳು.. ಇದೊಂದು ಸಂಕೀರ್ಣ ತ್ರಿಕೋನ ಪ್ರೇಮದ ಕತೆ. ಮೂವರೂ ಅದ್ಭುತ ಅಭಿನಯದ ತಾಕತ್ತಿನವರೆ ಎಲ್ಲರೂ ಸ್ಪರ್ದೆಗೆ ಬಿದ್ದವರಂತೆ ಅಭಿನಯಿಸಿದ ಚಿತ್ರವಿದು. ಮುಂದೆ ರೇಖಾ ಅಮಿತಾಬ್ ಜೊತೆಗೆ ಯಾವ ಚಿತ್ರಗಳಲ್ಲಿಯೂ ಅಭಿನಯಿಸಲಿಲ್ಲ ಅದೊಂದು ಚಿತ್ರ ರಸಿಕರನ್ನು ನಿರಾಶೆಗೊಳಿಸಿದ ಸಂಗತಿ. ಅವಳನ್ನು ಮತ್ತು ಅವಳ ನಟನೆಯನ್ನು ಲೇವಡಿ ಮಾಡಿದ್ದ ಮಾಧ್ಯಮಗಳೆ ಅವಳನ್ನು ಅವಳ ಅಭಿನಯವನ್ನು ಪ್ರಶಂಸಿಸಿದವು. ಈ ಎಲ್ಲ ಶ್ರೇಯ ತಾನು ಮಾಡುತ್ತಿದ್ದ ಯೋಗ ನಿಯಮಿತ ಆಹಾರ ಸೇವನೆ ಮತ್ತು ಶಿಸ್ತು ಬದ್ಧ ಜೀವನ ಎಂದಳು. ಈ ಕುರಿತು ಆಕೆ 1983 ರಲ್ಲಿ ‘ರೇಖಾಸ್ ಮೈಂಡ್ & ಬಾಡಿ ಟೆಂಪಲ್’ ಎಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದಳು. 
 
     ತನ್ನ ಚಿತ್ರ ಜೀವನದ ಅರ್ಧ ಪಯಣದ ನಂತರ ಅಭಿನಯ ಬದುಕನ್ನು ನಿಲ್ಲಿಸಿ ಆಯ್ದ ಸೂಕ್ತ ಭಿನ್ನ ಶೈಲಿಯ ಚಿತ್ರಗಳಲ್ಲಿ ಮಾತ್ರ ನಟಿಸಿದಳು. ಮುಂದೆ ಕೆಲ ವಿವಾದಾತ್ಮಕ ಚಿತ್ರಗಳಲ್ಲಿ ಸಹ ನಟಿಸಿದಳು. ಆ ಪೈಕಿ ಪ್ರೇಮದ ಕುರಿತ ಕಥೆ ಹೊಂದಿದ ‘ಕಾಮ ಸೂತ್ರ’ವೂ ಸಹ ಓಂದು. ವಿದೇಶಿ ನಿರ್ಮಾಣ ಸಂಸ್ಥೆಯ ಈ ಚಿತ್ರವನ್ನು ಮೀರಾ ನಾಯರ್ ನಿರ್ದೇಶಿಸಿದಳು. ಅನೇಕರು ಇದು ರೇಖಾಳ ಸಿನೆ ಬದುಕಿನಲ್ಲಿ ಗಳಿಸಿದ ಹೆಸರಿಗೆ ಕಳಂಕ ತರುವಂತಹದು ಎಂದು ಆತಂಕ ವ್ಯಕ್ತ ಪಡಿಸಿದ್ದರು. ಈ ಚಿತ್ರದಲ್ಲಿ ಆಕೆಯದು ಶಿಕ್ಷಕಿಯ ಪಾತ್ರ. ನಂತರ ಉಮೇಶ ಮೆಹ್ರಾ ನಿರ್ದೆಶನದ ‘ಖಿಲಾಡಿಯೋ ಕಾ ಖಿಲಾಡಿ ಎಂಬ ಸಾಹಮಯ ಚಿತ್ರದಲ್ಲಿ ನಟಿಸಿದಳು. ಆ ವರ್ಷ ಇದು ಅತ್ಯುತ್ತಮ ಗಳಿಕೆ ಮಾಡಿದ ಚಿತ್ರವೆಂದು ಹೆಸರು ಪಡೆಯಿತು. ಇದರಲ್ಲಿ ಆಕೆ ಋಣಾತ್ಮಕ ಗುಣ ಸ್ವಭಾವದ ಮೇಡಂ ಮಾಯಾಳ ಪಾತ್ರದಲ್ಲಿ ಅಭಿನಯಿಸಿದ್ದಳು. ಈ ಪಾತ್ರ ದುರ್ಗುಣಿ ಮತ್ತು ಪಾತಕಿಯೊಬ್ಬಳು ಅಮೇರಿಕಾದಲ್ಲಿ ಕಾನೂನು ಬಾಹಿರವಾಗಿ ಬಾಕ್ಸಿಂಗ್ ಪಂದ್ಯಗಳನ್ನು ನಡೆಸುವ ನಾಯಕಿಯ ಪಾತ್ರ. ಇದರಲ್ಲಿ ಆಗಿನ ತರುಣ ನಟ ಅಕ್ಷಯ ಕುಮಾರ ಸಹ ನಟಿಸಿದ್ದ. ಈ ಚಿತ್ರದಲ್ಲಿನ ಆಕೆಯ ಅಭಿನಯಕ್ಕಾಗಿ ಆ ವರ್ಷ ಫಿಲಂ ಫೇರ್ ಅತ್ಯುತ್ತಮ ಪೋಷಕ ನಟಿ ಮತ್ತು ಉತ್ತಮ ಖಳನಾಯಕಿ ಎಂದು ಪ್ರಶಸ್ತಿ ನೀಡಿ ಗೌರವಿಸಿತು. 1999 ರಲ್ಲಿ ಮತ್ತೊಂದು ವಿವಾದಾತ್ಮಕ ಚಿತ್ರ ‘ಆಸ್ತಾ’ ದಲ್ಲಿ ಅಭಿನಯಿಸಿದಳು. ಇದು ಶ್ರೇಷ್ಟ ನಿರ್ದೇಶಕ ಬಾಸು ಚಟರ್ಜಿಯವರ ಕೊನೆಯ ಚಿತ್ರ ಸಹ ಆಗಿತ್ತು. ಇದು ಗೃಹಿಣಿಯೋರ್ವಳು ವೇಶ್ಯಾವೃತ್ತಿಯೆಡೆಗೆ ಮನಸು ಮಾಡುವ ಪಾತ್ರ. ಇದರಲ್ಲಿನ ನಟನೆಗಾಗಿ ಆಕೆ ಆ ವರ್ಷದ ‘ಸ್ಟಾರ್ ಸ್ಕ್ರೀನ್ ಅವಾರ್ಡ’ ಗಾಗಿ ಹೆಸರಿಸಲ್ಪಟ್ಟಿತು. ಈ ಚಿತ್ರದಲ್ಲಿನ ಅವಳ ನಟನೆಯ ಕುರಿತು ಸಾರ್ವತ್ರಿಕವಾಗಿ ಟೀಕೆ ಟಿಪ್ಪಣೆಗಳು ಕೇಳಿ ಬಂದವು. ಈ ಕುರಿತು ಆಕೆ ‘ಜನ ನನ್ನ ಪಾತ್ರದ ಕುರಿತು ಬಹುವಾಗಿ ಮಾತನಾಡುತ್ತಾರೆ. ಯವುದೆ ಪಾತ್ರದಲ್ಲಿ ಅಭಿನಯಿಸಲು ನನ್ನ ತೊಂದರೆಯಿಲ್ಲ ನಾನು ಈಗ ಯಾವ ಹಂತ ತಲುಪಿದ್ದೇನೆಂದರೆ ನನ್ನ ಅಭಿನಯ ವೃತ್ತಿಗೆ ಸವಾಲಾಗಿ ಬರುವ ತಾಯಿ ಅತ್ತೆ ನಕಾರಾತ್ಮ ಇಲ್ಲ ಸಕಾರಾತ್ಮಕ ಅಥವಾ ಬೇರಾವುದೆ ಪಾತ್ರ ಬರಲಿ ಅದಕ್ಕೆ ನ್ಯಾಯ ಒದಗಿಸುವುದು ಅಭಿನೇತ್ರಿಯಾಗಿ ನನ್ನ ಕರ್ತವ್ಯ’ ಎಂದಿದ್ದಳು. ಆಕೆ 2000 ನೇ ಇಸ್ವಿಯಲ್ಲಿ ಟಿ.ರಾಮರಾವ್ ನಿರ್ದೇಶನದ ‘ಬುಲಂದಿ’ ಚಿತ್ರದಲ್ಲಿ ಅಭಿನಯಿಸಿದಳು. 2001` ರಲ್ಲಿ ರಾಜಕುಮಾರ ಸಂತೋಷಿ ನಿರ್ದೇಶನದ ಸ್ತ್ರೀವಾದಿ ಚಿತ್ರ ‘ಲಜ್ಜಾ’ ಚಿತ್ರದಲ್ಲಿ ಅಭಿನಯಿಸಿÀದಳು. ಇದರ ಕಥೆ ಆ ಇತ್ರ ತಯಾರಿಕೆಯ ಎರಡು ವರ್ಷ ಮೊದಲು ಭವಾನಿಪುದಲ್ಲಿ ನಡೆದಿತ್ತು ಎನ್ನಲಾದ ವಿವಾಹಿತ ಮಹಿಳೆಯೋರ್ವಳ ಮೇಲಿನ ಅತ್ಯಾಚಾರ ಪ್ರಕರಣ ಕುರಿತಾದ ಕಥೆ ಇದಾಗಿತ್ತು. ಮೂರು ಪ್ರಮುಖ ಘಟ್ಟಗಳಲ್ಲಿ ಸತೆರೆದು ಕೊಳ್ಳುತ್ತ ಹೋಗುವ ಕಥೆ ಇದು. ಹಳ್ಳಿಯೊಂದರ ದಲಿತ ಮಹಿಳೆ ರಾಮ ದುಲಾರಿಯ ಪಾತ್ರದಲ್ಲಿ ನಟಿ ‘ಮನೀಷಾ ಕೋಯಿರಾಲಾ’ ನಟಿಸಿದ್ದರೆ ಅಷ್ಟೆ ಪ್ರಮುಖ ಪಾತ್ರವೊಂದರಲ್ಲಿ ರೇಖಾ ಸಹ ಅಭಿನಯಿಸಿದ್ದಳು. ಈ ಚಿತ್ರದಲ್ಲಿನ ಅಭಿನಯಕ್ಕಗಿ ಆಕೆಯ ಹೆಸರು ಆ ವರ್ಷದ ಅತ್ಯುತ್ತಮ ಫಿಲಂ ಫೇರ್ ಪೋಷಕ ನಟಿ ಪ್ರಶಸ್ತಿಗಾಗಿ ಹೆಸರಿಸಲ್ಪಟ್ಟಿತ್ತು. 
 
     ನಂತರ ರಾಕೇಶ್ ರೋಶನ್ ನಿರ್ಮಾಣ ನಿರ್ದೇಶನದ ಚಿತ್ರ ‘ಕೋಯಿ ಮಿಲ್ ಗಯಾ’ ದಲ್ಲಿ ಬುದ್ಧಿಮಾಂದ್ಯ ಮಗ ಹೃತಿಕ್ ರೋಶನ್‍ನ ತಾಯಿಯಾಗಿ ಸೋನಿಯಾ ಮೆಹ್ರಾ ಪಾತ್ರವಾಘಿ ಅತ್ಯುತ್ತಮವಾಗಿ ನಟಿಸಿ ಫಿಲಂ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಾಗಿ ಹೆಸರಿಸಲ್ಪಟ್ಟಳು. 2005 ರಲ್ಲಿ ಪ್ರದೀಪ ಸರ್ಕಾರರ ‘ಪರಿಣೀತಾ’ ಚಿತ್ರದಲ್ಲಿ ‘ಕೈಸಿ ಪಹೇಲಿ ಜಿಂದಗಾನಿ’ ಹಾಡಿನ ಚಿತ್ರೀಕರಣದ ಪಾತ್ರವೊಂಂದರಲ್ಲಿ ಕಾಣಿಸಿ ಕೊಂಡಳು. 2006 ರಲ್ಲಿ ‘ಕ್ರಿಶ್’ ಚಿತ್ರದಲ್ಲಿ ಅಭಿನಯಿಸಿದಳು. 2007 ರಲ್ಲಿ ಗೌ ತಮ್ ಘೋಷ್ ಚಿತ್ರ ‘ಯಾತ್ತಾ’ದಲ್ಲಿ ನರ್ತಕಿಯ ಪಾತ್ರದಲ್ಲಿ ಕಾಣಿಸಿ ಕೊಂಡಳು. ಇದು ಹಣ ಗಳಿಕೆಯಲ್ಲಿ ಸೋತಿತು. 2010 ರಲ್ಲಿ ಕೇಂದ್ರ ಸರ್ಕಾರ ಇವಳಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಶತ್ರುಘ್ನ ಸಿನ್ಹಾಮ ಮಗ ಲವ ಸಿನ್ಹಾನ ಚಿತ್ರ ‘ಸದಿಯಾಂ’ ದಲ್ಲಿ ಹೇಮಾ ಮಾಲಿನಿ ರಿಷಿ ಕಪೂರ ಜೊತೆಗೆ ನಟಿಸಿದಳು. ಇದೂ ಸಹ ಹಣ ಗಳಿಕೆಯಲ್ಲಿ ಸೋತ ಚಿತ್ರ. 2014 ರಲ್ಲಿ ಅಭಿಷೇಕ ಕಪೂರನ ಚಿತ್ರತ ‘ಫಿತೂರ್’ ನಲ್ಲಿ ಅಭಿನಯಿಸಿದಳು. ಇದು ಆಂಗ್ಲ ಕಾದಂಬರಿಕಾರ ಚಾಲ್ರ್ಸ್ ಡಿಕನ್ಸ್‍ನ ಕೃತಿ ‘ಗ್ರೇಟ್ ಎಕ್ಸ್‍ಪೆಕ್ಟೇಶನ್’ ಆಧಾರಿತ ಚಿತ್ರವಾಗಿತ್ತು. ಇದರಲ್ಲಿ ರೇಖಾಳ ಪಾತ್ರ ಕಾದಂಬರಿಯ ಮಿಸ್ ಹೆವಿಶಮ್‍ಳ ಹಿಂದೀಕರಣಗೊಂಡ ಬೇಗಮ್ ಪಾತ್ರದಲ್ಲಿ ಅಭಿನಯಿಸ ಬೇಕಿತ್ತು ಆದರೆ ಕಾರಣಾಂತರದಿಂದ ಅಭಿನಯಿಸಲಾಗಲಿಲ್ಲ. ಮುಂದೆ ಆ ಪಾತ್ರಕ್ಕೆ ತಬು ಆಯ್ಕೆಯಾದಳು. 2014 ರಲ್ಲಿ ರೇಖಾ ‘ಸೂಪರ್ ನಾನಿ’ ಚಿತ್ರದಲ್ಲಿ ಅಭಿನಯಿಸಿದಳು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚನ್, ಸೋನೂ ಸೂದ್ , ಜಾಕಿ ಶ್ರಾಫ್, ರಣಧೀರ ಕಪೂರ್, ಶರ್ಮನ್ ಜೋಶಿ ನಟಿಸಿದ್ದರು. 2015 ರಲ್ಲಿ ಆರ್.ಭಾಲ್ಕಿಯ ಚಿತ್ರ ಶಮಿತಾಬ್‍ನಲ್ಲಿ ನಟಿಸಿದಳು. 
 
     ಕೃಷ್ಣ ಸುಂದರಿ ರೇಖಾ ಒಬ್ಬ ಸಾಮಾನ್ಯ ನಟಿಯಾಗಿ ಬಂದು ಬದುಇಕಿಗಾಗಿ ಹೋರಾಟ ಮಾಡಿ ಸಮಾಜ ಮತ್ತು ಮಾಧ್ಯಮಗಳ ಟೀಕೆ ಟಿಪ್ಪಣೆಗಳನ್ನು ಅರಗಿಸಿಕೊಂಡು ಹಿಂದಿ ಚಲನಚಿತ್ರರಂಗದಲ್ಲಿ ಪ್ರವೇಶ ಪಡೆದು ತನ್ನದೆ ಸ್ಥಾನ ಸ್ಥಾಪಿಸಿಕೊಂಡು ಮೇರು ಸ್ಥರದಲ್ಲಿ ನಿಂತಿದ್ದಾಳೆ. ಆಕೆಯದು ಒಬ್ಬಂಟಿ ಬದುಕು. ಆಕೆಯ ವೃತ್ತಿ ಬದುಕಿನ ಏರು ಘಟ್ಟದಲ್ಲಿ ಆಕೆಯ ಹೆಸರು ಆಗಾಗ ಕಿರಣ್ ಕುಮಾರ್, ಶತ್ರುಘ್ನ ಸಿನ್ಹಾ, ಮಹೇಂದ್ರ ಸಂಧು, ವಿನೋದ ಮೆಹ್ರಾ ನಂತರ ಅಮಿತಾಬ್ ಜೊತೆ ಕೇಳಿ ಬಮದಿತ್ತು. ನಿಜವೋ ಸುಳ್ಳೋ ವದಂತಿಗಳು ಮತ್ರ ಚಾಲ್ತಿಯಲ್ಲಿದ್ದವು. ಯಾಕೋ ಆಕೆಗೆ ಮದುವೆಯ ಯೋಗ ಕೂಡಿ ಬಂದಿಲಿಲ್ಲ ಇದೇ ಕಾಲ ಘಟ್ಟದಲ್ಲಿ ಈಕೆ ಬಾಲಿಶ ಹೇಳ:ಇಕೆಯೊಂದನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದಳು. ‘ ಮದುವೆ ಬೇಡ ಮಗು ಬೇಕು’ ಎನ್ನುವ ಆಕೆಯ ಹೇಳ ಕುರಿತು ಕೆಲವರು ರೇಖಾ ಆಧುನಿಕ ಕುಂತಿಯಾಗಲು ಹೊರಟಿದ್ದಾಳೆ ಎಂದು ಲೆವಡಿ ಮಾಡಿದ್ದರು. ಆಕೆಯ ತಂದೆ ತನ್ನ ತಾಯಿಯನ್ನು ನಡೆಸಿಕೊಂಡ ರೀತಿ ಅವಳಲ್ಲಿ ಮದುವೆ ಕುರಿತು
ಭಯ ಹುಟ್ಟುವಂತೆ ಮಾಡಿತ್ತೆ ಗೊತ್ತಿಲ್ಲ! ಗೇಲಿ ಮಾತುಗಳನ್ನಾಡುವ ನಾಲಿಗೆಗಳಿಗೆ ಇವೆಲ್ಲ ಎಲ್ಲಿ ಅರ್ಥವಾಗಬೇಕು .ಆಕೆ ತನ್ನ ಅಭಿನಯ ಬದುಕಿನ ಸುವರ್ಣ ಕಾಲದ ಕೊನೆಯ ಘಟ್ಟದಲ್ಲಿ ದೆಹಲಿಯ ಉದ್ಯಮಿ ಮುಖೇಶ ಅಗರ್‍ವಾಲ್‍ನನ್ನ 1990ರಲ್ಲಿ ಮದುವೆಯಾದಳು. ಕೊನೆಗೂ ರೇಖಾ ಬದುಕು ಕಟ್ಟಿಕೊಂಡಳು ಎನ್ನುವಷ್ಟರಲ್ಲಿ ಆತ ಆತ್ಮಹತ್ಯೆ ಮಾಡಿ ಕೊಳ್ಳುತ್ತಾನೆ. ಆತನ ಸಾವು ಸಂಭವಿಸಿದಾಗ ರೇಖಾ ಲಂಡನ್‍ನಲ್ಲಿದ್ದಳು. 
 
     ಒಂದು ಕಾಲದಲ್ಲಿ ಯುಕರ ಹೃದಯದಲ್ಲಿ ಕಿಚ್ಚು ಹಚ್ಚಿಸಿ ಚಿತದ್ರ ರಸಿಕರ ಹೃದಯದಲ್ಲಿ ಸ್ಥಾನ ಪಡೆದಿದ್ದ ಗಂಧರ್ವಕನ್ಯೆ ಇಂದು ತಾನೇ ನಿರ್ಮಿಸಿಕೊಂಡ ಸುಂದರ ಅರಮನೆಯ ಬಂದಿ ಏಕಾಂಗಿ ಬದುಕು ಭಯ ಹುಟ್ಟಿಸುತ್ತಿದೆಯೆ? ನೆಮ್ದದಿ ತಂದಿದೆಯೆ? ತನ್ನ ಬದುಕು ಸಾಗಿ ಬಂದ ಬಗೆಗೆ ವಿಷಾದ ವಿದೆಯೆ? ಅದು ರೇಖಾಳ ಮನದಲ್ಲಿ ಬಂದಿ. ಆಕೆ ತಾನು ಕಂಡುಂಡು ಬಾಳಿದ ಬಾಳುತ್ತಿರುವ ಬದುಕಿಗೆ ಅಕ್ಷರ ರೂಪ ಕೊಟ್ಟರೆ ಅದೊಂದು ಮನ ಕಲಕುವ ದುರಂತ ಬದುಕಿನ ನಿರೂಪಣೆಯ ಕೃತಿ ಹೊರ ಬಂಧಿತು. ಆಕೆಯ ಬದುಕÀು ಜೀವನದ ಸಂಧ್ಯೆಯೆಡೆಗೆ ಮುಖ ಮಾಡಿದೆ. ಆಕೆಯನ್ನು ನೆನೆದಾಗಲೆಲ್ಲ ಆಕೆಯ ಅಸಹಾಯಕ ದುರಂತ ಬದುಕು ಕಣ್ಮುಂದೆ ಬಂದು ನಿಲ್ಲುತ್ತದೆ. ರೇಖಾ! ನೀನೊಬ್ಬಳೆ ಏಕಾಂಗಿ ಬದುಕು ನಡೆಸಿದವಳಲ್ಲ, ನಿನ್ನಂತೆ ಬದುಕುತ್ತಿರುವ ಆಶಾ ಪಾರೇಖ ಇದ್ದಾಳೆ, ಏಕಾಂಗಗಳಾಗಿ ಬದುಕು ಮುಗಿಸಿ ಹೋದ ಸುರಯ್ಯಾ,, ನಂದಾ, ಪರ್ವಿನ್ ಬಾಬಿ, ಮತ್ತು ನಾದಿರಾ ಇದ್ದರು. ಮುಸ್ಸಂಜೆಯೆಡೆಗೆ ಸಾಗಿರುವ ನಿನ್ನ ಉಳಿದ ಬದುಕು ನೆಮ್ಮದಿಯಿಂದ ಕೂಡಿರಲಿ, ನಿನ್ನ ಅಭಿಮಾನಿಗಳ ಸದಾಶಯ ನಿನ್ನ ಜೊತೆ ಸದಾಕಾಲ ಇರುತ್ತದೆ. ನಿನ್ನ ಸಾಧನೆಯ ಬದುಕಿಗೊಂದು ಹೃತ್ಪೂರ್ವಕ ನಮನ. 
 
 ಚಿತ್ರ ಕೃಪೆ - ಅಂತರ್ಜಾಲದ ರೇಖಾರವರ ಫೋಟೋ ಆಲ್ಬಂನಿಂದ                                                                                    

Rating
No votes yet

Comments

Submitted by nageshamysore Sun, 02/14/2016 - 23:03

ಪಾಟೀಲರೆ ನಮಸ್ಕಾರ.. ರೇಖಾ ಕುರಿತು ಇಡೀ ಸಮೂಲಾಗ್ರ ಮಾಹಿತಿಯನ್ನೆ ಸಂಗ್ರಹಿಸಿ ಕೊಟ್ಟುಬಿಟ್ಟಿದ್ದೀರಾ... ಆಪರೇಷನ್ ಜಾಕ್ಪಾಟಿನಲ್ಲಿ ಅವಳನ್ನು ನೋಡಿದಾಗಿನಿಂದಲು ನಾನಾಕೆಯ ಅಭಿಮಾನಿ. ಕಾಲೇಜು ದಿನಗಳಲ್ಲಿ ಅವಳ ಪೋಟೊಗಳಿದ್ದ ಕ್ಯಾಲೆಂಡರು ಮಾಡಿದ್ದು ಉಂಟು. ಸಮಗ್ರ ಮಾಹಿತಿಯ ಲೇಖನಕ್ಕೆ ಅಭಿನಂದನೆಗಳು..

Submitted by H A Patil Sat, 02/20/2016 - 19:44

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ರೇಖಾಳ ಲೇಖನ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದೀರಿ ಪಾರ್ಥಸಾರಥಿಯವರು ಬರಿ ತೀರಿ ಹೊದವರ ಬಗೆಗೆಯೆ ಬರೆಯುತ್ತೀರಿ ಬದುಕಿರುವರ ಕುರಿತೂ ಬರೆಯಿರಿ ಎಂದು ಬರೆದಿದ್ದ ಅವರು ಕೆಲ ಹೆಸರುಗಳನ್ನು ಸೂಚಿಸಿದ್ದರು, ಆ ಪೈಕಿ ರೇಖಾ ಹೆಸರು ಸಹ ಇದ್ದಿತು ಹೀಗಾಗಿ ಈ ಲೇಖನ ಮೂಡಿ ಬಂತು ಲೇಖನದ ಮೆಚ್ಚುಗೆಗೆ ಧನ್ಯವಾದಗಳು.

Submitted by kavinagaraj Tue, 02/16/2016 - 12:21

ನಮಸ್ತೆ, ಪಾಟೀಲರೇ. ಮಾದಕ ಸುಂದರಿ ರೇಖಾಳ ಹಲವು ಚಿತ್ರಗಳನ್ನು ನೋಡಿದ್ದೇನೆ. ಒಳ್ಳೆಯ ಕಲಾವಿದೆ. ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದವಳು. ಆಕೆಯ ಜೀವನಚಿತ್ರವನ್ನು ಸುಂದರವಾಗಿ ಮೂಡಿಸಿರುವಿರಿ.

Submitted by H A Patil Sat, 02/20/2016 - 19:48

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಬಹು ಗಂಭೀರ ಮತ್ತು ಮೌಲ್ಯಯುತ ಲೇಖನಗಳನ್ನು ಬರೆಯುವ ನೀವು ನಟಿಯೊಬ್ಬಳ ಲೇಖನಕ್ಕೆ ಪ್ರತಿಕ್ರಿಯಸಿರುವುದು ಮೆಚ್ಚುಗ ಸೂಚಿಸುರುವುದು ಸಂ ತಸ ತಂದಿದೆ ಮೆಚ್ಚುಗೆ ಗೆ ಧನ್ಯವಾದಗಳು ಸರ್‍.

Submitted by Palahalli Vishwanath Sat, 02/20/2016 - 20:45

In reply to by H A Patil

ರೇಖಾ ಅವರ ಜೀವ್ನದ ಬಗ್ಗೆ ನೀವುಅನೇಕ ಮಾಹಿತ್ಗಳನ್ನು ಕೊಟ್ಟಿದ್ದೀರಿ. ಲೇಖನ ಚೆನಾಗಿದೆ. ಅವರ ಉತ್ಸವ್ , ಇಜಾಜತ್ ಸಿಲ್ ಸಿಲಾ ನನಗೆ ಇಷ್ಟವಾದ ಚಿತ್ರಗಳು. ಅವ್ರು ಬಹಳ ಸ್ವಾರಸಕರ ವ್ಯಕ್ತಿ. ಅವರ ಕೆಲವು ಇ೦ಟರ್ ವ್ಯೂ ನೊಡಿದ್ದೇನೆ. ಬಹಳ ಫಿಲಾಸಫಿ ಮಾತಾಡ್ತಾರೆ. ಏನೋ ರಹಸ್ಯವಿರುವತರಹ ಇರುತ್ತಾರೆ. ಇಷ್ಟವಾಗುವ ವ್ಯಕ್ತಿತ್ವ.
ಮತ್ತೆ ಒ೦ದು ಬಾರಿ - ಲೇಖನ ಚೆನ್ನಾಗಿದೆ.

Submitted by H A Patil Mon, 02/29/2016 - 18:44

In reply to by Palahalli Vishwanath

ಪಾಲಹಳ್ಳಿ ವಿಶ್ವನಾಥರವರಿಗೆ ವಂದನೆಗಳು
ನಟಿ ರೇಖಾ ಕುರಿತ ಬರಹಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ. ನೀವು ನೋಡಿದ ಚಿತ್ರಗಳು ಅವಳು ತನ್ನ ಚಿತ್ರ ಜೀವನದ ಉತ್ತುಂಗದಲ್ಲಿದ್ದಾಗ ಬಂದಂತಹ ಉತ್ತಮ ಚಿತ್ರಗಳು. ಮನುಷ್ಯನ ಕಷ್ಟ ಕಾರ್ಪಣ್ಯಗಳ ದುರಂತಮಯ ಬದುಕು ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಜೀವಿಯನ್ನು ಅಂತರಮುಖಿಯನ್ನಾಗಿಸುತ್ತದೆ. ಅವರಿಗೆ ಮನಕ್ಕೆ ನೆಮ್ಮದಿ ಕೊಡುವಂತಹುದೆ ಬದುಕಿನ ಫಿಲಾಸಫಿ, ಅದಕ್ಕೆ ಇರಬೇಕು ನಿಮಗೆ ರೇಖಾಳ ಸಂದರ್ಶನಗಳು ರಹಸ್ಯಮಯವಾಗಿ ಕಂಡಿವೆ. ಅವಳ ವ್ಯಕ್ತಿತ್ವ ಇಷ್ಟವಾಗುವುದು ಎಂದಿದ್ದೀರಿ, ಮತ್ತೊಬ್ಬರ ನೋವಿಗೆ ಸ್ಪಂದಿಸುವ ನಿಮ್ಮ ಗುಣ ಇಷ್ಟವಾಗುವಂತಹದು, ಅದಕ್ಕೆ ನಿಮಗೆ ಈ ಲೇಖನ ನಿಮಗೆ ಹಿಡಿಸಿದೆ ಎನಿಸುತ್ತದೆ, ಮೆಚ್ಚುಗೆಗೆ ಧನ್ಯವಾದಗಳು.