ಕೆಟ್ಟ ಅಡುಗೆಯ ಮನೆಯನ್ನು ಹೋಟೆಲ್ ಎನ್ನುತ್ತೇವೆ --ಗಾದೆಗೊಂದು ಗುದ್ದು ೬೯
(೩೫೧) ಮೂಗುನತ್ತಿನ ಮೇಲಿನ ಪ್ರತಿಯೊಂದು ಬಿಂದುವೂ ಸಹ ತಾನು ಒಮ್ಮೆಯಾದರೂ ಒದ್ದೆಯಾಗಿಬಿಡುವ ಭಯ ಮತ್ತು ಸಾಧ್ಯತೆಯನ್ನು ಹೊಂದಿರುತ್ತದೆ.
(೩೫೨) ’ಪೇಜ್ ಥ್ರೀ’ಯನ್ನು ಒಳಗೊಂಡ ಪತ್ರಿಕೆಗಳ ಪ್ರತಿಪುಟದ ಸಂಖ್ಯೆಯೂ ಇಷ್ಠರಲ್ಲೇ ಪೇಜ್ ಥ್ರೀ ಆಗಿಬಿಡುವ ಸಾಧ್ಯತೆ ಮತ್ತು ಯೋಗ್ಯತೆ ಹೊಂದಿರುತ್ತದೆ.
(೩೫೩) ಪರಿಶ್ರಮವಿಲ್ಲದೆ ಬದುಕಿನ ಸ್ವಾದವನ್ನು ಅನುಭವಿಸುವ ಪ್ರಯತ್ನವೇ ಚಟ. ಚಟವಿಲ್ಲದ ಸ್ವಾಧಾನುಭವವು ವ್ಯಕ್ತಿಯನ್ನು ಪ್ರೌಢನನ್ನಾಗಿಸಿಬಿಡುತ್ತದೆ.
(೩೫೪) ನಾನು ಏನನ್ನೂ ನಂಬಲಾರೆ ಎಂಬ ನಂಬಿಕೆಯನ್ನೂ ನಂಬಲಾರೆ.
(೩೫೫) ಕೆಟ್ಟ ಅಡುಗೆಯ ಪರಿಣಾಮವಾಗಿ ನಿಮ್ಮ ಮನೆಯಿಂದ ಹೊರಗಿರಿಸಲಾಗಿರುವ ಅಡುಗೆಮನೆಯನ್ನು ಹೋಟೆಲ್ ಎಂದು ಕರೆಯಲಾಗುತ್ತದೆ.
Rating