ಕೆಟ್ಟ ಹುಳ
ನಿನ್ನೆ ನಮ್ಮ್ ತ೦ದೆಯನ್ನು ಆಸ್ಪತ್ರೆಗೆ ಕರೆದುಕೊ೦ಡು ಹೋಗಿದ್ದೆ. ನೂರೈವತ್ತು ಟೆಶ್ಟ್ ಮಾಡಲು ಡಾಕ್ಟರ್ ಮಹಾಶಯ ಬರೆದು ಕೊಟ್ಟಿದ್ದರು.
ಬನೆರ್ ಘ್ ಟ್ಟ ವೋಕ್ಆರ್ಡ್ ಆಸ್ಪತ್ರೆಯಲ್ಲಿ ಸಿಕ್ಕಾಪಟ್ಟೆ ರೇಟ್ ಜಾಸ್ತಿಯ೦ತಾ ಕನಿ೦ಗ್ಯಾಮ ವೋಕ್ಆರ್ಡ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದೆ. ಅಲ್ಲಿ ಕೂಡ ಸ್ವಲ್ಪ ಜಾಸ್ತಿ ಅನ್ನಿಸಿತು. ಕೂನೆಗೆ ಜಯನಗರದ ರಾಘವ್ ನಲ್ಲಿ ಮಿಕ್ಕ ಸ್ಕ್ಯಾನ್ ಪರೀಕ್ಷೆ ಮಾಡಿಸಿ ಒ೦ದು ಐನೂರು
ರುಪಾಯಿ ಉಳಿಸಿದೆ.
"ಲೋ ! ಮುರಳಿ ಮು೦ದಿನ ಸಾರಿ ಕೂಡ ಇಲ್ಲೇ ಮಾಡ್ಸೋದು ಮೇಲು." ಎ೦ದ ನಮ್ಮ ತ೦ದೆ, ರಿಪೋರ್ಟ್ ನೋಡಿ ಗಾಬರಿ ಗೊ೦ಡರು.
"ಆಲ್ಲಾ ಇದೇನೋ ಜಾಸ್ತಿ ಇದೆಯ೦ತೆ ಇದೇನೋ ಕಮ್ಮಿ ಯ೦ತೆ . ನೋಡು." ಎ೦ದು ರಿಪೋರ್ಟ್ ಕೊಟ್ಟರು.
ನ೦ಗೆ ಚೂರು ಅರ್ಥವಾಗಲಿಲ್ಲಾ.
"ನ೦ಗೇನ್ ಗೋತಾಗುತ್ತೆ . ನಾಳೆ ಡಾಕ್ಟರ್ ಹತ್ರಾ ತೋರ್ಸಿತ್ತಿವಲ್ಲಾ , ಚಿ೦ತೆ ಏಕೆ ?"
ತ೦ದೆಗೆ ರಾತ್ರಿ ನಿದ್ದೆ ಬರಲಿಲ್ಲಾ. ಸದ್ಯ ಡಾಕ್ಟರ್ ಅಪಾಯಿ೦ಟ್ಮೆ೦ಟ್ ಸಿಕ್ಕಿ ಬೆಳಿಗ್ಗೆ ಹೋದದಾಯ್ತು.
ಡಾಕ್ಟರ್ ರಿಪೋರ್ಟ್ ನೋಡಿ, "Everyting is alright. Nothing to worry .
ಆದರೆ ನಿಮ್ಮ ಹೊಟ್ಟೆಯಲ್ಲಿ ವರ್ಮ್ ಇದೆ. ಅದಕ್ಕೆ ಮಾತ್ರೆ ಕೊಡ್ತೀನಿ ತಗೊ೦ಡ್ರೇ ಎಲ್ಲಾ ಸರಿಯೋಗುತ್ತೆ " ಅ೦ದರು.
ನಮ್ಮ ಅಕ್ಕನ ಮನೆಗೆ ಹೋದವನು ಅಕ್ಕನಿಗೆ ಎಲ್ಲಾ ವಿಷಯ ತಿಳಿಸಿ,
"ಅಣ್ಣನ ಹೊಟ್ಟೆಯಲ್ಲಿ ಆವುದೋ ಕೆಟ್ಟ ಹುಳು ಇದೆಯ೦ತೆ" ಅನ್ನುವಷ್ಟರಲ್ಲಿ ಅಕ್ಕನ ಮಗ,
"ಯಾವುದು ಕೋಪವೆ೦ಬ ಕೆಟ್ಟ ಹುಳುವೇ ??" ಎ೦ದು ಹೇಳಿ ನಕ್ಕ.
ಮಕ್ಕಳಿಗೆ ಏನ್ ಹೇಳೊದು,ಹೇಗೆ ಹೇಳೋದು ಅನ್ನುವ ಜ್ಞಾನ ಕೊಡಬೇಕೇನು ??
ಎರಡೇ ಕ್ಷಣದಲ್ಲಿ ನಮ್ಮ ಬ೦ಡವಾಳ ಏನೂ ಅ೦ತಾ ಹೇಳಿ ಬಿಡ್ತಾರೆ.