ಕೆಲವರು ತುಂಬಾ ಫೋಟೋಜನಿಕ್, ಅದರಲ್ಲಿ ಮಾತ್ರ ಚೆನ್ನಾಗಿ ಕಾಣ್ತಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೪
(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್ಯ’ವನ್ನು ಸೆರೆಹಿಡಿದುಬಿಡಲು ಹೇಗೆ ಸಾಧ್ಯ?!
(೨೭೭) ಕೆಲವರು ತುಂಬಾ ’ಚಿತ್ರ’ವತ್ತಾಗಿರುತ್ತಾರೆ. ಅಂದರೆ ಕೇವಲ ಛಾಯಾಚಿತ್ರಗಳಲ್ಲಿ ಮಾತ್ರ ಚಂದ ಕಾಣುತ್ತಾರೆ!
(೨೭೮) ಸ್ವರ್ಗದಿಂದ ಧರೆಗಿಳಿವ ಪವಿತ್ರಜಲವು ಕೊಳಕುಜನರ ಸ್ಪರ್ಶಿಸಿ ಅಪವಿತ್ರವಾಗುವುದನ್ನು ತಪ್ಪಿಸುವ ಸಾಧನವೇ ಛತ್ರಿ!
(೨೭೯) ಮದ್ಯದಲ್ಲಿ ಹರಿವ ನದಿಗಿಂತಲೂ ಭಿನ್ನಾಭಿಪ್ರಾಯಗಳಿಂದ ಬೇರ್ಪಡಿಸಲ್ಪಟ್ಟ ಎರಡು ಬೆಟ್ಟಗಳನ್ನು ಒಂದುಗೂಡಿಸುವ ಭಾವವೇ ಸೇತುವೆ!
(೨೮೦) ಸ್ವಯಂ-ಅರಿವೆಂಬುದೇ ಅತ್ಯುತ್ತಮ ಪಾಠವೆಂದು ಅರಿವ ಕ್ರಿಯೆಯೇ ಬೋಧನೆ.
Rating
Comments
ಉ: ಕೆಲವರು ತುಂಬಾ ಫೋಟೋಜನಿಕ್, ಅದರಲ್ಲಿ ಮಾತ್ರ ಚೆನ್ನಾಗಿ ಕಾಣ್ತಾರೆಃ ...