ಕೆಲವು ಶಬ್ದಗಳು

ಕೆಲವು ಶಬ್ದಗಳು

ಈ ಶಬ್ದಗಳು / ಶಬ್ದರೂಪಗಳು ನಿಮಗೆ ಗೊತ್ತೇ ? ಅಥವಾ ಮರೆತಿದ್ದೀರಾ?
( ಗೊತ್ತಿದ್ದಷ್ಟನ್ನು ವಿವರಿಸಿದ್ದೇನೆ , ನಿಖರವಾಗಿ ಗೊತಿಲ್ಲದ್ದನ್ನು ಬಿಟ್ಟಿದ್ದೇನೆ- ನಿಮಗೆ ಗೊತ್ತಿದ್ದರೆ ತಿಳಿಸಿ)
ಆರಪಾರ -- ಈ ಗಾಡೀಗೆ ಎಲ್ಲಾ ಡಬ್ಬಿಗೂ ಆರಪಾರ ಹಾದಿ ಇರತSದ-- ’ಥ್ರೂ’
ಹತ್ತೀಲೆ / ಹಂತೇಕ / ಹತ್ತರ -- ಹತ್ತಿರ
ಫರಾಳ - ನಾಷ್ಟ /ತಿಂಡಿ
ಊಟಾ-ಉಡಿಗಿ
ಉಡಿಗಿ-ತೊಡಿಗಿ/ ವಸ್ತಾ-ಒಡಿವಿ -- ವಸ್ತ್ರಾಭರಣ
ಎದುರುಗೊಳ್ಳು - ಸ್ವಾಗತಿಸು
ಅಲ್ಲಾಬೆಲ್ಲಾ ತಗೆದುಕೊಳ್ಳು --- ಪರಸ್ಪರ ಆಲಂಗಿಸು ( ಮದುವೆಗಳಲ್ಲಿ ಬೀಗರನ್ನು ಸ್ವಾಗತಿಸಿ ಸಮವಯಸ್ಸಿನವರನ್ನು , ಸಮಾನ ಸ್ಥಾನದವರನ್ನು ಪರಿಚಯಿಸುವ ಕಾರ್ಯಕ್ರಮ ಇರುತ್ತದೆ . ಅಲ್ಲಿ ಆಗೋದು ಇದು)
ಒಡಕಲ - ಸನಾದಿಯ ಒಡಕಲ ದನಿ , ಒಡಕಲು ಚಟ್ನಿಪುಡಿ
ಕೋಟಿ ಖೋಲಿ/ ಅಡಕಲು ಖೋಲಿ - ಉಗ್ರಾಣ , ಸ್ಟೋರ್ ರೂಂ
ಅಳಿಯದೇವರು - ಅಳಿಯಂದಿರು -ಅಳಿಯನನ್ನು ಗೌರವದಿಂದ ಸೂಚಿಸುವ ಶಬ್ದ .
ಹಂದರ
ಸುಳ್ಳೌತಣ , ರುಖ್ಖೋತ , ಸುರಗಿ , ಉರುಟಣಿ , -- ಮದುವೆಗೆ ಸಂಬಂಧಿಸಿದ ಶಬ್ದಗಳು
ಕಳುವೂಟ ( ಬೀಗರನ್ನು ಕಳಿಸುವಾಗ ಹಾಕುವ ಊಟ ?)
ಅತ್ತರದಾನಿ ( ಹೂದಾನಿ - ಫ್ಲಾವರ್ ವೇಸ್ ಕಣ್ರೀ - ತರಹದ ಶಬ್ದಗಳು) ಅತ್ತರದಾನಿ ಅತ್ತರ್ -( ಸೆಂಟ್ , ಸುಗಂಧಿತ ದ್ರವ್ಯ) ಸಿಂಪಡಿಸುವ ಬೆಳ್ಳಿಯ ಸಾಧನ .
ಗುಲಾಬದಾನಿ
ಒಬ್ಬಿ -ಒಬ್ಬೆ -- ಲಾಟ್ , ಕಂತು , (ಇನ್ನೊಂದ್ ಒಬ್ಬಿ ಚಹಾ-ಫರಾಳಾ !)
ಚಹಾದಂಗಡಿ - ಹೋಟೆಲ್ಲಿಗೆ ಮೊದಲು ಚಹಾದಂಗಡಿ ಅಂತಿದ್ರು !

ಹರಕತ್ತು - ಅಗತ್ಯ --- ನನಗೇನು ಹರಕತ್ ಅದ ?
ಹರಕತ್ತಿಲ್ಲ - ಅಡ್ಡಿಯಿಲ್ಲ
ಹುಡ್ರು ಹುಪ್ಪಡಿ - ಮಕ್ಕಳುಮರಿ
ಉಣಿಸಾ-ತಿನಿಸಾ ( ಉಣಿಸು-ತಿನಿಸು ನಾಮಪದಗಳಾಗಿ ). ಊಟ ಉಣಿಸು , ತಿಂಡಿ ತಿನಿಸು ಗಮನಿಸಿ
ಅನವಲ್ಯ - ಕಷ್ಟ

Rating
No votes yet

Comments