ಕೆಲವು ಹನಿಗವನಗಳು

ಕೆಲವು ಹನಿಗವನಗಳು

1.ಹಾಡುವುದನು 

ಹಾಡುವುದನು
ಬಿಡಬೇಕೆಂದರೂ
ಬಿಡಲಿಲ್ಲ ಹೃದಯ
ಹಾಡಿದರೆ ತಾನೆ
ನಲಿದೀತು ತೆರೆದೀತು;
ತರೆಸೀತು ಜಗದ ಹೃದಯ.

2.ಮಾತು-ಮೌನ
ನನ್ನವಳ ಮಾತು
ಪಟಾಕಿ ಸಿಡಿದಂತೆ
ನನ್ನ ನಿತ್ಯ ಮೌನ
ನೀರು ಸುರಿದಂತೆ.

3.ನನ್ನವಳು
ಮುದ್ದು ಮಾಡುವಾಗ
ನನ್ನವಳು ಮದ್ದಾಗುತ್ತಾಳೆ
ನನ್ನ ನೋವುಗಳಿಗೆ
ವಾದಕ್ಕಿಳಿದಾಗ
ಅವಳೇ ಸಿಡಿ
ಮದ್ದಾಗುತ್ತಾಳೆ ನನ್ನೆದೆಗೆ.

ಇನ್ನಷ್ಟು ಹನಿಗವನಗಳಿಗೆ-

[http://riterlines.blogspot.com/2007/07/blog-post_9294.html|ಹನಿಗವನಗಳು]

Rating
No votes yet

Comments