ಕೆಲವು ಹೊಸ ಕನ್ನಡ ಚಿತ್ರಗೀತೆಗಳು
ನನಗೆ ಚಲನಚಿತ್ರ ನೋಡೋ ಗೀಳು ಅಷ್ಟಾಗಿ ಇಲ್ಲದಿದ್ದರೂ, ಹಾಡುಗಳನ್ನು (ಕನ್ನಡ) ಕೇಳುವ ವಿಪರೀತ ಹುಚ್ಚು ಇದೆ. ಒಂದು ಹಾಡಿನಲ್ಲಿ ನಾನು ಗಮನಿಸುವುದು ಟ್ಯೂನ್ ಮಾತ್ರ. ಸಾಹಿತ್ಯಕ್ಕೆ ನಾನು ಯಾವಾಗಲೂ ಒತ್ತು ಕೊಟ್ಟಿಲ್ಲ. ಟ್ಯೂನೇ ಡಬ್ಬಾ ಇದ್ದರೆ, ಸಾಹಿತ್ಯ ಎಷ್ಟೇ ಚೆನ್ನಾಗಿದ್ದು ಏನುಪಯೋಗ? ಮೊದಲ ಅರ್ಧ ಅಥವಾ ಒಂದು ನಿಮಿಷದಲ್ಲಿ ಹಾಡಿನ ಕಂಪೋಸಿಂಗ್ ಮನಕ್ಕೆ ಹಿಡಿಸಿದರೆ ನಂತರ ಆ ಹಾಡು ಚೆನ್ನಾಗಿರೋ ಸಂಭವಗಳೇ ಹೆಚ್ಚು. ನನಗೆ 'ಫಾಸ್ಟ್ ಬೀಟ್ಸ್' ಇರೋ ಹಾಡುಗಳೇ ಇಷ್ಟ.
ಈಗ 'ಈ ಪ್ರೀತಿ ಒಂಥರಾ' ಅನ್ನೋ ಚಲನಚಿತ್ರ ನಡೀತಾ ಇದೆ. ಹಾಡುಗಳು 'ಒಂಥರಾ' ಡಿಫರೆಂಟಾಗಿವೆಯಲ್ಲದೆ ಬಹಳ ಚೆನ್ನಾಗಿಯೂ ಇವೆ. ಅಂದಾಜು ೨೫ಕ್ಕಿಂತಲೂ ಹೆಚ್ಚು ಬಾರಿ ಕೇಳಿರಬೇಕು, ಆದರೂ ಇನ್ನೂ ಕೇಳುತ್ತಾ ಇದ್ದೇನೆ. 'ಪ್ಯೂರಿಸ್ಟ್'ಗಳಿಗೆ ಈ ಚಿತ್ರದ ಹಾಡುಗಳು ಇಷ್ಟವಾಗದಿರಬಹುದು. ಆದರೆ ಕೂತಲ್ಲೇ ತಲೆ ಮತ್ತು ಕಾಲುಗಳು 'ಬೀಟ್ಸ್'ಗೆ ಸಾಥ್ ಕೊಡುವುದಂತೂ ಸಹಜ. 'ನೀನೊಂಥರಾ ಹೂವಲ್ಲವಾ' ಹಾಡಿಗಂತೂ ನಾನು ಕ್ಲೀನ್ ಬೌಲ್ಡ್.
ಮುಂಗಾರು ಮಳೆಯ ಹಾಡುಗಳಿಂದ, ಉಳಿದ ಚಿತ್ರಗಳ ಕೆಲವು ಚೆನ್ನಾಗಿರೋ ಹಾಡುಗಳು ಬದಿಗೆ ಸರಿದವು. ಕೆಲವು ಚೆನ್ನಾಗಿರೋ ಹೊಸ ಹಾಡುಗಳ ಒಂದು ಲಿಸ್ಟ್ ಈ ಕೆಳಗಿದೆ. ಸಾಹಿತ್ಯವನ್ನು ಬದಿಗಿರಿಸಿದ್ದೇನೆ.
ನನ್ನವಳೇ, ಅಪರಂಜಿ - ತಾಯಿಯ ಮಡಿಲು
ಹೆಜ್ಜೆ ಇಟ್ಟ ಕಡೆ - ಜನಪದ
ಕಣ್ಣಲ್ಲೇ, ಮುದ್ದು ಮುದ್ದಾದ - ಪೂಜಾರಿ
ನಿನ್ನ ಕಂಡ ಕ್ಷಣ, ಏಕೋ ಏನೋ - ಅರಸು
ಚಂದ್ರನ ತಂಗಿ ಮಗ - ಭೂಪತಿ
ಈ ಪ್ರೀತಿ - ಈ ಪ್ರೀತಿ ಯಾಕೆ ಭೂಮಿ ಮೇಲಿದೆ
ನೋಡಿ ನೋಡಿ ನಿನ್ನ - ಜಂಭದ ಹುಡುಗಿ
ತುರು ತುಂತುರು, ಜಾಣ - ಸಜನಿ
ತಿಪ್ಪಗೊಂಡನಹಳ್ಳಿ ಕೆರೆ, ನನ್ನ ಪ್ರೀತಿಯಲ್ಲಿ - ಸಿಕ್ಸರ್
ಹೃದಯದ ಮಾತು - ಸೌಂದರ್ಯ
ನಾ ನನ್ನಾಣೆಗೂ, ಪ್ರೀತಿಸುವೆ - ಯುಗಾದಿ
ಬಾರೆ ಬಾರೆ - ಪರೋಡಿ
ದೂರ ದೂರ, ಈ ಪ್ರೇಮ ಈ ಪ್ರೀತಿ, ಖುಶಿ ಖುಶಿ, ಏನಾಯ್ತೊ - ವಿದ್ಯಾರ್ಥಿ
ಸಿಕ್ತಾರೆ ಸಿಕ್ತಾರೆ, ಸೂರ್ಯ ಕಣ್ಣು ಹೊಡೆದ, ಗುಣವಂತ - ಜೊತೆ ಜೊತೆಯಲಿ
ವಾಹ್ ವಾಹ್ - ಕಲ್ಲರಳಿ ಹೂವಾಗಿ
ಅರೆರೆ - ಸ್ನೇಹಪರ್ವ
ತೆನಾಲಿರಾಮ - ತೆನಾಲಿರಾಮ
ಬಂಡಲ್ ಬಡಾಯಿ - ಏಕದಂತ
ಕಣ್ಣಿನಲ್ಲಿ ಕನಸಿದೆ, ಮಿಡಿಯುತಿದೆ - ಪ್ರೀತಿಗಾಗಿ
ಹೆಣ್ಣಿಗೆ - ನೀಲಕಂಠ
ಚೆಲುವಾಂತ, ಕಲಿತ ಹುಡುಗಿ, ಕಂಡೆನಾ - ತನನಂ ತನನಂ
ಕರಿಯ, ಪ್ರೀತಿ ಮಾಯೆ, ಕ್ವಾಟೆ ಲಿಂಗ - ದುನಿಯಾ