ಕೆಲಸದ ಬದಲಾವಣೆಯ ಪ್ರಭಾವ

ಕೆಲಸದ ಬದಲಾವಣೆಯ ಪ್ರಭಾವ

ಟ್ಯಾಕ್ಸೀಯಲ್ಲಿ ಹೋಗುತ್ತಿದ್ದ ಪ್ರಯಾಣಿಕ ಏನನ್ನೋ ಕೇಳಲು ತನ್ನ ಚಾಲಕನ ಭುಜವನ್ನು ತಟ್ಟಿದ.
ಕೂಡಲೇ ಗಾಭಾರಿಯಾದಂತೆ ಕಂಡುಬಂದ ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಅಡ್ಡಾದಿದ್ಡಿ ಓಡಿಸಿ, ಇನ್ನೇನು ಬಸ್ಸಿಗೆ ಗುದ್ದುವುದರಲ್ಲಿದ್ದ. ಹಾಗೂ ಹೀಗೂತಪ್ಪಿಸಿ ಫೂಟ್‍ಪಾತ್ ಮೇಲೆ ಹತ್ತಿಸಿ ಎದುರಿಗಿದ್ದ ಗಾಜಿನ ಅಂಗಡಿಯ ಕಿಟಕಿಯ ಸಮೀಪ ನಿಲ್ಲಿಸಿದ.
ಕ್ಷಣ ಕಾಲ ಸುಧಾರಿಸಿಕೊಂಡ ಚಾಲಕ ಹಿಂತಿರುಗಿ ತನ್ನ ಪ್ರಯಾಣಿಕನಿಗೆ ಹೇಳಿದ ದಯವಿಟ್ಟು ಇನ್ನು ಮುಂದೆ ಹಾಗೆ ತಟ್ಟಿ ಕರೆಯಬೇಡ. ನನಗೆಷ್ಟು ಭಯ ಆಗಿತ್ತು.
ಪ್ರಯಾಣಿಕ ಅರ್ಥವಾಗದೆ ಕ್ಷಮಿಸಿ ತಪ್ಪಾಯಿತು ಎಂದ.
ಅದಕ್ಕೆ ಚಾಲಕ ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ ಬಿಡಿ. ಇವತ್ತು ಟ್ಯಾಕ್ಸೀ ಚಾಲಕನಾಗಿ ನನ್ನ ಮೊದಲನೆಯ ದಿವಸ. ಇದಕ್ಕೂ ಮುಂಚೆ ನಾನು ಶವ ಸಾಗಿಸುವ ವಾಹನದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ನಾನಿನ್ನೂ ಆ ಗುಂಗಿನಿಂದ ಆಚೆ ಬಂದಿಲ್ಲ. ನೀವು ಏಕಾಏಕಿ ಕೈ ಹಾಕಿದ್ದರಿಂದ ನನಗೆ ಭಯವಾಯಿತು ಎಂದ.

Rating
No votes yet

Comments