ಕೆಲಸ ಬಿಟ್ಟೆ
ಹೋದವಾರ ಕೆಲಸ ಬಿಟ್ಟುಬಿಟ್ಟೆ. ಈ ವರ್ಷ ಮತ್ತೊಂದು ಚಿತ್ರ ಮಾಡಬೇಕು ಅಂತ ಆಸೆ.
ಅದಕ್ಕಾಗಿ ಚಿತ್ರಕತೆಯ ತಯಾರಿ ನಡೆದಿದೆ. ಮೊದಲ ಕರಡಿನ ಕೆಲಸ ಮುಗಿಯಿತು.
ಮಾರ್ಚ ಕಡೆಯ ವಾರದ ಹೊತ್ತಿಗೆ ಎರಡನೇ ಕರಡನ್ನು ಮಾಡುವ ಕೆಲಸ ಕೈಗೆತ್ತಿಕೊಳ್ಳಬೇಕು.
ಅದನ್ನು ಶೂಟ್ ಮಾಡುವ ಮುನ್ನ ಎನ್ನೆರಡು ಕರಡಾಬಹುದು.
ಕೊನೆಯ ಕರಡಂತೂ ಎಡಿಟಿಂಗ್ ಅಲ್ಲವೆ?
ಈ ವರ್ಷದ ಉತ್ತರಾರ್ಧದಲ್ಲಿ ಶೂಟ್ ಮಾಡಬೇಕೆಂದು ಹವಣಿಕೆ.
ಈ ಮಧ್ಯೆ ಬೆಂಗಳೂರಿಗೆ ತೆರಳಿ ಮುಖಾಮುಖಿಯ ಬಗ್ಗೆ ಒಂದಷ್ಟು ಕೆಲಸ ಮಾಡಬೇಕು.
ಈಗಿನ ಕತೆಯ ಬಗ್ಗೆ ಒಂದಷ್ಟು ಚರ್ಚೆಗಂತೂ ಮೋಸವಿಲ್ಲ. ಅಲ್ಲದೆ, ಎಲ್ಲಕ್ಕೂ ಕಾಲ ಕೂಡಿ ಬರಬೇಕು :)
ಈಗ ರಾಜಾರಾವ್ರವರ ಕಾಂತಾಪುರ ಓದಲು ಶುರುಮಾಡಿದ್ದೇನೆ.
ಯಾಕೆ ಈ ಮುಂಚೆ ಓದಲಿಲ್ಲ ಎಂದು ಗೊಣಗಿಕೊಳ್ಳುತ್ತೇನೆ.
ಇಂಗ್ಲೀಷ್ ಕಾದಂಬರಿಯಾದರೂ ಕನ್ನಡದಲ್ಲೇ ಓದಿದ ಹಾಗಾಗುತ್ತದೆ!
ಅಲ್ಲಿ ಬರುವ ಪಾತ್ರಗಳ ಹೆಸರೂ ಚೆನ್ನಾಗಿದೆ, "waterfall venkamma" "nose-scratching nanjamma" :)
Rating
Comments
Re: ಕೆಲಸ ಬಿಟ್ಟೆ
ಕೆಲಸ ಬಿಟ್ಟದ್ದೋ ಕೆಲಸಕ್ಕೆ ಸೇರಿಕೊಂಡದ್ದೋ?
In reply to ಕೆಲಸ ಬಿಟ್ಟದ್ದೋ ಕೆಲಸಕ್ಕೆ ಸೇರಿಕೊಂಡದ್ದೋ? by hpn
Re: ಕೆಲಸ ಬಿಟ್ಟದ್ದೋ ಕೆಲಸಕ್ಕೆ ಸೇರಿಕೊಂಡದ್ದೋ?