ಕೇಡಿಗನ ನಂಜು
ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!
ಸಂಸ್ಕೃತ ಮೂಲ:
ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||
-ಹಂಸಾನಂದಿ
ಕೊ.ಕೊ: ಚಾಮರಾಜ ಸವಡಿಯವರ ’ವಿಷದ ಗಿಡ’ ಮತ್ತೆ, ಅದಕ್ಕೆ ಬಂದ ಅಡಿಟಿಪ್ಪಣಿಗಳನ್ನು ಓದಿದಾಗ, (http://sampada.net/blog/chamaraj/06/02/2010/23895#comment-91190) ಎಂದೋ ಮಾಡಿದ್ದ ಈ ಅನುವಾದ ನೆನಪಾಯ್ತು. ಒಂದೆರಡು ಚಿಕ್ಕ ಬದಲಾವಣೆಗಳೊಡನೆ ಹಾಕಿರುವೆ.
Rating
Comments
ಉ: ಕೇಡಿಗನ ನಂಜು
ಉ: ಕೇಡಿಗನ ನಂಜು
ಉ: ಕೇಡಿಗನ ನಂಜು