ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ

ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ

ಕೇ.ಫ.ರ  ಶೌರಿ  ನಿಮಗೆ ಗೊತ್ತಿರಬಹುದು . ಇಲ್ಲದಿದ್ದರೆ   P.G. Wodehouse  ರ  ಜೀವ್ಸ್    ಗೊತ್ತಿರಬಹುದು .  ಈ   ಶೌರಿ  ಜೀವ್ಸ್   ನ   ಅನುಕರಣೆ . ನಾನು   ಜೀವ್ಸ್ ಸರಣಿ ಓದಿಲ್ಲ . ಕನ್ನಡದಲ್ಲಿ  ಕೇ.ಫ.ರ ಪುಸ್ತಕ ಓದಿದ್ದೇನೆ.   ಶೌರಿ  ಯಾರು ? ಎಂಥವನು ಅಂತ    ಹೆಚ್ಚು    ಹೇಳುವ ಮೊದಲು  ಶೌರಿಯ ನ್ನು  ಪರಿಚಯಿಸುವ   ಈ   ಘಟನೆ ಓದಿ .  

ಕೇ.ಫ.ರ    ನಾಯಕ   ಪಾಂಡು ವಿಗೆ    ಒಂದು ಸಲ   ಶೌರಿಯ  ಪರಿಚಯ  ಡಾಕ್ಟರ್  ಗೆಳೆನ ಡಿಸ್ಪೆನ್ಸರಿ ಷಾಪ್ ನಲ್ಲಿ ಆಗಿರುತ್ತದೆ . ಆಮೇಲೆ  ಈ ಡಾಕ್ಟರ್  ಗೆಳೆಯ ವಿದೇಶಕ್ಕೆ    ಹೋದ ಕಾರಣ     ದವಾಖಾನೆ   ಮುಚ್ಚ ಬೇಕಾಗಿ ಬಂದು  ಈ  ಶೌರಿ ಕೆಲಸ ಕಳೆದುಕೊಂಡಿರುತ್ತಾನೆ .   
ಆಮೇಲೆ   ಪೇಟೆಯಲ್ಲೆಲ್ಲೋ   ಪಾಂಡುವಿಗೆ   ಶೌರಿ    ಸಿಕ್ಕು      ಪಾಂಡು   ಶೌರಿಗೆ  ಕೇಳುತ್ತಾನೆ -  ಶೌರಿ , ಈಗ ಏನು ಮಾಡ್ತಾ  ಇದ್ದೀಯಾ ?
ಶೌರಿ ಹೇಳೋದು  ಏನು ಗೊತ್ತೆ ? - 'ಸರ್ , ವಾರ್   ಅಂಡ್ ಪೀಸ್   ಮುಗ್ಸಿದ್ದೀನಿ . ಈಗ ಅನ್ನಾ   ಕರೀನಾ ಓದ್ತಿದ್ದೀನಿ.'
ಪಾಂಡು   ಆಗ  ಕೇಳಬೇಕಾಗಿ ಬರುತ್ತದೆ - 'ಅಲ್ಲಯ್ಯ   , ಹೊಟ್ಟೆಪಾಡಿಗೆ  ಏನು ಮಾಡ್ತಾ    ಇದ್ದೀಯಾ   ?' - ಅಂತ    !

(  ಶೌರಿ ಬಗ್ಗೆ   ಓದಿ ಸುಖಪಡಲು  - ಬೆಸ್ಟ್   ಆಫ್  ಕೇ.ಫ. ನೋಡಿ.   )   

ಇಂಥಾ  ಶೌರಿ   ಓದಿದ   ಅಂಥಾ  ಅನ್ನಾ ಕರೀನಾ   ಪುಸ್ತಕ ದ ಕನ್ನಡ  ಅನುವಾದ      ಇಲ್ಲಿ ದೆ -  http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010066860    

ಸಾವಿರದ   ಒಂದು ನೂರು ಪುಟಗಳ   ಈ   ಪುಸ್ತಕದಲ್ಲಿರೋದು  ಏನು  ಅನ್ನೋ  ಕುತೂಹಲದಿಂದ   ನಾನೂ  ಓದಬೇಕೂಂತ    ಈ ಪುಸ್ತಕವನ್ನು      ಇಳಿಸಿಕೊಂಡಿದ್ದೀನಿ.  ಅಲ್ಲಿನ ಮೊದಲಿಗಿರುವುದೇ    ತುಂಬ      ಪ್ರಸಿದ್ಧವಾದ  ಈ  ಸಾಲುಗಳು-'ನೆಮ್ಮದಿಯಿಂದಿರುವ  ಎಲ್ಲ ಕುಟುಂಬಗಳು   ಒಂದನ್ನೊಂದು ಹೋಲುತ್ತವೆ ; ಪ್ರತಿಯೊಂದು ಅಸಂತುಷ್ಟ ಕುಟುಂಬವೂ ತಂತನ್ನ  ರೀತಿಯಲ್ಲಿ ಅಸುಖಿಯಾಗಿರುತ್ತದೆ.'

Rating
No votes yet

Comments