ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ
ಕೇ.ಫ.ರ ಶೌರಿ ನಿಮಗೆ ಗೊತ್ತಿರಬಹುದು . ಇಲ್ಲದಿದ್ದರೆ P.G. Wodehouse ರ ಜೀವ್ಸ್ ಗೊತ್ತಿರಬಹುದು . ಈ ಶೌರಿ ಜೀವ್ಸ್ ನ ಅನುಕರಣೆ . ನಾನು ಜೀವ್ಸ್ ಸರಣಿ ಓದಿಲ್ಲ . ಕನ್ನಡದಲ್ಲಿ ಕೇ.ಫ.ರ ಪುಸ್ತಕ ಓದಿದ್ದೇನೆ. ಶೌರಿ ಯಾರು ? ಎಂಥವನು ಅಂತ ಹೆಚ್ಚು ಹೇಳುವ ಮೊದಲು ಶೌರಿಯ ನ್ನು ಪರಿಚಯಿಸುವ ಈ ಘಟನೆ ಓದಿ .
ಕೇ.ಫ.ರ ನಾಯಕ ಪಾಂಡು ವಿಗೆ ಒಂದು ಸಲ ಶೌರಿಯ ಪರಿಚಯ ಡಾಕ್ಟರ್ ಗೆಳೆನ ಡಿಸ್ಪೆನ್ಸರಿ ಷಾಪ್ ನಲ್ಲಿ ಆಗಿರುತ್ತದೆ . ಆಮೇಲೆ ಈ ಡಾಕ್ಟರ್ ಗೆಳೆಯ ವಿದೇಶಕ್ಕೆ ಹೋದ ಕಾರಣ ದವಾಖಾನೆ ಮುಚ್ಚ ಬೇಕಾಗಿ ಬಂದು ಈ ಶೌರಿ ಕೆಲಸ ಕಳೆದುಕೊಂಡಿರುತ್ತಾನೆ .
ಆಮೇಲೆ ಪೇಟೆಯಲ್ಲೆಲ್ಲೋ ಪಾಂಡುವಿಗೆ ಶೌರಿ ಸಿಕ್ಕು ಪಾಂಡು ಶೌರಿಗೆ ಕೇಳುತ್ತಾನೆ - ಶೌರಿ , ಈಗ ಏನು ಮಾಡ್ತಾ ಇದ್ದೀಯಾ ?
ಶೌರಿ ಹೇಳೋದು ಏನು ಗೊತ್ತೆ ? - 'ಸರ್ , ವಾರ್ ಅಂಡ್ ಪೀಸ್ ಮುಗ್ಸಿದ್ದೀನಿ . ಈಗ ಅನ್ನಾ ಕರೀನಾ ಓದ್ತಿದ್ದೀನಿ.'
ಪಾಂಡು ಆಗ ಕೇಳಬೇಕಾಗಿ ಬರುತ್ತದೆ - 'ಅಲ್ಲಯ್ಯ , ಹೊಟ್ಟೆಪಾಡಿಗೆ ಏನು ಮಾಡ್ತಾ ಇದ್ದೀಯಾ ?' - ಅಂತ !
( ಶೌರಿ ಬಗ್ಗೆ ಓದಿ ಸುಖಪಡಲು - ಬೆಸ್ಟ್ ಆಫ್ ಕೇ.ಫ. ನೋಡಿ. )
ಇಂಥಾ ಶೌರಿ ಓದಿದ ಅಂಥಾ ಅನ್ನಾ ಕರೀನಾ ಪುಸ್ತಕ ದ ಕನ್ನಡ ಅನುವಾದ ಇಲ್ಲಿ ದೆ - http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010066860
ಸಾವಿರದ ಒಂದು ನೂರು ಪುಟಗಳ ಈ ಪುಸ್ತಕದಲ್ಲಿರೋದು ಏನು ಅನ್ನೋ ಕುತೂಹಲದಿಂದ ನಾನೂ ಓದಬೇಕೂಂತ ಈ ಪುಸ್ತಕವನ್ನು ಇಳಿಸಿಕೊಂಡಿದ್ದೀನಿ. ಅಲ್ಲಿನ ಮೊದಲಿಗಿರುವುದೇ ತುಂಬ ಪ್ರಸಿದ್ಧವಾದ ಈ ಸಾಲುಗಳು-'ನೆಮ್ಮದಿಯಿಂದಿರುವ ಎಲ್ಲ ಕುಟುಂಬಗಳು ಒಂದನ್ನೊಂದು ಹೋಲುತ್ತವೆ ; ಪ್ರತಿಯೊಂದು ಅಸಂತುಷ್ಟ ಕುಟುಂಬವೂ ತಂತನ್ನ ರೀತಿಯಲ್ಲಿ ಅಸುಖಿಯಾಗಿರುತ್ತದೆ.'
Comments
ಉ: ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ
In reply to ಉ: ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ by cmariejoseph
ಉ: ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ