ಕೈಬರಹದ ಕಲೆಯನ್ನು ಉಳಿಸಿಕೊಂಡು, ಬೆಳೆಸೋಣ  !

ಕೈಬರಹದ ಕಲೆಯನ್ನು ಉಳಿಸಿಕೊಂಡು, ಬೆಳೆಸೋಣ  !

ಚಿತ್ರ

ಕೈಬರಹವನ್ನು ಇವತ್ತಿಗೂ ಜನಪ್ರಿಯವಾಗಿ ಮಾಡಲು  ತಕ್ಕ ಉಪಾಯವೆಂದರೆ, ಸರಿಯಾಗಿ ಅವಲೋಕಿಸುವುದು, ಮತ್ತು ಕೈನಲ್ಲೇ ಬರೆದು ಬರೆದು ಅದರಲ್ಲಿ ಸಾಧನೆಯ ಸಿದ್ಧಿಯನ್ನು  ಪಡೆಯುವುದು.  ಮಕ್ಕಳಿಗೆ ಈ ಕೈಬರಹವನ್ನು ಹೇಳಿಕೊಡುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಿದೆ ಇರುವುದೇ,  ಅವರ ಸೃಜನಶೀಲತೆ ಕುಂಠಿತವಾಗಲು ಕಾರಣವಾಗಿದೆಯೆಂದು ನಾನು ನಂಬುತ್ತೇನೆ. ನಾವೆಲ್ಲರೂ  ಅದರ ಬಗ್ಗೆ ಒಮ್ಮೆಯಾದರೂ ಯೋಚಿಸುವುದು ಅತ್ಯಗತ್ಯ. 

ಇಂದಿನ ಕಂಪ್ಯೂಟರ್ ಯುಗದಲ್ಲೂ ನಾವು ಮತ್ತು ನಮ್ಮ ಮಕ್ಕಳು ಕೈನಲ್ಲೇ  ಬರೆಯುವ ಮನಸ್ಸುಮಾಡಿದರೆ, ನಾವು ನಾವು ಬಹಳಷ್ಟು ಖಂಡಿತ  ಸಾಧಿಸಬಹುದು. ಯಾವುದೇ ಹೊಸದೆಂದು ಕಂಡ ವಿಷಯಗಳನ್ನು,  ಮಕ್ಕಳು ಮುಕ್ತ ಹಸ್ತದಿಂದ, ಸಂಭ್ರಮದಿಂದ  ಸ್ವೀಕರಿಸುತ್ತಾರೆ. ಗಮನಿಸಿ. 

ನಮ್ಮ ಮನೆಯಲ್ಲಿ ತಂದೆ ಅಜ್ಜ, ಅಜ್ಜಿ ಮತ್ತು ಹಿರಿಯರು ತಮ್ಮ ಕೈಬರಹದ ಬಗ್ಗೆ ಸಹಜವಾಗಿಯೇ ಹೆಮ್ಮೆ ಪಡುತ್ತಾರೆ. ಆಗ ದುಬಾರಿಯಾದ ಟೈಪ್ ರೈಟರ್ ಗಳು ಮತ್ತು ಕಂಪ್ಯೂಟರ್ ನಂತಹ  ಯಾವ ಸಾಧನಗಳೂ ಇಲ್ಲದ ಕಾಲದಲ್ಲಿ, ಅವರ ಕೈಬರಹವೇ ಬರವಣಿಯೇ ಅವರಿಗೆ ದಕ್ಕುತ್ತಿದ್ದ ವ್ಯವಸ್ಥೆ. ನಾನು ನಮ್ಮ ಚಿಕ್ಕಪ್ಪ, ಅಜ್ಜ, ಅವರ ಕೈನಲ್ಲೇ ಬರೆದ ಪತ್ರಗಳು ಮೊದಲಾದವನ್ನು  ನಮ್ಮಮಕ್ಕಳು,  ಮೊಮ್ಮಕ್ಕಳಿಗೆ  ತೋರಿಸಿದಾಗಸಂತೋಷದಿಂದ ತಾವು ಬರೆಯಲು ಮುಂದುಬರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. 

ಕೆಳಗೆ ಒಂದು ಮಾದರಿ ಕೈಬರಹವನ್ನು ತೋರಿಸಲು ಪ್ರಯತ್ನಿಸುತ್ತಿದ್ದೇನೆ. ಇದು ನಮ್ಮ ತಂದೆಯವರು ೧೯೩೫ ರ ಆಸುಪಾಸಿನಲ್ಲಿ ನನ್ನ ತಾಯಿಯವರಿಗೆ ಸಹಾಯಮಾಡಲು ಬರೆದು ಸಂಗ್ರಹಿಸಿದ ಪುಸ್ತಕದಿಂದ ಆಯ್ದಿದ್ದು. 'ನಳ ಮಹಾರಾಜನ ಕಥೆ' ಆಗ ಬಹಳ ಚಾಲ್ತಿಯಲ್ಲಿತ್ತು. ಮನೆಯಲ್ಲಿ ಕಷ್ಟಬಂದಾಗ ನಳಮಹಾರಾಜನ ಕಥೆಯನ್ನೋ  'ರಾಜಾ ಹರಿಶ್ಚಂದ್ರನ  ಕಥೆ'ಯನ್ನೋ ಪಾರಾಯಣದ ತರಹ ಓದುತ್ತಿದ್ದರು ಎನ್ನುವ ನೆನಪು ನನ್ನ ಮನಸ್ಸಿನಲ್ಲಿ  ಇನ್ನೂ ಹಸಿರಾಗಿ  ಉಳಿದಿದೆ. ಇಲ್ಲಿ ಗಮನಿಸಬೇಕಾದದ್ದು, ನಮ್ಮಪ್ರೀತಿಯ ತಂದೆ, ರಂಗರಾಯರು ೧೦೮ ಶ್ಲೋಕಗಳನ್ನೂ  ಬಾಯ್ಪಾಠದಂತೆ  ಹಾಡಿ  ಒಪ್ಪಿಸುತ್ತಿದ್ದ ನನ್ನ ಪೂಜ್ಯ ತಾಯಿ, ರಾಧಮ್ಮನವರಿಗೆ ಪ್ರೀತಿಯಿಂದ ನಳಚರಿತ್ರೆಯ ಸ್ಕಂದಗಳನ್ನೆಲ್ಲಾ  ಕಾಗದದಲ್ಲಿ ಸ್ಪುಟವಾಗಿ ಬರೆದಿಟ್ಟ ಪುಸ್ತಕವನ್ನು ನಾವು ನಾಲ್ವರು ಮಕ್ಕಳು ಝೆರಾಕ್ಸ್ ಮಾಡಿಸಿ   ದೇವರಮುಂದೆ ಇಟ್ಟುಪೂಜೆಮಾಡುತ್ತಾ ಬಂದಿದ್ದೇವೆ. ಇದನ್ನು ನೋಡಿದ ನಮ್ಮ ಮಕ್ಕಳು, ತಾವೂ ಕೈನಲ್ಲಿ ಬರೆಯುವ ಅಭ್ಯಾಸಮಾಡಿಕೊಂಡು ಅಜ್ಜಿ ಬದುಕಿದ್ದಾಗ ತೋರಿಸಿ, ಅವರ  ಮೆಚ್ಚುಗೆಯನ್ನು ಪಡೆದಿದ್ದರು. ಇಂದಿಗೂ ಮನೆಗೆ ಬಂದ ಸಂಬಂಧಿಕರು, ಸ್ನೇಹಿತರಿಗೆ ನಾವು ನಮ್ಮ ಮಕ್ಕಳ ಈ ಕೈಬರಹದ ಸಂಸ್ಕೃತಿಯನ್ನು ಹೇಳಿದಾಗ, ಅವರೆಲ್ಲ ಆಶ್ಚರ್ಯ ಸಂಭ್ರಮಗಳಿಂದ ತಲೆತೂಗಿರುವುದನ್ನು ಕಂಡು ನಾನು ಮತ್ತು ನನ್ನ ಪತ್ನಿ,  ಧನ್ಯರಾಗಿದ್ದೇವೆ. 

-ನಮ್ಮ ಮನೆಯ ಹಳೆಯ ಪುಸ್ತಕಗಳ ಸಂಗ್ರಹದಿಂದ 

 

Rating
Average: 4 (1 vote)