ಕೈ ಕೊಟ್ಟ ಜೆಟ್ ಏರ್

ಕೈ ಕೊಟ್ಟ ಜೆಟ್ ಏರ್

ಒಂದಾದ ಮೇಲೆ ಒಂದು ದೇಶೀಯ ಖಾಸಗಿ ಹಾಗು MNC ಗಳ ಬಣ್ಣ ಬಯಲಾಗೊ ಕಾಲ ಈಗ ಬರ್ತಾ ಇದೆ.
ಮೊದಲನೇ ಕಂತು ಜೆಟ್ ಏರ್ !!

೧೯೦೦ ಜನರನ್ನ ಮನೆಗೆ ಕಳಿಸಿ ಕೈ ತೊಳೆದುಕೊಂಡು ಕೂತಿದೆ.
ಜೆಟ್ ನ ಕತೆ ಏನೇ ಇರಲಿ...ದೂರಾಲೋಚನೆ ಇಲ್ಲದೆ ಸಾವಿರಾರು ಜನರನ್ನ ಕೆಲಸಕ್ಕೆ ತೆಗೆದುಕೊಂಡು ಈಗ ಒಂದು ದಿನದ ನೋಟೀಸೂ ಕೊಡದೆ ಹೀನಾಯವಾಗಿ ತೆಗೆದಿದ್ದು ಬೇಜವಾಬ್ದಾರಿಯ ಪರಮಾವಧಿ.

ಈ ಪಿಂಕ್ ಸ್ಲಿಪ್/retrenchmentಗಳ ಕಥೆ ಇಲ್ಲಿಗೆ ಹೊಸದೇನೂ ಅಲ್ಲ...

ವಿಪ್ರೊದಲ್ಲಿ ಆಗಿದ್ದು ಸ್ವಲ್ಪ ದಿನಗಳ ಹಿಂದೆ ನೀವೂ ಕೇಳಿರಬಹುದು....ಐ.ಬಿ.ಎಂ, ಸತ್ಯಮ್....ಮುಂತಾದ ಕಡೇನೂ ನಡೀತು...

ಈ ಎಲ್ಲಾ ವಿಷಯಗಳನ್ನು ನೋಡಿದಾಗ ಅನ್ನಿಸೋದು ಇಷ್ಟೇ - ಇವರುಗಳು ಅಂದುಕೊಂಡಷ್ಟು ಟರ್ನ್ ಓವರ್ ಆಗಲಿಲ್ಲ, ಲಾಭಾಂಶ ಕಮ್ಮಿ ಮಾಡಿಕೊಳ್ಳಕ್ಕೆ ಇವರ ದುರಾಸೆಯ ಮನಸ್ಸು ಒಪ್ಪೋದಿಲ್ಲ...ಅದಕ್ಕೆ ದುಡ್ಡು ಉಳಿಸೋದಕ್ಕೆ ಇರೋ ಒಂದೇ ಉಪಾಯ ಕೆಲಸಗಾರರನ್ನು ತೆಗೆದು ಹಾಕೋದು...

ಜನರನ್ನು ಬೇಕಾದ ಹಾಗೆ ತೆಗೆಯೋದಕ್ಕೆ ಇವರ ಹತ್ತಿರ ಇರೋ ಉಪಾಯಗಳಲ್ಲಿ ಒಂದು performance apprisal
ದೂರಾಲೋಚನೆ ಇಲ್ಲದೆ ಕೇವಲ short term ಲಾಭಕ್ಕಾಗಿ, ಹಿಂದೆ ಮುಂದೆ ನೋಡದೆ ನೇಮಕ ಮಾಡಿಕೊಂಡು ಚೆನ್ನಾಗಿ ಕೆಲಸ ಮಾಡಿಸಿಕೊಳ್ಳುತ್ತಾರೆ.
ಆಗ ಇವರಿಗೆ performance apprisal ಆಗಲಿ ಇನ್ನು ಯಾವುದೇ ಆಗಲಿ ನೆನಪಿಗೆ ಬರೋದಿಲ್ಲ...ಬಿಸಿನೆಸ್ ಸ್ವಲ್ಪ ಡೌನ್ ಆಗಕ್ಕೆ ಶುರು ಆದಾಗ ಇವೆಲ್ಲಾ ಪಿಳ್ಳೆ ನೆವಗಳು ಶುರು ಆಗುತ್ತೆ (ಕೆಲವು ಕಂಪನಿಗಳು ಇದಕ್ಕೆ ಅಪವಾದ...ಆದರೆ ಇಂಥವು ತುಂಬಾ ವಿರಳ). ಇಷ್ಟು ದಿನ ಕಷ್ಟ ಪಟ್ಟು ದುಡಿದ ಜನ ಇವರ ಕಣ್ಣಿಗೆ ಈಗ non-performers!!. ಬಾಸ್ ಗಳ ಚಮಚಾಗಳು , ಹೊಗಳು ಭಟ್ಟರು ತಮ್ಮ ಕೆಲಸ ಉಳಿಸಿಕೊಳ್ಳುತ್ತಾರೆ!!! ಬೇರೆ ಭಾಷೆಯವರಾದರೆ ತಮ್ಮವರನ್ನ protect ಮಾಡುತ್ತಾರೆ ಆದರೆ ಗುಂಪುಗಾರಿಕೆ ಮಾಡದ ಕನ್ನಡದವರಲ್ಲಿ ಇದೂ ಇಲ್ಲ. apprisal ನ ನಿಜವಾದ ಉದ್ದೇಶ ಭಾರತದ ಸಾಫ಼್ಟ್ವೇರ್ ಕಂಪನಿಗಳಲ್ಲಿ ಯಾವತ್ತೋ ಮಂಗಮಾಯ ಆಯ್ತು.

ನನ್ನ ಅನಿಸಿಕೆ ಇಷ್ಟೇ :
೧. ನಿಜವಾಗೂ ಕೆಲಸದಿಂದ ತೆಗೆದಿದ್ದು ಅಯೋಗ್ಯರನ್ನೇ ಅಂತ ಇಟ್ಟುಕೊಂಡರೂ ....ಇಂಟರ್ವ್ಯೂ ಸಮಯದಲ್ಲಿ ಇಂಟರ್ವ್ಯೂ ಮಾಡುವವರ ಬುದ್ದಿ ಎಲ್ಲಿ ಹೋಗಿತ್ತು...ಈ ರೀತಿ ಅಪಾಯಿಂಟ್ ಮಾಡಿದವನೂ ಇದಕ್ಕೆ ಜವಾಬ್ದಾರ ತಾನೆ? ಅವನನ್ನು ಮೊದಲು ಕೆಲಸದಿಂದ ತೆಗೀಬೇಕು!!
೨. ಕೇವಲ ಆರ್ಥಿಕ ಕಾರಣಕ್ಕೆ ಜನರನ್ನು ಕೆಲಸದಿಂದ ತೆಗೆಯೋದು ಅಪರಾಧ!!!- ಸರಿಯಾಗಿ plan ಮಾಡದೇ ಕೆಲಸಗಾರರನ್ನು ಹುಚ್ಚು ಹುಚ್ಚಾಗಿ ನೇಮಕ ಮಾಡಿ..ಆಮೇಲೆ ಕಸದ ತೊಟ್ಟಿಗೆ ಹಾಕೊ ಈ ಮನಸ್ಥ್ತಿತಿ ತುಂಬಾ ಹೇಸಿಗೆ ತರಿಸುವಂತದ್ದು. use and throw policy ಮೊದಲು ತೊಲಗಬೇಕು. ಸರ್ಕಾರ ಮೊದಲು ಇದರ ಬಗ್ಗೆ ಗಮನ ಹರಿಸಬೇಕು. ನಾಯಿ ಕೊಡೆಗಳ ತರಹ ಹುಟ್ಟಿಕೊಳ್ಳುತ್ತಿರುವ BPO,call center ಮುಂತಾದ service sector ಕಂಪನಿಗಳನ್ನು ನಿಯಂತ್ರಿಸಬೇಕು.
೩. ಸಾಫ಼್ಟ್ವೇರ್ ಕಂಪನಿಗಳ ನೌಕರರು ಮೊದಲು ಸಂಘಟಿತರಾಗಬೇಕು...ಈಗಿನ ಅವಶ್ಯಕತೆ ಹರತಾಳ ಬಂಧ್ ಮಾಡುವ ಮನಸ್ಥಿತಿಯಾಗಲೀ, ಏನೂ ಜವಾಬ್ದಾರಿ ಇಲ್ಲದೇ ಜನರನ್ನು ಕಸಕ್ಕಿಂತ ಕೀಳಾಗಿ ಕಾಣುವ capitalism ಆಗಲೀ ಅಲ್ಲ. ನಮಗೆ ಬೇಕಾಗಿರುವುದು communism ಹಾಗೂ capitalism ಗಳ ಒಳ್ಳೆಯ ಅಂಶಗಳುಳ್ಳ ಸಮನ್ವಯದ ಮಾರ್ಗ...

ಇದಾಗಲು ಇನ್ನೆಷ್ಟು ದಿನ ಬೇಕೋ...ಕಾದು ನೋಡಬೇಕು!

Rating
No votes yet

Comments