ಕೊಂಕಣ ಸುತ್ತಿ ಮೈಲಾರಕ್ಕೆ...
ಇವತ್ತೇಕೊ ಅದೃಷ್ಟವೇ ಸರಿಯಿಲ್ಲ. ಟೈಮೂ ಖರಾಬು
ಬೆಳಗ್ಗೆ ಅಮ್ಮನ ಮನೆಯಲ್ಲಿ ಮಗೂನ ಬಿಟ್ಟು ಕೋರಮಂಗಲಕ್ಕೆ ಹೋಗೋಣ ಅಂತ ಹೋಗಿದ್ದಾಯಿತು
ಅಮ್ಮನ ಮನೆ ಬಂಡೆ ಪಾಳ್ಯದಲ್ಲಿ ಇರೋದು
ಅಲ್ಲಿಂದ ಶಾರ್ಟ್ ಕಟ್ ನಲ್ಲಿ ಕೋರಮಂಗಲಕ್ಕೆ ಹೋಗಬಹುದು ಅಂತ ಅಮ್ಮ ಹೇಳಿದರು
ಸರಿ ಅಂತ ಹೊರಟೆ ಅದೇನೋ ದಾರಿಯೇ ತಿಳಿಯಲಿಲ್ಲ
ಸುಮ್ಮನೆ ಸ್ಕೂಟಿಯಲ್ಲಿ ಕೂತ್ಕೊಂಡು ಒಳ್ಳೆ ಜಾಲಿ ರೈಡ್ ಮಾಡಿದ ಹಾಗೆ ಇತ್ತು.
ದಾರಿ ಸಿಕ್ಕೆಡೆ ಪಯಣ. ಸಿಗದೆಡೆ ಮತ್ತೆ ರಿವರ್ಸ್
ರಿಂಗ್ ರೋಡ್ ಅಂತ ಕೇಳಿದ ತಕ್ಷಣ ಮುಂದೆ ನೇರಕ್ಕೆ ಹೋಗಿ , ಗೊ ಸ್ಟ್ರೈಟ್, ಅಂತ ಉತ್ತರ ಸಿಗುತ್ತಿತ್ತು ಆ ನೇರಕ್ಕೆ ಹೋದರೆ ಮತ್ತೆಲ್ಲೋ ಹೋಗೋದು.
ಸರ್ಜಾಪುರ, ಅಗರ, ಬೆಳ್ಳಂಡೂರು ಎಲ್ಲಾ ಸುತ್ತಿಕೊಂಡು ಕೋರಂಮಂಗಲಕ್ಕೆ ಬಂದಾಗ 2.30.. ಮನೆ ಬಿಟ್ಟಿದ್ದು 1.00 ಗೆ . ನನಗೆ ಆಗಬೇಕಿದ್ದ ಕೆಲಸ ಎಕ್ಕುಟ್ಟಿ ಹೋಗಿತ್ತು.
ಸುಮ್ಮನೆ ಬೊಮ್ಮನಹಳ್ಳಿ, ಸಿಲ್ಕ್ ಬೋರ್ಡ್ ದಾರಿಯಲ್ಲಿ ಹೋಗಿದ್ದರೆ ಸರಿಯಾಗಿ 15 ನಿಮಿಷ ಆಗ್ತಿತ್ತು.
ಈ ಗೊತಿಲ್ಲದ ಶಾರ್ಟ್ ಕಟ್ ದಾರಿ ಒಳ್ಳೆಯದಲ್ಲ ಅಂತ ಮತ್ತೊಮ್ಮೆ ಪ್ರೂವ್ ಆಯ್ತು.
ಗೊತ್ತಿರುವ ದೆವ್ವ ಗೊತ್ತಿಲ್ಲದಿರುವ ದೇವರಿಗಿಂತ ಉತ್ತಮ ಅನ್ನೋ ಗಾದೆ ಮಾತೆ ಇದೆಯಲ್ಲಾ
ಏನೋ ಹ್ಯಾಗೋ ಒಂದೊಳ್ಳೆ ಸವಾರಿ
ಕೊಂಕಣ ಸುತ್ತಿ ಮೈಲಾರಕ್ಕೆ ಹೋದರೂ ಕೆಲವು ದಾರಿಗಳ ಪರಿಚಯವಾಯ್ತು
Comments
ಉ: ಕೊಂಕಣ ಸುತ್ತಿ ಮೈಲಾರಕ್ಕೆ.............................................
In reply to ಉ: ಕೊಂಕಣ ಸುತ್ತಿ ಮೈಲಾರಕ್ಕೆ............................................. by hpn
ಉ: ಕೊಂಕಣ ಸುತ್ತಿ ಮೈಲಾರಕ್ಕೆ.............................................
ಉ: ಕೊಂಕಣ ಸುತ್ತಿ ಮೈಲಾರಕ್ಕೆ...