ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
ಇದೇ 'ತರಂಗ'ಕನ್ನಡ ವಾರದೋಲೆಯ ಏಪ್ರಿಲ್ ೧೭, ೨೦೦೮ ಪುಟ ೫೪, ೫೫ (ಜಾಗೃತಿ ಅಂಕಣ) ಇದರಲ್ಲಿ ಕೊಂಡಗೂಳಿ ಕೇಶಿರಾಜನ ಬಗ್ಗೆ ಬರಹದಲ್ಲಿ ಕೆಲ ತಪ್ಪುಗಳು ನುಸುಳಿವೆ. ಸಂಪದದಲ್ಲಿರುವ ತರಂಗ ಓದುಗರ ಗಮನಕ್ಕೆ. ತಡವಾಗಿ ಇಲ್ಲೆ ಹಾಕುತ್ತಿದ್ದೇನೆ,ಮನ್ನಿಸಿ.
ವೀರಶಯ್ವ ಕೊಂಡಗೂಳಿ ಕೇಶಿರಾಜನೇ ಬೇರೆ. ಇವನು ಶಬ್ದಮಣಿದರ್ಪಣವನ್ನು ಬರೆದಿಲ್ಲ.
ಸರಿಯಾದ ಮಾಹಿತಿ(ಕಾಲದ ಜೊತೆಗೆ) ಇಲ್ಲಿ ಕೆಳಕಂಡಂತಿದೆ
ಕೊಂಡಗೂಳಿ ಕೇಶಿರಾಜ (1160) ( ಇವನ ಬಗ್ಗೆ ತರಂಗದ 'ಜಾಗೃತಿ'ಯಲ್ಲಿ ಬರಹ ಬಂದಿರುವುದು)
* ಇವನು ವೀರಶಯ್ವ ಕಬ್ಬಿಗ.
* ಈತ 'ಶಡಕ್ಶರಕಂದ' ವನ್ನು ಬರೆದಿದ್ದಾನೆ. ಕೆಲವು ವಚನಗಳನ್ನು ಬರೆದಿದ್ದಾನೆ
* ಈತ ಬಸವಣ್ಣನೊಡನೆ ಸಂಗಮೇಶ್ವರಕ್ಕೆ ಹೋದನೆಂಬ ವಾಡಿಕೆಯಿದೆ.
* ಇವನ ತಂದೆ ಹೊಳಲಮರಸ, ತಾಯಿ ದುರ್ಗಾದೇವಿ.
* ಇವನು 1156-1167 ಬಿಜ್ಜಳರಾಯನಲ್ಲಿ ದಂಡನಾಯಕನಾಗಿದ್ದನು.
ಕೇಶಿರಾಜ (1260)
* ಇವನು ಜಿನ ಕಬ್ಬಿಗ.
* ಈತ 'ಶಬ್ದಮಣಿದರ್ಪಣ'ವನ್ನು ಬರೆದಿದ್ದಾನೆ. ಅಲ್ಲದೆ ಬೇರೆ ಅಯ್ದು ಗ್ರಂತಗಳನ್ನು ಬರೆದಿದ್ದಾನೆ
* ಈತನ ತಂದೆ ಮಲ್ಲಿಕಾರ್ಜುನ ಮತ್ತು ಜನ್ನನ ಸೋದರಳಿಯನು.
* ಈತನ ತಂದೆ 1233 ರಿಂದ 1254ರ ವರೆಗೆ ಆಳಿದ ಹೊಯ್ಸಳ ಸೋಮೇಶ್ವರನ ಕಾಲದಲ್ಲಿದ್ದ.
ಹೆಚ್ಚಿನ ವಿವರಗಳಿಗೆ ರಾ.ನರಸಿಂಹಾಚಾರ್ಯರ 'ಕರ್ನಾಟಕ ಕವಿ ಚರಿತೆ ಭಾಗ ೧' ನೋಡಿರಿ
ಇಲ್ಲಿ ತರಂಗ ಆನ್ಲಯ್ನ್ ಸಿಗುತ್ತೆ.