ಕೊಂದವರು ಯಾರು ಭಾಗ-೨

ಕೊಂದವರು ಯಾರು ಭಾಗ-೨

ಇದರ ಮೊದಲ ಭಾಗ ಇಲ್ಲಿದೆ http://www.sampada.net/blog/roopablrao/03/04/2008/8183 ಇನ್ಸ್ಪೆಕ್ಟರ್ ಶಿವು

ನನ್ನ ಯಾವ ಪ್ರಯತ್ನಗಳೂ ಕೈ ಗೂಡಿಲ್ಲ .

 ಸತ್ತವ ಕ್ರೂರಿಯೇ ಇರಬಹುದು ಅಥವ ರೌಡಿಯೇ ಇರಬಹುದು ಆದರೆ ಕೊಲೆ ಮಾಡಿದವರು ಯಾರು ಎಂದು ತಿಳಿಯದೇ ಫೈಲ್ ಕ್ಲೋಸ್ ಮಾಡುವ ಹಾಗಿಲ್ಲ

ಆ ನಾಲ್ಕು ಜನ ಕೊಲೆಗೆ ಪ್ರಯತ್ನ ಪಟ್ಟವರು ಚಂದ್ರಕಾಂತನಿಂದ ಒಂದಲ್ಲ ಒಂದು ತೊಂದರೆಗೆ ಸಿಕ್ಕಿ ಹಾಕಿಕೊಂಡವರು.

 ಸಿದ್ದನ ಮಗಳ ಕತೆಯಂತೂ ಪೋಲಿಸಾದ ತನ್ಮ್ನ ಮನಸನ್ನೇ ಕಲಕಿ ಬಿಡುತ್ತದೆ.

 ಪೆಟ್ಟು ಸರಿಯಾಗಿ ನೆತ್ತಿಯ ಮೇಲೆ ಬಿದ್ದಿದೆ ಹೊಡೆದವ ಚಂದ್ರಕಾಂತ್ ನಿಗಿಂತ್ ಎತ್ತರವಿರಬೇಕು .ಆದರೆ ಚಂದ್ರಕಾಂತನೇ ೬.೫೦ ಅಡಿಗಿಂತ ಜಾಸ್ತಿ ಇದ್ದಾನೆ. ಹಾಗಿದ್ದರೆ..............?

ಫೋನ್ ರಿಂಗಣಿಸಿತು

" ಸಾರ್ ಕೂಡಲೆ ಬನ್ನಿ ರೆಸಾರ್ಟ್‍೬ಗೆ "

" ಯಾಕೆ"

ಅವರು ಹೇಳಿದ ಮಾತನ್ನು ಕೇಳಿದ ಕೂಡಲೆ ಕೊಲೆಗಾರ ಯಾರು ಎಂಬುದು  ಹೊಳೆಯಿತು. ಆದರೆ ಅದು ಕೊಲೆಯಾಗಿರಲಿಲ್ಲ. ಮುಖದಲ್ಲಿ ಸಣ್ಣಗೆ ನಗು ಮೂಡಿತು. ಅಲ್ಲೇ ಇದ್ದ ದೇವರ ಫೋಟೊಗೆ ಕೈ ಮುಗಿದೆ

ಅಬ್ಬ ದೇವರೆ ನಿನ್ನ ಕೈವಾಡ ಹೇಗೆ ಹೇಗೆ ಇದೆ .

 ಎಲ್ಲಾ ವಿಧಿ. ಹೀಗೆ ಸಾಯಬೇಕೆಂದು ಅವನ ಇಛ್ಛೆ ಆಗಿತ್ತನಿಸುತದೆ.

ನನ್ನ ಮುಂದಿನ ಕಾರ್ಯಕ್ಕೆ ಅನುವಾದೆ.

ವಿಧಿ

ನನ್ನನ್ನು ಸಾಯಿಸಲು ಆ ಬ್ರಹ್ಮನಿಂದಲ್ಲೂ ಸಾಧ್ಯವಿಲ್ಲ . ಎಂದು ಆ ದುರುಳ ಹೇಗೆ ತಿಳಿದುಕೊಂಡ.

ಬ್ರಹ್ಮ ಅವನ ಸಾವನ್ನು ಅದೇ ರೆಸಾರ್ಟ್ನಲ್ಲಿ ಇಟ್ಟಿದ್ದ. ಹಾಗಾಗಿಯ ಅವನು ಅಲ್ಲಿಗೆ ಹೋದ.

ಅಷ್ಟೆಲ್ಲಾ ಮೆರೆದ ಆತನಿಗೆ ತಾನು ಕೊಟ್ಟ ಸಾವಾದರೂ ಎಂತಹದು.

ಅವ ಅಲ್ಲಿಗೆಬರುವ ಮುಂಚೆಯೆ ರೆಸ್ಸಾರ್ಟ‌ನವರಿಗೆ . ಅವರ್ ಕೆರೆಗೆಒಂದು    ಸೇತುವೆ ಕಟ್ಟುವ ಬುದ್ದಿ ಕೊಟ್ಟೆ

ಯಾವಾಗಲ್ಲೂ ಸರಿಯಾಗಿ ಕೆಲಸ ಮಾಡುವ ಕೆಲಸಗಾರನ ಮನಸನ್ನೋ ಎತ್ತಲೋ ಹಾಯುವಂತೆ ಮಾಡಿ ಆ ಒಂದು ಮರದ ಹಲಗೆಯನ್ನ ಮಾತ್ರ ಸರಿಯಾಗಿ ಜೋಡಿಸದಂತೆ ಮಾಡಿದ್ದೂ  ನಾನೆ.

ಆ ನಾಲ್ಕು ಸಲವೂ ಪಾರಾದ ನಂತರ ವರುಣ್‌ಗೆ ಫೋನ್ ಮಾಡಿ ಬಂದು ನಿಂತಿದ್ದು ಇದೇ ಮರದ ಹಲಗೆಯ ಕೆಳಗೆ ಸರಿಯಾಗಿ. ಅದಕ್ಕೂ ತಾನೆ ಪ್ರೇರಣೆ

ಬಂದವ ಸುಮ್ಮನಿರದೆ ಅದೇನೊ ಕೋಪಕ್ಕೆ ಆಧಾರ ಮರದ್ ದಿಮ್ಮಿಯನ್ನು ಒದ್ದ.   ಅವನ ಅಂತ್ಯದ ಕ್ಷಣ ಸಮೀಪಿಸಿತ್ತು

ಅದಕ್ಕೆ ಕಾಯುತ್ತಿದ್ದ ಆ ಮರದ ಹಲಗೆ ಅವನ ತಲೆಯ ಮೇಲೆ ಎಂದಿಗೆ ಬೀಳುವದಕ್ಕಿಂತಲೂ ರಭಸವಾಗೆ ಬಿತ್ತು.

ಕೂಗಲೂ ಆಗದೆ ಆತ  ಕ್ಷಣದಲ್ಲೇ ಸತ್ತ.

ಮನುಶ್ಯ ನನ್ನಿಂದ ಸೃಷ್ತಿಸಲ್ಪಟ್ಟಿದ್ದಾನೆ ಆದರೆ ಅವನು ನನ್ನನ್ನೇ ಧಿಕ್ಕರಿಸಿ ನಡೆದರೆ ............?

ನಾನು ಮಾಡಿದ್ದು ತಪ್ಪಾ? 

Rating
No votes yet

Comments