ಕೊಡೆಗಳಿವೆ ಜಗದಿ!
ಕೊಡೆಗಳಿವೆ ಜಗದಿ!
ರಕ್ಷಿಸುವ ಕೊಡೆಗಳಿವೆ ಸಾಕಷ್ಟು ಕೊಡೆಗಳಿಗೇನೂ ಇಲ್ಲಿ ಬರವಿಲ್ಲ
ಆದರೀಗ ರಕ್ಷಣೆಯ ಕೊಡೆಗಳ ಅರಸಿ ಯಾರೂ ಹೋಗುವವರಿಲ್ಲ
ಕೊಡೆಗಳು ತಾವೆಂದಿಗೂ ಬಾರವು ತಂತಾನೇ ನಾವು ಇರುವೆಡೆಗೆ
ತಾವೇ ಅರಳಿ ರಕ್ಷಣೆಯ ನೀಡವು ನಮ್ಮ ಸುಡುತಿರುವ ತಲೆಗಳಿಗೆ
ಕೊಡೆಯ ಕೊಂಡುಕೊಂಬ, ಇಟ್ಟುಕೊಂಬ ರೂಢಿ ನಮ್ಮಲ್ಲಿರಬೇಕು
ನಾವು ಹೇಗಾದರೂ ಇದ್ದರೆ ಆಯ್ತೆಂಬ ನಮ್ಮ ಚಾಳಿಯ ಬಿಡಬೇಕು
ದುರಾಲೋಚನೆಗಳ ಮಳೆಯಲ್ಲೇ ತೊಯ್ದು ಒದ್ದೆಯಾಗೇ ಇರುವ
ಹಂಬಲ ಈ ಮನಕೆ ಇರುವತನಕ ನಮ್ಮನ್ನು ಇನ್ಯಾರು ಕಾಯುವ?
ದುಷ್ಟ ಆಲೋಚನೆಗಳಿಂದ ನಮ್ಮನ್ನು ರಕ್ಷಿಸುವ ಕೊಡೆಗಳಿವೆ ನಿಜದಿ
ದುರಾಲೋಚನೆಗಳ ಬಿಟ್ಟು ಬಾಳಬೇಕೆಂಬ ಚಿತ್ತ ಯಾರಿಗಿದೆ ಜಗದಿ?
*******************
Rating
Comments
ಉ: ಕೊಡೆಗಳಿವೆ ಜಗದಿ!
In reply to ಉ: ಕೊಡೆಗಳಿವೆ ಜಗದಿ! by santhosh_87
ಉ: ಕೊಡೆಗಳಿವೆ ಜಗದಿ!
ಉ: ಕೊಡೆಗಳಿವೆ ಜಗದಿ!
In reply to ಉ: ಕೊಡೆಗಳಿವೆ ಜಗದಿ! by saraswathichandrasmo
ಉ: ಕೊಡೆಗಳಿವೆ ಜಗದಿ!
ಉ: ಕೊಡೆಗಳಿವೆ ಜಗದಿ!
In reply to ಉ: ಕೊಡೆಗಳಿವೆ ಜಗದಿ! by ambika
ಉ: ಕೊಡೆಗಳಿವೆ ಜಗದಿ!