ಕೊಲೆಗಾರ ಡಾರ್ವಿನ್!

ಕೊಲೆಗಾರ ಡಾರ್ವಿನ್!

ನೆನ್ನೆ ಡಾರ್ವಿನನ ಇನ್ನೂರನೇ ಹುಟ್ಟು ಹಬ್ಬ!ಜಿ. ರಿಚ್ಮಂಡನ  - ತರುಣ ಡಾರ್ವಿನ್

ಸೃಷ್ಠಿಕರ್ತನ ಕಲ್ಪನೆಯನ್ನು ಕೊಂದ ಅಪಾದನೆ ಅವನ ಮೇಲೆ ಈವತ್ತಿಗೂ ಇದೆ. ಆದರೆ ಡಾರ್ವಿನ್ ಕೊಲೆಗಾರನಲ್ಲ ಎಂದು ಹೇಳುತ್ತಿರುವವರು ಧರ್ಮಿಷ್ಠರು ಹಾಗು ಸೃಷ್ಠಿ ಕಲ್ಪನೆಯನ್ನು ನಂಬುವ, ಸೃಷ್ಠಿಕರ್ತನಲ್ಲಿ ನಂಬಿಕೆಯಿರುವ "ಧರ್ಮಾತ್ಮರು" ಎಂದರೆ ಆಶ್ಚರ್ಯವಲ್ಲವೆ? ಸೃಷ್ಠಿಕರ್ತನನ್ನು ರಕ್ಷಿಸಲು creationism ಹಾಗು intelligent design ಎಂಬಂತ ಕ್ಷುಲ್ಲಕ ವಾದಗಳನ್ನು ಮುಂದಿಟ್ಟು, ವಿಕಾಸವಾದವೆಂದರೆ "ಬರೇ ಆಕಸ್ಮಿಕ" ಎಂಬ ಅಪಪ್ರಚಾರ ಮಾಡುವವರು ಇಂದಿಗೂ ಇದ್ದಾರೆ. ಅಲ್ಲಿ, ಇಲ್ಲಿಯೂ,ಎಲ್ಲಿಯೂ.

ಆದರೆ ನಮ್ಮಂತವರಿಗೆ ಜಗತ್ತಿನ ಜೀವರಾಶಿಗಳ ಬಗೆಗಿನ ಅವನ ವಿವರಣೆಗಳು ಎಷ್ಟು ಚೆಂದ ಮತ್ತು ಗಟ್ಟಿ ಎಂದು ಹೇಳಬೇಕಿಲ್ಲ. ಈ ನೂರಾರು ವರ್ಷದಲ್ಲಿ ಬಂದ ಹಲವಾರು ಸವಾಲುಗಳ ಎದುರು ಅವನ ವಿಕಾಸವಾದ ಸಮರ್ಥವಾಗಿ ನಿಂತಿದೆ. ಅಷ್ಟೇ ಅಲ್ಲ ಇಂದಿಗೂ ಹಲವು ಹೊಸ ಹೊಸ ಆವಿಷ್ಕಾರಗಳು ಅದನ್ನು ಗಟ್ಟಿಗೊಳಿಸುತ್ತಲೇ ಇವೆ.

ಕೋಟ್ಯಾಂತರ ವರ್ಷಗಳಿಂದ ಚಿಕ್ಕ ಚಿಕ್ಕ ಹೆಜ್ಜೆಯಲ್ಲಿ, ಪುಟ್ಟಪುಟ್ಟ ಬದಲಾವಣೆ ಮಾಡಿಕೊಂಡು ಜೀವಿಗಳು ಈವತ್ತು ಎಷ್ಟು ಸಂಕೀರ್ಣವಾಗಿ ಬೆಳೆದು ನಿಂತಿದೆ ಎಂದು ವಿವರಿಸಿದ ಅವನ ವಿಕಾಸವಾದ ಪ್ರಕೃತಿಯ ಬಗ್ಗೆ ಆಸಕ್ತಿ ಕುಗ್ಗಿಸುವುದಿಲ್ಲ ಬದಲಿಗೆ ಮತ್ತಷ್ಟು ಹೆಚ್ಚಿಸುತ್ತದೆ. ನಮ್ಮನ್ನು ಮತ್ತಷ್ಟು ತನ್ಮಯರನ್ನಾಗಿಸುತ್ತದೆ.

ಜೀವರಾಶಿಗಳ ಸಂರ್ಕೀಣತೆಯ ವಿವರಣೆಯನ್ನು ಧರ್ಮದ ಕಪಿಮುಷ್ಠಿಯಿಂದ ಬಿಡಿಸಿದ ಡಾರ್ವಿನನನ್ನು ನಾವು ಪರಿಣಾಮಕಾರಿಯಾಗಿ ನೆನೆಯುವುದು ಹೇಗೆ?
[ತರುಣ ಡಾರ್ವಿನನ ಚಿತ್ರ - ಜಿ. ರಿಚ್ಮಂಡ್]

Rating
No votes yet

Comments